For Quick Alerts
ALLOW NOTIFICATIONS  
For Daily Alerts
 

ಭಾರತ v/s ದಕ್ಷಿಣ ಆಫ್ರಿಕಾ: 2018ರ ಟೆಸ್ಟ್ ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭಾರತೀಯ ಬೌಲರ್ಸ್

ishanth sharma

ಡಿಸೆಂಬರ್ 26ರಂದು ಸೆಂಚುರಿಯನ್ ಸೂಪರ್‌ಸ್ಪೋರ್ಟ್‌ ಪಾರ್ಕ್‌ನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಮೂರು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಮುಖಾಮುಖಿಯಾಗಲಿದ್ದಾರೆ. ಟೀಂ ಇಂಡಿಯಾ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಭಾರತ ತಂಡವನ್ನ ಮುನ್ನಡೆಸಲಿದ್ದು, ದಕ್ಷಿಣ ಆಫ್ರಿಕಾ ತಂಡಕ್ಕೆ ಡೀನ್ ಎಲ್ಗರ್‌ ನೇತೃತ್ವದಲ್ಲಿ ಕಣಕ್ಕಿಳಿಯಲಿದೆ.

ಟೀಂ ಇಂಡಿಯಾ ಕೊನೆಯ ಬಾರಿಗೆ 2018ರಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿತ್ತು. ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ 2-1ರಿಂದ ಟೆಸ್ಟ ಸರಣಿ ಗೆಲುವು ಸಾಧಿಸಿತ್ತು. ಭಾರತ ಮೊದಲೆರಡು ಟೆಸ್ಟ ಪಂದ್ಯಗಳಲ್ಲಿ ಸೋಲನ್ನ ಕಂಡ ನಂತರ ಮೂರನೇ ಟೆಸ್ಟ್ ಪಂದ್ಯದಲ್ಲಿ ಗೆಲುವಿನ ನಗೆ ಬೀರಿತ್ತು.

ಈ ಟೆಸ್ಟ್ ಸರಣಿಯಲ್ಲಿ ಕೆಲವು ಭಾರತೀಯ ಬೌಲರ್‌ಗಳು ಅದ್ಭುತ ಪ್ರದರ್ಶನ ನೀಡಿದ್ರು. ಹೀಗೆ ಭಾರತ-ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್‌ನಲ್ಲಿ ಅತಿಹೆಚ್ಚು ವಿಕೆಟ್ ಪಡೆದ ಐದು ಭಾರತೀಯ ಬೌಲರ್‌ಗಳು ಯಾರು ಎಂಬುದರ ಕುರಿತು ಮಾಹಿತಿ ಈ ಲೇಖನದಲ್ಲಿದೆ.

ರವಿಚಂದ್ರನ್ ಅಶ್ವಿನ್

ರವಿಚಂದ್ರನ್ ಅಶ್ವಿನ್

2018ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್‌ ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭಾರತದ ಬೌಲರ್‌ಗಳಲ್ಲಿ ಆರ್. ಅಶ್ವಿನ್ ಐದನೇ ಸ್ಥಾನ ಪಡೆದಿದ್ದಾರೆ. ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಅಶ್ವಿನ್ ಎರಡು ಪಂದ್ಯಗಳನ್ನಷ್ಟೇ ಆಡಿದ್ರು. ಒಟ್ಟು ನಾಲ್ಕು ಇನ್ನಿಂಗ್ಸ್‌ಗಳಲ್ಲಿ ಆಫ್‌ ಸ್ಪಿನ್ನರ್ 30.71ರ ಸರಾಸರಿಯಲ್ಲಿ 7 ವಿಕೆಟ್ ಕಬಳಿಸಿದ್ರು. ಬಲಗೈ ಸ್ಪಿನ್ನರ್ ಬೆಸ್ಟ್ ಬೌಲಿಂಗ್ 133 ರನ್‌ಗೆ 4 ವಿಕೆಟ್ ಪಡೆದ್ರೆ, ಇಡೀ ಪಂದ್ಯದಲ್ಲಿ 191 ರನ್‌ ನೀಡಿ 5 ವಿಕೆಟ್ ಪಡೆದಿದ್ದು ಬೆಸ್ಟ್ ಬೌಲಿಂಗ್ ಆಗಿದೆ.

ರವಿಶಾಸ್ತ್ರಿಯ ಆ ಒಂದು ಹೇಳಿಕೆ ನನಗೆ ಬಹಳ ನೋವು ತಂದಿತು: ಆರ್‌. ಅಶ್ವಿನ್

ಇಶಾಂತ್ ಶರ್ಮಾ

ಇಶಾಂತ್ ಶರ್ಮಾ

ದೀರ್ಘ ಸ್ವರೂಪದ ಕ್ರಿಕೆಟ್‌ನಲ್ಲಿ ಟೀಂ ಇಂಡಿಯಾ ಪರ ಹಲವು ಅವಿಸ್ಮರಣೀಯ ಗೆಲುವಿನಲ್ಲಿ ಭಾಗಿಯಾಗಿರುವ ಮಧ್ಯಮ ವೇಗಿ ಇಶಾಂತ್ ಶರ್ಮಾ, 2018ರ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ 8 ವಿಕೆಟ್ ಪಡೆದಿದ್ದರು. ಈತ ಸಹ ಮೂರು ಪಂದ್ಯಗಳ ಸರಣಿಯಲ್ಲಿ ಎರಡು ಪಂದ್ಯಗಳಲ್ಲಿ ಭಾಗಿಯಾಗಿದ್ದು, 18.75ರ ಸರಾಸರಿಯಲ್ಲಿ 8 ವಿಕೆಟ್ ಪಡೆದು ಮಿಂಚಿದ್ದಾರೆ. ಈತನ ಬೆಸ್ಟ ಬೌಲಿಂಗ್ ಇನ್ನಿಂಗ್ಸ್‌ವೊಂದರಲ್ಲಿ 3/46 ಆಗಿದ್ದು, ಪಂದ್ಯದಲ್ಲಿ 86 ರನ್ ನೀಡಿ 5 ವಿಕೆಟ್ ಪಡೆದಿದ್ದಾರೆ.

ಭಾರತ V/S ದಕ್ಷಿಣ ಆಫ್ರಿಕಾ: ದಕ್ಷಿಣ ಆಫ್ರಿಕಾದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ 5 ಬೌಲರ್ಸ್‌

ಭುವನೇಶ್ವರ್ ಕುಮಾರ್

ಭುವನೇಶ್ವರ್ ಕುಮಾರ್

ಟೀಂ ಇಂಡಿಯಾ ವೇಗಿ ಭುವನೇಶ್ವರ್ ಕುಮಾರ್ ಸದ್ಯ ಭಾರತ ತಂಡದ ಪರ ಸ್ಥಾನ ಪಡೆಯುವಲ್ಲಿ ವಿಫಲಗೊಂಡಿದ್ದಾರೆ. ಆದ್ರೆ 2018ರ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಭುವಿ ಎರಡು ಟೆಸ್ಟ ಪಂದ್ಯಗಳಲ್ಲಿ 10 ವಿಕೆಟ್ ಪಡೆದಿದ್ದರು. 20.30 ಬೌಲಿಂಗ್ ಸರಾಸರಿಯಲ್ಲಿ ನಾಲ್ಕು ಇನ್ನಿಂಗ್ಸ್‌ಗಳಲ್ಲಿ 10 ವಿಕೆಟ್ ಉರುಳಿಸಿದ್ರು. ಈತನ ಬೆಸ್ಟ್ ಬೌಲಿಂಗ್ ಇನ್ನಿಂಗ್ಸ್‌ವೊಂದರಲ್ಲಿ 4/87 ಆಗಿದ್ದು, ಪಂದ್ಯದಲ್ಲಿ 6/120 ನಷ್ಟಿದೆ.

ಜಸ್ಪ್ರೀತ್ ಬುಮ್ರಾ

ಜಸ್ಪ್ರೀತ್ ಬುಮ್ರಾ

2018ರ ಭಾರತ- ದಕ್ಷಿಣ ನಡುವಿನ ಟೆಸ್ಟ ಸರಣಿಯಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಎರಡನೇ ಬೌಲರ್ ಜಸ್ಪ್ರೀತ್ ಬುಮ್ರಾ. ಮೂರು ಪಂದ್ಯಗಳ ಟೆಸ್ಟ್ ಸರಣಿಯ ಆರು ಇನ್ನಿಂಗ್ಸ್‌ಗಳಲ್ಲಿ ಬುಮ್ರಾ 25.21ರ ಸರಾಸರಿಯಲ್ಲಿ 14 ವಿಕೆಟ್ ಪಡೆದಿದ್ದರು. ಒಂದು ಇನ್ನಿಂಗ್ಸ್‌ನಲ್ಲಿ ಐದು ವಿಕೆಟ್ ಸಹ ಪಡೆದಿದ್ದ ಬುಮ್ರಾ ಒಂದು ಇನ್ನಿಂಗ್ಸ್‌ನಲ್ಲಿ 5/54 ಬೆಸ್ಟ್ ಇನ್ನಿಂಗ್ಸ್ ಆಗಿದ್ದು, ಪಂದ್ಯದಲ್ಲಿ 7/111 ಸಹ ಪಡೆದಿದ್ದಾರೆ.

Virat ಚಾಯ್ಸ್ ನಿಂದ ಟೆಸ್ಟ್ ಪಂದ್ಯಕ್ಕೆ ಲಾಭಾನಾ? ನಷ್ಟನಾ? | Oneindia Kannada
ಮೊಹಮ್ಮದ್ ಶಮಿ

ಮೊಹಮ್ಮದ್ ಶಮಿ

ಭಾರತದ ಪರ ಕಳೆದ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಅಂದ್ರೆ ಅದು ಮೊಹಮ್ಮದ್ ಶಮಿ. ಬಲಗೈ ವೇಗಿ ಟೀಂ ಇಂಡಿಯಾ ಪರ ಮಿಂಚಿನ ದಾಳಿ ನಡೆಸಿದ್ದು, ಮೂರು ಪಂದ್ಯಗಳಲ್ಲಿ 15 ವಿಕೆಟ್ ಕಬಳಿಸಿದ್ದಾರೆ. 17.06ರ ಸರಾಸರಿಯಲ್ಲಿ ಬೌಲಿಂಗ್ ಮಾಡಿದ ಶಮಿ ಒಂದು ಬಾರಿ ಐದು ವಿಕೆಟ್ ಸಹ ಪಡೆದಿದ್ರು.

ಶಮಿ ಇನ್ನಿಂಗ್ಸ್ ಬೆಸ್ಟ್ ಬೌಲಿಂಗ್: 5/28, ಪಂದ್ಯದ ಬೆಸ್ಟ್ ಬೌಲಿಂಗ್ 6/74

Story first published: Tuesday, December 21, 2021, 22:26 [IST]
Other articles published on Dec 21, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+