ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕ್ರಿಕೆಟ್‌ ಲೋಕದಲ್ಲಿ ತನ್ನ ನಿರ್ಭೀತ ಬ್ಯಾಟಿಂಗ್‌ನಿಂದಲೇ ಹೆಸರಾದ ಮೂವರು ದಿಗ್ಗಜರು!

Chris gayle

ಕ್ರಿಕೆಟ್ ಅಂದಕೂಡಲೇ ಆರಂಭದಲ್ಲಿ ಜಂಟಲ್‌ಮನ್ ಗೇಮ್‌, ತುಂಬಾ ನಿಧಾನಗತಿಯ ಆಟ ಎಂದೆಲ್ಲಾ ಕರೆಸಿಕೊಂಡಿತ್ತು. ಅದ್ರಲ್ಲೂ ಟೆಸ್ಟ್‌ ಕ್ರಿಕೆಟ್‌ನಲ್ಲಿ ಆಟಗಾರರು ರನ್‌ಗಳಿಸಿದ್ದಕ್ಕಿತ, ಎರಡು ಮೂರು ಪಟ್ಟು ಡಾಟ್‌ ಬಾಲ್‌ ಇರುತ್ತಿತ್ತು. ಕ್ರೀಸ್‌ನಲ್ಲಿ ನೆಲಕಚ್ಚಿ ನಿಂತರೆ ಮುಗೀತು, ಬೌಲರ್‌ಗಳು ವಿಕೆಟ್ ಪಡೆಯಲು ಹೈರಾಣಾಗುತ್ತಿದ್ದರು.

ಆದ್ರೆ ಬರುಬರುತ್ತಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕೆಲವು ಬದಲಾವಣೆಗಳು ಕಂಡುಬಂದವು. ಕಾಲ ಬದಲಾದಂತೆ ಕ್ರಿಕೆಟ್ ಕೂಡ ಬದಲಾಯಿತು. ಟೆಸ್ಟ್ ಕ್ರಿಕೆಟ್ ನಂತರ ಒಡಿಐ ಕ್ರಿಕೆಟ್ ಮತ್ತು ನಂತರ ಟಿ20 ಮಾದರಿಯು ಬಹಳ ಕಡಿಮೆ ಸಮಯದಲ್ಲಿ ಸಾಕಷ್ಟು ಜನಪ್ರಿಯವಾಯಿತು.

ಆದ್ರೆ ಕ್ರಿಕೆಟ್‌ನ ಎಲ್ಲಾ ಮಾದರಿಯಲ್ಲೂ ಒಂದೇ ರೀತಿಯ ಅಗ್ರೆಸ್ಸಿವ್ ಬ್ಯಾಟಿಂಗ್ ಮಾಡಿದ ಕೆಲವೇ ಕೆಲವು ಬ್ಯಾಟರ್‌ಗಳು ಕ್ರಿಕೆಟ್ ಆಡುವ ರೀತಿಯನ್ನೇ ಬದಲಿಸಿಬಿಟ್ಟರು. ಟಿ20 ಕ್ರಿಕೆಟ್ ಬರುವ ಮೊದಲೇ ಏಕದಿನ ಫಾರ್ಮೆಟ್‌ನಲ್ಲಿ ಅಬ್ಬರಿಸಿದ್ದ ಬ್ಯಾಟರ್‌ಗಳನ್ನ ಕಂಡಿದ್ದೇವೆ.

ಪಿಚ್ ಯಾವುದೇ ಇರಲಿ, ಪೇಸ್ ಬೌಲರ್ ಆಗಿರಲಿ, ಸ್ಪಿನ್ ಬೌಲರ್ ಇರಲಿ ಟೆಸ್ಟ್ ಏಕದಿನ ಹಾಗೂ ನಿಗದಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಒಂದೇ ರೀತಿಯಲ್ಲಿ ಆಡಿರುವ ಉದಾಹರಣೆಗಳಿವೆ. ಹೀಗಾಗಿ ಆ ಬ್ಯಾಟರ್‌ಗಳು ಇಂದಿಗೂ ಕೂಡ ಅಭಿಮಾನಿಗಳ ನೆಚ್ಚಿನ ಆಟಗಾರರಾಗಿದ್ದಾರೆ.

ಈ ಲೇಖನದಲ್ಲಿ ತಮ್ಮ ಆಟದ ದಿನಗಳಲ್ಲಿ ಸಾಕಷ್ಟು ನಿರ್ಭೀತರಾಗಿದ್ದ ಮೂವರು ಲೆಜೆಂಡ್‌ಗಳನ್ನ ತಿಳಿಸುತ್ತಿದ್ದೇವೆ. ಕೆಳಗೆ ಓದಿ

ಕ್ರಿಸ್‌ಗೇಲ್‌

ಕ್ರಿಸ್‌ಗೇಲ್‌

ಯೂನಿವರ್ಸಲ್ ಬಾಸ್ ಖ್ಯಾತಿಯ ಕ್ರಿಸ್‌ಗೇಲ್ ಚುಟುಕು ಕ್ರಿಕೆಟ್‌ಗೆ ಧುಮುಕುವ ಮೊದಲೇ ಅಬ್ಬರದ ಆಟಕ್ಕೆ ಸಾಕಷ್ಟು ಹೆಸರುವಾಸಿಯಾದವರು. ಅದ್ರಲ್ಲೂ ಆತನ ಅಬ್ಬರದ ಶಾಟ್‌ಗಳಿಗೆ ಮಾರುಹೋಗದ ಅಭಿಮಾನಿಗಳೇ ಇಲ್ಲ. ಏಕದಿನ ಫಾರ್ಮೆಟ್ ಇರಲಿ, ಟೆಸ್ಟ್ ಆಗಿರಲಿ ಅಬ್ಬರದ ಆಟಕ್ಕೆ ಕ್ರಿಸ್‌ಗೇಲ್ ಮುಂದಿದ್ದಾರೆ.

ಟಿ20 ಕ್ರಿಕೆಟ್‌ನಲ್ಲಿ 137.5ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿರುವ ಕ್ರಿಸ್‌ಗೇಲ್‌, ಏಕದಿನ ಹಾಗೂ ಟೆಸ್ಟ್ ಕ್ರಿಕೆಟ್‌ನಲ್ಲಿ ಕ್ರಮವಾಗಿ 87.6 ಮತ್ತು 60.3ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ್ದಾರೆ. 301 ಏಕದಿನ ಪಂದ್ಯಗಳನ್ನಾಡಿರುವ ಕ್ರಿಸ್‌ 10480ರನ್ ಕಲೆಹಾಕಿದ್ದಾರೆ.

ಇನ್ನು ವಿವಿಧ ಟಿ20 ಲೀಗ್‌ಗಳಲ್ಲಿ ಭಾಗವಹಿಸಿರುವ ಕ್ರಿಸ್‌ಗೇಲ್‌ ಚುಟುಕು ಫಾರ್ಮೆಟ್‌ನಲ್ಲೂ 10,000ಕ್ಕೂ ಅಧಿಕ ರನ್‌ಗಳಿಸಿರುವುದು ವಿಶೇಷ.

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಪಾಯಿಂಟ್ಸ್‌ ಅಪ್‌ಡೇಟ್‌: ಐದನೇ ಸ್ಥಾನಕ್ಕೆ ಕುಸಿದ ಪಾಕಿಸ್ತಾನ

ವಿವಿಯನ್ ರಿಚರ್ಡ್ಸ್‌

ವಿವಿಯನ್ ರಿಚರ್ಡ್ಸ್‌

ವೆಸ್ಟ್ ಇಂಡೀಸ್‌ನ ಲೆಜೆಂಡ್‌ ಕ್ರಿಕೆಟರ್‌ಗಳಲ್ಲಿ ಪ್ರಮುಖರು ವಿವ್ ರಿಚರ್ಡ್ಸ್ ಎದುರಾಳಿಯ ಯಾವುದೇ ತಂಡದ ಬೌಲರ್ ವಿರುದ್ಧ ಮುಗಿಬೀಳುತ್ತಿದ್ದ ಬ್ಯಾಟರ್‌.
ಬ್ಯಾಟ್ಸ್‌ಮನ್‌ಗಳು ಡಿಫೆನ್ಸ್‌ಗೆ ಹೆಚ್ಚು ಗಮನ ನೀಡುತ್ತಿದ್ದ ಟೆಸ್ಟ್ ಕ್ರಿಕೆಟ್‌ನಲ್ಲಿ, ರಿಚರ್ಡ್ಸ್ ಆ ಸಮಯದಲ್ಲಿ ಆಕ್ರಮಣಕಾರಿ ಉದ್ದೇಶದಿಂದ ಬ್ಯಾಟಿಂಗ್ ಮಾಡುತ್ತಿದ್ದರು. ಅವರು ಬೌಲರ್ ಅಥವಾ ಇನ್ನಾವುದರ ಬಗ್ಗೆ ಕಾಳಜಿ ವಹಿಸುತ್ತಿರಲಿಲ್ಲ. ಅವರು ವೇಗವಾಗಿ ಮತ್ತು ದೊಡ್ಡ ರನ್ ಗಳಿಸುವಲ್ಲಿ ನಂಬಿದ್ದರು. ಅವರು ತಮ್ಮ ವೃತ್ತಿಜೀವನದಲ್ಲಿ ಟೆಸ್ಟ್‌ನಲ್ಲಿ 8540 ರನ್ ಮತ್ತು ಏಕದಿನದಲ್ಲಿ 6721 ರನ್ ಗಳಿಸಿದ್ದಾರೆ. ಅವರ ದಿನಗಳಲ್ಲಿ ಟಿ20 ಕ್ರಿಕೆಟ್ ಇರಲಿಲ್ಲ.

ನನಗೆ 50 ಅನ್ನು 100 ಆಗಿ ಪರಿವರ್ತಿಸಲು ಚೆನ್ನಾಗಿ ತಿಳಿದಿದೆ: ಶತಕದ ಬರ ಎದುರಿಸುತ್ತಿರುವ ಪ್ರಶ್ನೆಗೆ ಧವನ್ ಉತ್ತರ

ವೀರೇಂದ್ರ ಸೆಹ್ವಾಗ್‌

ವೀರೇಂದ್ರ ಸೆಹ್ವಾಗ್‌

ಟೀಂ ಇಂಡಿಯಾದ ಡ್ಯಾಶಿಂಗ್ ಓಪನರ್ ವೀರೇಂದ್ರ ಸೆಹ್ವಾಗ್ ಭಾರತದ ಬ್ಯಾಟಿಂಗ್ ಶೈಲಿಯನ್ನೇ ಬದಲಿಸಿದ ಅಗ್ರೆಸ್ಸಿವ್ ಕ್ರಿಕೆಟರ್‌. ವಿಶ್ವದ ಲೆಜೆಂಡರಿ ಬೌಲರ್‌ಗಳನ್ನೇ ದಂಡಿಸಿರುವ ವೀರೂ, ಸ್ಪಿನ್ನರ್‌ಗಳ ವಿರುದ್ಧ ಅದ್ಭುತ ಬ್ಯಾಟಿಂಗ್ ಆಡುವ ಸಾಮರ್ಥ್ಯ ಹೊಂದಿದ್ದರು.

ಕ್ರಿಕೆಟ್‌ನ ಮೂರು ಫಾರ್ಮೆಟ್‌ನಲ್ಲಿ ತನ್ನ ಅಗ್ರೆಸ್ಸಿವ್ ಆಟದಿಂದಲೇ ಗುರುತಿಸಿಕೊಂಡಿರುವ ಸೆಹ್ವಾಗ್‌ ಟೆಸ್ಟ್‌ ಕ್ರಿಕೆಟ್‌ನಲ್ಲಿ ಎರಡು ಬಾರಿ ತ್ರಿಶತಕ ಸಿಡಿಸಿದ ಸಾಧನೆ ಹೊಂದಿದ್ದಾರೆ. ಇದಷ್ಟಲ್ಲದೆ ಏಕದಿನ ಕ್ರಿಕೆಟ್‌ನಲ್ಲೂ ದ್ವಿತಶಕ ಸಿಡಿಸಿದ ಕೆಲವೇ ಕೆಲವು ಬ್ಯಾಟರ್‌ಗಳಲ್ಲಿ ಒಬ್ಬರು.

ವೀರೂ ಎದುರಾಳಿ ತಂಡ, ಪಿಚ್ ಅಥವಾ ಹವಾಮಾನವನ್ನ ಲೆಕ್ಕಿಸದೇ ತನ್ನ ಸ್ಪೋಟಕ ಬ್ಯಾಟಿಂಗ್‌ನಿಂದಲೇ ಹೆಸರುವಾಸಿ. ವಿಶ್ವದ ಯಾವುದೇ ಮೂಲೆಯಲ್ಲಿಯು ತನ್ನ ಸೊಗಸಾದ ಅಗ್ರೆಸ್ಸಿವ್ ಆಟದ ಮೂಲಕ ಕೋಟ್ಯಾಂತರ ಅಭಿಮಾನಿಗಳನ್ನ ಸಂಪಾದಿಸಿದ್ದಾರೆ.

ಏಕದಿನ ಕ್ರಿಕೆಟ್‌ನಲ್ಲಿ 104.34ರ ಸ್ಟ್ರೈಕ್‌ರೇಟ್‌ನಲ್ಲಿ 251 ಪಂದ್ಯಗಳಲ್ಲಿ 8273ರನ್ ಗಳಿಸಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ 82.33ರ ಸ್ಟ್ರೈಕ್‌ರೇಟ್‌ನಲ್ಲಿ 8566ರನ್‌ಗಳನ್ನ ದಾಖಲಿಸಿದ್ದು, ಟಿ20 ಕ್ರಿಕೆಟ್‌ನಲ್ಲಿ 145.39ರ ಸ್ಟ್ರೈಕ್‌ರೇಟ್‌ನಲ್ಲಿ 394ರನ್ ಕಲೆಹಾಕಿದ್ದಾರೆ.

Story first published: Thursday, July 28, 2022, 20:31 [IST]
Other articles published on Jul 28, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X