2ನೇ ಅಭ್ಯಾಸ ಪಂದ್ಯವನ್ನು ಗೆಲ್ಲಲು ಟೀಂ ಇಂಡಿಯಾ ರೆಡಿ: ಕೊಹ್ಲಿ, ರಾಹುಲ್ ಕಣಕ್ಕೆ!

ಐಸಿಸಿ ಟಿ20 ವಿಶ್ವಕಪ್‌ಗೂ ಮುನ್ನ ನಡೆಯುತ್ತಿರುವ ಎರಡನೇ ಅಭ್ಯಾಸ ಪಂದ್ಯದಲ್ಲಿ ಭಾರತ ತಂಡ ಗುರುವಾರ ಪಶ್ಚಿಮ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ. ಭಾರತ ಎರಡನೇ ಬಾರಿಗೆ ಪಶ್ಚಿಮ ಆಸ್ಟ್ರೇಲಿಯಾವನ್ನು ಎದುರಿಸಲಿದೆ. ಮೊದಲ ಪಂದ್ಯವನ್ನು ಭಾರತ 13 ರನ್‌ಗಳಿಂದ ಗೆದ್ದಿತ್ತು.
ಮೊದಲ ಅಭ್ಯಾಸ ಪಂದ್ಯದಲ್ಲಿ ಕೆಲ ಆಟಗಾರರ ಪ್ರದರ್ಶನ ಭಾರತಕ್ಕೆ ನಿರಾಸೆ ಮೂಡಿಸಿತು. ಎರಡನೇ ಪಂದ್ಯದಲ್ಲಿ ಅವರು ತಮ್ಮ ಫಾರ್ಮ್ ಅನ್ನು ಮರಳಿ ಪಡೆಯುತ್ತಾರೆ ಎಂದು ತಂಡದ ಮ್ಯಾನೇಜ್‌ಮೆಂಟ್ ಆಶಿಸುತ್ತಿದೆ. ಪಂದ್ಯವು ಗುರುವಾರ ಭಾರತೀಯ ಕಾಲಮಾನ ಬೆಳಿಗ್ಗೆ 11 ಗಂಟೆಗೆ ಪ್ರಾರಂಭವಾಗುತ್ತದೆ. ಪಶ್ಚಿಮ ಆಸ್ಟ್ರೇಲಿಯಾದ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಆಟದ ಲೈವ್ ಸ್ಟ್ರೀಮಿಂಗ್ ಇರಬಹುದು ಎಂಬ ವರದಿಗಳಿವೆ. ಮೊದಲ ಪಂದ್ಯದ ಲೈವ್ ಸ್ಟ್ರೀಮಿಂಗ್ ಇರಲಿಲ್ಲ.

ವಿಶ್ವಕಪ್‌ಗೂ ಮುನ್ನ ಒಟ್ಟು ನಾಲ್ಕು ಅಭ್ಯಾಸ ಪಂದ್ಯಗಳು
ಆಸ್ಟ್ರೇಲಿಯಾದ ಪಿಚ್ ಮತ್ತು ಹವಾಮಾನಕ್ಕೆ ಹೊಂದಿಕೊಳ್ಳಲು ಭಾರತ ನಾಲ್ಕು ಅಭ್ಯಾಸ ಪಂದ್ಯಗಳನ್ನು ಆಡಲಿದೆ. ಮೊದಲು ಎರಡು ಅಭ್ಯಾಸಗಳನ್ನು ಯೋಜಿಸಲಾಗಿತ್ತು. ಇದು ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ವಿರುದ್ಧವಾಗಿತ್ತು.
ಆದ್ರೆ ತಂಡಕ್ಕೆ ಹೆಚ್ಚಿನ ಅಭ್ಯಾಸದ ಅಗತ್ಯವಿದೆ ಎಂದು ಕೋಚ್ ರಾಹುಲ್ ದ್ರಾವಿಡ್ ಬಿಸಿಸಿಐಗೆ ಮನವಿ ಮಾಡಿದ್ದಾರೆ. ಇದರ ನಂತರ, ಪಶ್ಚಿಮ ಆಸ್ಟ್ರೇಲಿಯಾ ವಿರುದ್ಧ ಎರಡು ಅಭ್ಯಾಸ ಪಂದ್ಯಗಳನ್ನು ಸೇರಿಸಲಾಯಿತು.

ಕೊಹ್ಲಿ ಮತ್ತು ರಾಹುಲ್ ಕಣಕ್ಕಿಳಿಯಬಹುದು
ಸೂಪರ್ ಸ್ಟಾರ್ ವಿರಾಟ್ ಕೊಹ್ಲಿ ಮತ್ತು ಆರಂಭಿಕ ಆಟಗಾರ ಕೆಎಲ್ ರಾಹುಲ್ ಅವರು ಪಶ್ಚಿಮ ಆಸ್ಟ್ರೇಲಿಯಾ ವಿರುದ್ಧದ ಮೊದಲ ಅಭ್ಯಾಸ ಪಂದ್ಯದಲ್ಲಿ ಗೈರುಹಾಜರಾಗಿದ್ದರು. ಇಬ್ಬರೂ ಅಭ್ಯಾಸಕ್ಕೆ ಗೈರುಹಾಜರಾಗಿದ್ದು, ನೆಟ್ಸ್‌ನಲ್ಲಿ ಹೆಚ್ಚಿನ ತರಬೇತಿಯಲ್ಲಿ ತೊಡಗಿದ್ದರು. ರಾಹುಲ್ ಅನುಪಸ್ಥಿತಿಯಲ್ಲಿ ರಿಷಬ್ ಪಂತ್, ನಾಯಕ ರೋಹಿತ್ ಶರ್ಮಾ ಜೊತೆಗೆ ಓಪನರ್ ಆಗಿ ಕಣಕ್ಕಿಳಿದರು. ಆದ್ರೆ ಈ ಪ್ರಯೋಗ ವಿಫಲವಾಯಿತು. ಎರಡನೇ ಅಭ್ಯಾಸದಲ್ಲಿ ಕೊಹ್ಲಿ ಮತ್ತು ರಾಹುಲ್ ಪ್ಲೇಯಿಂಗ್ ಇಲೆವೆನ್‌ಗೆ ಮರಳಲಿದ್ದಾರೆ ಎಂದು ವರದಿಯಾಗಿದೆ. ಇದರಿಂದ ಬ್ಯಾಟಿಂಗ್ ಲೈನ್ ಅಪ್ ಮತ್ತಷ್ಟು ಬಲಗೊಳ್ಳಲಿದೆ.
ಟಿ20 ವಿಶ್ವಕಪ್: ಬೆಂಗಳೂರಿನಿಂದ ಬ್ರಿಸ್ಬೇನ್‌ಗೆ ಹಾರಿದ ಶಮಿ, ಬುಮ್ರಾ ಸ್ಥಾನಕ್ಕೆ ಆಯ್ಕೆ ಸಾಧ್ಯತೆ!

ರಿಷಭ್ ಪಂತ್ ಮತ್ತು ದೀಪಕ್ ಹೂಡಾ ಹೊರಗುಳಿಯಬಹುದು
ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ತಂಡಕ್ಕೆ ಮರಳಿದರೆ, ಇಬ್ಬರು ಆಟಗಾರರು ಪ್ಲೇಯಿಂಗ್ ಇಲೆವೆನ್‌ನಿಂದ ಹೊರಗುಳಿಯಬೇಕಾಗುತ್ತದೆ. ಅವರಲ್ಲಿ ಆಲ್ ರೌಂಡರ್ ದೀಪಕ್ ಹೂಡಾ ಕೂಡ ಒಬ್ಬರು.
ಕಳೆದ ಪಂದ್ಯದಲ್ಲಿ ಬ್ಯಾಟಿಂಗ್‌ನಲ್ಲಿ ವಿಫಲ ಕಂಡಿದ್ದ ರಿಷಬ್ ಪಂತ್ ಅವರ ಸ್ಥಾನವನ್ನು ಭಾರತ ಬೇರೆ ಆಟಗಾರರಿಗೆ ಗುರುತಿಸಬಹುದು. ದಿನೇಶ್ ಕಾರ್ತಿಕ್ ವಿಕೆಟ್ ಕೀಪಿಂಗ್ ಮಾಡಲಿದ್ದಾರೆ. ಕೆ.ಎಲ್ ರಾಹುಲ್ ಕೂಡ ವಿಕೆಟ್ ಕೀಪಿಂಗ್ ಮಾಡುವುದರಿಂದ ಪಂತ್‌ರನ್ನ ಪ್ಲೇಯಿಂಗ್ 11ನಿಂದ ಕೈ ಬಿಟ್ಟರೂ ಆಶ್ಚರ್ಯವಿಲ್ಲ.
ಮಾಡಿದ ಕರ್ಮ ತಿರುಗೇಟು, ಕೊಹ್ಲಿಗೆ ಆದ ಗತಿಯೇ, ಗಂಗೂಲಿಗೂ ಆಯ್ತಾ? ನೆಟ್ಟಿಗರ ಟೀಕೆ

ಹರ್ಷಲ್ ಪಟೇಲ್ ದುಬಾರಿ ಬೌಲಿಂಗ್
ಹರ್ಷಲ್ ಪಟೇಲ್ ಅವರ ಕಳಪೆ ಬೌಲಿಂಗ್ ಫಾರ್ಮ್ ಭಾರತಕ್ಕೆ ತಲೆನೋವಾಗಿ ಪರಿಣಮಿಸಿದೆ. ಮೊದಲ ಅಭ್ಯಾಸದಲ್ಲಿ, ಇತರ ಎಲ್ಲಾ ಭಾರತೀಯ ಬೌಲರ್‌ಗಳು ಉತ್ತಮ ಪ್ರದರ್ಶನ ನೀಡಿದ್ರೆ, ಹರ್ಷಲ್ ಮತ್ತೊಮ್ಮೆ ವಿಫಲರಾದರು. ಈತ ನಾಲ್ಕು ಓವರ್‌ಗಳಲ್ಲಿ 49 ರನ್‌ಗಳನ್ನು ನೀಡಿದರು. ಒಂದು ವಿಕೆಟ್ ಮಾತ್ರ ಪಡೆದರು. ಹರ್ಷಲ್ ಒಂದೇ ಓವರ್‌ನಲ್ಲಿ 17 ರನ್ ನೀಡಿದರು. ಬಹುಶಃ ಎರಡನೇ ಅಭ್ಯಾಸದಲ್ಲಿ ಭಾರತ ಅವರಿಗೆ ಮತ್ತೊಂದು ಅವಕಾಶ ನೀಡುತ್ತದೆ. ಇದಕ್ಕಿಂತ ಹೆಚ್ಚು ಫ್ಲಾಪ್ ಆಗಿದ್ದರೆ, ಹರ್ಷಲ್ ವಿಶ್ವಕಪ್‌ನಲ್ಲಿ ಆಡುವ ಹನ್ನೊಂದರಲ್ಲಿ ಆಡುವುದು ಅನುಮಾನವಾಗಿದೆ.

ಉಭಯ ತಂಡಗಳ ಸಂಭಾವ್ಯ ಪ್ಲೇಯಿಂಗ್ 11
ಭಾರತದ ಸಂಭಾವ್ಯ ಪ್ಲೇಯಿಂಗ್ ಇಲೆವೆನ್
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್) ಅಕ್ಷರ್ ಪಟೇಲ್, ಹರ್ಷಲ್ ಪಟೇಲ್, ಭುವನೇಶ್ವರ್ ಕುಮಾರ್, ಅರ್ಷ್‌ದೀಪ್ ಸಿಂಗ್, ಆರ್. ಅಶ್ವಿನ್
ವೆಸ್ಟ್ರನ್ ಆಸ್ಟ್ರೇಲಿಯಾ ಪ್ಲೇಯಿಂಗ್ ಇಲೆವೆನ್
ಡಿ ಆರ್ಸಿ ಶಾರ್ಟ್, ಆರನ್ ಹಾರ್ಡಿ, ಕ್ಯಾಮರೂನ್ ಬ್ಯಾಂಕ್ರಾಫ್ಟ್(ವಿಕೆಟ್ ಕೀಪರ್), ಆಷ್ಟನ್ ಟರ್ನರ್(ನಾಯಕ), ಸ್ಯಾಮ್ ಫಾನ್ನಿಂಗ್, ಹ್ಯಾಮಿಶ್ ಮೆಕೆಂಜಿ, ಝೈ ರಿಚರ್ಡ್ಸನ್, ಆಂಡ್ರ್ಯೂ ಟೈ, ಜೇಸನ್ ಬೆಹ್ರೆಂಡಾರ್ಫ್, ಮ್ಯಾಥ್ಯೂ ಕೆಲ್ಲಿ, ನಿಕ್ ಹಾಬ್ಸನ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications