ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ವೆಸ್ಟ್‌ ಇಂಡೀಸ್ 3ನೇ ಟಿ20 ಪಂದ್ಯ: ಟಾಸ್ ಗೆದ್ದ ಭಾರತ ಬೌಲಿಂಗ್ ಆಯ್ಕೆ LIVE

Team india

ಭಾರತ-ವೆಸ್ಟ್ ಇಂಡೀಸ್ ನಡುವಿನ ಮೂರನೇ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬೌಲಿಂಗ್ ಆಯ್ದುಕೊಂಡಿದೆ. ಈ ಮೂಲಕ ಸೈಂಟ್ ಕಿಟ್ಸ್‌ನ ವಾರ್ನರ್‌ ಪಾರ್ಕ್‌ನಲ್ಲಿ ನಡೆಯುತ್ತಿರುವ ಮೂರನೇ ಟಿ20ಯಲ್ಲಿ ಆತಿಥೇಯ ವಿಂಡೀಸ್ ಮೊದಲು ಬ್ಯಾಟಿಂಗ್ ಮಾಡಿದೆ.

ಟಾಸ್‌ ಗೆದ್ದಿರುವ ಭಾರತದಲ್ಲಿ ಕೇವಲ ಒಂದು ಬದಲಾವಣೆ ಆಗಿದೆ. ಆಲ್‌ರೌಂಡರ್ ರವೀಂದ್ರ ಜಡೇಜಾ ಬದಲಿಗೆ ದೀಪಕ್ ಹೂಡಾಗೆ ಸ್ಥಾನ ನೀಡಲಾಗಿದ್ದು, ಉಳಿದಂತೆ ಕಳೆದ ಪಂದ್ಯದಲ್ಲಿ ಆಡಿದ ಆಟಗಾರರೇ ಸ್ಥಾನ ಪಡೆದಿದ್ದಾರೆ.

ಇನ್ನೂ ವೆಸ್ಟ್‌ ಇಂಡೀಸ್ ಪರ ನಾಯಕ ನಿಕೋಲಸ್ ಪೂರನ್ ಕೇವಲ ಒಂದು ಬದಲಾವಣೆಗೆ ಮುಂದಾಗಿದ್ದಾರೆ. ಆಲ್‌ರೌಂಡರ್ ಓಡಿಯನ್ ಸ್ಮಿತ್ ಬದಲು ಡೊಮಿನಿಕ್ ಗ್ರೇಸ್‌ ಸ್ಥಾನ ಪಡೆದಿದ್ದಾರೆ.

ಐದು ಪಂದ್ಯಗಳ ಟಿ20 ಸರಣಿಯಲ್ಲಿ 1-1ರಿಂದ ಸಮಬಲ ಸಾಧಿಸಿರುವ ಉಭಯ ತಂಡಗಳು ಈ ಪಂದ್ಯದಲ್ಲಿ ಗೆಲ್ಲುವ ಮೂಲಕ ಸರಣಿಯಲ್ಲಿ ಮುನ್ನಡೆ ಸಾಧಿಸುವ ಲೆಕ್ಕಾಚಾರ ಹಾಕಿಕೊಂಡಿವೆ. ಭಾರತ-ವೆಸ್ಟ್ ಇಂಡೀಸ್ ಮೂರನೇ ಟಿ20 ಪಂದ್ಯದ LIVE SCORE ಈ ಕೆಳಗಿದೆ.

1
54164
ಟೀಂ ಇಂಡಿಯಾ ಪ್ಲೇಯಿಂಗ್ 11

ಟೀಂ ಇಂಡಿಯಾ ಪ್ಲೇಯಿಂಗ್ 11

ರೋಹಿತ್ ಶರ್ಮಾ(ನಾಯಕ), ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್(ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ದೀಪಕ್ ಹೂಡಾ, ದಿನೇಶ್ ಕಾರ್ತಿಕ್, ರವಿಚಂದ್ರನ್ ಅಶ್ವಿನ್, ಭುವನೇಶ್ವರ್ ಕುಮಾರ್, ಅವೇಶ್ ಖಾನ್, ಅರ್ಷದೀಪ್ ಸಿಂಗ್

ಬೆಂಚ್: ರವಿ ಬಿಷ್ಣೋಯ್, ಇಶಾನ್ ಕಿಶನ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಸಂಜು ಸ್ಯಾಮ್ಸನ್, ಹರ್ಷಲ್ ಪಟೇಲ್, ರವೀಂದ್ರ ಜಡೇಜಾ

ಕಾಮನ್‌ವೆಲ್ತ್‌ ಗೇಮ್ಸ್‌ 2022: ಟೇಬಲ್‌ ಟೆನಿಸ್‌ನಲ್ಲಿ ಚಿನ್ನದ ಪದಕ ಗೆದ್ದ ಭಾರತದ ಪುರುಷರ ತಂಡ

ವೆಸ್ಟ್ ಇಂಡೀಸ್ ಪ್ಲೇಯಿಂಗ್ 11

ವೆಸ್ಟ್ ಇಂಡೀಸ್ ಪ್ಲೇಯಿಂಗ್ 11

ಬ್ರಾಂಡನ್ ಕಿಂಗ್, ಕೈಲ್ ಮೇಯರ್ಸ್, ನಿಕೋಲಸ್ ಪೂರನ್ (ನಾಯಕ), ಶಿಮ್ರಾನ್ ಹೆಟ್ಮೆಯರ್, ಡೆವೊನ್ ಥಾಮಸ್ (ವಿಕೆಟ್ ಕೀಪರ್), ರೋವ್ಮನ್ ಪೊವೆಲ್, ಡೊಮಿನಿಕ್ ಡ್ರೇಕ್ಸ್, ಜೇಸನ್ ಹೋಲ್ಡರ್, ಅಕೆಲ್ ಹೋಸೇನ್, ಅಲ್ಜಾರಿ ಜೋಸೆಫ್, ಒಬೆಡ್ ಮೆಕಾಯ್

ಬೆಂಚ್: ಓಡಿಯನ್ ಸ್ಮಿತ್, ಕೀಮೋ ಪಾಲ್, ಶಮರ್ ಬ್ರೂಕ್ಸ್, ರೊಮಾರಿಯೋ ಶೆಫರ್ಡ್, ಹೇಡನ್ ವಾಲ್ಷ್

ಆತನ ಆತ್ಮವಿಶ್ವಾಸದ ಜೊತೆ ಯಾಕೆ ಚೆಲ್ಲಾಟವಾಡುತ್ತಿದ್ದೀರಿ?: ಆಕಾಶ್ ಚೋಪ್ರ

ಪಿಚ್ ರಿಪೋರ್ಟ್‌ ಮತ್ತು ಹವಾಮಾನ

ಪಿಚ್ ರಿಪೋರ್ಟ್‌ ಮತ್ತು ಹವಾಮಾನ

ಸೇಂಟ್ ಕಿಟ್ಸ್‌ನ ವಾರ್ನರ್‌ ಪಾರ್ಕ್‌ ಪಿಚ್‌ ಗಮನಿಸುವುದಾದ್ರೆ, ಇದು ಬ್ಯಾಟ್ಸ್‌ಮನ್ ಮತ್ತು ಬೌಲರ್‌ ಇಬ್ಬರಿಗೂ ಅನುಕೂಲವಾಗಿದೆ. ಸ್ಪಿನ್ನರ್‌ಗಳು ಮಧ್ಯಮ ಓವರ್‌ಗಳಲ್ಲಿ ತಂಡಕ್ಕೆ ನೆರವಾಗಬಲ್ಲರು. ಮೊದಲ ಇನ್ನಿಂಗ್ಸ್‌ಗೆ ಹೋಲಿಸಿದ್ರೆ ಚೇಸಿಂಗ್ ಮಾಡುವುದು ಉತ್ತಮ ಆಯ್ಕೆಯಾಗಿದೆ. ಏಕೆಂದರೆ ಎರಡನೇ ಬ್ಯಾಟಿಂಗ್ ಮಾಡಿದ ತಂಡವು ಶೇಕಡಾ 60ರ ಗೆಲುವಿನ ಸರಾಸರಿ ಹೊಂದಿದೆ. ಮೊದಲ ಇನ್ನಿಂಗ್ಸ್‌ ಸರಾಸರಿ ಸ್ಕೋರ್ 143ರನ್ ಆಗಿದೆ.

ಇಲ್ಲಿನ ಹವಾಮಾನ ಪಂದ್ಯದ ವೇಳೆಗೆ 27 ಡಿಗ್ರಿ ಸೆಲ್ಸಿಯಸ್‌ನಷ್ಟಿರಲಿದ್ದು, ಶೇಕಡಾ 79ರಷ್ಟು ಹ್ಯುಮಿಡಿಟಿ ಮತ್ತು 6 km/hr ವೇಗದಲ್ಲಿ ಗಾಳಿ ಬೀಸಲಿದೆ. ಮಳೆ ಬರುವ ಸಾಧ್ಯತೆ ಇಲ್ಲದಿರುವುದು ಉಭಯ ತಂಡದ ಕ್ರಿಕೆಟ್ ಅಭಿಮಾನಿಗಳಿಗೆ ಖುಷಿ ತಂದಿದೆ.

Story first published: Tuesday, August 2, 2022, 21:31 [IST]
Other articles published on Aug 2, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X