Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Ind vs WI 2nd ODI: ಭಾರತ-ವೆಸ್ಟ್ ಇಂಡೀಸ್ ಹೆಡ್‌ ಟು ಹೆಡ್ ರೆಕಾರ್ಡ್‌

India vs West indies

ಟೀಂ ಇಂಡಿಯಾ ಹಾಗೂ ವೆಸ್ಟ್‌ ಇಂಡೀಸ್ ತಂಡಗಳು ಭಾನುವಾರ ಎರಡನೇ ಏಕದಿನ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿದ್ದು, ಟ್ರಿನಿಡಾಡ್‌ನ ಕ್ವೀನ್ ಪಾರ್ಕ್ ಓವಲ್ ಮೈದಾನವು ಸಜ್ಜಾಗಿದೆ. ಈಗಾಗಲೇ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿರುವ ಶಿಖರ್ ಧವನ್ ನಾಯಕತ್ವದ ಭಾರತವು ಸರಣಿ ಗೆಲುವಿನ ಆತ್ಮವಿಶ್ವಾಸದಲ್ಲಿದ್ದು, ಆತಿಥೇಯ ವಿಂಡೀಸ್ ಕಂಬ್ಯಾಕ್ ಮಾಡುವ ಯೋಜನೆ ರೂಪಿಸಿಕೊಂಡಿದೆ.

ಮೊದಲ ಏಕದಿನ ಪಂದ್ಯದಲ್ಲಿ ಕೇವಲ 3ರನ್‌ಗಳ ಅಂತರದಲ್ಲಿ ಮುಗ್ಗರಿಸಿದ ನಿಕೋಲಸ್ ಪೂರನ್ ನಾಯಕತ್ವದ ವೆಸ್ಟ್ ಇಂಡೀಸ್, ಹೇಗಾದರೂ ಮಾಡಿ ಎರಡನೇ ಪಂದ್ಯದಲ್ಲಿ ಗೆದ್ದು ಪ್ರವಾಸಿ ತಂಡಕ್ಕೆ ತಿರುಗೇಟು ನೀಡುವ ಲೆಕ್ಕಾಚಾರ ಹಾಕಿಕೊಂಡಿದೆ. ಇದರ ಜೊತೆಗೆ ಉಭಯ ತಂಡಗಳ ಹೆಡ್‌ ಟು ಹೆಡ್ ರೆಕಾರ್ಡ್‌ ಕೂಡ ಚರ್ಚೆಯಲ್ಲಿದೆ.

ವಿಂಡೀಸ್-ಭಾರತ ಹೆಡ್ ಟು ಹೆಡ್‌

ವಿಂಡೀಸ್-ಭಾರತ ಹೆಡ್ ಟು ಹೆಡ್‌

ಒಟ್ಟಾರೆ ಪಂದ್ಯಗಳಲ್ಲಿ ವೆಸ್ಟ್ ಇಂಡೀಸ್ ಮತ್ತು ಟೀಂ ಇಂಡಿಯಾ 137 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಇದರಲ್ಲಿ ಭಾರತ 68ರಲ್ಲಿ ಗೆದ್ದರೆ, ವಿಂಡೀಸ್ 63 ಪಂದ್ಯಗಳಲ್ಲಿ ಗೆದ್ದಿದೆ ಮತ್ತು 2 ಪಂದ್ಯವು ಟೈನಲ್ಲಿ ಅಂತ್ಯಗೊಂಡಿದೆ.

ಇನ್ನು ಎರಡನೇ ಏಕದಿನ ಪಂದ್ಯದ ಆತಿಥ್ಯವಹಿಸಿರುವ ಕ್ವೀನ್ಸ್ ಪಾರ್ಕ್ ಓವಲ್ ಮೈದಾನದಲ್ಲಿ ಉಭಯ ತಂಡಗಳು 17 ಪಂದ್ಯಗಳನ್ನ ಆಡಿದ್ದು, ವಿಂಡೀಸ್ 7 ಪಂದ್ಯ ಜಯಿಸಿದ್ರೆ, ಭಾರತ 9 ಪಂದ್ಯಗಳನ್ನ ಗೆದ್ದು ಬೀಗಿದೆ.

ಕಳೆದ ಐದು ಏಕದಿನ ಪಂದ್ಯಗಳ ಫಲಿತಾಂಶವನ್ನ ಗಮನಿಸಿದ್ರೆ ಭಾರತ ಐದಕ್ಕೆ ಐದು ಪಂದ್ಯ ಜಯಿಸಿದ್ದು, ವೆಸ್ಟ್ ಇಂಡೀಸ್ ಐದು ಪಂದ್ಯಗಳಲ್ಲಿ ಮುಗ್ಗರಿಸಿದೆ. ಇದರ ಜೊತೆಗೆ ವೆಸ್ಟ್ ಇಂಡೀಸ್‌ ತವರಿನಲ್ಲಿ ಟೀಂ ಇಂಡಿಯಾ ವಿರುದ್ಧ ಅಂಕಿ-ಸಂಖ್ಯೆಯಲ್ಲಿ ಮೇಲುಗೈ ಸಾಧಿಸಿದೆ.

ಕೆರಿಬಿಯನ್ ಪಿಚ್‌ಗಳಲ್ಲಿ 40 ಪಂದ್ಯಗಳನ್ನ ಆಡಿರುವ ಭಾರತ 17ರಲ್ಲಿ ಗೆಲುವು ಸಾಧಿಸಿದ್ದು, ವೆಸ್ಟ್ ಇಂಡೀಸ್ 20ರಲ್ಲಿ ಗೆದ್ದಿದೆ.

ಮೊದಲು ಹಾಗೂ ಎರಡನೇ ಬ್ಯಾಟಿಂಗ್ ರೆಕಾರ್ಡ್‌

ಮೊದಲು ಹಾಗೂ ಎರಡನೇ ಬ್ಯಾಟಿಂಗ್ ರೆಕಾರ್ಡ್‌

ಭಾರತ ಮತ್ತು ವೆಸ್ಟ್‌ ಇಂಡೀಸ್ ತಂಡಗಳು ಮುಖಾಮುಖಿಯಾದ ಸಂದರ್ಭದಲ್ಲಿ ಮೊದಲು ಬ್ಯಾಟಿಂಗ್ ಹಾಗೂ ಎರಡನೇ ಬ್ಯಾಟಿಂಗ್ ಮಾಡಿದ ಫಲಿತಾಂಶದ ಇತಿಹಾಸ ಈ ಕೆಳಗಿದೆ.

ಉಭಯ ತಂಡಗಳ ಮುಖಾಮುಖಿಯಲ್ಲಿ ಮೊದಲು ಬ್ಯಾಟಿಂಗ್ ಮಾಡಿದಾಗ ವೆಸ್ಟ್ ಇಂಡೀಸ್ 27 ಪಂದ್ಯಗಳನ್ನ ಜಯಿಸಿದ್ರೆ, ಭಾರತವು ಮೊದಲು ಬ್ಯಾಟಿಂಗ್ ಮಾಡಿ 35 ಪಂದ್ಯ ಜಯಿಸಿ ಮೇಲುಗೈ ಸಾಧಿಸಿರುವುದು ಹೆಚ್ಚು. ಇನ್ನು ಎರಡನೇ ಬಾರಿಗೆ ಚೇಸಿಂಗ್‌ ಮಾಡಿದಾಗ ವಿಂಡೀಸ್ 36 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ರೆ, ಟೀಂ ಇಂಡಿಯಾ 33 ಪಂದ್ಯಗಳಲ್ಲಿ ಗೆಲುವಿನ ಗೆರೆ ದಾಟಿದೆ.

Ind vs WI 2nd ODI: ಪ್ರಿವ್ಯೂ, ಪ್ಲೇಯಿಂಗ್ 11, ಡ್ರೀಂ ಟೀಂ, ಪಿಚ್ ರಿಪೋರ್ಟ್‌

ಭಾರತ-ವೆಸ್ಟ್‌ ಇಂಡೀಸ್ ಆಟಗಾರರ ಆಲ್‌ ಟೈಂ ರೆಕಾರ್ಡ್‌

ಭಾರತ-ವೆಸ್ಟ್‌ ಇಂಡೀಸ್ ಆಟಗಾರರ ಆಲ್‌ ಟೈಂ ರೆಕಾರ್ಡ್‌

ವೈಯಕ್ತಿಕ ಗರಿಷ್ಠ ಮೊತ್ತ: ಡೆಸ್ಮಂಡ್ ಹೇನ್ಸ್ 152* / ವೀರೇಂದ್ರ ಸೆಹ್ವಾಗ್ 219

ಬೆಸ್ಟ್ ಬ್ಯಾಟಿಂಗ್ ಸರಾಸರಿ: ಗಾರ್ಡನ್ ಗ್ರೀನಿಡ್ಜ್ 59.05/ ವಿರಾಟ್ ಕೊಹ್ಲಿ 66.50

ಅತಿ ಹೆಚ್ಚು ರನ್: ಡೆಸ್ಮಂಡ್ ಹೇನ್ಸ್ 1357 ರನ್/ ವಿರಾಟ್ ಕೊಹ್ಲಿ 2261

ಬೆಸ್ಟ್ ಎಕಾನಮಿ ರೇಟ್: ಮಾಲ್ಕಮ್ ಮಾರ್ಷಲ್ 3.17/ ಕಪಿಲ್ ದೇವ್ 3.62

ಅತಿ ಹೆಚ್ಚು ವಿಕೆಟ್‌: ಕರ್ಟ್ನಿ ವಾಲ್ಷ್ 44/ ಕಪಿಲ್ ದೇವ್ 43

ಬೆಸ್ಟ್ ಬೌಲಿಂಗ್ ಫಿಗರ್: ಪ್ಯಾಟ್ರಿಕ್ ಪ್ಯಾಟರ್ಸನ್ 6-29 / ಅನಿಲ್ ಕುಂಬ್ಳೆ 6-12

ಟೆಸ್ಟ್ ಕ್ರಿಕೆಟ್‌ ಗುಣಮಟ್ಟ ಉಳಿಸಿಕೊಳ್ಳಲು, ತಂಡಗಳ ಸಂಖ್ಯೆಯನ್ನ ತಗ್ಗಿಸಬೇಕು: ರವಿಶಾಸ್ತ್ರಿ

2ನೇ ಏಕದಿನ ಪಂದ್ಯದ ಉಭಯ ತಂಡಗಳ ಸಂಭಾವ್ಯ ಪ್ಲೇಯಿಂಗ್ 11

2ನೇ ಏಕದಿನ ಪಂದ್ಯದ ಉಭಯ ತಂಡಗಳ ಸಂಭಾವ್ಯ ಪ್ಲೇಯಿಂಗ್ 11

ಭಾರತ: ಶಿಖರ್ ಧವನ್ (ನಾಯಕ), ಶುಭಮನ್ ಗಿಲ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್ (ವಿಕೆಟ್‌ ಕೀಪರ್), ದೀಪಕ್ ಹೂಡಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಯುಜವೇಂದ್ರ ಚಹಾಲ್‌, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ

ವೆಸ್ಟ್ ಇಂಡೀಸ್: ಶಾಯ್ ಹೋಪ್ (ವಿಕೆಟ್‌ ಕೀಪರ್), ಬ್ರಾಂಡನ್ ಕಿಂಗ್, ಶಮರ್ ಬ್ರೂಕ್ಸ್, ಕೈಲ್ ಮೇಯರ್ಸ್, ನಿಕೋಲಸ್ ಪೂರನ್ (ನಾಯಕ), ರೋವ್‌ಮನ್ ಪೊವೆಲ್, ಅಕೇಲ್ ಹೊಸೈನ್, ರೊಮಾರಿಯೋ ಶೆಫರ್ಡ್, ಅಲ್ಜಾರಿ ಜೋಸೆಫ್, ಗುಡಕೇಶ್ ಮೋಟಿ, ಜೇಡನ್ ಸೀಲ್ಸ್

Story first published: Saturday, July 23, 2022, 18:49 [IST]
Other articles published on Jul 23, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+