Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Ind vs WI 3rd ODI: ಪಂದ್ಯದ ಪ್ರಿವ್ಯೂ, ಡ್ರೀಂ ಟೀಂ, ಪಿಚ್ ರಿಪೋರ್ಟ್‌ ಜೊತೆಗೆ ಪ್ಲೇಯಿಂಗ್ 11

India vs west indies

ಸತತ ಎರಡು ಏಕದಿನ ಪಂದ್ಯಗಳನ್ನ ಜಯಿಸಿ, ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ ಸರಣಿ ವಶಪಡಿಸಿಕೊಂಡಿರುವ ಟೀಂ ಇಂಡಿಯಾ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಬುಧವಾರ(ಜುಲೈ 27) ಎದುರಿಸಲಿದೆ.

ಎರಡನೇ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್‌ನ 312ರನ್‌ಗಳ ಗುರಿಯನ್ನ ಯಶಸ್ವಿಯಾಗಿ ಬೆನ್ನತ್ತಿದ ಟೀಂ ಇಂಡಿಯಾ ಇನ್ನೆರಡು ಎಸೆತಗಳು ಬಾಕಿ ಇರುವಂತೆಯೇ ಗೆಲುವಿನ ದಡ ತಲುಪಿತು. ಆಲ್‌ರೌಂಡರ್ ಅಕ್ಷರ್ ಪಟೇಲ್ 35 ಎಸೆತಗಳಲ್ಲಿ ಅಜೇಯ 64ರನ್‌ ಕಲೆಹಾಕುವ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟರು.

ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿರುವ ಟೀಂ ಇಂಡಿಯಾ ಅಂತಿಮ ಪಂದ್ಯದಲ್ಲೂ ಗೆದ್ದು ಆತಿಥೇಯರನ್ನ ವೈಟ್‌ವಾಶ್ ಮಾಡುವ ಗುರಿ ಹೊಂದಿದೆ. ಪಂದ್ಯವು ಭಾರತೀಯ ಕಾಲಮಾನ ಸಂಜೆ 7 ಗಂಟೆಗೆ ಪ್ರಾರಂಭವಾಗಲಿದ್ದು, ಡಿಡಿ ಸ್ಪೋರ್ಟ್ಸ್‌ನಲ್ಲಿ ನೇರ ಪ್ರಸಾರವನ್ನು ವೀಕ್ಷಿಸಬಹುದು.

ಪಿಚ್ ರಿಪೋರ್ಟ್‌ ಮತ್ತು ಹವಾಮಾನ

ಪಿಚ್ ರಿಪೋರ್ಟ್‌ ಮತ್ತು ಹವಾಮಾನ

ಕ್ವೀನ್ಸ್ ಪಾರ್ಕ್ ಓವಲ್ ಮೈದಾನವು ಬ್ಯಾಟಿಂಗ್ ಸ್ನೇಹಿ ಪಿಚ್ ಆಗಿದ್ದು, ಮತ್ತೊಮ್ಮೆ ಅಂತಿಮ ಪಂದ್ಯದಲ್ಲೂ ಬ್ಯಾಟರ್ಸ್‌ ಮೇಲುಗೈ ಸಾಧಿಸುವ ಸಾಧ್ಯತೆಯಿದೆ. ಪಂದ್ಯದ ಅರ್ಧ ಅವಧಿಯ ಬಳಿಕ ಪೇಸರ್‌ಗಳಿಗೆ ಪಿಚ್ ನೆರವಾಗಲಿದ್ದು, ಮಧ್ಯಮ ಓವರ್‌ಗಳಲ್ಲಿ ಸ್ಪಿನ್ನರ್‌ಗಳು ಪ್ರಮುಖ ಪಾತ್ರವಹಿಸಲಿದ್ದಾರೆ.

ಇಲ್ಲಿನ ಹವಾಮಾನವು 28 ಡಿಗ್ರಿ ಸೆಲ್ಸಿಯಸ್‌ನಷ್ಟಿರಲಿದ್ದು, ಶೇಕಡಾ 77ರಷ್ಟು ಹ್ಯುಮಿಡಿಟಿ ಇರಲಿದೆ. ಗಾಳಿಯ ವೇಗ ಗಂಟೆಗೆ 13 km ವೇಗದಲ್ಲಿ ಬೀಸಲಿದೆ. ಮಳೆ ಬರುವ ಸಾಧ್ಯತೆಯು ಕಡಿಮೆಯಿದೆ. ಇನ್ನು ಈ ಪಿಚ್‌ನಲ್ಲಿ ಮೊದಲ ಇನ್ನಿಂಗ್ಸ್‌ ಸರಾಸರಿ ಸ್ಕೋರ್ 305ರನ್‌ಗಳಷ್ಟಿದೆ.

ಇನ್ನು ಇಲ್ಲಿ ಎರಡನೇ ಬಾರಿಗೆ ಬ್ಯಾಟಿಂಗ್ ಮಾಡುವ ತಂಡಕ್ಕೆ ಹೆಚ್ಚಿನ ಅನುಕೂಲತೆಯಿದ್ದು, ಅಂಕಿ-ಅಂಶಗಳ ಪ್ರಕಾರ ಶೇಕಡಾ 60ರಷ್ಟು ಗೆಲುವಿನ ಸರಾಸರಿಯನ್ನ ಹೊಂದಿದೆ.

ಉಭಯ ತಂಡಗಳ ಪ್ಲೇಯಿಂಗ್ 11

ಉಭಯ ತಂಡಗಳ ಪ್ಲೇಯಿಂಗ್ 11

ವೆಸ್ಟ್ ಇಂಡೀಸ್
ಶಾಯ್ ಹೋಪ್ (ವಿಕೆಟ್ ಕೀಪರ್), ಬ್ರಾಂಡನ್ ಕಿಂಗ್, ಶಮರ್ ಬ್ರೂಕ್ಸ್, ಕೈಲ್ ಮೇಯರ್ಸ್, ನಿಕೋಲಸ್ ಪೂರನ್ (ನಾಯಕ), ರೋವ್‌ಮನ್ ಪೊವೆಲ್, ಅಕೆಲ್ ಹೊಸೈನ್, ರೊಮಾರಿಯೋ ಶೆಫರ್ಡ್, ಅಲ್ಜಾರಿ ಜೋಸೆಫ್, ಹೇಡನ್ ವಾಲ್ಷ್, ಜೇಡನ್ ಸೀಲ್ಸ್

ಟೀಂ ಇಂಡಿಯಾ
ಶಿಖರ್ ಧವನ್ (ನಾಯಕ), ಶುಭಮನ್ ಗಿಲ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್‌), ದೀಪಕ್ ಹೂಡಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಯುಜವೇಂದ್ರ ಚಹಾಲ್, ಮೊಹಮ್ಮದ್ ಸಿರಾಜ್, ಅವೇಶ್ ಖಾನ್

ಹಾಕಿ ಬಿಟ್ಟು, ಕ್ರಿಕೆಟ್ ಆಯ್ಕೆ ಮಾಡಿಕೊಂಡಿದ್ದರ ಹಿಂದಿತ್ತು ಈ ಕಾರಣ: ರಾಬಿನ್ ಉತ್ತಪ್ಪ

ಡ್ರೀಂ ಫ್ಯಾಂಟೆಸಿ ಟೀಂ 1

ಡ್ರೀಂ ಫ್ಯಾಂಟೆಸಿ ಟೀಂ 1

ನಾಯಕ- ಯುಜುವೇಂದ್ರ ಚಾಹಲ್, ಶಮರ್ ಬ್ರೂಕ್ಸ್
ಉಪನಾಯಕ - ರೊಮಾರಿಯೊ ಶೆಫರ್ಡ್, ದೀಪಕ್ ಹೂಡಾ
ಕೀಪರ್ - ಶಾಯ್ ಹೋಪ್
ಬ್ಯಾಟ್ಸ್‌ಮನ್‌ಗಳು - ಶಿಖರ್ ಧವನ್, ನಿಕೋಲಸ್ ಪೂರನ್, ಶ್ರೇಯಸ್ ಅಯ್ಯರ್, ಶುಭಮನ್ ಗಿಲ್
ಆಲ್ ರೌಂಡರ್‌ಗಳು - ಅಕ್ಷರ್ ಪಟೇಲ್, ಕೈಲ್ ಮೇಯರ್ಸ್, ರೊಮಾರಿಯೋ ಶೆಫರ್ಡ್ (ಉಪನಾಯಕ)
ಬೌಲರ್‌ಗಳು - ಯುಜವೇಂದ್ರ ಚಹಾಲ್ (ನಾಯಕ), ಶಾರ್ದೂಲ್ ಠಾಕೂರ್, ಅಲ್ಜಾರಿ ಜೋಸೆಫ್

ಆತ ಬುಮ್ರಾ ಜೊತೆಗೆ ಬೌಲಿಂಗ್ ಮಾಡುವಷ್ಟು ಫ್ರಂಟ್‌ಲೈನ್ ಬೌಲರ್‌ ಅಲ್ಲ: ಸ್ಕಾಟ್ ಸ್ಟೈರಿಸ್

Chahal ಅವರ ವಿಶೇಷ ಪೋಸ್‌ಗೆ ಕ್ರಿಕೆಟ್ ಅಭಿಮಾನಿಗಳೆಲ್ಲರೂ ಫಿದಾ | *Cricket | OneIndia Kannada
ಡ್ರೀಂ ಫ್ಯಾಂಟೆಸಿ ಟೀಂ 2

ಡ್ರೀಂ ಫ್ಯಾಂಟೆಸಿ ಟೀಂ 2

ಕೀಪರ್ - ಶಾಯ್ ಹೋಪ್
ಬ್ಯಾಟ್ಸ್‌ಮನ್‌ಗಳು - ನಿಕೋಲಸ್ ಪೂರನ್, ದೀಪಕ್ ಹೂಡಾ (ಉಪನಾಯಕ), ಶ್ರೇಯಸ್ ಅಯ್ಯರ್, ಶಮರ್ ಬ್ರೂಕ್ಸ್ (ನಾಯಕ), ಶುಬ್ಮನ್ ಗಿಲ್
ಆಲ್ ರೌಂಡರ್ಸ್ - ಅಕ್ಷರ್ ಪಟೇಲ್, ಕೈಲ್ ಮೇಯರ್ಸ್
ಬೌಲರ್‌ಗಳು - ಯುಜವೇಂದ್ರ ಚಹಾಲ್, ಶಾರ್ದೂಲ್ ಠಾಕೂರ್, ಅಲ್ಜಾರಿ ಜೋಸೆಫ್

ಯುಜುವೇಂದ್ರ ಚಹಾಲ್ ಗ್ರ್ಯಾಂಡ್ ಲೀಗ್‌ಗಳಿಗೆ ಉತ್ತಮ ನಾಯಕತ್ವ ಆಯ್ಕೆಗಳಲ್ಲಿ ಒಬ್ಬರಾಗಿದ್ದು, ಸೂರ್ಯಕುಮಾರ್ ಯಾದವ್ ಮತ್ತು ಮೊಹಮ್ಮದ್ ಸಿರಾಜ್, ದೀಪಕ್ ಹೂಡಾ ಮತ್ತು ರೊವ್ಮನ್ ಪೊವೆಲ್ ಇಲ್ಲಿ ಪ್ರಮುಖ ಆಯ್ಕೆ ಆಗಿದ್ದಾರೆ. ಈ ಆಟಕ್ಕೆ ಅತ್ಯುತ್ತಮವಾಗಿ ಸೂಚಿಸಲಾದ ಫ್ಯಾಂಟಸಿ/Dream11 ಸಂಯೋಜನೆಯು 1-4-3-3 ಆಗಿದೆ.

Story first published: Tuesday, July 26, 2022, 19:14 [IST]
Other articles published on Jul 26, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+