Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಅಭ್ಯಾಸ ಪಂದ್ಯದಲ್ಲೂ ಅಬ್ಬರಿಸಿದ ಸೂರ್ಯಕುಮಾರ್ ಯಾದವ್: ಬೊಂಬಾಟ್ ಅರ್ಧಶತಕ

suryakumar yadav

ಟಿ20 ವಿಶ್ವಕಪ್‌ಗಾಗಿ ಆಸ್ಟ್ರೇಲಿಯಾಕ್ಕೆ ಬಂದಿರುವ ಟೀಂ ಇಂಡಿಯಾ ಮೊದಲ ಅಭ್ಯಾಸದಲ್ಲಿ ಗೆಲುವಿನೊಂದಿಗೆ ಶುಭಾರಂಭ ಮಾಡಿದೆ. ಭಾರತವು ವೆಸ್ಟ್ರನ್‌ ಆಸ್ಟ್ರೇಲಿಯಾವನ್ನು 13 ರನ್‌ಗಳಿಂದ ಸೋಲಿಸಿತು. ಆಸ್ಟ್ರೇಲಿಯಾ ನೆಲದಲ್ಲಿ ಅದ್ಭುತ ಫಾರ್ಮ್ ಮುಂದುವರಿಸಿದ ಸೂರ್ಯಕುಮಾರ್ ಯಾದವ್ ಭಾರತದ ಗೆಲುವಿನ ಹೀರೋ ಎನಿಸಿದರು.

ಅವರು ಅರ್ಧಶತಕದೊಂದಿಗೆ ತಂಡದ ಶ್ರೇಷ್ಠ ಬ್ಯಾಟರ್ ಆಗಿ ಗುರುತಿಸಿಕೊಂಡರು. ನಂತರ, ಬೌಲರ್‌ಗಳು ಸಹ ಉತ್ತಮ ಪ್ರದರ್ಶನ ನೀಡಿದ್ದರಿಂದ ಭಾರತವು ವೆಸ್ಟ್ರನ್ ಆಸ್ಟ್ರೇಲಿಯಾವನ್ನು ಸೋಲಿಸಿತು. ಬೌಲಿಂಗ್‌ನಲ್ಲಿ ಅರ್ಷದೀಪ್ ಸಿಂಗ್ ಭಾರತದ ಬೌಲಿಂಗ್‌ನ ಚುಕ್ಕಾಣಿ ಹಿಡಿದಿದ್ದರು. ಭುವನೇಶ್ವರ್ ಕುಮಾರ್ ಕೂಡ ಉತ್ತಮ ಬೆಂಬಲ ನೀಡಿದರು.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ರೋಹಿತ್ ಶರ್ಮಾ

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ರೋಹಿತ್ ಶರ್ಮಾ

ಮೊದಲ ಅಭ್ಯಾಸ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ನಾಯಕ ರೋಹಿತ್ ಶರ್ಮಾ, ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಪರ ನಾಯಕ ರೋಹಿತ್ ಶರ್ಮಾ ಮತ್ತು ರಿಷಭ್ ಪಂತ್ ಓಪನಿಂಗ್ ಕಣಕ್ಕಿಳಿದ್ರೆ, ಕೆ.ಎಲ್ ರಾಹುಲ್, ವಿರಾಟ್ ಕೊಹ್ಲಿ ಮತ್ತು ರವಿಚಂದ್ರನ್ ಅಶ್ವಿನ್‌ಗೆ ವಿಶ್ರಾಂತಿ ನೀಡಲಾಯಿತು.

ಈ ಪಂದ್ಯದಲ್ಲಿ ಟಾಪ್ ಆರ್ಡರ್ ಬ್ಯಾಟಿಂಗ್ ವೈಫಲ್ಯಗೊಂಡ ಮತ್ತೊಮ್ಮೆ ಟೀಂ ಇಂಡಿಯಾ ಕೈ ಹಿಡಿದಿದ್ದು ಸೂರ್ಯಕುಮಾರ್ ಯಾದವ್. ನಾಯಕ ರೋಹಿತ್ ಶರ್ಮಾ 3, ರಿಷಭ್ ಪಂತ್ 9, ದೀಪಕ್ ಹೂಡಾ 22ರನ್‌ಗಳಿಸಿ ಔಟಾದ್ರೆ, ನಾಲ್ಕನೇ ಕ್ರಮಾಂಕದಲ್ಲಿ ಸೂರ್ಯ ಅಬ್ಬರಿಸಿದ್ರು.

ಅವರಂತಹ ಕ್ರಿಕೆಟಿಗರು ಹಲವು ವರ್ಷಗಳಿಗೊಮ್ಮೆ ಮಾತ್ರ ಬರುತ್ತಾರೆ: ಟೀಂ ಇಂಡಿಯಾ ಪ್ಲೇಯರ್ ಕುರಿತು ಪೊಲಾರ್ಡ್ ಹೊಗಳಿಕೆ

ತಂಡದ ಹೀರೋ ಆಗಿ ಮಿಂಚಿದ ಸೂರ್ಯಕುಮಾರ್

ತಂಡದ ಹೀರೋ ಆಗಿ ಮಿಂಚಿದ ಸೂರ್ಯಕುಮಾರ್

ಹೌದು ಸೂರ್ಯ 52 ರನ್ ಗಳಿಸಿ ತಂಡದ ಹೀರೋ ಆದರು. ಅವರ 35 ಎಸೆತಗಳ ಇನ್ನಿಂಗ್ಸ್‌ನಲ್ಲಿ ತಲಾ ಮೂರು ಬೌಂಡರಿ ಮತ್ತು ಒಂದು ಸಿಕ್ಸರ್ ಸೇರಿದ್ದವು. ಸೂರ್ಯ ಹೊರತುಪಡಿಸಿ, ಹಾರ್ದಿಕ್ ಪಾಂಡ್ಯ (27) ಪ್ರಮುಖ ಸ್ಕೋರರ್ ಆಗದರು. ಪಾಂಡ್ಯ 20 ಎಸೆತಗಳಲ್ಲಿ 27 ರನ್ ಗಳಿಸಿದರು. ದೀಪಕ್ ಹೂಡಾ 14 ಎಸೆತಗಳಲ್ಲಿ 22 ರನ್ ಗಳಿಸಿ ಮರಳಿದರು. ದಿನೇಶ್ ಕಾರ್ತಿಕ್ 23 ಎಸೆತಗಳಲ್ಲಿ ಔಟಾಗದೆ 19 ರನ್ ಮತ್ತು ಅಕ್ಷರ್ ಪಟೇಲ್ 10 ರನ್ ಗಳಿಸಿ ಔಟಾದರು.

T20 World Cup: ಟಿ20 ವಿಶ್ವಕಪ್ ಫೈನಲ್‌ ತಲುಪುವ ತಂಡಗಳ ಭವಿಷ್ಯ ನುಡಿದ ಕ್ರಿಸ್ ಗೇಲ್

ಬೌಲಿಂಗ್‌ನಲ್ಲಿ ಮಿಂಚಿದ ಅರ್ಷ್‌ದೀಪ್ ಸಿಂಗ್

ಬೌಲಿಂಗ್‌ನಲ್ಲಿ ಮಿಂಚಿದ ಅರ್ಷ್‌ದೀಪ್ ಸಿಂಗ್

ವೆಸ್ಟ್ರನ್‌ ಆಸ್ಟ್ರೇಲಿಯಾ ಬ್ಯಾಟಿಂಗ್‌ ವೇಳೆಯಲ್ಲಿ ಭಾರತೀಯ ಬೌಲರ್‌ಗಳು ಇನ್ನಿಲ್ಲದಂತೆ ಕಾಡಿದರು. ಅವರು ಎಂಟು ವಿಕೆಟ್‌ಗೆ 145 ರನ್ ಗಳಿಸಿದರು. ನ್ಯೂಬಾಲ್ ಜೋಡಿ ಭುವನೇಶ್ವರ್ ಕುಮಾರ್ ಮತ್ತು ಅರ್ಷದೀಪ್ ಸಿಂಗ್ ಪವರ್‌ಪ್ಲೇನಲ್ಲಿ ಎದುರಾಳಿ ತಂಡದ ಬ್ಯಾಟಿಂಗ್ ಆರ್ಡರ್ ಮುರಿದರು. ಇಬ್ಬರೂ ತಲಾ ಎರಡು ವಿಕೆಟ್‌ಗಳನ್ನು ಹಂಚಿಕೊಂಡಾಗ, ವೆಸ್ಟ್ರನ್ ಆಸ್ಟ್ರೇಲಿಯಾ ನಾಲ್ಕು ವಿಕೆಟ್‌ ನಷ್ಟಕ್ಕೆ 12 ರನ್‌ಗಳಿಗೆ ಕುಸಿಯಿತು.

ಪವರ್‌ಪ್ಲೇಯ ಅಂತ್ಯಕ್ಕೆ ವೆಸ್ಟರ್ನ್ ಆಸ್ಟ್ರೇಲಿಯ ನಾಲ್ಕು ವಿಕೆಟ್ ನಷ್ಟಕ್ಕೆ 29 ರನ್ ಗಳಿಸಿತ್ತು.ಆದರೆ ಸ್ಯಾಮ್ ಫಾನ್ನಿಂಗ್ (59) ಅವರ ಅರ್ಧಶತಕ ವೆಸ್ಟರ್ನ್ ಆಸ್ಟ್ರೇಲಿಯವನ್ನು ಮತ್ತೆ ಆಟಕ್ಕೆ ತಂದಿತು. ಆದರೆ ಕೊನೆಯ ಓವರ್‌ಗಳಲ್ಲಿ ವಿಕೆಟ್ ಕಬಳಿಸುವ ಮೂಲಕ ಭಾರತ ಗೆದ್ದಿತು.

ವೆಸ್ಟರ್ನ್ ಆಸ್ಟ್ರೇಲಿಯ ನಿಗದಿತ ಓವರ್‌ನಲ್ಲಿ ಎಂಟು ವಿಕೆಟ್ ನಷ್ಟಕ್ಕೆ 145 ರನ್ ಗಳಿಸಲಷ್ಟೇ ಶಕ್ತವಾಯಿತು. ಅರ್ಷದೀಪ್ ಮೂರು ವಿಕೆಟ್ ಪಡೆದು ಮಿಂಚಿದರು. ಮೂರು ಓವರ್‌ಗಳಲ್ಲಿ ಕೇವಲ ಆರು ರನ್‌ಗಳನ್ನು ನೀಡಿದ ಅರ್ಷ್‌ದೀಪ್ ಒಂದು ಮೇಡನ್ ಓವರ್ ಸಹ ಸಂಪಾದಿಸಿದ್ರು. ಭುವಿ ಮತ್ತು ಯುಜ್ವೇಂದ್ರ ಚಹಾಲ್ ತಲಾ ಎರಡು ವಿಕೆಟ್ ಪಡೆದರು. ಹರ್ಷಲ್ ಪಟೇಲ್ ಕೂಡ ಒಂದು ವಿಕೆಟ್ ಪಡೆದರು.

Story first published: Monday, October 10, 2022, 19:34 [IST]
Other articles published on Oct 10, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+