Ind vs SA 2nd Test: ಭಾರತ 266 ರನ್‌ಗಳಿಗೆ ಆಲೌಟ್, ದಕ್ಷಿಣ ಆಫ್ರಿಕಾ ಗೆಲುವಿಗೆ 240 ರನ್‌ಗಳ ಗುರಿ

ಜೋಹಾನ್ಸ್‌ಬರ್ಗ್‌ನ ವಾಂಡರರ್ಸ್ ಮೈದಾನದಲ್ಲಿ ನಡೆಯುತ್ತಿರುವ ದ್ವಿತೀಯ ಟೆಸ್ಟ ಪಂದ್ಯದಲ್ಲಿ ಟೀಂ ಇಂಡಿಯಾ ಎರಡನೇ ಇನ್ನಿಂಗ್ಸ್ 266 ರನ್‌ಗಳಿಗೆ ಆಲೌಟ್ ಆಗುವ ಮೂಲಕ ದಕ್ಷಿಣ ಆಫ್ರಿಕಾಗೆ 240 ರನ್‌ಗಳ ಗುರಿ ನೀಡಿದೆ.
ಎರಡನೇ ದಿನದಾಟದಂತ್ಯಕ್ಕೆ ಭಾರತ 85 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡು ಮೂರನೇ ದಿನಕ್ಕೆ ಆಟವನ್ನು ಕಾಯ್ದಿರಿಸಿತ್ತು. ಟೀಮ್ ಇಂಡಿಯಾ ಪರವಾಗಿ ಕ್ರೀಸ್‌ನಲ್ಲಿ ಅನುಭವಿ ಆಟಗಾರರಾದ ಚೇತೇಶ್ವರ್ ಪೂಜಾರ 35 ರನ್ ಮತ್ತು ಅಜಿಂಕ್ಯಾ ರಹಾನೆ 11 ರನ್‌ಗಳಿಸಿ ಕ್ರೀಸ್ ಕಾಯ್ದುಕೊಂಡಿದ್ದರು.
ತಮ್ಮ ಮೇಲಿರುವ ಜವಾಬ್ದಾರಿ ಅರಿತು ಬ್ಯಾಟಿಂಗ್ ನಡೆಸಿದ ಚೇತೇಶ್ವರ ಪೂಜಾರ ಮತ್ತು ಅಜಿಂಕ್ಯ ರಹಾನೆ ಜೋಡಿ ದಕ್ಷಿಣ ಆಫ್ರಿಕಾ ಬೌಲರ್‌ಗಳನ್ನ ಇನ್ನಿಲ್ಲದಂತೆ ಕಾಡಿದ್ರು. ಮೂರನೇ ವಿಕೆಟ್‌ಗೆ ಶತಕದ ಜೊತೆಯಾಟವಾಡಿದ ಈ ಜೋಡಿ ಭಾರತದ ಲೀಡ್ ಮೊತ್ತವನ್ನ 150 ಗಡಿದಾಟಿಸಿದ್ರು.

ಚೇತೇಶ್ವರ ಪೂಜಾರ ಮತ್ತು ರಹಾನೆ ಶತಕದ ಜೊತೆಯಾಟ
ಮೂರನೇ ವಿಕೆಟ್ ಶತಕದ ಜೊತೆಯಾಟವಾಡುವ ಈ ಜೋಡಿ ತಮ್ಮ ಭವಿಷ್ಯದ ಕೆರಿಯನ್ ಉಳಿಸಿಕೊಳ್ಳುವುದರ ಜೊತೆಗೆ ತಂಡಕ್ಕೆ ಪ್ರಮುಖ ರನ್‌ಗಳ ಕೊಡುಗೆ ನೀಡಿದ್ರು. ಚೇತೇಶ್ವರ ಪೂಜಾರ ಸ್ವಾಭಾವಿಕವಾಗಿ ಆಟಕ್ಕಿಂತ ಹೆಚ್ಚಿನ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸುವ ಮೂಲಕ ಬಾಲ್ ಟು ಬಾಲ್ ರನ್ ಕಲೆಹಾಕಿದ್ರು.
86 ಎಸೆತಗಳಲ್ಲಿ 53 ರನ್ ಕಲೆಹಾಕಿದ್ದ ಚೇತೇಶ್ವರ ಪೂಜಾರ ಇನ್ನಿಂಗ್ಸ್‌ನಲ್ಲಿ 10 ಆಕರ್ಷಕ ಬೌಂಡರಿಗಳಿದ್ದವು.
ದಕ್ಷಿಣ ಆಫ್ರಿಕಾ ಆಟಗಾರರ ಮೋಸಕ್ಕೆ, ಬೈಯುತ್ತಾ ಪೆವಿಲಿಯನ್ ಕಡೆಗೆ ಸಾಗಿದ ಕೆ.ಎಲ್ ರಾಹುಲ್!

ಜೊತೆಯಾಟ ಬ್ರೇಕ್ ಮಾಡಿದ ಕಗಿಸೊ ರಬಾಡ
ಇನ್ನು ಟೆಸ್ಟ್ ಕ್ರಿಕೆಟ್‌ನಲ್ಲಿ 24ನೇ ಅರ್ಧಶತಕ ದಾಖಲಿಸಿದ ಅಜಿಂಕ್ಯ ರಹಾನೆ 8 ಬೌಂಡರಿ ಮತ್ತು 1 ಸಿಕ್ಸರ್ ಸಿಡಿಸುವ ಮೂಲಕ ತಂಡದ ಟೋಟಲ್ ಹೆಚ್ಚಿಸಿದ್ರು. 58 ರನ್‌ಗಳಿಸಿದ್ದ ರಹಾನೆ ಕಗಿಸೊ ರಬಾಡ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದ, ಬೆನ್ನಲ್ಲೇ ಉತ್ತಮ ಆಟವಾಡಿದ ಚೇತೇಶ್ವರ ಪೂಜಾರ ಕೂಡ ಎಲ್‌ಬಿಡಬ್ಲ್ಯೂ ಬಲೆಗೆ ಬಿದ್ರು.
ಯಾರಪ್ಪಾ ನೀನು? ಬೌಲಿಂಗ್ ಮಾಡಿದಾಗ್ಲೆಲ್ಲಾ ವಿಕೆಟ್ ಬೀಳುತ್ತಿದ್ಯಲ್ಲಾ: ಶಾರ್ದೂಲ್ ಕುರಿತು ಅಚ್ಚರಿ ಪಟ್ಟ ಅಶ್ವಿನ್

ಕೆಟ್ಟ ಹೊಡೆತಕ್ಕೆ ಕೈ ಹಾಕಿ ವಿಕೆಟ್ ಒಪ್ಪಿಸಿದ ಪಂತ್
ತಂಡಕ್ಕೆ ಅತ್ಯಂತ ಅಗತ್ಯ ಸಂದರ್ಭದಲ್ಲಿ ಬ್ಯಾಟ್ ಬೀಸುವುದನ್ನೇ ಮರೆತ ರಿಷಭ್ ಪಂತ್, ಅನಗತ್ಯ ಹೊಡೆತಕ್ಕೆ ಕೈ ಹಾಕುವ ಮೂಲಕ ಶೂನ್ಯಕ್ಕೆ ವಿಕೆಟ್ ಒಪ್ಪಿಸಿ ಟೀಕೆಗೆ ಒಳಗಾದ್ರು. ರಬಾಡ ಬೌಲಿಂಗ್‌ನಲ್ಲಿ ಮುಂದೆ ಬಂದು ಸಿಕ್ಸರ್ ಸಿಡಿಸಲು ಹೋಗಿ ವಿಕೆಟ್ ಕೀಪರ್‌ಗೆ ಕ್ಯಾಚಿತ್ತರು.

ಟೀಂ ಇಂಡಿಯಾ ಲೀಡ್ 200ರ ಗಡಿದಾಟಿಸಿದ ವಿಹಾರಿ, ಠಾಕೂರ್
ಭಾರತದ ಮುನ್ನಡೆಯನ್ನ 200ರ ಗಡಿದಾಟಿಸುವಲ್ಲಿ ಆಲ್‌ರೌಂಡರ್ ಶಾರ್ದೂಲ್ ಠಾಕೂರ್ ಸ್ಫೋಟಕ ಆಟ ಮತ್ತು ಹನುಮ ವಿಹಾರಿಯ ತಾಳ್ಮೆಯ ಬ್ಯಾಟಿಂಗ್ ನೆರವಾಯಿತು. 24 ಎಸೆತಗಳಲ್ಲಿ ಐದು ಬೌಂಡರಿ ಮತ್ತು ಒಂದು ಸಿಕ್ಸರ್ ಸಿಡಿಸಿ ಶಾರ್ದೂಲ್ ಠಾಕೂರ್ 28ರನ್‌ಗೆ ಔಟಾದ್ರು. ಇನ್ನು ಕೊನೆಯವರೆಗೂ ತಾಳ್ಮೆಯ ಆಟವಾಡಿದ ಹನುಮ ವಿಹಾರಿ ಅಜೇಯ 40 ರನ್ ಕಲೆಹಾಕುವ ಮೂಲಕ ಅಮೂಲ್ಯ ಕೊಡುಗೆ ನೀಡಿದ್ರು.
ಅಂತಿಮವಾಗಿ ಟೀಂ ಇಂಡಿಯಾ 266ರನ್‌ಗಳಿಗೆ ಆಲೌಟ್ ಆಗಿದೆ. ಜೊತೆಗೆ 239ರನ್‌ಗಳ ಉತ್ತಮ ಮುನ್ನಡೆ ಪಡೆದುಕೊಂಡಿದೆ. ಈ ಮೂಲಕ ದಕ್ಷಿಣ ಆಫ್ರಿಕಾ ಗೆ 240ರನ್‌ಗಳ ಗೆಲುವಿನ ಗುರಿ ನೀಡಲಾಗಿದೆ.
ಟೀಮ್ ಇಂಡಿಯಾ ಆಡುವ ಬಳಗ ಹೀಗಿದೆ: ಕೆಎಲ್ ರಾಹುಲ್(ನಾಯಕ), ಮಯಾಂಕ್ ಅಗರ್ವಾಲ್, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ಹನುಮ ವಿಹಾರಿ, ರಿಷಭ್ ಪಂತ್(ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್
ದಕ್ಷಿಣ ಆಫ್ರಿಕಾ ಆಡುವ ಬಳಗ: ಡೀನ್ ಎಲ್ಗರ್(ನಾಯಕ), ಐಡೆನ್ ಮಾರ್ಕ್ರಾಮ್, ಕೀಗನ್ ಪೀಟರ್ಸನ್, ರಾಸ್ಸೀ ವ್ಯಾನ್ ಡೆರ್ ಡುಸ್ಸೆನ್, ಕೈಲ್ ವೆರ್ರೆನ್ನೆ(ವಿಕೆಟ್ ಕೀಪರ್), ಟೆಂಬಾ ಬವುಮಾ, ಮಾರ್ಕೊ ಜಾನ್ಸೆನ್, ಕಗಿಸೊ ರಬಾಡ, ಕೇಶವ್ ಮಹಾರಾಜ್, ಡುವಾನ್ನೆ ಒಲಿವಿಯರ್, ಲುಂಗಿ ಎನ್‌ಗಿಡಿ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications