ಸೂರ್ಯಕುಮಾರ್ ಯಾದವ್ ಓಪನಿಂಗ್ ಬ್ಯಾಟಿಂಗ್ ಏಕೆ ? ರೋಹಿತ್ ಶರ್ಮಾ ಉತ್ತರ

ಟೀಂ ಇಂಡಿಯಾ ನಾಯಕತ್ವ ಬದಲಾವಣೆ ಅಷ್ಟೇ ಅಲ್ಲದೆ, ಆಟಗಾರರ ಸತತ ಬದಲಾವಣೆಯನ್ನ ಕಳೆದೊಂದು ವರ್ಷದಲ್ಲಿ ಸಾಕಷ್ಟು ಬಾರಿ ನೋಡಿದ್ದೇವೆ. ಎಂಟು ನಾಯಕರು, ಐದಕ್ಕೂ ಹೆಚ್ಚು ಓಪನಿಂಗ್ ಜೋಡಿ ಹೀಗೆ ಒಂದೆರಡಲ್ಲ. ಇಷ್ಟಾದರೂ ಟೀಂ ಇಂಡಿಯಾದ ಪ್ರಯೋಗ ಮಾತ್ರ ನಿಂತಿಲ್ಲ.
ಪ್ರಸ್ತುತ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯಲ್ಲಿ ನಾಯಕ ರೋಹಿತ್ ಶರ್ಮಾ ಜೊತೆಗೆ ಸೂರ್ಯಕುಮಾರ್ ಯಾದವ್ ಓಪನಿಂಗ್ ಖಾತೆ ತೆರೆಯುವ ಮೂಲಕ ಅಚ್ಚರಿಗೆ ಕಾರಣವಾಗಿದ್ದಾರೆ. ಈ ಕುರಿತಾಗಿ ಮಾಜಿ ಆಟಗಾರರು, ಅನೇಕ ಕ್ರಿಕೆಟ್ ಪಂಡಿತರು ರೋಹಿತ್ ಮತ್ತು ಕೋಚ್ ರಾಹುಲ್ ದ್ರಾವಿಡ್ ಪ್ರಯೋಗವನ್ನು ಪ್ರಶ್ನಿಸಿದ್ದಾರೆ. ಹೀಗಿರುವಾಗ ಸೂರ್ಯಕುಮಾರ್ ಅನ್ನು ಏಕೆ ಓಪನಿಂಗ್‌ನಲ್ಲಿ ಕಣಕ್ಕಿಳಿಸಲಾಗುತ್ತಿದೆ ಎಂಬುದನ್ನ ಸ್ವತಃ ರೋಹಿತ್ ವಿವರಿಸಿದ್ದಾರೆ.

ಕಂಫರ್ಟ್ ಜೋನ್‌ನಿಂದ ಆಚೆ ಬರಲಿ!
ಟೀಂ ಇಂಡಿಯಾದ ಎಲ್ಲಾ ಆಟಗಾರರು ಕಂಫರ್ಟ್ ಜೋನ್‌ನಿಂದ ಆಚೆತರುವುದೇ ನಮ್ಮ ಉದ್ದೇಶವಾಗಿದೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ. ಟೀಂ ಇಂಡಿಯಾ ಮ್ಯಾನೇಜ್‌ಮೆಂಟ್ ಈ ಕುರಿತಾಗಿ ಪ್ರಯೋಗಕ್ಕೆ ಮುಂದಾಗಿದ್ದು, ಆಟಗಾರರು ಎಲ್ಲಾ ಕ್ರಮಾಂಕದಲ್ಲೂ ಆಡುವಂತಾಗಬೇಕು ಎಂಬುದು ಪ್ರಮುಖ ಉದ್ದೇಶವಾಗಿದೆ.
ರಿಷಭ್ ಪಂತ್ ಸೂರ್ಯಕುಮಾರ್ ಯಾದವ್ ಅನ್ನು ಓಪನಿಂಗ್ ಕಣಕ್ಕಿಳಿಸಲು ಕಾರಣ, ಇಂಗ್ಲೆಂಡ್ ವಿರುದ್ಧ ಪಂತ್ ರೋಹಿತ್ ಜೊತೆಗೆ ಓಪನಿಂಗ್ ಆಡಿದ್ದರು. ಹೀಗಾಗಿ ಸೂರ್ಯಕುಮಾರ್ ಯಾದವ್ ಮೊದಲೆರಡು ಪಂದ್ಯಗಳಲ್ಲಿ ವಿಂಡೀಸ್ ವಿರುದ್ಧ ಓಪನರ್ ಆಗಿ ಕಣಕ್ಕಿಳಿದಿದ್ದಾರೆ.
"ಹುಡುಗರು ಎಲ್ಲಿಯಾದರೂ ಬ್ಯಾಟ್ ಮಾಡಲು ಸಾಧ್ಯವಾಗುತ್ತದೆ ಎಂದು ನಾವು ಬಯಸುತ್ತೇವೆ, ಅದು ಒಂದು ಆಲೋಚನೆ. ನಿರ್ದಿಷ್ಟ ಸ್ಥಾನಗಳಲ್ಲಿ ಬ್ಯಾಟಿಂಗ್ ಮಾಡುವ ಹುಡುಗರನ್ನು ನಾವು ಬಯಸುವುದಿಲ್ಲ. ಟಿ20 ವಿಭಿನ್ನ ಸ್ವರೂಪವಾಗಿದೆ, ಹುಡುಗರು ಹೊಂದಿಕೊಳ್ಳುವವರಾಗಿರಬೇಕು. ಅದೇ ಸಮಯದಲ್ಲಿ, ಕೆಲವು ವ್ಯಕ್ತಿಗಳು ನಿರ್ದಿಷ್ಟ ಪಾತ್ರಗಳನ್ನು ಹೊಂದಿದ್ದಾರೆ ಮತ್ತು ನಿರ್ದಿಷ್ಟ ಸ್ಥಾನಗಳಲ್ಲಿ ಬ್ಯಾಟಿಂಗ್ ಮಾಡಬೇಕಾಗುತ್ತದೆ ಎಂಬುದನ್ನು ನಾವು ನೆನಪಿನಲ್ಲಿಟ್ಟುಕೊಳ್ಳಲು ಬಯಸುತ್ತೇವೆ" ಎಂದು ರೋಹಿತ್ ಎರಡನೇ ಟಿ20 ಪಂದ್ಯದ ಟಾಸ್‌ನಲ್ಲಿ ಹೇಳಿದರು.
"ಈ ಕಾರಣದಿಂದಾಗಿ ದಿನೇಶ್ ಕಾರ್ತಿಕ್ ವೃತ್ತಿಜೀವನದ ಆರಂಭದಲ್ಲಿ ವೈಫಲ್ಯ ಅನುಭವಿಸಿದ್ದರು"

ಮೊದಲ ಟಿ20 ಪಂದ್ಯದಲ್ಲಿ ಮೂವರು ಸ್ಪಿನ್ನರ್‌ಗಳನ್ನ ಕಣಕ್ಕಿಳಿಸಿದ್ದ ಭಾರತ
ಬ್ರಿಯಾನ್ ಲಾರಾ ಸ್ಟೇಡಿಯಂನಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಮೂವರು ಸ್ಪಿನ್ನರ್‌ಗಳನ್ನ ಕಣಕ್ಕಿಳಿಸಿತ್ತು. ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ ಮತ್ತು ರವಿ ಬಿಷ್ಣೋಯಿ ಆಡಿದ್ರು. ಆದ್ರೆ ಎರಡನೇ ಪಂದ್ಯದಲ್ಲಿ ಬಿಷ್ನೋಯಿ ಮಿಸ್ ಆಗಿದ್ದು ಅವೇಶ್ ಖಾನ್ ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನ ಪಡೆದಿದ್ದಾರೆ.
"ನಾವು ಪಿಚ್ ಅನ್ನು ಚೆನ್ನಾಗಿ ಅರಿತಿದ್ದೇವೆ ಎಂದು ಭಾವಿಸಿದೆವು. ತಂಡವಾಗಿ ನಾವು ಮೂವರು ಸ್ಪಿನ್ನರ್‌ಗಳೊಂದಿಗೆ ಸರಿಯಾದ ನಿರ್ಧಾರ ಎಂದು ನಾನು ಭಾವಿಸಿದೆ. ಆದ್ರೆ ಈ ಪಿಚ್‌ನ ಆಯಾಮಗಳು ತುಂಬಾ ವಿಭಿನ್ನವಾಗಿವೆ ಮತ್ತು ಅಡ್ಡ ಗಾಳಿಯೊಂದಿಗೆ, ನಾವು ಹೆಚ್ಚುವರಿ ಸೀಮರ್ ಅನ್ನು ಹೊಂದಿದ್ದೇವೆ'' ಎಂದು ಎರಡನೇ ಪಂದ್ಯದಲ್ಲಿ ಅವೇಶ್ ಖಾನ್ ಆಯ್ಕೆ ಕುರಿತು ರೋಹಿತ್ ಹೇಳಿದ್ದಾರೆ.
ಮೊದಲ ಟಿ20 ಪಂದ್ಯದಲ್ಲಿ ಮೊದಲ ಎಸೆತದಲ್ಲೇ ವಿಕೆಟ್ ಪಡೆದಿದ್ದ ಬಿಷ್ಣೋಯಿ ಒಟ್ಟು ಎರಡು ವಿಕೆಟ್ ಪಡೆದಿದ್ದರು. ಅಶ್ವಿನ್ ಎರಡು ಪ್ರಮುಖ ವಿಕೆಟ್ ಉರುಳಿಸಿದ್ದರು.
ಮುಂದಿನ ಟಿ20 ಪಂದ್ಯಗಳಲ್ಲಿ ಆರ್.ಅಶ್ವಿನ್ ಪ್ರಮುಖ ಪಾತ್ರವಹಿಸಲಿದ್ದಾರೆ: ಸಾಬಾ ಕರೀಂ

ಎರಡನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಪ್ಲೇಯಿಂಗ್ 11
ರೋಹಿತ್ ಶರ್ಮಾ(ನಾಯಕ), ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್(ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ದಿನೇಶ್ ಕಾರ್ತಿಕ್, ರವಿಚಂದ್ರನ್ ಅಶ್ವಿನ್, ಭುವನೇಶ್ವರ್ ಕುಮಾರ್, ಅವೇಶ್ ಖಾನ್, ಅರ್ಷದೀಪ್ ಸಿಂಗ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications