ರಾಂಚಿ ODI ಪಂದ್ಯದ ಬಳಿಕ ಅಭಿಮಾನಿಯ ಗಿಫ್ಟ್ ಅನ್ನು, ಶಾರ್ದೂಲ್‌ಗೆ ತಲುಪಿಸಿದ ಇಶಾನ್ ಕಿಶನ್

ಭಾನುವಾರ ನಡೆದ ಭಾರತ-ದಕ್ಷಿಣ ಆಫ್ರಿಕಾ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ಏಳು ವಿಕೆಟ್ ಗಳ ಜಯ ಸಾಧಿಸಿದ್ದು ಗೊತ್ತೇ ಇದೆ. ಈ ಗೆಲುವಿನಿಂದಾಗಿ ಭಾರತ ಸರಣಿಯಲ್ಲಿ 1-1ರಿಂದ ಸಮಬಲ ಸಾಧಿಸಿದ್ದು, ಜಯದ ಬಳಿಕ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಇಶಾನ್ ಕಿಶನ್ ತಮ್ಮ ತವರು ಮೈದಾನ ರಾಂಚಿ ಕ್ರೀಡಾಂಗಣಕ್ಕೆ ಪಂದ್ಯ ವೀಕ್ಷಿಸಲು ಬಂದಿದ್ದ ಅಭಿಮಾನಿಗಳನ್ನು ವಿಶೇಷವಾಗಿ ಸ್ವಾಗತಿಸಿದರು.
ಸ್ಟ್ಯಾಂಡ್‌ಗಳಿಗೆ ತೆರಳಿ ಸುತ್ತಾಡುತ್ತಾ ತನ್ನ ಅಭಿಮಾನಿಗಳಿಗೆ ಸೆಲ್ಫಿ ನೀಡಿದ ಇಶಾನ್ ಕಿಶನ್ ಆಟೋಗ್ರಾಫ್ ನೀಡಿದರು. ಇಶಾನ್ ಕಿಶನ್ ಮೂಲತಃ ಜಾರ್ಖಂಡ್‌ನಿಂದ ಬಂದವರಾಗಿದ್ದು, ದೇಶೀಯ ಕ್ರಿಕೆಟ್ ಕೂಡ ಅದೇ ತಂಡದ ಪರ ಆಡುತ್ತಾರೆ. ಹೀಗಾಗಿ ಬಿಹಾರದವರಾಗಿದ್ದರೂ, ಜಾರ್ಖಂಡ್‌ನ ರಾಂಚಿ ಕ್ರೀಡಾಂಗಣದೊಂದಿಗೆ ಇಶಾನ್ ಉತ್ತಮ ಒಡನಾಟವನ್ನು ಹೊಂದಿದ್ದಾರೆ.

ಅಭಿಮಾನಿಗಳೊಂದಿಗೆ ಸಮಯ ಕಳೆದ ಇಶಾನ್ ಕಿಶನ್: ಆಟೋಗ್ರಾಫ್
ಪಂದ್ಯದ ನಂತರ, ಬಿಸಿಸಿಐ ಇಶಾನ್ ಕಿಶನ್ ಸ್ಟ್ಯಾಂಡ್‌ನಲ್ಲಿ ತೆರಳಿ ಅಭಿಮಾನಿಗಳಿಗೆ ಸೆಲ್ಫಿ ಮತ್ತು ಆಟೋಗ್ರಾಫ್ ನೀಡುತ್ತಿರುವ ವೀಡಿಯೋವನ್ನು ಬಿಸಿಸಿಐ ತನ್ನ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಿದೆ. ಈ ವೀಡಿಯೋದಲ್ಲಿ ತನ್ನ ನೆಚ್ಚಿನ ಅಭಿಮಾನಿಗಳಿಗೆ ಫೋಟೋಗಳನ್ನ ನೀಡುವುದರ ಜೊತೆಗೆ ಆಟೋಗ್ರಾಫ್ ಕೂಡ ನೀಡಿದ್ದಾರೆ.
ಅವರಂತಹ ಕ್ರಿಕೆಟಿಗರು ಹಲವು ವರ್ಷಗಳಿಗೊಮ್ಮೆ ಮಾತ್ರ ಬರುತ್ತಾರೆ: ಟೀಂ ಇಂಡಿಯಾ ಪ್ಲೇಯರ್ ಕುರಿತು ಪೊಲಾರ್ಡ್ ಹೊಗಳಿಕೆ
ಶಾರ್ದೂಲ್ ಠಾಕೂರ್‌ಗೆ ಅಭಿಮಾನಿಯ ಗಿಫ್ಟ್
ಈ ವೀಡಿಯೋದಲ್ಲಿ ಅಭಿಮಾನಿಯೊಬ್ಬರು ಆಲ್‌ರೌಂಡರ್ ಶಾರ್ದೂಲ್ ಠಾಕೂರ್‌ಗಾಗಿಯೇ ಗಿಫ್ಟ್ ಒಂದನ್ನ ನೀಡಿದ್ದರು. ಇದನ್ನ ಡ್ರೆಸ್ಸಿಂಗ್ ರೂಂಗೆ ತೆರಳಿದ ಬಳಿಕ ಇಶಾನ್ ಕಿಶನ್ ಶಾರ್ದೂಲ್‌ಗೆ ಹಸ್ತಾಂತರಿಸಿದ್ರು. ಇದು ಶಾರ್ದೂಲ್ ಠಾಕೂರ್ 54 ಎಂಬ ಪ್ರೀತಿಯ ಸಂಕೇತವನ್ನು ಹೊಂದಿದೆ. ಇಶಾನ್ ಅದನ್ನು ತೆಗೆದುಕೊಂಡು ಶಾರ್ದೂಲ್‌ಗೆ ನೀಡಿರುವ ವೀಡಿಯೋವನ್ನು ಬಿಸಿಸಿಐ ವಿಡಿಯೋ ತಂಡ ಸೆರೆ ಹಿಡಿದಿದ್ದು ಆಕರ್ಷಕವಾಗಿತ್ತು.

ಸ್ವಲ್ಪದರಲ್ಲೇ ಶತಕ ಮಿಸ್ ಮಾಡಿಕೊಂಡ ಲೋಕಲ್ ಬಾಯ್
ಈ ಪಂದ್ಯದಲ್ಲಿ ಇಶಾನ್ ಕೇವಲ ಏಳು ರನ್‌ಗಳಿಂದ ತಮ್ಮ ಮೊದಲ ಒಡಿಐ ಶತಕವನ್ನು ಕಳೆದುಕೊಂಡರು.ಆದಾಗ್ಯೂ, ಅವರು ಸಿಕ್ಸರ್‌ಗಳನ್ನ ಸಿಡಿಸುವ ಮೂಲಕ ಅಭಿಮಾನಿಗಳನ್ನ ರಂಜಿಸಿದ್ರು. ಇಶಾನ್ ಕಿಶನ್ 84 ಎಸೆತಗಳಲ್ಲಿ 93ರನ್ ಸಿಡಿಸಿ ವಿಕೆಟ್ ಒಪ್ಪಿಸಿ ಶತಕವಂಚಿತರಾದ್ರು. ಇವರ ಇನ್ನಿಂಗ್ಸ್‌ನಲ್ಲಿ 4 ಬೌಂಡರಿ ಮತ್ತು 7 ಸಿಕ್ಸರ್ ಒಳಗೊಂಡಿತ್ತು.
ಪಂದ್ಯದ ಬಳಿಕ ಈ ಕುರಿತು ಮಾತನಾಡಿದ್ದ ಇಶಾನ್ ಕಿಶನ್ ''ಇದು ನನ್ನ ತವರು ನೆಲ. ನಾನು ಫೀಲ್ಡಿಂಗ್ ಮಾಡುತ್ತಿದ್ದಾಗ, ಇಂದು ಶತಕ ಬಾರಿಸುವಂತೆ ಅವರು ನನ್ನನ್ನು ಕೇಳಿದರು. ದುರದೃಷ್ಟವಶಾತ್ ನಾನು ಅದನ್ನು ಕಳೆದುಕೊಂಡೆ. ಚಿಂತಿಸಬೇಡಿ, ಏಕೆಂದರೆ ಇಂದಿನ ಪಂದ್ಯದಲ್ಲಿ ನಮ್ಮ ತಂಡ ಗೆದ್ದಿರುವುದು ಸಂತಸ ತಂದಿದೆ. ಮುಂದಿನ ಪಂದ್ಯದಲ್ಲಿ ನಾನು ನನ್ನ ಅತ್ಯುತ್ತಮ ಪ್ರದರ್ಶನ ನೀಡಿ ಮತ್ತೆ ನನ್ನ ತಂಡವನ್ನು ಗೆಲ್ಲಿಸಲು ಬಯಸುತ್ತೇನೆ'' ಎಂದು ಹೇಳಿದ್ದಾರೆ.
ಟಿ20I ಡೆತ್ ಓವರ್‌ನಲ್ಲಿ ಅತಿ ಹೆಚ್ಚು ರನ್ ಕೊಳ್ಳೆ ಹೊಡೆದ 6 ಆಟಗಾರರು: ಪಟ್ಟಿಯಲ್ಲಿ ಇಬ್ಬರು ಭಾರತೀಯರು!

ತವರಿನ ಅಭಿಮಾನಿಗಳೆದುರು ಮಿಂಚಿದ ಇಶಾನ್ ಕಿಶನ್
''ಕೆಲವೊಮ್ಮೆ ಈ ಪಿಚ್‌ನಲ್ಲಿ ಮಿಂಚುವುದು ತುಂಬಾ ಕಷ್ಟ. ಏಕೆಂದರೆ ನಾನು ಇಲ್ಲಿ ಸಾಕಷ್ಟು ಪಂದ್ಯಗಳನ್ನು ಆಡಿದ್ದೇನೆ. ಹೊಸ ಬ್ಯಾಟ್ಸ್ ಮನ್ ಗಳಿಗೆ ರನ್ ಗಳಿಸುವುದು ಸುಲಭವಲ್ಲ. ದಕ್ಷಿಣ ಆಫ್ರಿಕಾ ತಂಡದಲ್ಲಿ ಎನ್ರಿಕ್ ನೊರ್ಕಿಯಾ ಮತ್ತು ರಬಾಡ ಅತ್ಯಂತ ವೇಗದ ಎಸೆತಗಳನ್ನು ಬೌಲ್ ಮಾಡುತ್ತಾರೆ. ಅವರು ಕೆಲವೊಮ್ಮೆ ನಿಮ್ಮ ಮುಖಕ್ಕೆ ನೇರವಾಗಿ ಹೊಡೆಯುತ್ತಾರೆ. ಅದು ಮಧ್ಯದಲ್ಲಿ ನಿಧಾನಗೊಂಡು ಇದ್ದಕ್ಕಿದ್ದಂತೆ ವೇಗವನ್ನು ಹೆಚ್ಚಿಸುವುದರಿಂದ ಆಡುವುದು ಸುಲಭವಲ್ಲ. ಹೇಗಾದರೂ ಮಾಡಿ ಚೆಂಡಿಗೆ ತಕ್ಕಂತೆ ಆಡಬೇಕೆ ಹೊರತು, ಶಾಟ್ ಅನ್ನು ಮೊದಲೇ ನಿರ್ಧರಿಸಬಾರದು ಎಂದು ಯೋಜಿಸಿ ಆಡಿದ್ದೇನೆ. ನಾನು ಸಾಧ್ಯವಾದಷ್ಟು ಅಂತರದಲ್ಲಿ ಚೆಂಡನ್ನು ಹೊಡೆಯಲು ಪ್ರಯತ್ನಿಸಿದೆ. ಅದು ಸ್ವಲ್ಪ ವರ್ಕೌಟ್ ಆಗಿತ್ತು ಎಂದು ಇಶಾನ್ ಕಿಶನ್ ತಮ್ಮ ಇನ್ನಿಂಗ್ಸ್ ಕುರಿತು ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications