IND vs WI 3rd T20: ವೆಸ್ಟ್ ಇಂಡೀಸ್ ಗೆಲುವಿಗೆ 185 ರನ್ ಗುರಿ

ಕೋಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ನಡೆಯುತ್ತಿರುವ ಭಾರತ-ವೆಸ್ಟ್ ಇಂಡೀಸ್ ನಡುವಿನ 3ನೇ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಟೀಂ ಇಂಡಿಯಾ, ಪ್ರವಾಸಿ ವೆಸ್ಟ್ ಇಂಡೀಸ್ ತಂಡಕ್ಕೆ 185 ರನ್‌ಗಳ ಗುರಿ ನೀಡಿದೆ.
ತಂಡದಲ್ಲಿ ನಾಲ್ಕು ಬದಲಾವಣೆಯೊಂದಿಗೆ ಕಣಕ್ಕಿಳಿದಿದ್ದ ಟೀಂ ಇಂಡಿಯಾ ಉತ್ತಮ ಆರಂಭ ಪಡೆಯುವಲ್ಲಿ ವಿಫಲಗೊಂಡಿತು. ಕಳೆದ ಐಪಿಎಲ್ ಸೀಸನ್‌ನ ಆರೆಂಜ್ ಕ್ಯಾಪ್ ವಿನ್ನರ್ ರುತುರಾಜ್ ಗಾಯಕ್ವಾಡ್ ತನ್ನ ಸ್ವಾಭಾವಿಕ ಆಟವನ್ನ ಆಡದೇ ಕೆಟ್ಟ ಹೊಡೆತಕ್ಕೆ ಕೈ ಹಾಕಿದ ಪರಿಣಾಮ ಆಲ್‌ರೌಂಡರ್ ಜೇಸನ್ ಹೋಲ್ಡರ್‌ಗೆ 4ರನ್‌ಗೆ ವಿಕೆಟ್ ಒಪ್ಪಿಸಿದ್ರು.
ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದ ಶ್ರೇಯಸ್ ಅಯ್ಯರ್ ಆರಂಭದಿಂದಲೇ ಅಗ್ರೆಸ್ಸಿವ್ ಬ್ಯಾಟಿಂಗ್ ಮೂಲಕ ದೊಡ್ಡ ಮೊತ್ತ ಕಲೆಹಾಕುವ ಮುನ್ಸೂಚನೆ ನೀಡಿದ್ರು. 16 ಎಸೆತಗಳಲ್ಲಿ ನಾಲ್ಕು ಬೌಂಡರಿ ಸಹಿತ 25 ರನ್ ಕಲೆಹಾಕಿದ ಅಯ್ಯರ್, ಹೈಡನ್ ವಾಲ್ಷ್ ಸ್ಪಿನ್ ದಾಳಿಯನ್ನ ಅರಿಯದೇ ಜೇಸನ್ ಹೋಲ್ಡರ್‌ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದ್ರು.

ಎಡವಿದ ರುತುರಾಜ್, ವಿಫಲಗೊಂಡ ಇಶಾನ್ ಕಿಶನ್
ಮೊದಲೆರಡು ಪಂದ್ಯದಲ್ಲಿ ರನ್‌ಗಳಿಸಲು ಪರದಾಡುತ್ತಿದ ಇಶಾನ್ ಕಿಶನ್ ಈ ಬಾರಿಯು ಅರ್ಧಶತಕ ಗಡಿ ಮುಟ್ಟುವಲ್ಲಿ ವಿಫಲಗೊಂಡರು. 31 ಎಸೆತಗಳಲ್ಲಿ 34 ರನ್ ಕಲೆಹಾಕಿದ್ದ ಇಶಾನ್ ಸ್ಪಿನ್ನರ್ ರೋಸ್ಟನ್ ಚೇಸ್ ಬೌಲಿಂಗ್‌ನಲ್ಲಿ ಬೌಲ್ಡ್ ಆದ್ರು.
ಇನ್ನು ಯುವ ಆಟಗಾರ ರುತುರಾಜ್‌ಗೆ ಓಪನಿಂಗ್ ಬ್ಯಾಟಿಂಗ್ ಬಿಟ್ಟುಕೊಟ್ಟು ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದ ರೋಹಿತ್ ಶರ್ಮಾ ಲಯ ಕಂಡುಕೊಳ್ಳುವುದರಷ್ಟರಲ್ಲಿ ವಿಕೆಟ್ ಒಪ್ಪಿಸಿದ್ರು. ಅತ್ಯಂತ ತಾಳ್ಮೆಯಿಂದ ಬ್ಯಾಟ್ ಮಾಡುತ್ತಿದ್ದ ರೋಹಿತ್ 15 ಎಸೆತಗಳಲ್ಲಿ ಕೇವಲ 7ರನ್‌ಗಳಿಸಿ ನಿರಾಸೆ ಮೂಡಿಸಿದ್ರು. ಡೊಮಿನಿಕ್ ಡ್ರೇಕ್ಸ್ ಬೌಲಿಂಗ್‌ನಲ್ಲಿ ಮುನ್ನುಗ್ಗಿ ಸಿಕ್ಸರ್ ಸಿಡಿಸಲು ಹೋಗಿ ಕ್ಲೀನ್ ಬೌಲ್ಡ್ ಆದರು.

ಸೂರ್ಯಕುಮಾರ್ ಅಬ್ಬರ, ವೆಂಕಟೇಶ್ ಅಯ್ಯರ್ ಸೊಗಸಾದ ಬ್ಯಾಟಿಂಗ್
93 ರನ್‌ಗೆ 4 ವಿಕೆಟ್ ಕಳೆದುಕೊಂಡಿದ್ದ ಭಾರತಕ್ಕೆ ಭಾರತದ ಮಿಸ್ಟರ್ 360 ಸೂರ್ಯಕುಮಾರ್ ಯಾದವ್ ಮತ್ತು ಯುವ ಆಲ್‌ರೌಂಡರ್ ವೆಂಕಟೇಶ್ ಅಯ್ಯರ್ ಸಾಥ್ ನೀಡಿದರು. ಐದನೇ ವಿಕೆಟ್‌ಗೆ ಬೊಂಬಾಟ್ ಪ್ರದರ್ಶನ ನೀಡಿದ ಈ ಜೋಡಿ ಭಾರತದ ಮೊತ್ತ 180ರ ಗಡಿ ದಾಟುವಲ್ಲಿ ನೆರವಾದ್ರು.
ಅಬ್ಬರದ ಬ್ಯಾಟಿಂಗ್ ಮೂಲಕ 7 ಅಮೋಘ ಸಿಕ್ಸರ್ ಮತ್ತು ಒಂದು ಬೌಂಡರಿಯೊಂದಿಗೆ 31 ಎಸೆತದಲ್ಲಿ 65 ರನ್ ಕಲೆಹಾಕಿದ್ರು. 209.68 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ಬೀಸಿದ ಸೂರ್ಯಕುಮಾರ್ ಕಲಾತ್ಮಕ ಹಾಗೂ ವಿಭಿನ್ನ ಶೈಲಿಯ ಬ್ಯಾಟಿಂಗ್ ಮೂಲಕ ಕೋಲ್ಕತ್ತಾದ ಸ್ಟೇಡಿಯಂನಲ್ಲಿ ನೆರೆದಿದ್ದ ಅಭಿಮಾನಿಗಳನ್ನ ರಂಜಿಸಿದರು. ಟಿ20 ಕ್ರಿಕೆಟ್‌ನಲ್ಲಿ ನಾಲ್ಕನೇ ಅರ್ಧಶತಕ ದಾಖಲಿಸಿ ಮಿಂಚು ಹರಿಸಿದರು.
ಸೂರ್ಯಕುಮಾರ್‌ಗೆ ಉತ್ತಮ ಸಾಥ್ ಕೊಟ್ಟ ವೆಂಕಟೇಶ್ ಅಯ್ಯರ್ 19 ಎಸೆತಗಳಲ್ಲಿ 35 ರನ್ ಸಿಡಿಸಿ ಮಿಂಚಿದ್ರು. 184.21ರ ಸ್ಟ್ರೈಕ್‌ರೇಟ್‌ನಲ್ಲಿ ಆಡಿದ ಸೂರ್ಯಕುಮಾರ್ ಇನ್ನಿಂಗ್ಸ್‌ನಲ್ಲಿ 4 ಬೌಂಡರಿ ಮತ್ತು 2 ಭರ್ಜರಿ ಸಿಕ್ಸರ್‌ಗಳಿದ್ದವು.
ರಣಜಿ ಕ್ರಿಕೆಟ್: ಕರ್ನಾಟಕ vs ರೈಲ್ವೇಸ್ ಪಂದ್ಯ ಡ್ರಾನಲ್ಲಿ ಅಂತ್ಯ, ಮನೀಷ್ ಪಾಂಡೆ ಪಂದ್ಯ ಪುರುಷೋತ್ತಮ

ಡೆತ್ ಓವರ್‌ಗಳಲ್ಲಿ ಅತಿ ಹೆಚ್ಚು ರನ್ ಕಲೆಹಾಕಿದ ಭಾರತ
16 ರಿಂದ 20 ಓವರ್‌ಗಳಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಸೂರ್ಯಕುಮಾರ್ ಮತ್ತು ವೆಂಕಟೇಶ್ ಅಯ್ಯರ್ ವಿಂಡೀಸ್ ಬೌಲರ್‌ಗಳನ್ನ ಧೂಳೀಪಟ ಮಾಡಿದ್ದಲ್ಲದೆ ಡೆತ್ ಓವರ್‌ಗಳಲ್ಲಿ ಭಾರತದ ಪರ ದಾಖಲೆಯ ರನ್ ಕಲೆಹಾಕಿದ್ರು. ಭಾರತ ಕೊನೆಯ ಐದು ಓವರ್‌ಗಳಲ್ಲಿ 86 ರನ್ ಕಲೆಹಾಕಿದ್ದು, ಅಂತರಾಷ್ಟ್ರೀಯ ಟಿ20 ಪಂದ್ಯದಲ್ಲಿ ಗರಿಷ್ಠ ಡೆತ್ ಓವರ್ ರನ್ ಇದಾಗಿದೆ.
ಅಂತಿಮವಾಗಿ ನಿಗದಿತ 20 ಓವರ್‌ಗಳಲ್ಲಿ ಭಾರತ 5 ವಿಕೆಟ್ ನಷ್ಟಕ್ಕೆ 184 ರನ್ ಕಲೆಹಾಕಿದ್ದು , ವಿಂಡೀಸ್‌ಗೆ 185ರನ್ ಟಾರ್ಗೆಟ್ ನೀಡಿದೆ. ವಿಂಡೀಸ್ ಪರ ಐವರು ಬೌಲರ್‌ಗಳು ತಲಾ ಒಂದು ವಿಕೆಟ್ ಪಡೆದಿದ್ದು ವಿಶೇಷ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications