ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೋವಿಡ್‌-19 ಸೋಂಕಿನಿಂದ ಗುಣಮುಖರಾದ ಮೊಹಮ್ಮದ್ ಶಮಿ, ಹೃದಯರಕ್ತನಾಳ ಪರೀಕ್ಷೆ ಬಾಕಿ

Team India Pacer Mohammad Shami Has Returned A Negative Covid-19 Test And Has Ended His Isolation

ಟಿ20 ವಿಶ್ವಕಪ್‌ಗೂ ಮುನ್ನ ಆಯ್ಕೆದಾರರಿಗೆ ಶುಭ ಸುದ್ದಿ ಸಿಕ್ಕಿದೆ. ಮೊಹಮ್ಮದ್ ಶಮಿ ಕೋವಿಡ್ -19 ಪರೀಕ್ಷೆಯಲ್ಲಿ ನೆಗೆಟಿವ್ ಎಂದು ಬಂದಿದೆ. ಶಮಿ ತಮ್ಮ ಕ್ವಾರಂಟೈನ್‌ ಅನ್ನು ಪೂರ್ಣಗೊಳಿಸಿದ್ದಾರೆ. ಈ ವಾರ ಅವರು ಹೃದಯರಕ್ತನಾಳದ ಪರೀಕ್ಷೆಗೆ ಹಾಜರಾಗಲಿದ್ದಾರೆ.

ಟಿ20 ವಿಶ್ವಕಪ್ ಮೀಸಲು ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದ ಮೊಹಮ್ಮದ್ ಶಮಿ, ನಂತರ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೆ ಆಯ್ಕೆಯಾಗಿದ್ದರು. ಆದರೆ, ಸರಣಿ ಆರಂಭಕ್ಕೂ ಮುನ್ನವೇ, ಕೋವಿಡ್-19 ಸೋಂಕಿಗೆ ತುತ್ತಾಗಿದ್ದರಿಂದ ಎರಡೂ ಸರಣಿಯನ್ನು ತಪ್ಪಿಸಿಕೊಂಡರು.

IND vs SA 2022: ಭಾರತ ತಂಡ ಹೀಗಿದ್ದರೆ ದಕ್ಷಿಣ ಆಫ್ರಿಕಾ ವಿರುದ್ಧ ಗೆಲುವು ಖಚಿತ ಎಂದ ಆಕಾಶ್ ಚೋಪ್ರಾIND vs SA 2022: ಭಾರತ ತಂಡ ಹೀಗಿದ್ದರೆ ದಕ್ಷಿಣ ಆಫ್ರಿಕಾ ವಿರುದ್ಧ ಗೆಲುವು ಖಚಿತ ಎಂದ ಆಕಾಶ್ ಚೋಪ್ರಾ

ನಂತರ ಟಿ20 ವಿಶ್ವಕಪ್‌ನಲ್ಲಿ ಮೊಹಮ್ಮದ್ ಶಮಿ ಭವಿಷ್ಯ ಅನುಮಾನ ಎನ್ನುವಂತಿದ್ದಾಗಲೇ ಅವರು ಕೋವಿಡ್‌ನಿಂದ ಗುಣಮುಖವಾಗಿದ್ದಾರೆ. ಶಮಿ ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ತಮ್ಮ ಪರೀಕ್ಷೆ ನೆಗೆಟಿವ್ ಆಗಿರುವ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಪರೀಕ್ಷೆಯು ನೆಗೆಟಿವ್ ಆಗಿದ್ದರೂ, ಅವರನ್ನು ಇನ್ನೂ 100% ಫಿಟ್ ಎಂದು ಪರಿಗಣಿಸಲಾಗಿಲ್ಲ. ಪರೀಕ್ಷೆಯಲ್ಲಿ ಉತ್ತೀರ್ಣರಾದಾಗ ಮಾತ್ರ ಅವರು ಮತ್ತೆ ಆಯ್ಕೆಗೆ ಅರ್ಹರಾಗುತ್ತಾರೆ.

ಬಿಸಿಸಿಐ ಅಕ್ಟೋಬರ್ 9 ರೊಳಗೆ ಗಾಯವನ್ನು ಲೆಕ್ಕಿಸದೆ ತಂಡದಲ್ಲಿ ಬದಲಾವಣೆಗಳನ್ನು ಮಾಡಬಹುದು. ಐಸಿಸಿ ಅನುಮತಿ ನೀಡಿದರೆ ಅಕ್ಟೋಬರ್ 15 ರವರೆಗೆ ಕೊನೆಯ ಕ್ಷಣದಲ್ಲಿ ಬದಲಾವಣೆಗಳನ್ನು ಮಾಡಲು ಅವರಿಗೆ ಇನ್ನೂ ಆರು ದಿನಗಳ ಕಾಲಾವಕಾಶವಿದೆ.

ಟಿ20 ವಿಶ್ವಕಪ್‌ ತಂಡದ ಮೀಸಲು ಆಟಗಾರ

ಟಿ20 ವಿಶ್ವಕಪ್‌ ತಂಡದ ಮೀಸಲು ಆಟಗಾರ

ಟಿ20 ವಿಶ್ವಕಪ್‌ಗೂ ಮುನ್ನ ಶಮಿ ಯಾವುದೇ ಪಂದ್ಯಗಳನ್ನು ಆಡದಿರುವುದು ನಿಜಕ್ಕೂ ಕಳವಳಕಾರಿ. ಆಶಾದಾಯಕವಾಗಿ, ಅವರು ಫಿಟ್ ಆಗಿದ್ದಾರೆ ಮತ್ತು ಅಭ್ಯಾಸ ಪಂದ್ಯಗಲ್ಲಿ ಆಡಲು ಅವಕಾಶ ಸಿಗುತ್ತದೆ. ತಂಡದಲ್ಲಿ ಬದಲಾವಣೆ ಮಾಡಲು ನಮಗೆ ಸಮಯವಿದೆ, ಸದ್ಯಕ್ಕೆ ಟಿ20 ವಿಶ್ವಕಪ್‌ ಭಾರತದ ತಂಡದಲ್ಲಿ ಯಾವುದೇ ಬದಲಾವಣೆ ಮಾಡುವ ಉದ್ದೇಶವಿಲ್ಲ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬೆನ್ನುನೋವಿನ ನಂತರ ಜಸ್ಪ್ರೀತ್ ಬುಮ್ರಾ ಇನ್ನೂ ಲಯವನ್ನು ಮರಳಿ ಪಡೆಯುತ್ತಿದ್ದಾರೆ. ಹರ್ಷಲ್ ಪಟೇಲ್ ಪಕ್ಕೆಲುಬಿನ ಗಾಯದಿಂದ ವಾಪಸಾಗಿದ್ದು ಇನ್ನೂ ಉತ್ತಮ ಪ್ರದರ್ಶನ ನೀಡಿಲ್ಲ. ಸುದೀರ್ಘ 6 ತಿಂಗಳ ಗಾಯದ ವಿರಾಮದಿಂದ ಮರಳಿದ ನಂತರ ದೀಪಕ್ ಚಹಾರ್ ಅವರಿಗೆ ಹೆಚ್ಚಿನ ಅವಕಾಶ ಸಿಕ್ಕಿಲ್ಲ. ಉಮೇಶ್ ಯಾದವ್ ಕೂಡ ಶೇಕಡಾ 100 ರಷ್ಟು ಫಿಟ್ ಆಗಿಲ್ಲ. ಮೊಹಮ್ಮದ್ ಶಮಿ ತಾಂತ್ರಿಕವಾಗಿ ಗಾಯಗೊಂಡಿಲ್ಲ ಆದರೆ ಕೋವಿಡ್‌ಗೆ ತುತ್ತಾಗಿದ್ದು ಭಾರತ ತಂಡಕ್ಕೆ ಹಿನ್ನಡೆ ಆಗಿತ್ತು, ಈಗ ಅವರು ಚೇತರಿಸಿಕೊಂಡಿರುವುದು ಉತ್ತಮ ವಿಚಾರವಾಗಿದೆ.

ಭಾರತದ ಫುಟ್ಬಾಲ್ ನಾಯಕ ಸುನಿಲ್ ಛೆಟ್ರಿಗೆ ಫೀಫಾದಿಂದ ಗೌರವ: 3 ಎಪಿಸೋಡ್‌ಗಳ ಡಾಕ್ಯುಮೆಂಟರಿ ಬಿಡುಗಡೆ

ಇನ್ನೊಂದು ಪರೀಕ್ಷೆಯಲ್ಲಿ ಶಮಿ ಪಾಸಾಗಬೇಕು

ಇನ್ನೊಂದು ಪರೀಕ್ಷೆಯಲ್ಲಿ ಶಮಿ ಪಾಸಾಗಬೇಕು

ಮೊಹಮ್ಮದ್ ಶಮಿ ಹೃದಯರಕ್ತನಾಳ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕಿದೆ. ಅವರ ವೈದ್ಯಕೀಯ ತಂಡ ಆಡಲು ಅನುಮತಿ ನೀಡಬೇಕಿದೆ, ಅವರು ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ, ತಂಡಕ್ಕೆ ಸೇರಿಕೊಳ್ಳುವ ನಿರೀಕ್ಷೆ ಇದೆ.

ಮೊಹಮ್ಮದ್ ಶಮಿಗೆ ಆಸ್ಟ್ರೇಲಿಯಾಕ್ಕೆ ಪ್ರಯಾಣಿಸಲು ಪರೀಕ್ಷೆಗಳನ್ನು ತೆರವುಗೊಳಿಸಲು ಅಕ್ಟೋಬರ್ 5 ರವರೆಗೆ ಸಮಯವಿದೆ. ಈಗ ಕೋವಿಡ್‌ನಿಂದ ಗುಣಮುಖರಾಗಿದ್ದು, ಇದೇ ವಾರದಲ್ಲಿ ಹೃದಯ ರಕ್ತನಾಳ ಪರೀಕ್ಷೆ ತೆಗೆದುಕೊಳ್ಳುವುದರಿಂದ ಅವರು ನಿಗದಿತ ಸಮಯದಲ್ಲಿ ಆಸ್ಟ್ರೇಲಿಯಾಕ್ಕೆ ತೆರಳಲು ಸಿದ್ಧರಾಗುವ ಸಾಧ್ಯತೆ ಇದೆ. ಭಾರತವು ಎಲ್ಲಾ ಮೀಸಲು ಆಟಗಾರರೊಂದಿಗೆ ಅಕ್ಟೋಬರ್ 6 ರಂದು ಆಸ್ಟ್ರೇಲಿಯಾಕ್ಕೆ ತೆರಳಲಿದೆ.

ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ

ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ

2022ರ ಜುಲೈ ತಿಂಗಳ ನಂತರ ಮೊಹಮ್ಮದ್ ಶಮಿ ಯಾವುದೇ ಮಾದರಿ ಕ್ರಿಕೆಟ್ ಆಡಿಲ್ಲ. 2021ರ ನವೆಂವರ್ ತಿಂಗಳಿನಿಂದ ಶಮಿ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಕಾಣಿಸಿಕೊಂಡಿಲ್ಲ. ಹಿರಿಯ ವೇಗದ ಬೌಲರ್ ಅನುಪಸ್ಥಿತಿ ಏಷ್ಯಾಕಪ್‌ನಲ್ಲಿ ಭಾರತ ತಂಡವನ್ನು ಬಹುವಾಗಿ ಕಾಡಿತ್ತು.

2022ರ ಐಪಿಎಲ್‌ನಲ್ಲಿ ಗುಜರಾತ್ ಟೈಟಾನ್ಸ್ ತಂಡದ ಪರವಾಗಿ ಆಡಿದ್ದ ಶಮಿ ಉತ್ತಮ ಪ್ರದರ್ಶನ ನೀಡಿದ್ದರು. 16 ಪಂದ್ಯಗಳಲ್ಲಿ 20 ವಿಕೆಟ್ ಪಡೆದ ಅವರು, ಗುಜರಾತ್ ಟೈಟಾನ್ಸ್ ತಂಡ ಐಪಿಎಲ್ ಚಾಂಪಿಯನ್ ಆಗುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಐಪಿಎಲ್‌ನಲ್ಲಿ ಅವರ ಉತ್ತಮ ಪ್ರದರ್ಶನದಿಂದ ಅವರನ್ನು ಆಸ್ಟ್ರೇಲಿಯಾ ಟಿ20 ವಿಶ್ವಕಪ್‌ನಲ್ಲಿ ಮೀಸಲು ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆಯಲು ಕಾರಣವಾಯಿತು.

Story first published: Wednesday, September 28, 2022, 17:21 [IST]
Other articles published on Sep 28, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X