For Quick Alerts
ALLOW NOTIFICATIONS  
For Daily Alerts
 

ಹಾಕಿ ಬಿಟ್ಟು, ಕ್ರಿಕೆಟ್ ಆಯ್ಕೆ ಮಾಡಿಕೊಂಡಿದ್ದರ ಹಿಂದಿತ್ತು ಈ ಕಾರಣ: ರಾಬಿನ್ ಉತ್ತಪ್ಪ

Robin uthappa

ಟೀಂ ಇಂಡಿಯಾ ಬ್ಯಾಟರ್ ರಾಬಿನ್ ಉತ್ತಪ್ಪ ತಮ್ಮ ಕ್ರೀಡಾ ಪ್ರಯಾಣದ ಕುರಿತು ನೆನಪುಗಳನ್ನ ಮೆಲುಕು ಹಾಕಿದ್ದು, ಹಾಕಿಯಿಂದ ಹೇಗೆ ಕ್ರಿಕೆಟ್‌ ಆಯ್ಕೆ ಮಾಡಿಕೊಂಡರು ಎಂಬುದನ್ನ ವಿವರಿಸಿದ್ದಾರೆ. ಭಾರತದ ಪರ ನಿಗದಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಮಿಂಚಿದ್ದ ರಾಬಿನ್‌, 2007ರ ಚೊಚ್ಚಲ ಟಿ20 ವಿಶ್ವಕಪ್ ಚಾಂಪಿಯನ್ ತಂಡದ ಸದಸ್ಯರು ಆಗಿದ್ದರು.

ದಕ್ಷಿಣ ಆಫ್ರಿಕಾದಲ್ಲಿ ನಡೆದ ಮೊಟ್ಟ ಮೊದಲ ಚುಟುಕು ಕ್ರಿಕೆಟ್ ವಿಶ್ವಕಪ್‌ನಲ್ಲಿ ಟೀಂ ಇಂಡಿಯಾವನ್ನ ಮುನ್ನಡೆಸಿದ್ದ ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಭಾರತ ತಂಡದಲ್ಲಿ ರಾಬಿನ್ ಉತ್ತಪ್ಪ ಪ್ರಮುಖ ಬ್ಯಾಟರ್‌ಗಳಲ್ಲಿ ಒಬ್ಬರಾಗಿದ್ದರು.

2015ರಲ್ಲಿ ಕೊನೆಯ ಬಾರಿಗೆ ಟೀಂ ಇಂಡಿಯಾ ಜೆರ್ಸಿ ತೊಟ್ಟಿದ್ದ ರಾಬಿನ್ ಉತ್ತಪ್ಪ

2015ರಲ್ಲಿ ಕೊನೆಯ ಬಾರಿಗೆ ಟೀಂ ಇಂಡಿಯಾ ಜೆರ್ಸಿ ತೊಟ್ಟಿದ್ದ ರಾಬಿನ್ ಉತ್ತಪ್ಪ

ರಾಬಿನ್ ಉತ್ತಪ್ಪ ಕೊನೆಯ ಬಾರಿಗೆ 2015ರಲ್ಲಿ ಟೀಂ ಇಂಡಿಯಾ ಪರ ಆಡಿದ್ದಾರೆ. ಈ ಮೂಲಕ ಏಕದಿನ ಮತ್ತು ಟಿ20 ಫಾರ್ಮೆಟ್‌ ಎರಡರಲ್ಲೂ ಕೊನೆಯದಾಗಿ ರಾಬಿನ್‌ ಆಡಿದ್ದಾರೆ. ಜಿಂಬಾಬ್ವೆ ಪ್ರವಾಸದಲ್ಲಿ ಭಾರತ ತಂಡದಲ್ಲಿ ಆಡಿದ್ದ ರಾಬಿನ್ ಮತ್ತೆ ತಂಡಕ್ಕೆ ಮರಳಲಿಲ್ಲ. ಏಳು ವರ್ಷಗಳ ನಂತರ ಆತ ದೇಶೀಯ ಕ್ರಿಕೆಟ್‌ನಲ್ಲಿ ಕೇರಳ ಪರ ಆಡುತ್ತಿದ್ದು, ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ತಂಡದಲ್ಲಿದ್ದಾರೆ.

ರಾಬಿನ್ ಭಾರತದ ಪರ 46 ಏಕದಿನ ಅಂತರಾಷ್ಟ್ರೀಯ ಪಂದ್ಯಗಳನ್ನ ಆಡಿದ್ದು, 13 ಟಿ20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಟೀಂ ಇಂಡಿಯಾ ಜೆರ್ಸಿ ತೊಟ್ಟಿದ್ದಾರೆ.

ಕ್ರಿಕೆಟ್ ಆಡೋದಕ್ಕೂ ಮೊದಲು 'ಹಾಕಿ'ಯನ್ನು ಆಡುತ್ತಿದ್ದ ಉತ್ತಪ್ಪ

ಕ್ರಿಕೆಟ್ ಆಡೋದಕ್ಕೂ ಮೊದಲು 'ಹಾಕಿ'ಯನ್ನು ಆಡುತ್ತಿದ್ದ ಉತ್ತಪ್ಪ

ಹೌದು ಬಹುತೇಕ ಜನರಿಗೆ ಈ ಕುರಿತಾಗಿ ತಿಳಿದಿರುವುದು ಕಡಿಮೆ. ರಾಬಿನ್‌ ಉತ್ತಪ್ಪ ಆರಂಭಿಕ ಕ್ರೀಡಾ ಜೀವನ ಹಾಕಿಯಿಂದ ಪ್ರಾರಂಭಗೊಂಡಿದ್ದು, ನಂತರದಲ್ಲಿ ಕ್ರಿಕೆಟ್‌ ಕಡೆಗೆ ವಾಲಿದರು. ಇದಕ್ಕೆ ಪ್ರಬಲವಾದ ಕಾರಣವು ಸಹ ಇತ್ತು.

"ನನ್ನ ತಂದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರಾಂತ ಹಾಕಿ ಅಂಪೈರ್ ಆಗಿದ್ದು, ಕರ್ನಾಟಕವನ್ನೂ ಪ್ರತಿನಿಧಿಸಿದ್ದರು. ಒಮ್ಮೆ, ನಾನು ಅಂಡರ್-16 ಸಬ್-ಜೂನಿಯರ್ ಆಯ್ಕೆಗೆ ಹೋದಾಗ, ಎಲ್ಲರೂ ನನ್ನ ತಂದೆಯನ್ನು ಪ್ರೀತಿಸುತ್ತಿದ್ದರಿಂದ ಮಾರ್ಗವು ತುಂಬಾ ಸುಗಮವಾಗಿರುತ್ತದೆ ಎಂದು ನಾನು ಅರಿತುಕೊಂಡೆ''

"ವಾಸ್ತವವಾಗಿ, ಆಯ್ಕೆಯ ದಿನದಂದು, ಅಲ್ಲಿಗೆ ಬಹಳ ಪ್ರತಿಭಾವಂತರು ಬಂದಿದ್ದರು, ಆದರೆ ಅವರು ಆಯ್ಕೆಯಾಗಲಿಲ್ಲ" ಎಂದು ಉತ್ತಪ್ಪ ಶೇರ್‌ಚಾಟ್‌ನ ಆನ್‌ಲೈನ್ ಶೋ ಕ್ರಿಕ್‌ಚಾಟ್‌ನಲ್ಲಿ ಹೇಳಿದರು.

ಆತ ಬುಮ್ರಾ ಜೊತೆಗೆ ಬೌಲಿಂಗ್ ಮಾಡುವಷ್ಟು ಫ್ರಂಟ್‌ಲೈನ್ ಬೌಲರ್‌ ಅಲ್ಲ: ಸ್ಕಾಟ್ ಸ್ಟೈರಿಸ್

ಹಾಕಿ ಆಯ್ಕೆಯ ಕುರಿತಾಗಿ ಬೇಸರಗೊಂಡ ರಾಬಿನ್‌, ಸ್ವಂತ ಪ್ರತಿಭೆಗಾಗಿ ಹುಡುಕಾಟ

ಹಾಕಿ ಆಯ್ಕೆಯ ಕುರಿತಾಗಿ ಬೇಸರಗೊಂಡ ರಾಬಿನ್‌, ಸ್ವಂತ ಪ್ರತಿಭೆಗಾಗಿ ಹುಡುಕಾಟ

ಅಂಡರ್-16 ಸಬ್ ಜೂನಿಯರ್ ಆಯ್ಕೆಗೆ ಹೋದಾಗ ಅಲ್ಲಿ ಆಟಗಾರರ ಆಯ್ಕೆ ರೀತಿಯನ್ನ ಕಂಡು ಬೇಸರಗೊಂಡೆ ಎಂದು ರಾಬಿನ್ ಹೇಳಿದ್ದಾರೆ.

"ಆ ದಿನ ಕೆಲವು ಆಟಗಾರರು ನನಗಿಂತ ಉತ್ತಮವಾಗಿದ್ದರೂ ಅವರನ್ನು ಆಯ್ಕೆ ಮಾಡದಿರುವುದು ನನಗೆ ತುಂಬಾ ಬೇಸರವಾಯಿತು. ನಾನು ಫುಲ್ ಬ್ಯಾಕ್ ಆಗಿ ಆಡುತ್ತಿದ್ದೆ ಮತ್ತು ನಾನು ಸ್ಟ್ಯಾಂಡ್-ಬೈ ಆಗಿ ಆಯ್ಕೆಯಾದೆ, ಆದರೆ ಈ ಆಟಗಾರರು ತುಂಬಾ ಪ್ರತಿಭಾವಂತರು ಎಂದು ನಾನು ಭಾವಿಸಿದೆ. ಆದರೆ, ಅವರು ಆಯ್ಕೆಯಾಗಲಿಲ್ಲ. ಆಗ ನನ್ನ ಪ್ರಯಾಣ ಸುಲಭ ಎಂದು ನಾನು ಅರಿತುಕೊಂಡೆ, "ಎಂದು ಅವರು ಹೇಳಿದರು.

ಹೀಗಾಗಿಯೇ ಮುಂದಿನ ದಿನಗಳಲ್ಲಿ ತಂದೆಯ ಬೆಂಬಲದಿಂದ ಬಂದವನು ಎಂದು ಕೇಳಲು ಇಷ್ಟವಿಲ್ಲದ ಕಾರಣ ಕ್ರಿಕೆಟ್ ಅನ್ನು ಆಯ್ದುಕೊಂಡೆ ಎಂದು ರಾಬಿನ್ ಉತ್ತಪ್ಪ ಹೇಳಿದ್ದಾರೆ.

IND vs WI: ಮೂರನೇ ಏಕದಿನ ಪಂದ್ಯದ ಪಿಚ್ ವರದಿ, ಸಂಭಾವ್ಯ ಆಡುವ ಬಳಗ ಹಾಗೂ ನೇರಪ್ರಸಾರದ ಮಾಹಿತಿ

Chahal ಅವರ ವಿಶೇಷ ಪೋಸ್‌ಗೆ ಕ್ರಿಕೆಟ್ ಅಭಿಮಾನಿಗಳೆಲ್ಲರೂ ಫಿದಾ | *Cricket | OneIndia Kannada
ಸ್ವಂತವಾದ ಬ್ರ್ಯಾಂಡ್ ಉಳಿಸಿಕೊಳ್ಳಬೇಕು ಎಂದು ಉತ್ತಪ್ಪ ನಿರ್ಧಾರ

ಸ್ವಂತವಾದ ಬ್ರ್ಯಾಂಡ್ ಉಳಿಸಿಕೊಳ್ಳಬೇಕು ಎಂದು ಉತ್ತಪ್ಪ ನಿರ್ಧಾರ

ಅಪ್ಪನ ಹೆಗಲ ಮೇಲೆ ಏರಿ ಅರ್ಹರಿಗೆ ಅನ್ಯಾಯ ಮಾಡುವುದಕ್ಕಿಂತ ಸ್ವಂತ ಕೆಲಸಗಳಿಂದಲೇ ತನ್ನ ಇಮೇಜ್ ಸ್ಥಾಪಿಸಿಕೊಳ್ಳಬೇಕೆಂದುಕೊಂಡವರು ಉತ್ತಪ್ಪ ನಿರ್ಧರಿಸಿದರು.

"ನಾನು ಸ್ವಂತವಾಗಿ ಏನನ್ನಾದರೂ ಮಾಡಲು ಬಯಸುತ್ತೇನೆ. ನಾನು ಹಾಕಿಯನ್ನು ಇಷ್ಟಪಟ್ಟೆ ಮತ್ತು ಆನಂದಿಸಿದೆ. ಏಕೆಂದರೆ ಇದು ಧೈರ್ಯ ಮತ್ತು ಪರಿಶ್ರಮದ ಆಟವಾಗಿದೆ ಆದರೆ ಮಾರ್ಗವು ಸುಲಭವಾಗಿದೆ ಎಂದು ನಾನು ಭಾವಿಸಿದೆ. ಹೀಗಾಗಿ ನಾನು ಯಶಸ್ವಿಯಾದರೂ ನನ್ನ ತಂದೆಯಿಂದಾಗಿ ಅದು ಸಂಭವಿಸಿದೆ ಎಂದು ಜನರು ನಂಬುತ್ತಾರೆ, " ಎಂದು 36 ವರ್ಷ ವಯಸ್ಸಿನ ರಾಬಿನ್ ಉತ್ತಪ್ಪ ಹೇಳಿದರು.

"ಆದ್ದರಿಂದ ನಾನು ಕ್ರಿಕೆಟ್‌ಗೆ ಮರಳಿದೆ, ನನ್ನ ತಂದೆಗೆ ಕ್ರಿಕೆಟ್‌ನೊಂದಿಗೆ ಯಾವುದೇ ಸಂಬಂಧವಿಲ್ಲದ ಕಾರಣ ನನ್ನ ಕಠಿಣ ಪರಿಶ್ರಮದಿಂದ ಯಶಸ್ವಿಯಾಗುವ ನಿರೀಕ್ಷೆಯಿತ್ತು" ಎಂದು ಅವರು ಹೇಳಿದರು.

ರಾಬಿನ್ ಉತ್ತಪ್ಪ 2014ರ ಐಪಿಎಲ್‌ ಸೀಸನ್‌ನಲ್ಲಿ ಆರೆಂಜ್ ಕ್ಯಾಪ್ ಗೆಲ್ಲುವ ಮೂಲಕ ಭರ್ಜರಿ ಪ್ರದರ್ಶನ ನೀಡಿದ್ದರು. ಕೊಲ್ಕತ್ತಾ ನೈಟ್‌ ರೈಡರ್ಸ್ ಪರ ಆಡಿದ್ದ ರಾಬಿನ್‌ 16 ಇನ್ನಿಂಗ್ಸ್‌ನಲ್ಲಿ 44ರ ಬ್ಯಾಟಿಂಗ್ ಸರಾಸರಿ ಮತ್ತು 137.78ರ ಸ್ಟ್ರೈಕ್‌ರೇಟ್‌ನಲ್ಲಿ 660 ರನ್ ಕಲೆಹಾಕಿದರು.

Story first published: Tuesday, July 26, 2022, 18:06 [IST]
Other articles published on Jul 26, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+