Ind vs WI 2nd T20: ಭಾರತಕ್ಕೆ 8 ರನ್‌ಗಳ ಜಯ, ಸರಣಿ ಗೆಲುವು

ಕೋಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ನೀಡಿದ 187ರನ್‌ಗಳನ್ನ ಬೆನ್ನತ್ತುವಲ್ಲಿ ವೆಸ್ಟ್ ಇಂಡೀಸ್ ಎಡವಿದೆ. ಪರಿಣಾಮ ಭಾರತ ಎರಡನೇ T20 ಪಂದ್ಯವನ್ನ ಎಂಟು ರನ್‌ಗಳ ಜೊತೆಗೆ ಸರಣಿಯನ್ನ ವಶಪಡಿಸಿಕೊಂಡಿದೆ.
ವಿಂಡೀಸ್ ಆರಂಭಿಕರಾದ ಕೈಲ್ ಮೇಯರ್ಸ್ (9) ಯುಜವೇಂದ್ರ ಹಚಾಲ್‌ಗೆ ವಿಕೆಟ್ ಒಪ್ಪಿಸಿದ್ರೆ, ಬ್ರಾಂಡನ್ ಕಿಂಗ್ (22) ರವಿ ಬಿಷ್ಣೋಯಿಗೆ ವಿಕೆಟ್ ಒಪ್ಪಿಸಿ ಉತ್ತಮ ಆರಂಭ ನೀಡುವಲ್ಲಿ ವಿಫಲಗೊಂಡರು.

ಅಬ್ಬರದ ಬ್ಯಾಟಿಂಗ್ ಮಾಡಿದ ಪೂರನ್-ಪೊವೆಲ್
ವೆಸ್ಟ್ ಇಂಡೀಸ್ ಮೊದಲೆರಡು ವಿಕೆಟ್ ಪತನದ ಬಳಿಕ ಭರ್ಜರಿ ಆಟವಾಡಿದ ನಿಕೊಲಸ್ ಪೂರನ್ ಮತ್ತು ರೊಮನ್ ಪೊವೆಲ್ ಮೂರನೇ ವಿಕೆಟ್‌ಗೆ ಶತಕದ ಜೊತೆಯಾಟದ ಮೂಲಕ ವಿಂಡೀಸ್‌ಗೆ ಆಧಾರವಾದ್ರು. ಮೊದಲ ಟಿ20 ಪಂದ್ಯದಲ್ಲಿ ಯುಜವೇಂದ್ರ ಚಹಾಲ್ ಬೌಲಿಂಗ್‌ನಲ್ಲಿ ಕ್ಯಾಚ್ ಕೈ ಚೆಲ್ಲಿದ್ದ ರವಿ ಬಿಷ್ಣೋಯಿ ಈ ಪಂದ್ಯದಲ್ಲೂ ಪೂರನ್ ಕ್ಯಾಚ್ ಕೈ ಚೆಲ್ಲಿದ್ರು.
ಸಿಕ್ಕ ಅವಕಾಶವನ್ನ ಎರಡೂ ಕೈನಲ್ಲಿ ಬಾಚಿಕೊಂಡ ನಿಕೊಲಸ್ ಪೂರನ್ 41 ಎಸೆತಗಳಲ್ಲಿ 62 ಸಿಡಿಸಿ ಅಬ್ಬರಿಸಿದ್ರು. ಇವರ ಇನ್ನಿಂಗ್ಸ್‌ನಲ್ಲಿ ಐದು ಬೌಂಡರಿ ಮತ್ತು ಮೂರು ಭರ್ಜರಿ ಸಿಕ್ಸರ್‌ಗಳಿದ್ದವು.
ನಿಕೊಲಸ್ ಪೂರನ್‌ಗೆ ಉತ್ತಮ ಸಾಥ್ ನೀಡಿದ ರೋವ್‌ಮನ್ ಪೊವೆಲ್ 36 ಎಸೆತಗಳಲ್ಲಿ ಅಜೇಯ 68 ರನ್ ಕಲೆಹಾಕಿದ್ರು ತಂಡವನ್ನ ಗೆಲುವಿನ ದಡ ತಲುಪಿಸಲು ಸಾಧ್ಯವಾಗಲಿಲ್ಲ.

ಕೊನೆಯ ನಾಲ್ಕು ಎಸೆತಕ್ಕೆ ಬೇಕಿತ್ತು ನಾಲ್ಕು ಸಿಕ್ಸರ್
ಭಾರತ ನೀಡಿದ 187ರನ್‌ಗಳ ಗುರಿ ಬೆನ್ನತ್ತಿದ ವಿಂಡೀಸ್ ಗೆಲುವಿಗೆ ಕೊನೆಯ ನಾಲ್ಕು ಎಸೆತಗಳಲ್ಲಿ 23 ರನ್‌ಗಳ ಅವಶ್ಯಕತೆಯಿತ್ತು. ಹರ್ಷಲ್ ಪಟೇಲ್ ಬೌಲಿಂಗ್‌ನಲ್ಲಿ ಕೊನೆಯ ನಾಲ್ಕು ಎಸೆತಗಳಲ್ಲಿ ಎರಡು ಸಿಕ್ಸರ್ ಸಿಡಿಸಿದ್ದ ಪೊವೆಲ್ ಟೀಂ ಇಂಡಿಯಾ ಪಾಳಯದಲ್ಲಿ ಭಯ ಹುಟ್ಟಿಸಿದ್ರು. ಆದ್ರೆ ನಂತರದ ಎರಡು ಎಸೆತಗಳು ಸಿಂಗಲ್ಸ್ ತೆಗೆದುಕೊಂಡ ಪರಿಣಾಮ ಭಾರತ 8 ರನ್‌ಗಳಿಂದ ಪಂದ್ಯ ಗೆದ್ದು ಬೀಗಿತು. ಅಲ್ಲದೆ ಮೂರು ಪಂದ್ಯಗಳ ಸರಣಿಯನ್ನ 2-0ಯಿಂದ ಜಯಿಸಿದೆ.
ವೆಸ್ಟ್ ಇಂಡೀಸ್ 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 178 ರನ್ ಕಲೆಹಾಕಿದೆ. ಭಾರತ ಪರ ಭುವಿ, ಚಹಾಲ್ ಮತ್ತು ಬಿಷ್ಣೋಯಿ ತಲಾ ಒಂದು ವಿಕೆಟ್ ಪಡೆದರು.

ಮತ್ತೊಮ್ಮೆ ಎಡವಿದ ಇಶಾನ್ ಕಿಶನ್
ಇದಕ್ಕೂ ಮೊದಲು ತಂಡದಲ್ಲಿ ಯಾವುದೇ ಬದಲಾವಣೆ ಮಾಡದೆ ಕಣಕ್ಕಿಳಿದಿದ್ದ ಟೀಂ ಇಂಡಿಯಾ ಉತ್ತಮ ಆರಂಭ ಪಡೆಯುವಲ್ಲಿ ವಿಫಲಗೊಂಡಿತು. ಮೊದಲ ಟಿ20 ಪಂದ್ಯದಲ್ಲಿ ಬಾಲ್ ಟೈಮಿಂಗ್ ಮಾಡಲು ಹೆಣಗಾಡಿದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಇಶಾನ್ ಕಿಶನ್ ಕೇವಲ 2ರನ್‌ಗೆ ಶೆಲ್ಡನ್ ಕಾಟ್ರೆಲ್‌ಗೆ ಮತ್ತೊಮ್ಮೆ ವಿಕೆಟ್ ಒಪ್ಪಿಸಿದ್ರು. ಮೊದಲ ಟಿ20 ಪಂದ್ಯದಲ್ಲೂ ಇಶಾನ್ ಕಾಟ್ರೆಲ್ ಬೌಲಿಂಗ್‌ನಲ್ಲಿ ಔಟಾಗಿದ್ದರು.
10ರನ್‌ಗೆ ಮೊದಲ ವಿಕೆಟ್ ಉರುಳುತ್ತಿದ್ದಂತೆ ಕಣಕ್ಕಿಳಿದ ಮಾಜಿ ನಾಯಕ ವಿರಾಟ್ ಕೊಹ್ಲಿ ಆರಂಭದಿಂದಲೇ ಅಗ್ರೆಸ್ಸಿವ್ ಬ್ಯಾಟಿಂಗ್ ಪ್ರದರ್ಶನ ನೀಡಿದ್ರು. ಇಬ್ಬರು ಬ್ಯಾಟ್ಸ್‌ಮನ್‌ಗಳು ಬೃಹತ್ ಮೊತ್ತ ಕಲೆಹಾಕುವ ಮುನ್ಸೂಚನೆ ನೀಡಿದ ವೇಳೆಯಲ್ಲಿ ನಾಯಕ ರೋಹಿತ್ ಶರ್ಮಾ ಸ್ಪಿನ್ನರ್ ರೋಸ್ಟನ್ ಚೇಸ್‌ಗೆ ವಿಕೆಟ್ ಒಪ್ಪಿಸಿದ್ರು. 18 ಎಸೆತಗಳಲ್ಲಿ 19 ರನ್ ಕಲೆಹಾಕಿದ್ದ ರೋಹಿತ್ ಸ್ಪಿನ್ನರ್‌ಗೆ ಬಲಿಯಾದ್ರು..
ಇದ್ರ ಬೆನ್ನಲ್ಲೇ ವಿಂಡೀಸ್ ಸ್ಪಿನ್ನರ್ ರೋಸ್ಟನ್ ಚೇಸ್ ಮತ್ತೊದಬ್ಬ ಪವರ್‌ಫುಲ್ ಬ್ಯಾಟ್ಸ್‌ಮನ್ ಅನ್ನು ತನ್ನ ಖೆಡ್ಡಾದಲ್ಲಿ ಕೆಡವಿದ್ರು. ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದ ಸೂರ್ಯಕುಮಾರ್ ಯಾದವ್ ಕೇವಲ 8 ರನ್‌ಗೆ ಇನ್ನಿಂಗ್ಸ್ ಮುಗಿಸಿದ್ರು.
ಆದ್ರೆ ನಾಲ್ಕನೇ ವಿಕೆಟ್‌ಗೆ ಕೊಹ್ಲಿಗೆ ಉತ್ತಮ ಸಾಥ್ ನೀಡಿದ ರಿಷಭ್ ಪಂತ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ್ರು.

ವಿರಾಟ್ ಕೊಹ್ಲಿ ಅರ್ಧಶತಕದ ಮಿಂಚು
ವಿರಾಟ್ ಕೊಹ್ಲಿ 41 ಎಸೆತಗಳಲ್ಲಿ 52 ರನ್ ಕಲೆಹಾಕುವ ಮೂಲಕ ಟಿ20 ಕ್ರಿಕೆಟ್‌ನಲ್ಲಿ 30 ನೇ ಅರ್ಧಶತಕ ದಾಖಲಿಸಿದ್ರು. ಇವರ ಇನ್ನಿಂಗ್ಸ್‌ನಲ್ಲಿ ಏಳು ಬೌಂಡರಿ ಮತ್ತು ಒಂದು ಸಿಕ್ಸರ್ ಒಳಗೊಂಡಿತ್ತು.

ರಿಷಬ್ ಪಂತ್- ಅಯ್ಯರ್ ಬೊಂಬಾಟ್ ಜೊತೆಯಾಟ
ವಿರಾಟ್ ಕೊಹ್ಲಿ 52 ರನ್‌ಗೆ ರೋಸ್ಟನ್ ಚೇಸ್ ಸ್ಪಿನ್‌ಗೆ ಬಲಿಯಾದ ಬಳಿಕ ಐದನೇ ವಿಕೆಟ್‌ಗೆ ಆಲ್‌ರೌಂಡರ್ ವೆಂಕಟೇಶ್ ಅಯ್ಯರ್ ಮತ್ತು ಪಂತ್ ಸಖತ್ ಆಟವಾಡಿದ್ರು. ರಿಷಭ್ ಪಂತ್ ಟಿ20 ಕ್ರಿಕೆಟ್‌ನಲ್ಲಿ ಮೂರನೇ ಅರ್ಧಶತಕ ದಾಖಲಿಸುವ ಮೂಲಕ 28 ಎಸೆತಗಳಲ್ಲಿ 52 ರನ್ ಸಿಡಿಸಿದ್ರು. ಇವ್ರ ಇನ್ನಿಂಗ್ಸ್‌ನಲ್ಲಿ ಏಳು ಬೌಂಡರಿ ಮತ್ತು ಒಂದು ಸಿಕ್ಸರ್ ಸಹ ಇತ್ತು. ವಿಶೇಷವೆಂದರೆ ರಿಷಭ್‌ರ ಮೂರು ಅರ್ಧಶತಕ ವಿಂಡೀಸ್ ವಿರುದ್ಧವೇ ಮೂಡಿಬಂದಿದೆ.
ಇನ್ನು ವೆಂಕಟೇಶ್ ಅಯ್ಯರ್ ಕೂಡ ಸ್ಫೋಟಕ ಆಟವಾಡಿ 18 ಎಸೆತಗಳಲ್ಲಿ 33ರನ್‌ಗಳ ಕೊಡುಗೆ ನೀಡಿದ್ರು. ಈ ಜೋಡಿಯ ಜೊತೆಯಾಟವು ಭಾರತಕ್ಕೆ ಉತ್ತಮ ಸ್ಪರ್ಧಾತ್ಮಕ ಮೊತ್ತ ಪೇರಿಸಲು ಸಾಧ್ಯವಾಯಿತು.
ಭಾರತ ನಿಗದಿತ 20 ಓವರ್‌ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 186 ರನ್ ಕಲೆಹಾಕಿದೆ. ವಿಂಡೀಸ್ ಪರ ರೋಸ್ಟನ್ ಚೇಸ್ 25 ರನ್ ನೀಡಿ ಮೂರು ವಿಕೆಟ್ ಕಬಳಿಸಿದ್ರೆ, ಶೆಲ್ಡನ್ ಕಾಟ್ರೆಲ್ ಮತ್ತು ರೊಮಾರಿಯೋ ಶೆಫರ್ಡ್ ತಲಾ ಒಂದು ವಿಕೆಟ್ ಪಡೆದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications