ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸೂರ್ಯಕುಮಾರ್ ಯಾದವ್ ಸಿಕ್ಕ ಅವಕಾಶವನ್ನ ಚೆನ್ನಾಗಿ ಬಳಸಿಕೊಂಡ್ರು: ಪ್ರಮುಖ ವಿಚಾರ ಬಿಚ್ಚಿಟ್ಟ ರಿಕಿ ಪಾಂಟಿಂಗ್

Suryakumar yadav

ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಅವರು ಭಾರತದ ಮಿಸ್ಟರ್ 360 ಸೂರ್ಯಕುಮಾರ್ ಯಾದವ್ ಬಗ್ಗೆ ಆಸಕ್ತಿದಾಯಕ ವಿಚಾರಗಳನ್ನ ಹಂಚಿಕೊಂಡಿದ್ದಾರೆ. ಸೂರ್ಯಕುಮಾರ್ ಈಗ ಟೀಂ ಇಂಡಿಯಾದ ಪ್ರಮುಖ ಆಟಗಾರ ಎನಿಸಿಕೊಂಡಿರುವುದು ಗೊತ್ತೇ ಇದೆ. ಏಕಾಂಗಿಯಾಗಿ ಪಂದ್ಯದ ಗತಿಯನ್ನೇ ಬದಲಿಸಿ ಕ್ರೀಡಾಂಗಣದ ಎಲ್ಲಾ ಕಡೆ ಬೌಂಡರಿ ಬಾರಿಸುವ ಅವರ ಸಾಮರ್ಥ್ಯದ ಬಗ್ಗೆ ಕ್ರಿಕೆಟ್ ದಿಗ್ಗಜರೇ ಹೊಗಳಿದ್ದಾರೆ.

ಅವರು ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌ನ ಪ್ರಮುಖ ಆಟಗಾರರಾದರು. ಇದು ಸೂರ್ಯಕುಮಾರ್ ಅವರ ವೃತ್ತಿಜೀವನದ ಪ್ರಮುಖ ತಿರುವು ಎಂದು ಪಾಂಟಿಂಗ್ ಹೇಳಿದರು. ಐಪಿಎಲ್‌ನಲ್ಲಿ ಸಿಕ್ಕ ಅವಕಾಶವೇ ತಮ್ಮ ವೃತ್ತಿಜೀವನಕ್ಕೆ ಪ್ರಮುಖವಾಗಿದೆ ಎಂದರು.

ಸೂರ್ಯನ ರೀತಿಯಲ್ಲಿ ಸಿಕ್ಕ ಅವಕಾಶವನ್ನ ಬಳಸಿಕೊಳ್ಳುವುದನ್ನ ಕಲಿಯಬೇಕು!

ಸೂರ್ಯನ ರೀತಿಯಲ್ಲಿ ಸಿಕ್ಕ ಅವಕಾಶವನ್ನ ಬಳಸಿಕೊಳ್ಳುವುದನ್ನ ಕಲಿಯಬೇಕು!

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ತಮ್ಮ ವೃತ್ತಿಜೀವನದ ಆರಂಭಿಕ ದಿನಗಳಲ್ಲಿ, ಸೂರ್ಯಕುಮಾರ್ ಯಾದವ್ ಮುಂಬೈ ಇಂಡಿಯನ್ಸ್ ತಂಡಕ್ಕೆ ಆಯ್ಕೆಯಾದರು. ಆದರೆ ಅವಕಾಶಗಳು ಸಿಗಲಿಲ್ಲ. ನಂತರ ಅವರನ್ನು ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡ ಸ್ವಾಗತಿಸಿತು. ಕೋಲ್ಕತ್ತಾ ತಂಡದಲ್ಲಿ ಉತ್ತಮ ಅವಕಾಶಗಳು ಲಭಿಸಿವೆ.

ಅಲ್ಲಿ ಅವರು ಬಂದ ಕೆಲವೇ ಅವಕಾಶಗಳಲ್ಲಿ ಮಿಂಚಿದರು. ಕೋಲ್ಕತ್ತಾ ಪರ ಆಡುವ ಮೂಲಕ ಸೂರ್ಯಕುಮಾರ್ ಯಾದವ್ ಅವರ ವೃತ್ತಿಜೀವನಕ್ಕೆ ತಿರುವು ಸಿಕ್ಕಿತು ಎಂದು ಪಾಂಟಿಂಗ್ ಅಭಿಪ್ರಾಯಪಟ್ಟಿದ್ದಾರೆ. ಕೆಕೆಆರ್‌ಗಾಗಿ ನಾಲ್ಕು ಸೀಸನ್‌ಗಳನ್ನ ಆಡಿದ ನಂತರ, ಮುಂಬೈ ಇಂಡಿಯನ್ಸ್ ಅವರ ಪ್ರತಿಭೆಯನ್ನು ಗುರುತಿಸಿತು ಮತ್ತು 2018 ರ ಹರಾಜಿನಲ್ಲಿ ಅವರನ್ನು ಖರೀದಿಸಿತು.

ಮುಂಬೈ ಇಂಡಿಯನ್ಸ್‌ ತಂಡ ಸೇರಿದ ಬಳಿಕ ಹಿಂತಿರುಗಿ ನೋಡಲೇ ಇಲ್ಲ!

ಮುಂಬೈ ಇಂಡಿಯನ್ಸ್‌ ತಂಡ ಸೇರಿದ ಬಳಿಕ ಹಿಂತಿರುಗಿ ನೋಡಲೇ ಇಲ್ಲ!

ಕೆಕೆಆರ್‌ನಲ್ಲಿ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಸೂರ್ಯ ಮುಂಬೈ ಪರ ಮಧ್ಯಮ ಕ್ರಮಾಂಕದಲ್ಲಿ ಮತ್ತು 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದರು. ಸೂರ್ಯ ಅಲ್ಲಿಂದ ಹಿಂತಿರುಗಿ ನೋಡಲೇ ಇಲ್ಲ. ಐಪಿಎಲ್ 2020 ರಲ್ಲಿ, ಅವರು 40 ರ ಸರಾಸರಿಯಲ್ಲಿ 480 ರನ್ ಗಳಿಸಿದರು. ಈ ಪ್ರದರ್ಶನದ ನಂತರ ಸೂರ್ಯ ಟೀಂ ಇಂಡಿಯಾ ಪರ ಆಡುವ ಅವಕಾಶ ಪಡೆದರು.

ಟಿ20 ಕ್ರಿಕೆಟ್‌ನಲ್ಲಿ ಪ್ರಸ್ತುತ ಅಗ್ರ 5 ಆಟಗಾರರನ್ನ ಹೆಸರಿಸಿದ ಮಾರ್ಕ್ ವಾ: ಕೊಹ್ಲಿ, ಬಾಬರ್‌ಗಿಲ್ಲ ಸ್ಥಾನ

ಯುವ ಬ್ಯಾಟರ್ ಆಗಿದ್ದ ಸೂರ್ಯಕುಮಾರ್ ಯಾದವ್

ಯುವ ಬ್ಯಾಟರ್ ಆಗಿದ್ದ ಸೂರ್ಯಕುಮಾರ್ ಯಾದವ್

''ನಾನು ಆರಂಭಿಕ ದಿನಗಳಲ್ಲಿ ಮುಂಬೈ ಇಂಡಿಯನ್ಸ್ ಪರ ಆಡುತ್ತಿದ್ದಾಗ ಸೂರ್ಯಕುಮಾರ್ ಯಾದವ್ 19 ವರ್ಷದ ಹುಡುಗ. ಆಗ ಅವರು ನಮ್ಮ ತಂಡದಲ್ಲಿದ್ದರು. ನಾನು ಐಪಿಎಲ್‌ನಲ್ಲಿ ಆಡುವುದನ್ನು ನಿಲ್ಲಿಸಿದ ನಂತರ ಅವರು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಆಯ್ಕೆಯಾದರು. ಅಲ್ಲಿಯೇ ಅವರ ವೃತ್ತಿಜೀವನಕ್ಕೆ ತಿರುವು ಸಿಕ್ಕಿತು. ಅಲ್ಲಿ ಅವರಿಗೆ ಅವಕಾಶಗಳು ಸಿಕ್ಕವು. ಅವನು ತನ್ನ ಸಾಮರ್ಥ್ಯವನ್ನ ತೋರಿಸಿದನು.

ಆ ಬಳಿಕ ಮುಂಬೈ ಅವರನ್ನು ಹರಾಜಿನಲ್ಲಿ ಮತ್ತೆ ಖರೀದಿಸಿತು. ಕಳೆದ ನಾಲ್ಕು ಸೀಸನ್‌ಗಳಲ್ಲಿ ಅವರು ಮ್ಯಾಚ್ ವಿನ್ನರ್ ಆಗಿದ್ದಾರೆ. ಹಾಗಾಗಿ ಮುಂಬೈ ಉಳಿಸಿಕೊಂಡಿರುವ ಆಟಗಾರರಲ್ಲಿ ಸೂರ್ಯ ಕೂಡ ಒಬ್ಬರು,'' ಎಂದು ಪಾಂಟಿಂಗ್ ಹೇಳಿದ್ದಾರೆ.

ವೈರಲ್ ಆಯ್ತು ಕೊಹ್ಲಿ ಕಟೌಟ್: ಭಿನ್ನವಾಗಿ ಪ್ರೀತಿ ವ್ಯಕ್ತಪಡಿಸಿದ ಅಭಿಮಾನಿಗಳು

ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶತಕ ಸಿಡಿಸಿದ ಭಾರತದ 6ನೇ ಬ್ಯಾಟರ್

ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶತಕ ಸಿಡಿಸಿದ ಭಾರತದ 6ನೇ ಬ್ಯಾಟರ್

ಸುರೇಶ್ ರೈನಾ, ರೋಹಿತ್ ಶರ್ಮಾ, ಕೆಎಲ್ ರಾಹುಲ್, ದೀಪಕ್ ಹೂಡಾ ಮತ್ತು ಹರ್ಮನ್‌ಪ್ರೀತ್ ಕೌರ್ ನಂತರ ಟಿ20ಯಲ್ಲಿ ಶತಕ ಸಿಡಿಸಿದ ಆರನೇ ಭಾರತೀಯ ಕ್ರಿಕೆಟಿಗ ಸೂರ್ಯಕುಮಾರ್ ಯಾದವ್. ಸದ್ಯ ಟಿ20 ಶ್ರೇಯಾಂಕದಲ್ಲಿ ಪಾಕಿಸ್ತಾನದ ಮೊಹಮ್ಮದ್ ರಿಜ್ವಾನ್ ಮೊದಲ ಸ್ಥಾನದಲ್ಲಿದ್ದರೆ, ಸೂರ್ಯ ಎರಡನೇ ಸ್ಥಾನದಲ್ಲಿದ್ದಾರೆ. ಮೊದಲಿನಿಂದಲೂ ಆತ ಆಡುವುದನ್ನು ನೋಡಿದವರಿಗೆ ಅವರಲ್ಲಿ ಎಷ್ಟು ಪ್ರತಿಭೆ ಇದೆ ಎಂಬುದು ಗೊತ್ತಾಗುತ್ತದೆ.

ಅವರು ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಸ್ವಲ್ಪ ತಡವಾಗಿ ಬಂದರೂ, ಅವರು ಹಲವಾರು ವರ್ಷಗಳಿಂದ ಲೈನ್ಅಪ್‌ನಲ್ಲಿ ವಿಭಿನ್ನ ಸಂದರ್ಭಗಳಲ್ಲಿ ಮತ್ತು ಸ್ಥಾನಗಳಲ್ಲಿ ಆಡಲು ಕಲಿತಿದ್ದಾರೆ. ಇದು ಅವನಿಗೆ ಚೆನ್ನಾಗಿ ಅರಿತಿದೆ. ಐಪಿಎಲ್‌ನಲ್ಲಿ ಬ್ಯಾಟಿಂಗ್ ಕ್ರಮಾಂಕದ ಬಹುತೇಕ ಎಲ್ಲಾ ಸ್ಥಾನಗಳಲ್ಲಿ ಆಡಿದ ಅನುಭವ ಹೊಂದಿರುವ ಅವರು ಅಂತಾರಾಷ್ಟ್ರೀಯ ಮಟ್ಟದ ಸನ್ನಿವೇಶಗಳಿಗೆ ಸುಲಭವಾಗಿ ಹೊಂದಿಕೊಳ್ಳಲು ಸಮರ್ಥರಾಗಿದ್ದಾರೆ. 2022ರ ಟಿ20 ವಿಶ್ವಕಪ್ ತಂಡದಲ್ಲಿ ಸೂರ್ಯ ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂದು ಪಾಂಟಿಂಗ್ ಹೇಳಿದ್ದಾರೆ.

Story first published: Wednesday, September 28, 2022, 18:26 [IST]
Other articles published on Sep 28, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X