ಭಾರತ vs ದಕ್ಷಿಣ ಆಫ್ರಿಕಾ ಟಿ20 ಸರಣಿ: ಈ 5 ಬ್ಯಾಟ್ಸ್‌ಮನ್ ಮತ್ತು ಬೌಲರ್ ಕಾದಾಟ ನೋಡುವ ಕಾತರ

ಐಪಿಎಲ್ 2022ರ ಸೀಸನ್ ಮುಗಿದ ಬಳಿಕ ಟೀಂ ಇಂಡಿಯಾ ಅಂತರಾಷ್ಟ್ರೀಯ ಕ್ರಿಕೆಟ್ ಸರಣಿಯನ್ನು ದಕ್ಷಿಣ ಆಫ್ರಿಕಾ ವಿರುದ್ಧ ಆರಂಭಿಸಿದೆ. ಜೂನ್ 9ರಿಂದ ಆರಂಭಗೊಳ್ಳಲಿರುವ ಟಿ20 ಸರಣಿಗೆ ದಿನಗಣನೆ ಆರಂಭಗೊಂಡಿದ್ದು, ಟೀಂ ಇಂಡಿಯಾ ಸ್ಕ್ವಾಡ್‌ನಲ್ಲಿ ಸಾಕಷ್ಟು ಯುವ ಆಟಗಾರರಿಗೆ ಅವಕಾಶ ಸಿಕ್ಕಿದೆ.
ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮತ್ತು ಮಾಜಿ ನಾಯಕ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿದೆ. ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ ಮತ್ತು ರವೀಂದ್ರ ಜಡೇಜಾ ಅವರಂತಹ ಪ್ರಮುಖ ಆಟಗಾರರೂ ತಂಡದಿಂದ ಹೊರಗುಳಿದಿದ್ದಾರೆ. ಉಮ್ರಾನ್ ಮಲ್ಲಿಕ್, ಅರ್ಷ್‌ದೀಪ್ ಸಿಂಗ್, ಪ್ರಸಿದ್ಧ ಕೃಷ್ಣರಂತಹ ಯುವ ಬೌಲರ್ಸ್ ಸ್ಕ್ವಾಡ್‌ನಲ್ಲಿದ್ದು, ಕೆ.ಎಲ್ ರಾಹುಲ್ ಭಾರತ ತಂಡವನ್ನ ಮುನ್ನಡೆಸಲಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿ ಬಹುತೇಕ ಜಿದ್ದಾಜಿದ್ದಿನಿಂದಲೇ ಕೂಡಿರುತ್ತದೆ. ಯುವ ಹಾಗೂ ಅನುಭವಿ ಆಟಗಾರರ ಮಿಶ್ರಣವು ತಂಡವನ್ನ ಬ್ಯಾಲೆನ್ಸ್ ಮಾಡಿದೆ. ಇದರ ಜೊತೆಗೆ ಈ ಕೆಳಗಿನ ಐವರು ಬ್ಯಾಟರ್ ಮತ್ತು ಬೌಲರ್‌ಗಳ ಮುಖಾಮುಖಿಯನ್ನ ನೋಡಲು ಅಭಿಮಾನಿಗಳು ಕಾತುರರಾಗಿದ್ದಾರೆ. ಆ ಜೋಡಿಗಳ ಬ್ಯಾಟಲ್ ಕುರಿತು ಮಾಹಿತಿ ಈ ಕೆಳಗಿದೆ.

ರಿಷಬ್ ಪಂತ್ v/s ಎನ್ರಿಕ್ ನೊರ್ಕಿಯಾ
ಮುಂಬರುವ T20 ಅಂತರಾಷ್ಟ್ರೀಯ ಸರಣಿಯು ರಿಷಬ್ ಪಂತ್ ಅವರ ಆಕ್ರಮಣಕಾರಿ ಆಟ ಮತ್ತು ಎನ್ರಿಕ್ ನೊರ್ಕಿಯಾ ಅವರ ವೇಗದ ನಡುವಿನ ಗಂಭೀರ ಕಾದಾಟವಾಗಬಹುದು. ಐಪಿಎಲ್ 2022ರ ಸೀಸನ್‌ನಲ್ಲಿ 30.91 ಸರಾಸರಿ ಮತ್ತು 151.79 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿರುವ ಪಂತ್ 340 ರನ್‌ಗಳೊಂದಿಗೆ ಕಾಣಿಸಿಕೊಂಡಿದ್ದಾರೆ.
ಮಧ್ಯಮ ಕ್ರಮಾಂಕದಲ್ಲಿ ಅವರ ಉಪಸ್ಥಿತಿಯು ಬ್ಯಾಟಿಂಗ್ ವಿಭಾಗಕ್ಕೆ ಹೆಚ್ಚು ಶಕ್ತಿ ತುಂಬುತ್ತದೆ. ಆದ್ರೆ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಪಂತ್ ಎದುರಾಳಿ ವೇಗದ ಬೌಲರ್ ಎನ್ರಿಕ್ ನೊರ್ಕಿಯಾ ವೇಗವನ್ನು ಹೇಗೆ ನಿಭಾಯಿಸುತ್ತಾರೆ ಎಂಬುದನ್ನು ನೋಡಬೇಕಾಗಿದೆ.
ದಕ್ಷಿಣ ಆಫ್ರಿಕಾದ ವೇಗಿ, ಪಂತ್ ನಾಯಕತ್ವದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಆಡಿದ್ದು, ಕೆಲವು ಗಾಯದ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಆದಾಗ್ಯೂ, ಅವರು ಐಪಿಎಲ್ 2022 ರಲ್ಲಿ ಆಡಿದ ಆರು ಪಂದ್ಯಗಳಲ್ಲಿ, ಒಂಬತ್ತು ವಿಕೆಟ್‌ಗಳನ್ನು ಪಡೆದರು. ಇದೀಗ ಟಿ20 ಸರಣಿಯಲ್ಲಿ ಅವರ ಐಪಿಎಲ್ ನಾಯಕನ ವಿರುದ್ಧವೂ ಅಂತಹದ್ದೇ ಪ್ರದರ್ಶನ ನೀಡಲು ಉತ್ಸುಕರಾಗಿದ್ದಾರೆ.
ಬುಮ್ರಾ, ಶಮಿ, ಭುವಿ ನನಗೆ ಸ್ಫೂರ್ತಿಯೇ ಹೊರತು ವಕಾರ್ ಯೂನಿಸ್ ಅಲ್ಲ: ಉಮ್ರಾನ್ ಮಲ್ಲಿಕ್

ಕೆ.ಎಲ್ ರಾಹುಲ್ v/s ಕಗಿಸೊ ರಬಾಡ
ಕೆ.ಎಲ್ ರಾಹುಲ್ ಮತ್ತು ಕಗಿಸೊ ರಬಾಡ ಇಬ್ಬರೂ ಐಪಿಎಲ್ 2022 ರ ಅತ್ಯುತ್ತಮ ಪ್ರದರ್ಶನ ಹೊಂದಿದ್ದಾರೆ. ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ಕೆ.ಎಲ್ ರಾಹುಲ್ 51.33 ಸರಾಸರಿಯಲ್ಲಿ ಮತ್ತು 135.38 ಸ್ಟ್ರೈಕ್ ರೇಟ್‌ನಲ್ಲಿ 616 ರನ್‌ಗಳೊಂದಿಗೆ ತಮ್ಮ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದರು. ಇದು ಸೀಸನ್‌ನ ಎರಡನೇ ಅತಿ ಹೆಚ್ಚು ರನ್‌ಗಳಾಗಿತ್ತು.
ಇನ್ನು ಪಂಜಾಬ್ ಕಿಂಗ್ಸ್ ತಂಡದ ಪ್ರಮುಖ ವಿಕೆಟ್ ಟೇಕರ್ ಆಗಿದ್ದ ಕಗಿಸೊ ರಬಾಡ 8.46 ರ ಎಕಾನಮಿ ದರದಲ್ಲಿ 13 ಪಂದ್ಯಗಳಲ್ಲಿ 23 ವಿಕೆಟ್‌ಗಳೊಂದಿಗೆ ಮಿಂಚಿದ್ದಾರೆ. ಕೆ.ಎಲ್ ರಾಹುಲ್ ಕ್ರೀಸ್‌ನಲ್ಲಿ ಪ್ರಚಂಡ ಫಾರ್ಮ್‌ನಲ್ಲಿದ್ದು, ಎದುರಾಳಿ ಬೌಲರ್ ರಬಾಡ ಅವರ ನಿಖರವಾದ ಟೋ ಕ್ರಷರ್ ಯಾರ್ಕರ್‌ಗೆ ಯಾವ ರೀತಿಯ ಉತ್ತರ ನೀಡುತ್ತಾರೆ ಕಾದು ನೋಡಬೇಕಿದೆ.
AUS vs SL: ಮೊದಲ ಟಿ20 ಪಂದ್ಯಕ್ಕೆ ಒಂದು ದಿನ ಮುಂಚೆಯೇ ಆಡುವ ಬಳಗ ಪ್ರಕಟಿಸಿದ ಆಸ್ಟ್ರೇಲಿಯಾ

ಕ್ವಿಂಟನ್ ಡಿ ಕಾಕ್ v/s ಭುವನೇಶ್ವರ್ ಕುಮಾರ್
ದಕ್ಷಿಣ ಆಫ್ರಿಕಾದ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಉತ್ತಮ ಐಪಿಎಲ್ 2022ರ ಸೀಸನ್‌ನಲ್ಲಿ ಅಮೋಘ ಫಾರ್ಮ್‌ನಲ್ಲಿದ್ದರು. ಲಕ್ನೋ ಸೂಪರ್ ಜೈಂಟ್ಸ್ ಅಗ್ರ ಕ್ರಮಾಂಕಕ್ಕೆ ಹೆಚ್ಚು ಅಗತ್ಯವಿರುವ ಸ್ಥಿರತೆಯನ್ನು ಒದಗಿಸುವ ಮೂಲಕ ಡಿಕಾಕ್ 36.29 ರ ಸರಾಸರಿಯಲ್ಲಿ ಮತ್ತು 148.97 ರ ಸ್ಟ್ರೈಕ್ ರೇಟ್‌ನಲ್ಲಿ 508 ರನ್‌ಗಳನ್ನು ದಾಖಲಿಸಿದ್ರು.
ಏತನ್ಮಧ್ಯೆ, ಭುವನೇಶ್ವರ್ ಕುಮಾರ್ ಐಪಿಎಲ್‌ನಲ್ಲಿ ಹೆಚ್ಚು ಮಿಂಚದಿದ್ರೂ, 14 ಪಂದ್ಯಗಳಲ್ಲಿ 12 ವಿಕೆಟ್‌ಗಳೊಂದಿಗೆ 7.34 ರ ಎಕಾನಮಿಯಲ್ಲಿ ಬೌಲಿಂಗ್ ಮಾಡಿದ್ದಾರೆ. ದಕ್ಷಿಣ ಆಫ್ರಿಕಾದ ಎಡಗೈ ಬ್ಯಾಟರ್ ಮತ್ತು ತನ್ನ ವೇರಿಯೇಷನ್ ಮೂಲಕ ಮಿಂಚುವ ಭುವಿ ಮುಖಾಮುಖಿ ನೋಡಲು ಅಭಿಮಾನಿಗಳು ಕಾತುರರಾಗಿದ್ದಾರೆ. ಕ್ವಿಂಟನ್ ಡಿಕಾಕ್ ಅವರ ಪ್ರದರ್ಶನವನ್ನು ಮಟ್ಟಹಾಕಲು ಮತ್ತು ಸೋಲಿಸಲು ಪ್ರಯತ್ನಿಸುತ್ತಾರೆ. ಭುವಿ ಚೆಂಡನ್ನು ಎರಡೂ ರೀತಿಯಲ್ಲಿ ಸ್ವಿಂಗ್ ಮಾಡಲು ಪ್ರಯತ್ನಿಸುವುದರೊಂದಿಗೆ, ಅವರು ಕ್ವಿಂಟನ್‌ಗೆ ಸವಾಲನ್ನು ಒಡ್ಡಬಹುದು. ಹಾಗೆಯೇ ಡಿಕಾಕ್ ತನ್ನ ಐಪಿಎಲ್ ಫಾರ್ಮ್ ಅನ್ನು ಟಿ20 ಸರಣಿಯಲ್ಲಿ ಮುಂದುವರಿಸಲು ಬಯಸುತ್ತಾರೆ.
Ind vs SA: ವಿಶ್ವದಾಖಲೆ ಮೇಲೆ ಕಣ್ಣು: ಮೊದಲ ಟಿ20 ಪಂದ್ಯಕ್ಕೆ ಅಭ್ಯಾಸ ಆರಂಭಿಸಿದ ರಾಹುಲ್ ಪಡೆ

ಟೆಂಬಾ ಬವುಮಾ v/s ಯುಜವೇಂದ್ರ ಚಹಾಲ್
ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ದಕ್ಷಿಣ ಆಫ್ರಿಕಾದ ನಾಯಕ ತೆಂಬಾ ಬವುಮಾ ತಂಡವನ್ನು ಮುನ್ನಡೆಸಲಿದ್ದಾರೆ. ಜೊತೆಗೆ ಆತಿಥೇಯರಿಗೆ ಕಠಿಣ ಸವಾಲನ್ನ ಒಡ್ಡಲು ಯೋಜನೆ ರೂಪಿಸಿದ್ದಾರೆ. ಟೆಂಬಾ ಬವುಮಾ ಸ್ಪಿನ್ ಮಾಂತ್ರಿಕ, ಲೆಗ್ ಸ್ಪಿನ್ನರ್ ಯುಜವೇಂದ್ರ ಚಾಹಲ್ ಅವರ ಸವಾಲನ್ನು ಎದುರಿಸಬೇಕಾಗುತ್ತದೆ.
ಐಪಿಎಲ್ 2022 ಪರ್ಪಲ್ ಕ್ಯಾಪ್ ವಿಜೇತ, ಚಹಾಲ್ 7.75 ರ ಎಕಾನಮಿಯಲ್ಲಿ 17 ಪಂದ್ಯಗಳಲ್ಲಿ ಒಟ್ಟು 27 ವಿಕೆಟ್‌ಗಳನ್ನು ಪಡೆದರು. ಚಹಾಲ್ ತನ್ನ ಪ್ರಚಂಡ ಫಾರ್ಮ್ ಅನ್ನು ಮುಂದುವರಿಸಲು ಮತ್ತು ಬವುಮಾರಿಗೆ ಸವಾಲೊಡ್ಡಲು ರೆಡಿಯಾಗಿದ್ದಾರೆ.

ಡೇವಿಡ್ ಮಿಲ್ಲರ್ v/s ಹರ್ಷಲ್ ಪಟೇಲ್
ಡೇವಿಡ್ ಮಿಲ್ಲರ್ ಐಪಿಎಲ್ 2022 ರಲ್ಲಿ ಪ್ರಶಸ್ತಿ ವಿಜೇತ ಗುಜರಾತ್ ಟೈಟಾನ್ಸ್‌ನ ತಾರೆಗಳಲ್ಲಿ ಒಬ್ಬರಾಗಿದ್ದರು. ಮಿಲ್ಲರ್ ಐಪಿಎಲ್ 2022 ರ ಸೀಸನ್‌ನಲ್ಲಿ 68.71 ರ ಸರಾಸರಿ ಮತ್ತು 142.73 ರ ಸ್ಟ್ರೈಕ್ ರೇಟ್‌ನೊಂದಿಗೆ 481 ರನ್‌ಗಳೊಂದಿಗೆ ಮಿಂಚಿದರು.
ಮತ್ತೊಂದೆಡೆ ಆರ್‌ಸಿಬಿ ಪರ 7.66 ಎಕಾನಮಿಯೊಂದಿಗೆ ಮಧ್ಯಮ ಓವರ್‌ಗಳಲ್ಲಿ ಬೌಲಿಂಗ್ ಮಾಡಿ 19 ವಿಕೆಟ್ ಪಡೆದ ವೇಗದ ಬೌಲರ್ ಹರ್ಷಲ್ ಪಟೇಲ್ ಆಫ್ರಿಕಾ ಬ್ಯಾಟರ್ ಮಿಲ್ಲರ್ ಸವಾಲೆಸೆಯಲಿದ್ದಾರೆ. ಹಾಗಾಗಿ 'ಕಿಲ್ಲರ್ ಮಿಲ್ಲರ್' ತನ್ನ ಪ್ರದರ್ಶನದಲ್ಲಿ ಪ್ರಾಬಲ್ಯ ಸಾಧಿಸುತ್ತಾನೆಯೇ ಅಥವಾ ಹರ್ಷಲ್ ದಕ್ಷಿಣ ಆಫ್ರಿಕಾದ ಬ್ಯಾಟಿಂಗ್ ಎದುರಾಳಿಯನ್ನು ಬೇಗನೆ ಔಟ್ ಮಾಡಬಹುದೇ ಎಂಬುದನ್ನು ವೀಕ್ಷಿಸಲು ರೋಮಾಂಚನಕಾರಿಯಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications