ಆತ ಬುಮ್ರಾ ಜೊತೆಗೆ ಬೌಲಿಂಗ್ ಮಾಡುವಷ್ಟು ಫ್ರಂಟ್‌ಲೈನ್ ಬೌಲರ್‌ ಅಲ್ಲ: ಸ್ಕಾಟ್ ಸ್ಟೈರಿಸ್

ಭಾರತ ಕ್ರಿಕೆಟ್ ತಂಡ ಇತ್ತೀಚಿನ ದಿನಗಳಲ್ಲಿ ಸತತ ಸರಣಿಗಳನ್ನ ಗೆಲ್ಲುವ ಮೂಲಕ ಹೊಸ ದಾಖಲೆಗಳನ್ನ ಸೃಷ್ಟಿಸುತ್ತಿದೆ. ಜೊತೆಗೆ ಟಿ20 ವಿಶ್ವಕಪ್‌ಗೆ ಭಾರತ ಭರ್ಜರಿ ತಯಾರಿ ಕೂಡ ನಡೆಸುತ್ತಿದೆ.

ರೋಹಿತ್ ಶರ್ಮಾ ನಾಯಕತ್ವ ಮತ್ತು ಕೋಚ್ ರಾಹುಲ್ ದ್ರಾವಿಡ್ ಮಾರ್ಗದರ್ಶನವಿರುದ ಕಾರಣ, ಭಾರತ ಹೆಚ್ಚಿನ ನಿರೀಕ್ಷೆಯನ್ನು ಹೊಂದಿದೆ. ತಂಡದ ಸಾಮರ್ಥ್ಯದ ದೃಷ್ಟಿಯಿಂದಲೂ ಭಾರತ ಬಲಿಷ್ಠವಾಗಿದೆ. ಇತ್ತೀಚಿನ ದಿನಗಳಲ್ಲಿ ಭಾರತದಿಂದ ಅವಕಾಶ ಪಡೆದ ಎಲ್ಲಾ ಆಟಗಾರರು ಒಬ್ಬರಿಗಿಂತ ಒಬ್ಬರು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.

ಬಲಿಷ್ಠ ಬೌಲಿಂಗ್ ಲೈನಪ್ ಹೊಂದಿರುವ ಟೀಂ ಇಂಡಿಯಾ

ಬಲಿಷ್ಠ ಬೌಲಿಂಗ್ ಲೈನಪ್ ಹೊಂದಿರುವ ಟೀಂ ಇಂಡಿಯಾ

ಹಿರಿಯ ವೇಗಿಗಳಾದ ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್ ಮತ್ತು ಮೊಹಮ್ಮದ್ ಶಮಿ ಮತ್ತು ಯುವ ವೇಗಿಗಳಾದ ಪ್ರಸಿದ್ದ ಕೃಷ್ಣ, ಅವೇಶ್ ಖಾನ್, ಅರ್ಷದೀಪ್ ಸಿಂಗ್ ಮತ್ತು ಉಮ್ರಾನ್ ಮಲಿಕ್ ಭಾರತಕ್ಕೆ ಬಲ ನೀಡುತ್ತಿದ್ದಾರೆ. ಹಾರ್ದಿಕ್ ಪಾಂಡ್ಯ ಮತ್ತು ಶಾರ್ದೂಲ್ ಠಾಕೂರ್ ಭಾರತ ತಂಡದಲ್ಲಿ ವೇಗಿ ಆಲ್ ರೌಂಡರ್ ಗಳಾಗಿದ್ದಾರೆ. ಇಷ್ಟು ವಿವಿಧ ಬೌಲಿಂಗ್ ಆಯ್ಕೆಗಳನ್ನು ಹೊಂದಿರುವ ಟೀಂ ಇಂಡಿಯಾ ಟಿ20 ವಿಶ್ವಕಪ್‌ನಲ್ಲಿ ಸಾಕಷ್ಟು ಬಲಿಷ್ಟ ತಂಡವಾಗಿ ಗುರುತಿಸಿಕೊಂಡಿದೆ.

ಭಾರತ ಪ್ರಸ್ತುತ ಗುಣಮಟ್ಟದ ವೇಗಿಗಳಿಗೆ ಅವಕಾಶ ನೀಡುತ್ತಿಲ್ಲ!

ಭಾರತ ಪ್ರಸ್ತುತ ಗುಣಮಟ್ಟದ ವೇಗಿಗಳಿಗೆ ಅವಕಾಶ ನೀಡುತ್ತಿಲ್ಲ!

ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ಏಕದಿನ ಸರಣಿಗಾಗಿ ಭಾರತವು ತಮ್ಮ ಹೆಚ್ಚಿನ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಿದೆ. ವೇಗಿಗಳ ಸಾಲಿನಲ್ಲಿ ಭಾರತವು ಮೊಹಮ್ಮದ್ ಸಿರಾಜ್, ಅವೇಶ್ ಖಾನ್, ಶಾರ್ದೂಲ್ ಠಾಕೂರ್ ಮತ್ತು ಪ್ರಸಿದ್ದ ಕೃಷ್ಣ ಅವರಿಗೆ ಅವಕಾಶ ನೀಡಿತು. ಭಾರತ ಪ್ರಸ್ತುತ ಅವಕಾಶ ನೀಡುತ್ತಿರುವ ವೇಗಿಗಳ ತಂಡವು ಗುಣಮಟ್ಟವಾಗಿಲ್ಲ ಎಂದು ನ್ಯೂಜಿಲೆಂಡ್ ಮಾಜಿ ವೇಗದ ಆಲ್ ರೌಂಡರ್ ಸ್ಕಾಟ್ ಸ್ಟೈರಿಸ್ ಅಭಿಪ್ರಾಯಪಟ್ಟಿದ್ದಾರೆ.

ಬಾಬರ್, ಕೊಹ್ಲಿ ಅಲ್ಲ 2019ರಿಂದ ಏಕದಿನ ಕ್ರಿಕೆಟ್‍ನಲ್ಲಿ ಅತಿಹೆಚ್ಚು 50+ ರನ್ ಬಾರಿಸಿರುವ ಆಟಗಾರ ಈತ!

ಶಾರ್ದೂಲ್ ಠಾಕೂರ್ ಫ್ರಂಟ್‌ ಲೈನ್ ಬೌಲರ್ ಅಲ್ಲ: ಸ್ಟೈರಿಸ್

ಶಾರ್ದೂಲ್ ಠಾಕೂರ್ ಫ್ರಂಟ್‌ ಲೈನ್ ಬೌಲರ್ ಅಲ್ಲ: ಸ್ಟೈರಿಸ್

ಶಾರ್ದೂಲ್ ,ಜಸ್ಪ್ರೀತ್ ಬುಮ್ರಾ ಅವರಂತಹ ಸೂಪರ್ ಪೇಸರ್ ಜೊತೆ ಆಡುವ ವೇಗಿ ಅಲ್ಲ ಎಂದು ಸ್ಟೈರಿಸ್ ಹೇಳಿದ್ದಾರೆ.

"ಶಾರ್ದೂಲ್ ಠಾಕೂರ್ ಬಗ್ಗೆ ಮಾತನಾಡುತ್ತಾ, ನನ್ನ ಅಭಿಪ್ರಾಯದಲ್ಲಿ ಅವರು ಅಗ್ರ ಬೌಲರ್ ಅಲ್ಲ. ವಿಶೇಷವಾಗಿ ಹೊಸ ಚೆಂಡು ಎಸೆಯುವಾಗ. ಅವರು ಬೌಲರ್ ಆಗಿ ಇತರ ವೇಗಿಗಳೊಂದಿಗೆ ಸ್ಪರ್ಧಿಸಲು ಸಾಧ್ಯವಿಲ್ಲ. ನೀವು ಆಲ್‌ರೌಂಡರ್‌ಗಳೊಂದಿಗೆ ಸ್ಪರ್ಧಿಸಬೇಕು. ಅವೇಶ್ ಖಾನ್ ಮತ್ತು ಪ್ರಸಿದ್ದ ಕೃಷ್ಣ ಹೆಚ್ಚು ರನ್ ನೀಡಿದರು. ಮೊಹಮ್ಮದ್ ಸಿರಾಜ್ ಕೂಡ ಹೆಚ್ಚು ಪರಿಣಾಮ ಮಾಡುತ್ತಿಲ್ಲ. ಆದರೆ ಅವರೆಲ್ಲ ಆಶಾದಾಯಕರಾಗಿದ್ದಾರೆ'' ಎಂದು ಸ್ಟೈರಿಸ್ ಅಭಿಪ್ರಾಯ ಪಟ್ಟಿದ್ದಾರೆ.

IND vs WI: ಸರಣಿ ಗೆದ್ದ ಬಳಿಕ ಪಾರ್ಟಿ ಮೂಡ್‌ನಲ್ಲಿ ಟೀಮ್ ಇಂಡಿಯಾ; ಚಿತ್ರ ಹಂಚಿಕೊಂಡ ಸೂರ್ಯಕುಮಾರ್ ಪತ್ನಿ

ಲಿಮಿಟೆಡ್‌ ಓವರ್‌ ಕ್ರಿಕೆಟ್‌ನಲ್ಲಿ ಅಷ್ಟಾಗಿ ಕಾಣಿಸಿಕೊಳ್ಳದ ಶಾರ್ದೂಲ್

ಲಿಮಿಟೆಡ್‌ ಓವರ್‌ ಕ್ರಿಕೆಟ್‌ನಲ್ಲಿ ಅಷ್ಟಾಗಿ ಕಾಣಿಸಿಕೊಳ್ಳದ ಶಾರ್ದೂಲ್

ಭಾರತ ಪ್ರಸ್ತುತ ಶಾರ್ದೂಲ್ ಅವರನ್ನು ಹೆಚ್ಚಾಗಿ ಟೆಸ್ಟ್‌ನಲ್ಲಿ ಪರಿಗಣಿಸಿದೆ. ಬ್ಯಾಟಿಂಗ್ ಮಾಡುವ ಸಾಮರ್ಥ್ಯವನ್ನು ಹೊಂದಿರುವ ಬ್ಯಾಟ್ಸ್‌ಮನ್ ವಿದೇಶಿ ಪ್ರವಾಸಗಳ ಸಮಯದಲ್ಲಿ ತಂಡಕ್ಕೆ ಉಪಯುಕ್ತ ಆಸ್ತಿಯಾಗುತ್ತಾನೆ. ಒಡಿಐಗಳಲ್ಲಿಯೂ ಅವರ ಅಂಕಿಅಂಶಗಳನ್ನು ಹೇಳಿಕೊಳ್ಳಲಾಗುವುದಿಲ್ಲ. ಆದರೆ ಅವರು ಟಿ20ಯಲ್ಲಿ ಉತ್ತಮ ಬೌಲರ್. ಒಡಿಐಗಳಲ್ಲಿ ಮಧ್ಯಮ ಓವರ್‌ಗಳಲ್ಲಿ ಆಟಗಾರನನ್ನು ಪರಿಣಾಮಕಾರಿಯಾಗಿ ಪರಿಗಣಿಸಬಹುದು. ಆದರೆ ಶಾರ್ದೂಲ್ ಅವರನ್ನು ಸ್ಪೆಷಲಿಸ್ಟ್ ಬೌಲರ್ ಎಂದು ಪರಿಗಣಿಸುವುದರಲ್ಲಿ ಅರ್ಥವಿಲ್ಲ.

ಭಾರತದ ಪರ ಆಲ್ ರೌಂಡರ್ ಆಗಿರುವ ಶಾರ್ದೂಲ್ ತಂಡಕ್ಕೆ ಸಾಮಾನ್ಯ ಆಟಗಾರನಲ್ಲ. ಪ್ರಸ್ತುತ, ಹಾರ್ದಿಕ್ ಪಾಂಡ್ಯ ವೇಗಿ ಆಲ್‌ರೌಂಡರ್ ಆಗಿ ಭಾರತದೊಂದಿಗೆ ಇದ್ದಾರೆ. ದೀಪಕ್ ಚಹಾರ್ ಭಾರತ ತಂಡಕ್ಕೆ ವಾಪಸಾಗಿರುವುದರಿಂದ ಶಾರ್ದೂಲ್ ಸೀಮಿತ ಓವರ್‌ಗಳಲ್ಲಿ ಸ್ಥಾನ ಕಳೆದುಕೊಳ್ಳಲಿದ್ದಾರೆ. ಶಾರ್ದೂಲ್ ಹೊಸ ಚೆಂಡಿನಲ್ಲಿ ಸ್ವಿಂಗ್ ಅಥವಾ ಬೌಲಿಂಗ್ ಅನ್ನು ವೇಗವಾಗಿ ಕಂಡುಕೊಳ್ಳುವ ಆಟಗಾರನಲ್ಲ.

Chahal ಅವರ ವಿಶೇಷ ಪೋಸ್‌ಗೆ ಕ್ರಿಕೆಟ್ ಅಭಿಮಾನಿಗಳೆಲ್ಲರೂ ಫಿದಾ | *Cricket | OneIndia Kannada
ಸಿರಾಜ್ ಬೌಲಿಂಗ್ ಬಗ್ಗೆ ಸ್ಟೈರಿಸ್ ಮೆಚ್ಚುಗೆ

ಸಿರಾಜ್ ಬೌಲಿಂಗ್ ಬಗ್ಗೆ ಸ್ಟೈರಿಸ್ ಮೆಚ್ಚುಗೆ

ಮೊಹಮ್ಮದ್ ಸಿರಾಜ್ ಅವರ ಬೌಲಿಂಗ್ ಬಗ್ಗೆ ಸ್ಟೈರಿಸ್ ವಿಶೇಷವಾಗಿ ಮೆಚ್ಚುಗೆ ವ್ಯಕ್ತಪಡಿಸಿದರು. ಮೊಹಮ್ಮದ್ ಸಿರಾಜ್ ಖಂಡಿತವಾಗಿಯೂ ಭಾರತದ ಪ್ರಮುಖ ಬೌಲರ್‌ಗಳಲ್ಲಿ ಒಬ್ಬರು. ನಾನು ಇದನ್ನು ತಿಂಗಳ ಹಿಂದೆ ಗಮನಿಸಿದೆ. ಮೊಹಮ್ಮದ್ ಸಿರಾಜ್ ಭಾರತೀಯ ವೇಗಿಗಳ ಸಾಲಿನಲ್ಲಿ ಸ್ಥಾನಕ್ಕಾಗಿ ರೇಸ್‌ನಲ್ಲಿದ್ದಾರೆ ಎಂದು ನಾನು ಇನ್ನೂ ನಂಬುತ್ತೇನೆ ಎಂದು ಸ್ಟೈರಿಸ್ ಸೇರಿಸಿದ್ದಾರೆ.

ಪ್ರಸ್ತುತ ಭಾರತ ಟೆಸ್ಟ್‌ ಕ್ರಿಕೆಟ್‌ನಲ್ಲಿ ಸಿರಾಜ್ ಅವರನ್ನು ಹೆಚ್ಚು ಪರಿಗಣಿಸಲಾಗಿದೆ. ಏಕದಿನದಲ್ಲಿ ಹಿರಿಯ ಆಟಗಾರರ ಅನುಪಸ್ಥಿತಿಯಲ್ಲಿ ಮಾತ್ರ ಸಿರಾಜ್ ಗೆ ಅವಕಾಶ ಸಿಗುತ್ತದೆ. ಸಿರಾಜ್ ಟಿ20ಯಲ್ಲಿ ಹೆಚ್ಚು ರನ್ ನೀಡುವ ಬೌಲರ್ ಆಗಿದ್ದು, ಭಾರತ ತಂಡದಲ್ಲಿ ಅವಕಾಶ ಸಿಗುವ ಸಾಧ್ಯತೆ ಕಡಿಮೆಯಿದೆ. ಸಿರಾಜ್ ಏಕದಿನ ಮತ್ತು ಟೆಸ್ಟ್‌ನಲ್ಲಿ ಅತ್ಯಂತ ಭರವಸೆಯ ಆಟಗಾರರಲ್ಲಿ ಒಬ್ಬರು.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Tuesday, July 26, 2022, 16:21 [IST]
Other articles published on Jul 26, 2022

Latest Videos

  + More
  POLLS
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Yes No
  Settings X