IND vs WI: ಕೊನೆಯ ಬಾರಿಯ ಸೆಣಸಾಟದಲ್ಲಿ ಫಲಿತಾಂಶ ಏನಾಗಿತ್ತು; ಅಂಕಿ-ಅಂಶಗಳೇನು?

ಭಾರತ ಈ ವರ್ಷ ಎರಡನೇ ಬಾರಿಗೆ ವೆಸ್ಟ್ ಇಂಡೀಸ್ ವಿರುದ್ಧ ಮೂರು ಪಂದ್ಯಗಳ ಏಕದಿನ ಮತ್ತು 5 ಟಿ20 ಪಂದ್ಯಗಳ ಸರಣಿಯಲ್ಲಿ ಸೆಣಸಾಡಲಿದೆ. 2022ರ ಆರಂಭದಲ್ಲಿ ವೆಸ್ಟ್ ಇಂಡೀಸ್ ಸೀಮಿತ-ಓವರ್‌ಗಳ ಪಂದ್ಯಗಳ ಸರಣಿಗಾಗಿ ಭಾರತಕ್ಕೆ ಪ್ರವಾಸ ಕೈಗೊಂಡಿತ್ತು ಮತ್ತು ಆತಿಥೇಯ ಭಾರತವು ಕೆಲವು ಅದ್ಭುತ ಪ್ರದರ್ಶನಗಳೊಂದಿಗೆ ಹೆಚ್ಚು ಪ್ರಬಲ ತಂಡವಾಗಿತ್ತು.
ಭಾರತ ಜುಲೈ 22 ರಿಂದ 3 ಏಕದಿನ ಮತ್ತು 5 ಟಿ20 ಪಂದ್ಯಗಳನ್ನು ಆಡಲಿದೆ ಮತ್ತು ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ನಾಯಕನಾಗಿ ನೇಮಕಗೊಂಡ ಶಿಖರ್ ಧವನ್ ಮೇಲೆ ಎಲ್ಲರ ಕಣ್ಣುಗಳು ಇರಲಿವೆ. ವಿರಾಟ್ ಕೊಹ್ಲಿಗೂ ವಿಶ್ರಾಂತಿ ನೀಡಲಾಗಿದ್ದು, ಹೀಗಾಗಿ ಸೂರ್ಯಕುಮಾರ್ ಯಾದವ್ ಮತ್ತು ಶ್ರೇಯಸ್ ಅಯ್ಯರ್ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಮೇಲೆ ಗಮನಹರಿಸಲಿದ್ದಾರೆ.
ನಂತರ ಸಂಜು ಸ್ಯಾಮ್ಸನ್ ಮತ್ತು ಶುಭಮನ್ ಗಿಲ್ ಅವರು ಶಿಖರ್ ಧವನ್ ಜೊತೆಗೆ ಆರಂಭಿಕ ಸ್ಲಾಟ್‌ನಲ್ಲಿ ಪ್ರಭಾವ ಬೀರುವ ಭರವಸೆ ಹೊಂದಿದ್ದಾರೆ. ಐರ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಶತಕ ಸಿಡಿಸಿದ ದೀಪಕ್ ಹೂಡಾ ಏಕದಿನ ಮಾದರಿಯಲ್ಲೂ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಲು ಉತ್ಸುಕರಾಗಿದ್ದಾರೆ.

ಬೌಲಿಂಗ್ ಬೆಂಚ್ ಸಾಮರ್ಥ್ಯವನ್ನು ಪರೀಕ್ಷಿಸುವ ಸಮಯ
ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿ ಅನುಪಸ್ಥಿತಿಯಲ್ಲಿ ಭಾರತವು ತಮ್ಮ ಬೌಲಿಂಗ್ ಬೆಂಚ್ ಸಾಮರ್ಥ್ಯವನ್ನು ಪರೀಕ್ಷಿಸಲು ಬಯಸಿದ್ದು, ಯುವ ವೇಗಿ ಅವೇಶ್ ಖಾನ್‌ರಂತೆ ಅರ್ಶ್‌ದೀಪ್ ಸಿಂಗ್ ರೋಚಕ ನಿರೀಕ್ಷೆಯಲ್ಲಿದ್ದಾರೆ. ಮೊಹಮ್ಮದ್ ಸಿರಾಜ್ ಅವರು ಇಂಗ್ಲೆಂಡ್ ವಿರುದ್ಧದ ಮೂರನೇ ಮತ್ತು ಅಂತಿಮ ಏಕದಿನದಲ್ಲಿ ಜಾನಿ ಬೈರ್‌ಸ್ಟೋ ಮತ್ತು ಜೋ ರೂಟ್ ಅವರ ಆರಂಭಿಕ ವಿಕೆಟ್‌ಗಳೊಂದಿಗೆ ಪ್ರಬಲನಾಗಿದ್ದೇನೆ ಎಂಬುದನ್ನು ತೋರಿಸಿದರು.
ವೆಸ್ಟ್ ಇಂಡೀಸ್ ಒಂದು ಕಾಲದಲ್ಲಿ ವಿಶ್ವ ಕ್ರಿಕೆಟ್‌ನ ದೈತ್ಯ ಶಕ್ತಿಯಾಗಿತ್ತು. ಆದರೆ ಭಾರತವು ವೆಸ್ಟ್ ಇಂಡೀಸ್ ವಿರುದ್ಧ ಹೆಚ್ಚು ಪ್ರಾಬಲ್ಯ ಸಾಧಿಸಿದೆ ಮತ್ತು ಮುಂದಿನ ವರ್ಷ ಏಕದಿನ ವಿಶ್ವಕಪ್ ಆತಿಥ್ಯ ವಹಿಸಲಿದೆ. ಶಿಖರ್ ಧವನ್ ಮತ್ತು ಅವರ ತಂಡವು ವಿಶ್ವ ಚಾಂಪಿಯನ್ ಇಂಗ್ಲೆಂಡ್ ವಿರುದ್ಧ ಅವರದೇ ಅಂಗಳದಲ್ಲಿ ಐತಿಹಾಸಿಕ ವಿಜಯದ ನಂತರ ತಮ್ಮ ಪ್ರಾಬಲ್ಯವನ್ನು ಮುಂದುವರೆಸಲು ಬಯಸುತ್ತಾರೆ.

2022ರ ಆರಂಭದಲ್ಲಿ ವೆಸ್ಟ್ ಇಂಡೀಸ್ ಭಾರತಕ್ಕೆ ಭೇಟಿ ನೀಡಿತ್ತು
2022ರ ಆರಂಭದಲ್ಲಿ ವೆಸ್ಟ್ ಇಂಡೀಸ್ ಭಾರತಕ್ಕೆ ಭೇಟಿ ನೀಡಿದಾಗ, ಶಿಖರ್ ಧವನ್ ಸಂಪೂರ್ಣವಾಗಿ ಹೊರಗುಳಿದಿದ್ದರು. ಮೊದಲ ಪಂದ್ಯದಲ್ಲಿ ಯುಜ್ವೇಂದ್ರ ಚಾಹಲ್ 49 ರನ್‌ಗಳಿಗೆ 4 ವಿಕೆಟ್‌ಗಳನ್ನು ಪಡೆದುಕೊಂಡು ವೆಸ್ಟ್ ಇಂಡೀಸ್ ಕಡಿಮೆ ಮೊತ್ತಕ್ಕೆ ಆಲೌಟ್ ಆಗಲು ಕಾರಣರಾಗಿದ್ದರು ಮತ್ತು ಭಾರತವು 177 ರನ್ ಗುರಿಯನ್ನು 6 ವಿಕೆಟ್ ಮತ್ತು 132 ಎಸೆತಗಳು ಬಾಕಿ ಇರುವಂತೆಯೇ ಬೆನ್ನಟ್ಟಿತು.
ರೋಹಿತ್ ಶರ್ಮಾ ಇಂಗ್ಲೆಂಡ್ ವಿರುದ್ಧದ ಸರಣಿಯ ಮೊದಲ ಪಂದ್ಯದಂತೆಯೇ 51 ಎಸೆತಗಳಲ್ಲಿ 60 ರನ್ ಗಳಿಸಿ ಭಾರತಕ್ಕೆ ಗೆಲುವನ್ನು ತಂದುಕೊಟ್ಟಿದ್ದರು.

ಪ್ರಸಿದ್ಧ್ ಕೃಷ್ಣ 9 ಓವರ್‌ಗಳಲ್ಲಿ 12 ರನ್‌ಗಳಿಗೆ 4 ವಿಕೆಟ್
ವೆಸ್ಟ್ ಇಂಡೀಸ್ ಮುಂದಿನ ಪಂದ್ಯದಲ್ಲಿ ಬಲಿಷ್ಠವಾಗಿ ಮರಳಲು ಪ್ರಯತ್ನಿಸಿತು. ಅಲ್ಜಾರಿ ಜೋಸೆಫ್ ಮತ್ತು ಓಡಿಯನ್ ಸ್ಮಿತ್ ತಲಾ ಎರಡು ವಿಕೆಟ್‌ಗಳನ್ನು ಕಬಳಿಸುವ ಮೂಲಕ ಭಾರತವನ್ನು ತಮ್ಮ 50 ಓವರ್‌ಗಳಲ್ಲಿ 9 ವಿಕೆಟ್‌ಗೆ 237 ರನ್‌ಗಳಿಗೆ ನಿರ್ಬಂಧಿಸಿದ್ದರು. ಸೂರ್ಯಕಿಮಾರ್ ಯಾದವ್ (64) ಮತ್ತು ಕೆಎಲ್ ರಾಹುಲ್ (49) ಮಧ್ಯಮ ಕ್ರಮಾಂಕದಲ್ಲಿ ಭಾರತಕ್ಕೆ ಆಸರೆಯಾಗಿದ್ದರು. ಬೌಲಿಂಗ್‌ನಲ್ಲಿ ಪ್ರಸಿದ್ಧ್ ಕೃಷ್ಣ ತಮ್ಮ 9 ಓವರ್‌ಗಳ ಕೋಟಾದಲ್ಲಿ 12 ರನ್‌ಗಳಿಗೆ 4 ವಿಕೆಟ್ ಗಳಿಸಿ ವೆಸ್ಟ್ ಇಂಡೀಸ್ 193 ರನ್‌ಗಳಿಗೆ ಆಲೌಟ್ ಆಗಲು ಕಾರಣರಾದರು.
ನಂತರ ಮೂರನೇ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ 80 ಮತ್ತು ರಿಷಭ್ ಪಂತ್ 54 ಎಸೆತಗಳಲ್ಲಿ 56 ರನ್ ಸಹಾಯದಿಂದ ಭಾರತ 265 ರನ್ ಗಳಿಸಿತ್ತು. ಬೌಲಿಂಗ್‌ನಲ್ಲಿ ಮೊಹಮ್ಮದ್ ಸಿರಾಜ್ ಮತ್ತು ಪ್ರಸಿದ್ಧ್ ಕೃಷ್ಣ ತಲಾ ಮೂರು ವಿಕೆಟ್‌ಗಳನ್ನು ಕಬಳಿಸಿದ್ದರು. ಭಾರತ 96 ರನ್‌ಗಳ ಗೆಲುವನ್ನು ಕಂಡಿತ್ತು ಮತ್ತು ಸರಣಿಯನ್ನು 3-0 ಅಂತರದಲ್ಲಿ ವೈಟ್‌ವಾಶ್ ಮಾಡಿತ್ತು.

2019ರ ನಂತರ 9 ಏಕದಿನ ಪಂದ್ಯಗಳಲ್ಲಿ ಸೆಣಸಾಡಿವೆ
2019ರ ವಿಶ್ವಕಪ್‌ನ ಅಂತ್ಯದಿಂದ ಭಾರತವು ವೆಸ್ಟ್ ಇಂಡೀಸ್ ವಿರುದ್ಧ 9 ಏಕದಿನ ಪಂದ್ಯಗಳಲ್ಲಿ ಆಡಿದೆ. ಅದರಲ್ಲಿ 7 ಗೆದ್ದಿದೆ, 1ರಲ್ಲಿ ಸೋತಿದೆ ಮತ್ತು 1 ಪಂದ್ಯ ಮಳೆಯಿಂದಾಗಿ ರದ್ದುಗೊಂಡಿತ್ತು. ಮ್ಯಾಂಚೆಸ್ಟರ್‌ನಲ್ಲಿ ನಡೆದ 2019ರ ವಿಶ್ವಕಪ್‌ನಲ್ಲಿ ಭಾರತ ತಂಡ ವೆಸ್ಟ್ ಇಂಡೀಸ್ ವಿರುದ್ಧ 125 ರನ್‌ಗಳ ಜಯ ಸಾಧಿಸಿತ್ತು.
ಮುಂಬರುವ ಭಾರತ ವಿರುದ್ಧದ ಏಕದಿನ ಸರಣಿಯಲ್ಲಿ ದೊಡ್ಡ ದೊಡ್ಡ ಆಟಗಾರರು ಇಲ್ಲದಿರಬಹುದು. ಆದರೆ ವೆಸ್ಟ್ ಇಂಡೀಸ್ ಇನ್ನೂ ಆತ್ಮವಿಶ್ವಾಸದ ತಂಡವನ್ನು ಜಯಿಸಲು ಅತ್ಯುತ್ತಮವಾಗಿ ಕಾರ್ಯನಿರ್ವಹಿಸಬೇಕಾಗಿದೆ. ವಿಶೇಷವಾಗಿ ಟಿ20 ಮತ್ತು ಏಕದಿನ ಸರಣಿಯಲ್ಲಿ ಇಂಗ್ಲೆಂಡ್ ವಿರುದ್ಧ ಅವಳಿ ವಿಜಯಗಳ ನಂತರ ಪೈಪೋಟಿ ನೀಡುವ ನಿರೀಕ್ಷೆ ಇದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications