For Quick Alerts
ALLOW NOTIFICATIONS  
For Daily Alerts
 

Ind vs WI 1st T20: ಡ್ರೀಂ ಟೀಂ, ಪ್ಲೇಯಿಂಗ್ 11, ಪಿಚ್‌ ರಿಪೋರ್ಟ್‌

India vs west indies

ಟ್ರಿನಿಡಾಡ್‌ನ ಬ್ರಿಯಾನ್ ಲಾರಾ ಸ್ಟೇಡಿಯಂನಲ್ಲಿ ಹೈವೋಲ್ಟೇಜ್ ಪಂದ್ಯಕ್ಕೆ ಇಂದು ಸಾಕ್ಷಿಯಾಗಲಿದೆ. ಭಾರತ ಮತ್ತು ವೆಸ್ಟ್ ಇಂಡೀಸ್ ಮೊದಲ ಟಿ20 ಪಂದ್ಯದಲ್ಲಿ ಶುಕ್ರವಾರ ಮುಖಾಮುಖಿಯಾಗುತ್ತಿವೆ. ಏಕದಿನ ಸರಣಿಯಲ್ಲಿ ವೈಟ್‌ವಾಶ್ ಮುಖಭಂಗ ಎದುರಿಸಿರುವ ಆತಿಥೇಯ ವಿಂಡೀಸ್ ಕಂಬ್ಯಾಕ್ ಮಾಡುವ ಲೆಕ್ಕಾಚಾರ ಹೊಂದಿದೆ.

ಏಕದಿನ ಸರಣಿಯನ್ನು 3-0 ಅಂತರದಲ್ಲಿ ಭಾರತ ಜಯಿಸಿದ ಬಳಿಕ, ನಾಯಕ ರೋಹಿತ್‌ ಶರ್ಮಾ ನಾಯಕತ್ವದಲ್ಲಿ ಟಿ20 ಸರಣಿ ಮುನ್ನಡೆಯಲಿದೆ. ರೋಹಿತ್ , ಕೊಹ್ಲಿ, ಬುಮ್ರಾ ಸೇರಿದಂತೆ ಪ್ರಮುಖ ಆಟಗಾರರು ಏಕದಿನ ಸರಣಿಯಿಂದ ವಿಶ್ರಾಂತಿ ಪಡೆದಿದ್ದ ಹಿನ್ನಲೆಯಲ್ಲಿ ಶಿಖರ್ ಧವನ್ ಟೀಂ ಇಂಡಿಯಾದ ನಾಯಕರಾಗಿದ್ದರು.

ಉಭಯ ತಂಡಗಳಲ್ಲಿನ ಪ್ರಮುಖ ಬದಲಾವಣೆ

ಉಭಯ ತಂಡಗಳಲ್ಲಿನ ಪ್ರಮುಖ ಬದಲಾವಣೆ

ಟೀಂ ಇಂಡಿಯಾ ಏಕದಿನ ಸ್ಕ್ವಾಡ್‌ಗೆ ಹೋಲಿಸಿದ್ರೆ, ಟಿ20 ತಂಡದಲ್ಲಿ ಕೆಲವು ಪ್ರಮುಖ ಬದಲಾವಣೆ ಇದೆ. ನಾಯಕ ರೋಹಿತ್ ಶರ್ಮಾ ಕಂಬ್ಯಾಕ್ ಆಗಿದ್ದು, ಕೆ.ಎಲ್ ರಾಹುಲ್‌ಗೆ ವಿಶ್ರಾಂತಿ ಮುಂದುವರಿಸಿದ್ರ ಪರಿಣಾಮ ಅವರ ಬದಲಿಗೆ ಸಂಜು ಸ್ಯಾಮ್ಸನ್‌ ಟಿ20 ಸ್ಕ್ವಾಡ್‌ನಲ್ಲಿ ಮುಂದುವರಿದಿದ್ದಾರೆ. ಈ ಮೊದಲು ಸಂಜು ಕೇವಲ ಏಕದಿನ ಸರಣಿಗೆ ಮಾತ್ರ ಆಯ್ಕೆಯಾಗಿದ್ದರು.

ಟೀಂ ಇಂಡಿಯಾದ ಪ್ರಮುಖ ಸ್ಪಿನ್ನರ್ ಯುಜವೇಂದ್ರ ಚಹಾಲ್‌ಗೆ ಟಿ20 ಸರಣಿಯಿಂದ ವಿಶ್ರಾಂತಿ ನೀಡಲಾಗಿದ್ದು, ಕುಲ್‌ದೀಪ್ ಯಾದವ್, ರವಿಚಂದ್ರನ್ ಅಶ್ವಿನ್ ಬದಲಿ ಆಯ್ಕೆಯಾಗಿದ್ದಾರೆ. ಇನ್ನು ಕೊಹ್ಲಿ ಮತ್ತು ಬುಮ್ರಾ ಚುಟುಕು ಸರಣಿಗೂ ಗೈರಾಗಿದ್ದು, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್ , ಭುವನೇಶ್ವರ್ ಕುಮಾರ್, ಹರ್ಷಲ್‌ ಪಟೇಲ್‌ರಂತಹ ಪ್ರಮುಖ ಆಟಗಾರರು ತಂಡಕ್ಕೆ ಸೇರ್ಪಡೆಯಾಗಿದ್ದಾರೆ.

ಇನ್ನು ವಿಂಡೀಸ್ ತಂಡವನ್ನ ನಿಕೋಲಸ್ ಪೂರನ್ ಮುನ್ನಡೆಸುತ್ತಿದ್ದು, ಪ್ರಮುಖ ಆಲ್‌ರೌಂಡರ್‌ ಜೇಸ್ನ ಹೋಲ್ಡರ್ ತಂಡಕ್ಕೆ ಮರಳಿರುವುದು ತಂಡದ ಶಕ್ತಿ ಹೆಚ್ಚಿಸಿದೆ.

ಪಿಚ್ ರಿಪೋರ್ಟ್‌ ಮತ್ತು ಹವಾಮಾನ

ಪಿಚ್ ರಿಪೋರ್ಟ್‌ ಮತ್ತು ಹವಾಮಾನ

ಉಭಯ ತಂಡಗಳು ಟಿ20 ಫಾರ್ಮೆಟ್‌ನಲ್ಲಿ 20 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಭಾರತ 13 ಪಂದ್ಯ ಜಯಿಸಿದ್ರೆ, ವಿಂಡೀಸ್ 6 ಪಂದ್ಯಗಳಲ್ಲಷ್ಟೇ ಗೆಲುವಿನ ಗೆರೆ ದಾಟಿದೆ. ಕಳೆದ ಟಿ20 ಸರಣಿಯಲ್ಲಿ ಭಾರತ ಇಂಗ್ಲೆಂಡ್ ವಿರುದ್ಧ 2-1 ಅಂತರದಲ್ಲಿ ಜಯ ಸಾಧಿಸಿದ್ರೆ, ವಿಂಡೀಸ್ ಬಾಂಗ್ಲಾ ವಿರುದ್ಧ 2-0 ಅಂತರದಲ್ಲಿ ಗೆದ್ದಿದೆ.

ಇನ್ನು ಬ್ರಿಯಾನ್ ಲಾರಾ ಸ್ಟೇಡಿಯಂ ಪಿಚ್‌ ಗಮನಿಸುವುದಾದ್ರೆ, ಇದು ಬ್ಯಾಟ್ಸ್‌ಮನ್ ಮತ್ತು ಬೌಲರ್‌ ಇಬ್ಬರಿಗೂ ಅನುಕೂಲವಾಗಿದೆ. ಸ್ಪಿನ್ನರ್‌ಗಳು ಮಧ್ಯಮ ಓವರ್‌ಗಳಲ್ಲಿ ತಂಡಕ್ಕೆ ನೆರವಾಗಬಲ್ಲರು. ಮೊದಲ ಇನ್ನಿಂಗ್ಸ್‌ಗೆ ಹೋಲಿಸಿದ್ರೆ ಚೇಸಿಂಗ್ ಮಾಡುವುದು ಉತ್ತಮ ಆಯ್ಕೆಯಾಗಿದೆ. ಏಕೆಂದರೆ ಎರಡನೇ ಬ್ಯಾಟಿಂಗ್ ಮಾಡಿದ ತಂಡವು ಶೇಕಡಾ 80ರ ಗೆಲುವಿನ ಸರಾಸರಿ ಹೊಂದಿದೆ.

ಇಲ್ಲಿನ ಹವಾಮಾನ ಪಂದ್ಯದ ವೇಳೆಗೆ 27 ಡಿಗ್ರಿ ಸೆಲ್ಸಿಯಸ್‌ನಷ್ಟಿರಲಿದ್ದು, ಶೇಕಡಾ 79ರಷ್ಟು ಹ್ಯುಮಿಡಿಟಿ ಮತ್ತು 6-9 km/hr ವೇಗದಲ್ಲಿ ಗಾಳಿ ಬೀಸಲಿದೆ. ಮಳೆ ಬರುವ ಸಾಧ್ಯತೆ ಕಡಿಮೆ ಇದೆ.

ವಿಂಡೀಸ್ ವಿರುದ್ಧದ ಟಿ20 ಸರಣಿಗೆ ಕೆಎಲ್ ರಾಹುಲ್ ಬದಲಿ ಆಟಗಾರ ಆಯ್ಕೆ; ಹೆಚ್ಚು ಮಿಂಚಿರದ ‌ಆಟಗಾರನಿಗೆ ಮಣೆ!

ಉಭಯ ತಂಡಗಳ ಸಂಭಾವ್ಯ ಪ್ಲೇಯಿಂಗ್ 11

ಉಭಯ ತಂಡಗಳ ಸಂಭಾವ್ಯ ಪ್ಲೇಯಿಂಗ್ 11

ಭಾರತ: ರೋಹಿತ್ ಶರ್ಮಾ (ನಾಯಕ), ರಿಷಬ್ ಪಂತ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ಅಕ್ಷರ್ ಪಟೇಲ್, ಹರ್ಷಲ್ ಪಟೇಲ್, ಭುವನೇಶ್ವರ್ ಕುಮಾರ್, ಕುಲದೀಪ್ ಯಾದವ್, ಅವೇಶ್ ಖಾನ್

ವೆಸ್ಟ್ ಇಂಡೀಸ್: ಕೈಲ್ ಮೇಯರ್ಸ್, ಬ್ರಾಂಡನ್ ಕಿಂಗ್, ನಿಕೋಲಸ್ ಪೂರನ್ (ನಾಯಕ), ಶಿಮ್ರಾನ್ ಹೆಟೈಮರ್, ರೋವ್‌ಮನ್ ಪೊವೆಲ್, ಜೇಸನ್ ಹೋಲ್ಡರ್, ಓಡಿಯನ್ ಸ್ಮಿತ್, ಒಬೆಡ್ ಮೆಕಾಯ್, ಅಲ್ಜಾರಿ ಜೋಸೆಫ್, ಹೇಡನ್ ವಾಲ್ಷ್, ಅಕೇಲ್ ಹೊಸೈನ್

ಕ್ರಿಕೆಟ್‌ ಲೋಕದಲ್ಲಿ ತನ್ನ ನಿರ್ಭೀತ ಬ್ಯಾಟಿಂಗ್‌ನಿಂದಲೇ ಹೆಸರಾದ ಮೂವರು ದಿಗ್ಗಜರು!

ಡ್ರೀಂ ಫ್ಯಾಂಟೆಸಿ ಟೀಂ 1

ಡ್ರೀಂ ಫ್ಯಾಂಟೆಸಿ ಟೀಂ 1

ನಾಯಕ- ಶ್ರೇಯಸ್ ಅಯ್ಯರ್, ಕುಲದೀಪ್ ಯಾದವ್
ಉಪನಾಯಕ - ಶಿಮ್ರಾನ್ ಹೆಟೈಮರ್, ಓಡಿಯನ್ ಸ್ಮಿತ್
ಕೀಪರ್ - ನಿಕೋಲಸ್ ಪೂರನ್, ರಿಷಬ್ ಪಂತ್
ಬ್ಯಾಟ್ಸ್‌ಮನ್‌ಗಳು - ರೋಹಿತ್ ಶರ್ಮಾ, ಶ್ರೇಯಸ್ ಅಯ್ಯರ್ (ನಾಯಕ), ಶಿಮ್ರಾನ್ ಹೆಟ್ಮೆಯರ್ (ಉಪನಾಯಕ), ಕೈಲ್ ಮೇಯರ್ಸ್
ಆಲ್ ರೌಂಡರ್ಸ್ - ಜೇಸನ್ ಹೋಲ್ಡರ್, ಹಾರ್ದಿಕ್ ಪಾಂಡ್ಯ
ಬೌಲರ್‌ಗಳು - ಭುವನೇಶ್ವರ್ ಕುಮಾರ್, ಕುಲದೀಪ್ ಯಾದವ್, ಒಬೆದ್ ಮೆಕಾಯ್

ಡ್ರೀಂ ಫ್ಯಾಂಟೆಸಿ ಟೀಂ 2

ಡ್ರೀಂ ಫ್ಯಾಂಟೆಸಿ ಟೀಂ 2

ಕೀಪರ್ - ನಿಕೋಲಸ್ ಪೂರನ್
ಬ್ಯಾಟ್ಸ್‌ಮನ್‌ಗಳು - ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಕೈಲ್ ಮೇಯರ್ಸ್
ಆಲ್ ರೌಂಡರ್‌ಗಳು - ಜೇಸನ್ ಹೋಲ್ಡರ್, ಹಾರ್ದಿಕ್ ಪಾಂಡ್ಯ, ಓಡಿಯನ್ ಸ್ಮಿತ್ (ಉಪನಾಯಕ)
ಬೌಲರ್‌ಗಳು - ಹರ್ಷಲ್ ಪಟೇಲ್, ಕುಲದೀಪ್ ಯಾದವ್ (ನಾಯಕ), ಓಬೇದ್ ಮೆಕಾಯ್

ಶ್ರೇಯಸ್ ಅಯ್ಯರ್ ಮತ್ತು ಕುಲ್‌ದೀಪ್ ಯಾದವ್‌ ಡ್ರೀಂ ಫ್ಯಾಂಟೆಸಿ ಟೀಂನಲ್ಲಿ ನಾಯಕರ ಆಯ್ಕೆಯಲ್ಲಿ ಪ್ರಮುಖರಾಗಿದ್ದು, ಹರ್ಷಲ್ ಪಟೇಲ್ ಮತ್ತು ಸೂರ್ಯಕುಮಾರ್ ಯಾದವ್ ಪ್ರಮುಖ ಆಯ್ಕೆಯಾಗಿದ್ದಾರೆ. ಡ್ರೀಂ 11 ಫ್ಯಾಂಟೆಸಿ ತಂಡದ ಬೆಸ್ಟ್‌ ಸಂಯೋಜನೆ 2-4-2-3 ಆಗಿದೆ. ತಂಡದ ಬಲವನ್ನ ಗಮನಿಸಿದ್ರೆ, ಟೀಂ ಇಂಡಿಯಾ ಈ ಪಂದ್ಯ ಗೆಲ್ಲಬಹುದು.

Story first published: Friday, July 29, 2022, 13:16 [IST]
Other articles published on Jul 29, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+