Ind vs SA 3rd ODI: ಭಾರತದ ದಾಳಿಗೆ ತರಗೆಲೆಯಂತಾದ ದ. ಆಫ್ರಿಕಾ, 99 ರನ್‌ಗಳಿಗೆ ಆಲೌಟ್!

ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ-ದಕ್ಷಿಣ ಆಫ್ರಿಕಾ ಮೂರನೇ ಹಾಗೂ ಅಂತಿಮ ಡಿಸೈಡರ್ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಕೇವಲ 99ರನ್‌ಗಳಿಗೆ ಆಲೌಟ್ ಆಗುವ ಮೂಲಕ ಹೀನಾಯ ಮುಖಭಂಗ ಅನುಭವಿಸಿದೆ.
ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಟೀಂ ಇಂಡಿಯಾ ಪ್ರವಾಸಿ ತಂಡಕ್ಕೆ ಬ್ಯಾಟಿಂಗ್ ಆಹ್ವಾನಿಸಿತು. ಆರಂಭದಿಂದಲೇ ವಿಕೆಟ್ ಕಳೆದುಕೊಳ್ಳಲು ಶುರುಮಾಡಿದ ಹರಿಣಗಳು ಪೆವಿಲಿಯನ್ ಪರೇಡ್ ನಡೆಸಿದರು. ಮೊದಲಿಗೆ ಸಿರಾಜ್ ವಿಕೆಟ್ ಬೇಟೆ ಆರಂಭಿಸಿದ್ರೆ, ನಂತರ ಸ್ಪಿನ್ನರ್‌ಗಳೇ 8 ವಿಕೆಟ್ ಕಬಳಿಸುವ ಮೂಲಕ ದ.ಆಫ್ರಿಕಾ ಬರಿಗೈನಲ್ಲಿ ಗಂಟು ಮೂಟೆ ಕಟ್ಟುವಂತೆ ಮಾಡಿದ್ದಾರೆ.

ಭಾರತದ ದಾಳಿಗೆ ಬೆಂಡಾದ ದ.ಆಫ್ರಿಕಾ ಬ್ಯಾಟಿಂಗ್ ಲೈನಪ್
ಟೀಂ ಇಂಡಿಯಾ ಬೌಲಿಂಗ್ ದಾಳಿಗೆ ಅಕ್ಷರಶಃ ತತ್ತರಿಸಿ ಹೋಗಿರುವ ದ.ಆಫ್ರಿಕಾ ತಂಡದ ಬ್ಯಾಟರ್‌ಗಳು ಸ್ಪಿನ್ನರ್‌ಗಳೆದುರು ಹೇಗೆ ಬ್ಯಾಟ್ ಬೀಸಬೇಕು ಎಂಬುದನ್ನ ಮರೆತಂತೆ ಕಾಣುತ್ತಿತ್ತು. ಮೊದಲಿಗೆ ಸ್ಪಿನ್ನರ್ ವಾಷಿಂಗ್ಟನ್ ಸುಂದರ್ ಕ್ವಿಂಟನ್ ಡಿಕಾಕ್ ರನ್ನು 6 ರನ್‌ಗೆ ಔಟ್ ಮಾಡಿದ ಬಳಿಕ, ಮೊಹಮ್ಮದ್ ಸಿರಾಜ್ ಸತತ ಎರಡು ಓವರ್‌ಗಳಲ್ಲಿ ಎರಡು ವಿಕೆಟ್ ಕಬಳಿಸಿದ್ರು.
ಜನ್ನೆಮನ್ ಮಲನ್ 15ರನ್‌ಗೆ ವಿಕೆಟ್ ಒಪ್ಪಿಸಿದ್ರೆ, ರೀಜಾ ಹೆಂಡ್ರಿಕ್ಸ್ ಬಂದಷ್ಟೇ ವೇಗವಾಗಿ 3 ರನ್‌ಗಳಿಸಿ ಸಿರಾಜ್ ಬೌಲಿಂಗ್‌ನಲ್ಲಿ ಔಟಾದರು. ಇದಾದ ಬಳಿಕ ನಡೆದಿದ್ದು ಕುಲ್‌ದೀಪ್ ಯಾದವ್ ಸ್ಪಿನ್ ಮೋಡಿ
SMAT 2022: 4.5 ಓವರ್‌ಗಳಲ್ಲಿ ಟಿ20 ಪಂದ್ಯ ಗೆದ್ದ ಕೇರಳ! ಮುಂಬೈ ಗೆಲುವಿನ ಶುಭಾರಂಭ

4 ಓವರ್‌ಗೆ 4 ವಿಕೆಟ್ ಕಬಳಿಸಿದ ಕುಲ್‌ದೀಪ್ ಯಾದವ್
ಏಡೆನ್ ಮಕ್ರಾಮ್ 9ರನ್‌ಗೆ ಶಹಬಾಜ್ ಅಹಮ್ಮದ್ ಬೌಲಿಂಗ್‌ನಲ್ಲಿ ಔಟಾದ ಬಳಿಕ, ಡೇಂಜರಸ್ ಬ್ಯಾಟರ್ ಹಾಗೂ ಈ ಪಂದ್ಯದಲ್ಲಿ ತಂಡದ ನಾಯಕತ್ವ ವಹಿಸಿದ್ದ ಡೇವಿಡ್ ಮಿಲ್ಲರ್ ಅನ್ನು ವಾಷಿಂಗ್ಟನ್ ಸುಂದರ್ ಕ್ಲೀನ್ ಬೌಲ್ಡ್ ಮಾಡಿದರು. ಇದಾದ ಬಳಿಕ ನಡೆದಿದ್ದು ಕುಲ್‌ದೀಪ್ ಯಾದವ್ ಮ್ಯಾಜಿಕ್.
4.1 ಓವರ್‌ಗಳಲ್ಲಿ 1 ಮೇಡನ್ ಸಹಿತ ಕೇವಲ 18 ರನ್ ನೀಡಿದ ದಕ್ಷಿಣ ಆಫ್ರಿಕಾದ ಕೆಳಕ್ರಮಾಂಕದ ಬ್ಯಾಟರ್‌ಗಳನ್ನ ಪೆವಿಲಿಯನ್‌ಗೆ ಅಟ್ಟಿದ ಕುಲ್‌ದೀಪ್ ಅಂತಿಮ ವಿಕೆಟ್ ಸೇರಿದಂತೆ ಒಟ್ಟು 4 ವಿಕೆಟ್ ಕಬಳಿಸಿ ಬಿಟ್ರು. ಪರಿಣಾಮ ದಕ್ಷಿಣ ಆಫ್ರಿಕಾ ಹಿಂದೆಂದೂ ಕಾಣದಂತೆ ಕೇವಲ 27.1 ಓವರ್‌ಗಳಲ್ಲಿ 99ರನ್‌ಗಳಿಗೆ ಆಲೌಟ್ ಆಗಿದೆ.
ಭಾರತದ ಪರ ಕುಲ್‌ದೀಪ್ 4, ಶಹಬಾಜ್ ಅಹಮದ್, ವಾಷಿಂಗ್ಟನ್ ಸುಂದರ್ ಹಾಗೂ ಮೊಹಮ್ಮದ್ ಸಿರಾಜ್ ತಲಾ 2 ವಿಕೆಟ್ ಪಡೆದರು.
ರೋಜರ್ ಬಿನ್ನಿಗೆ BCCI ಅಧ್ಯಕ್ಷ ಪಟ್ಟ? ಕಾರ್ಯದರ್ಶಿಯಾಗಿ ಮುಂದುವರಿಯಲಿರುವ ಜಯ್ ಷಾ

ಭಾರತದ ವಿರುದ್ಧ ಅತ್ಯಂತ ಕಳಪೆ ಸ್ಕೋರ್ ದಾಖಲಿಸಿದ ಹರಿಣಗಳು
ದ.ಆಫ್ರಿಕಾ 99ರನ್‌ಗಳಿಗೆ ಆಲೌಟ್ ಆಗುವ ಮೂಲಕ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಟೀಂ ಇಂಡಿಯಾ ವಿರುದ್ಧ ಅತ್ಯಂತ ಕಡಿಮೆ ಸ್ಕೋರ್ ಅನ್ನು ದಾಖಲಿಸಿದೆ. ಕೇವಲ 99ರನ್‌ಗಳಿಗೆ ಆಲೌಟ್ ಆಗುವುದರ ಜೊತೆಗೆ 8 ವಿಕೆಟ್‌ಗಳನ್ನ ಸ್ಪಿನ್ನರ್‌ಗಳಿಗೆ ಬಿಟ್ಟುಕೊಟ್ಟಿದೆ. ಏಕದಿನ ಕ್ರಿಕೆಟ್‌ನಲ್ಲಿ ದ.ಆಫ್ರಿಕಾದ ಅತ್ಯಂತ ಕಡಿಮೆ ಸ್ಕೋರ್‌ಗಳು ಈ ಕೆಳಗೆ ಕಾಣಬಹುದಾಗಿದೆ.
69 vs ಆಸ್ಟ್ರೇಲಿಯಾ (ಸಿಡ್ನಿ) 1993
83 vs ಇಂಗ್ಲೆಂಡ್ (ನಾಟಿಂಗ್‌ಹ್ಯಾಮ್) 2008
83 vs ಇಂಗ್ಲೆಂಡ್ (ಮ್ಯಾಂಚೆಸ್ಟರ್) 2022
99 vs ಭಾರತ (ದೆಹಲಿ) 2022
ಭಾರತದ ವಿರುದ್ಧ ಈ ಹಿಂದಿನ ಕಡಿಮೆ ಒಡಿಐ ಸ್ಕೋರ್: 117 (ನೈರೋಬಿ) 1999

ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್
ಟೀಂ ಇಂಡಿಯಾ: ಶಿಖರ್ ಧವನ್(ನಾಯಕ), ಶುಭಮನ್ ಗಿಲ್, ಇಶಾನ್ ಕಿಶನ್, ಶ್ರೇಯಸ್ ಅಯ್ಯರ್, ಸಂಜು ಸ್ಯಾಮ್ಸನ್(ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಶಹಬಾಜ್ ಅಹ್ಮದ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಅವೇಶ್ ಖಾನ್
ದಕ್ಷಿಣ ಆಫ್ರಿಕಾ: ಕ್ವಿಂಟನ್ ಡಿ ಕಾಕ್(ವಿಕೆಟ್ ಕೀಪರ್), ಜನ್ನೆಮನ್ ಮಲನ್, ರೀಜಾ ಹೆಂಡ್ರಿಕ್ಸ್, ಏಡೆನ್ ಮಾರ್ಕ್ರಾಮ್, ಹೆನ್ರಿಚ್ ಕ್ಲಾಸೆನ್, ಡೇವಿಡ್ ಮಿಲ್ಲರ್(ನಾಯಕ), ಮಾರ್ಕೊ ಜಾನ್ಸೆನ್, ಆಂಡಿಲ್ ಫೆಹ್ಲುಕ್ವಾಯೊ, ಜೋರ್ನ್ ಫಾರ್ಟುಯಿನ್, ಲುಂಗಿ ಎನ್‌ಗಿಡಿ, ಎನ್ರಿಕ್ ನೊರ್ಕಿಯಾ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications