Ind vs SA 3rd ODI: 7 ವಿಕೆಟ್‌ಗಳಿಂದ ಗೆದ್ದ ಭಾರತ, 2-1 ಅಂತರದಲ್ಲಿ ಸರಣಿ ಜಯ

ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಭಾರತ-ದಕ್ಷಿಣ ಆಫ್ರಿಕಾ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 7 ವಿಕೆಟ್‌ಗಳ ಗೆಲುವಿನೊಂದಿಗೆ ಸರಣಿಯನ್ನ 2-1 ಅಂತರದಲ್ಲಿ ಜಯ ಸಾಧಿಸಿದೆ. ಇದಕ್ಕೂ ಮುನ್ನ ಟಿ20 ಸರಣಿಯನ್ನ ಗೆದ್ದು ಬೀಗಿದ್ದ ಭಾರತ ನಂತರ ಎರಡು ಪಂದ್ಯಗಳನ್ನ ಸೋತು ಕಂಬ್ಯಾಕ್ ಮಾಡಿತು.
ದಕ್ಷಿಣ ಆಫ್ರಿಕಾ ನೀಡಿದ್ದ 100ರನ್‌ಗಳ ಸುಲಭ ಗುರಿ ಬೆನ್ನತ್ತಿದ ಟೀಂ ಇಂಡಿಯಾ 3 ವಿಕೆಟ್ ಕಳೆದುಕೊಂಡು ಗೆಲುವಿನ ಗೆರೆ ದಾಟಿದೆ. ಶಿಖರ್ ಧವನ್ ನಾಯಕತ್ವದಲ್ಲಿ ವೆಸ್ಟ್ ಇಂಡೀಸ್‌ನಲ್ಲಿ ಏಕದಿನ ಸರಣಿ ಗೆಲುವಿನ ಬಳಿಕ ಭಾರತ ದಕ್ಷಿಣ ಆಫ್ರಿಕಾ ವಿರುದ್ಧ ಮತ್ತೊಂದು ಸರಣಿ ತನ್ನದಾಗಿಸಿಕೊಂಡಿದೆ.

100 ರನ್ ಟಾರ್ಗೆಟ್, ಶಿಖರ್ ಧವನ್ ಮತ್ತೆ ಫೇಲ್ಯೂರ್
100ರನ್‌ಗಳ ಗುರಿ ಬೆನ್ನತ್ತಿದ ಟೀಂ ಇಂಡಿಯಾ ಪರ ನಾಯಕ ಶಿಖರ್ ಧವನ್ ಅಂತಿಮ ಪಂದ್ಯದಲ್ಲೂ ರನ್‌ಗಳಿಸದೇ ನಿರಾಸೆ ಮೂಡಿಸಿದ್ರು. ಮೊದಲೆರಡು ಏಕದಿನ ಪಂದ್ಯಗಳಲ್ಲಿ ಬೇಗನೆ ಔಟಾಗಿದ್ದ ಗಬ್ಬರ್ 8 ರನ್ ಗಳಿಸಿದ್ದಾಗ ರನೌಟ್‌ಗೆ ಬಲಿಯಾದ್ರು.
ಎರಡನೇ ವಿಕೆಟ್‌ಗೆ ಶುಭಮನ್ ಗಿಲ್ ಮತ್ತು ಇಶಾನ್ ಕಿಶನ್ ತಂಡವನ್ನ ಗೆಲುವಿನ ದಡ ತಲುಪಿಸಬಹುದು ಎಂದು ನಿರೀಕ್ಷಿಸಲಾಗಿತ್ತು. ರಾಂಚಿಯಲ್ಲಿ 93ರನ್ ಸಿಡಿಸಿದ್ದ ಇಶಾನ್ ಕಿಶನ್, ದೆಹಲಿಯಲ್ಲಿ ಕೇವಲ 10ರನ್‌ಗೆ ಇನ್ನಿಂಗ್ಸ್ ಮುಗಿಸಿದ್ರು.
ಆದ್ರೆ ಆರಂಭದಿಂದಲೂ ತಂಡಕ್ಕೆ ನೆರವಾಗಿ ಗೆಲುವಿನ ದಡ ತಲುಪಿಸಿದ ಶುಭಮನ್ ಗಿಲ್ ಅಂತಿಮ ಪಂದ್ಯದಲ್ಲಿ ಮಿಂಚುವ ಮೂಲಕ ಫಾರ್ಮ್‌ಗೆ ಮರಳಿದಿದ್ದಾರೆ. ಶುಭಮನ್ ಗಿಲ್ 57 ಎಸೆತಗಳಲ್ಲಿ 49 ರನ್‌ಗಳಿಸಿ ಗೆಲುವಿನಂಚಿನಲ್ಲಿ ವಿಕೆಟ್ ಒಪ್ಪಿಸಿದ್ರು. ಜೊತೆಗೆ ಒಂದು ರನ್‌ಗಳ ಅಂತರದಲ್ಲಿ ಅರ್ಧಶತಕ ಕಳೆದುಕೊಂಡರು. ಇವರ ಇನ್ನಿಂಗ್ಸ್‌ನಲ್ಲಿ 8 ಆಕರ್ಷಕ ಬೌಂಡರಿ ಒಳಗೊಂಡಿದ್ದವು. ಶುಭಮನ್ ಗಿಲ್‌ಗೆ ಉತ್ತಮ ಸಾಥ್ ಕೊಟ್ಟ ಶ್ರೇಯಸ್ ಅಯ್ಯರ್ ಅಜೇಯ 28 ರನ್ ಕಲೆಹಾಕಿದರು.

ಭಾರತದ ದಾಳಿಗೆ ಚಿಂದಿಯಾದ ಆಫ್ರಿಕಾ, 99ರನ್‌ಗಳಿಗೆ ಆಲೌಟ್
ಟಾಸ್ ಸೋತು ಬ್ಯಾಟಿಂಗ್ ಇಳಿದ ದಕ್ಷಿಣ ಆಫ್ರಿಕಾ ಭಾರತದ ಬೌಲಿಂಗ್ ದಾಳಿಗೆ ತತ್ತರಿಸಿ ಹೋಯಿತು. ಆರಂಭದಿಂದಲೇ ವಿಕೆಟ್ ಕಳೆದುಕೊಳ್ಳಲು ಶುರುಮಾಡಿದ ಹರಿಣಗಳು ಪೆವಿಲಿಯನ್ ಪರೇಡ್ ನಡೆಸಿದರು. ಸ್ಪಿನ್ನರ್‌ಗಳೇ 8 ವಿಕೆಟ್ ಕಬಳಿಸುವ ಮೂಲಕ ದ.ಆಫ್ರಿಕಾ ಪತನಕ್ಕೆ ಕಾರಣವಾದ್ರು.
ಮೊದಲಿಗೆ ಸ್ಪಿನ್ನರ್ ವಾಷಿಂಗ್ಟನ್ ಸುಂದರ್ ಕ್ವಿಂಟನ್ ಡಿಕಾಕ್ ರನ್ನು 6 ರನ್‌ಗೆ ಔಟ್ ಮಾಡಿದ ಬಳಿಕ, ಮೊಹಮ್ಮದ್ ಸಿರಾಜ್ ಸತತ ಎರಡು ಓವರ್‌ಗಳಲ್ಲಿ ಎರಡು ವಿಕೆಟ್ ಕಬಳಿಸಿದ್ರು.
ಜನ್ನೆಮನ್ ಮಲನ್ 15ರನ್‌ಗೆ ವಿಕೆಟ್ ಒಪ್ಪಿಸಿದ್ರೆ, ರೀಜಾ ಹೆಂಡ್ರಿಕ್ಸ್ ಬಂದಷ್ಟೇ ವೇಗವಾಗಿ 3 ರನ್‌ಗಳಿಸಿ ಸಿರಾಜ್ ಬೌಲಿಂಗ್‌ನಲ್ಲಿ ಔಟಾದರು. ಇದಾದ ಬಳಿಕ ನಡೆದಿದ್ದು ಕುಲ್‌ದೀಪ್ ಯಾದವ್ ಸ್ಪಿನ್ ಮೋಡಿ
ಕಳೆಗುಂದುತ್ತಾ ವಿಶ್ವಕಪ್?: ಈ ಬಾರಿಯ ಟಿ20 ವಿಶ್ವಕಪ್ ತಪ್ಪಿಸಿಕೊಳ್ಳುತ್ತಿರುವ 5 ಸೂಪರ್ ಸ್ಟಾರ್‌ಗಳು!

4 ಓವರ್‌ಗೆ 4 ವಿಕೆಟ್ ಕಬಳಿಸಿದ ಕುಲ್‌ದೀಪ್ ಯಾದವ್
ಏಡೆನ್ ಮಕ್ರಾಮ್ 9ರನ್‌ಗೆ ಶಹಬಾಜ್ ಅಹಮ್ಮದ್ ಬೌಲಿಂಗ್‌ನಲ್ಲಿ ಔಟಾದ ಬಳಿಕ, ಡೇಂಜರಸ್ ಬ್ಯಾಟರ್ ಹಾಗೂ ಈ ಪಂದ್ಯದಲ್ಲಿ ತಂಡದ ನಾಯಕತ್ವ ವಹಿಸಿದ್ದ ಡೇವಿಡ್ ಮಿಲ್ಲರ್ ಅನ್ನು ವಾಷಿಂಗ್ಟನ್ ಸುಂದರ್ ಕ್ಲೀನ್ ಬೌಲ್ಡ್ ಮಾಡಿದರು. ಇದಾದ ಬಳಿಕ ನಡೆದಿದ್ದು ಕುಲ್‌ದೀಪ್ ಯಾದವ್ ಮ್ಯಾಜಿಕ್.
4.1 ಓವರ್‌ಗಳಲ್ಲಿ 1 ಮೇಡನ್ ಸಹಿತ ಕೇವಲ 18 ರನ್ ನೀಡಿದ ದಕ್ಷಿಣ ಆಫ್ರಿಕಾದ ಕೆಳಕ್ರಮಾಂಕದ ಬ್ಯಾಟರ್‌ಗಳನ್ನ ಪೆವಿಲಿಯನ್‌ಗೆ ಅಟ್ಟಿದ ಕುಲ್‌ದೀಪ್ ಅಂತಿಮ ವಿಕೆಟ್ ಸೇರಿದಂತೆ ಒಟ್ಟು 4 ವಿಕೆಟ್ ಕಬಳಿಸಿ ಬಿಟ್ರು. ಪರಿಣಾಮ ದಕ್ಷಿಣ ಆಫ್ರಿಕಾ ಹಿಂದೆಂದೂ ಕಾಣದಂತೆ ಕೇವಲ 27.1 ಓವರ್‌ಗಳಲ್ಲಿ 99ರನ್‌ಗಳಿಗೆ ಆಲೌಟ್ ಆಗಿದೆ.
ಭಾರತದ ಪರ ಕುಲ್‌ದೀಪ್ 4, ಶಹಬಾಜ್ ಅಹಮದ್, ವಾಷಿಂಗ್ಟನ್ ಸುಂದರ್ ಹಾಗೂ ಮೊಹಮ್ಮದ್ ಸಿರಾಜ್ ತಲಾ 2 ವಿಕೆಟ್ ಪಡೆದರು. ಇದು ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಭಾರತದ ವಿರುದ್ಧ ದಕ್ಷಿಣ ಆಫ್ರಿಕಾದ ಅತ್ಯಂತ ಕಡಿಮೆ ಸ್ಕೋರ್ ಆಗಿದೆ.
SMAT 2022: 4.5 ಓವರ್‌ಗಳಲ್ಲಿ ಟಿ20 ಪಂದ್ಯ ಗೆದ್ದ ಕೇರಳ! ಮುಂಬೈ ಗೆಲುವಿನ ಶುಭಾರಂಭ

ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್
ಟೀಂ ಇಂಡಿಯಾ: ಶಿಖರ್ ಧವನ್(ನಾಯಕ), ಶುಭಮನ್ ಗಿಲ್, ಇಶಾನ್ ಕಿಶನ್, ಶ್ರೇಯಸ್ ಅಯ್ಯರ್, ಸಂಜು ಸ್ಯಾಮ್ಸನ್(ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಶಹಬಾಜ್ ಅಹ್ಮದ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಅವೇಶ್ ಖಾನ್
ದಕ್ಷಿಣ ಆಫ್ರಿಕಾ: ಕ್ವಿಂಟನ್ ಡಿ ಕಾಕ್(ವಿಕೆಟ್ ಕೀಪರ್), ಜನ್ನೆಮನ್ ಮಲನ್, ರೀಜಾ ಹೆಂಡ್ರಿಕ್ಸ್, ಏಡೆನ್ ಮಾರ್ಕ್ರಾಮ್, ಹೆನ್ರಿಚ್ ಕ್ಲಾಸೆನ್, ಡೇವಿಡ್ ಮಿಲ್ಲರ್(ನಾಯಕ), ಮಾರ್ಕೊ ಜಾನ್ಸೆನ್, ಆಂಡಿಲ್ ಫೆಹ್ಲುಕ್ವಾಯೊ, ಜೋರ್ನ್ ಫಾರ್ಟುಯಿನ್, ಲುಂಗಿ ಎನ್‌ಗಿಡಿ, ಎನ್ರಿಕ್ ನೊರ್ಕಿಯಾ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications