For Quick Alerts
ALLOW NOTIFICATIONS  
For Daily Alerts
 

ವಿಂಡೀಸ್ ವಿರುದ್ಧ ಭಾರತಕ್ಕೆ ಜಯ: ಟಿ20 ಕ್ರಿಕೆಟ್‌ನಲ್ಲಿ ಟೀಂ ಇಂಡಿಯಾದ ದಾಖಲೆ

Team india

ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಸರಣಿ ಜೊತೆಗೆ ಟಿ20 ಸರಣಿಯನ್ನೂ ವೈಟ್‌ ವಾಶ್ ಮಾಡಿದ ಟೀಂ ಇಂಡಿಯಾ ಟಿ20 ಕ್ರಿಕೆಟ್‌ನಲ್ಲಿ ದಾಖಲೆಯ ಜಯ ಸಾಧಿಸಿದೆ. ವೆಸ್ಟ್ ಇಂಡೀಸ್ ತಂಡವನ್ನ ಮೂರು ಟಿ20 ಪಂದ್ಯದಲ್ಲೂ ಸೋಲಿಸಿದ ಭಾರತ ಸತತ 9ನೇ ಟಿ20 ಪಂದ್ಯವನ್ನ ಜಯಿಸಿದ ಸಾಧನೆ ಮಾಡಿದೆ.

ಈ ಹಿಂದೆ ಭಾರತ 2022ರ ಜನವರಿಯಿಂದ ಡಿಸೆಂಬರ್‌ವರೆಗೆ 9 ಟಿ20 ಪಂದ್ಯಗಳನ್ನ ಗೆದ್ದಿತ್ತು. ಆದ್ರೀಗ ಮತ್ತೊಮ್ಮೆ ಆ ಸಾಧನೆ ಮಾಡಿದ್ದು 2021 ನವೆಂಬರ್‌ನಿಂದ ಪ್ರಸ್ತುತ ಫೆಬ್ರವರಿ 2022ರ ಅವಧಿಯಲ್ಲಿ ಭಾರತ 9 ಟಿ20 ಪಂದ್ಯವನ್ನ ಸತತವಾಗಿ ಗೆದ್ದು ತೋರಿಸಿದೆ. ಇದಲ್ಲದೆ ಭಾರತ ಟಿ20 ಕ್ರಿಕೆಟ್‌ನಲ್ಲಿ ನಂಬರ್ 1 ಸ್ಥಾನವನ್ನ ಪಡೆದಿದೆ.

ಅದ್ರಲ್ಲೂ ಭಾರತ ವೆಸ್ಟ್ ಇಂಡೀಸ್‌ ವಿರುದ್ಧ ಸತತ 4 ಟಿ20 ಸರಣಿಯನ್ನ ಗೆದ್ದು ತನ್ನದಾಗಿಸಿಕೊಂಡಿದೆ. ಇದಕ್ಕೂ ಮೊದಲು ಭಾರತ ಯಾವ ಟಿ20 ಸರಣಿಯಲ್ಲಿ ಎಷ್ಟು ಅಂತರದಲ್ಲಿ ಬಲಿಷ್ಠ ವಿಂಡೀಸ್ ತಂಡವನ್ನ ಮಣಿಸಿದೆ ಎಂಬುದನ್ನ ಈ ಕೆಳಗೆ ತಿಳಿಯಿರಿ

2018 (ಭಾರತ): ಟೀಂ ಇಂಡಿಯಾಗೆ 3-0 ಅಂತರದ ಸರಣಿ ಜಯ
2019 (ವೆಸ್ಟ್ ಇಂಡೀಸ್): ಟೀಂ ಇಂಡಿಯಾಗೆ 3-0 ಅಂತರದ ಸರಣಿ ಜಯ
2019 (ಭಾರತ): ಟೀಂ ಇಂಡಿಯಾಗೆ 2-1 ಅಂತರದ ಸರಣಿ ಜಯ
2022 (ಭಾರತ): ಟೀಂ ಇಂಡಿಯಾಗೆ 3-0 ಅಂತರದ ಸರಣಿ ಜಯ

ಟಿ20 ಕ್ರಿಕೆಟ್‌ನಲ್ಲಿ ಎರಡು ಬಾರಿ ಟಿ20 ವಿಶ್ವಕಪ್‌ ಗೆದ್ದಿರುವ ವೆಸ್ಟ್ ಇಂಡೀಸ್ ತಂಡವು ಚುಟುಕು ಕ್ರಿಕೆಟ್‌ನಲ್ಲಿ ಅತ್ಯಂತ ಬಲಿಷ್ಠ ತಂಡವಾಗಿದೆ. ಆದ್ರೆ ಆಶ್ಚರ್ಯ ಏನಂದ್ರೆ ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸೂಪರ್ ಓವರ್ ಸೇರಿದಂತೆ ಅತಿ ಹೆಚ್ಚು ಟಿ20 ಪಂದ್ಯ ಸೋತಿರುವ ತಂಡ ಅಂದ್ರೆ ಅದು ವೆಸ್ಟ್ ಇಂಡೀಸ್ ಆಗಿದೆ.

ವೆಸ್ಟ್‌ ಇಂಡೀಸ್‌ 83 ಪಂದ್ಯಗಳಲ್ಲಿ ಸೋಲು
ಶ್ರೀಲಂಕಾ 82 ಪಂದ್ಯಗಳಲ್ಲಿ ಸೋಲು
ಬಾಂಗ್ಲಾದೇಶ 78 ಪಂದ್ಯಗಳಲ್ಲಿ ಸೋಲು
ನ್ಯೂಜಿಲೆಂಡ್ 76 ಪಂದ್ಯಗಳಲ್ಲಿ ಸೋಲು

Story first published: Monday, February 21, 2022, 10:00 [IST]
Other articles published on Feb 21, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+