Ind vs Zim:ಕಂಬ್ಯಾಕ್ ಮಾಡಿದ ಒಂದೇ ಪಂದ್ಯಕ್ಕೆ ಟೀಂ ಇಂಡಿಯಾದಿಂದ ದೀಪಕ್ ಚಹಾರ್ ಔಟ್!

ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಭಾರತ-ಜಿಂಬಾಬ್ವೆ ಎರಡನೇ ಏಕದಿನ ಪಂದ್ಯದಲ್ಲಿ ಮುಖಾಮುಖಿಯಾಗಿದ್ದು, ಟಾಸ್ ಗೆದ್ದ ಭಾರತ ಬೌಲಿಂಗ್ ಆಯ್ದುಕೊಂಡಿದೆ. ಮೊದಲ ಪಂದ್ಯದಲ್ಲಿ ಆಡಿದ ಆಟಗಾರರೇ ಎರಡನೇ ಪಂದ್ಯವನ್ನ ಆಡುತ್ತಿದ್ದು, ಆಶ್ಚರ್ಯಕರ ರೀತಿಯಲ್ಲಿ ಮ್ಯಾಚ್ ವಿನ್ನರ್ ದೀಪಕ್ ಚಹಾರ್ ಪ್ಲೇಯಿಂಗ್ ಇಲೆವೆನ್‌ನಲ್ಲಿ ಅವಕಾಶ ಪಡೆದಿಲ್ಲ.
ಇಂಜ್ಯುರಿಯಿಂದ ಕಂಬ್ಯಾಕ್ ಮಾಡಿದ ಮೊದಲ ಪಂದ್ಯದಲ್ಲೇ ಮಿಂಚಿನ ದಾಳಿ ನಡೆಸಿದ್ದ ದೀಪಕ್ ಚಹಾರ್ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾಗಿದ್ರು. ಆದ್ರೆ ಎರಡನೇ ಏಕದಿನ ಪಂದ್ಯದಲ್ಲಿ ಚಹಾರ್ ಅವಕಾಶ ಪಡೆಯದೇ ಇರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಮತ್ತೆ ಇಂಜ್ಯುರಿಗೆ ಒಳಗಾದ್ರ ದೀಪಕ್ ಚಹಾರ್?
ದೀಪಕ್ ಚಹಾರ್ ಪ್ಲೇಯಿಂಗ್ ಇಲೆವೆನ್‌ನಲ್ಲಿ ಕಾಣಿಸಿಕೊಳ್ಳದೇ ಇರುವುದು ಅನೇಕ ಅನುಮಾನಗಳಿಗೆ ಕಾರಣವಾಗಿದೆ. ಸುಮಾರು ಆರು ತಿಂಗಳ ಬಳಿಕ ಭಾರತ ತಂಡದಲ್ಲಿ ಕಂಬ್ಯಾಕ್ ಆಗಿದ್ದ ದೀಪಕ್, ಜಿಂಬಾಬ್ವೆ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಉತ್ತಮ ಆಟವಾಡಿದ್ರು. ಆದ್ರೆ ಎರಡನೇ ಏಕದಿನ ಪಂದ್ಯದಲ್ಲಿ ತಂಡದಲ್ಲಿ ಇಲ್ಲದೇ ಇರುವುದು ಮತ್ತೆ ಇಂಜ್ಯುರಿಯ ಭೀತಿ ಮೂಡಿಸಿದೆ.
ಪಂದ್ಯಕ್ಕೂ ಮುನ್ನ ಟಾಸ್ ಸಮಯದಲ್ಲೂ ನಾಯಕ ಕೆ.ಎಲ್ ರಾಹುಲ್ ಕಳೆದ ಪಂದ್ಯದ ಮ್ಯಾಚ್ ವಿನ್ನರ್ ದೀಪಕ್ ಚಹಾರ್, ಏಕೆ ತಂಡದಿಂದ ಹೊರಗುಳಿದಿದ್ದಾರೆ ಎಂಬುದನ್ನ ತಿಳಿಸಿಲ್ಲ. ಹೀಗಾಗಿ ದೀಪಕ್‌ಗೆ ಯಾವುದೇ ಗಾಯ ಅಥವಾ ಸ್ನಾಯು ಸೆಳೆತವಾಗಿರಬಹುದು ಎಂದು ಅಂದಾಜಿಸಿದ್ದಾರೆ.
ಆದ್ರೆ ಮೂಲಗಳ ಪ್ರಕಾರ ಮುನ್ನೆಚ್ಚರಿಕೆಯಾಗಿ ದೀಪಕ್ ಚಹಾರ್ ವಿಶ್ರಾಂತಿ ಪಡೆದಿದ್ದಾರೆ ಎಂಬ ಸುದ್ದಿ ಬರುತ್ತಿದೆ. ಆರು ತಿಂಗಳ ಗಾಯದ ನಂತರ ಅವರು ಹಿಂತಿರುಗಿದ್ದು, ಕೆಲಸದ ಹೊರೆಯನ್ನು ನಿರ್ವಹಿಸಬೇಕಾಗಿದೆ. ಈ ಕುರಿತು ಟೀಂ ಇಂಡಿಯಾ ಮ್ಯಾನೇಜ್‌ಮೆಂಟ್ ಅಧಿಕೃತವಾಗಿ ತಿಳಿಸಬೇಕಿದೆ.
Ind vs Pak: ಪಾಕಿಸ್ತಾನ ವಿರುದ್ಧ ಭಾರತಕ್ಕೆ ಶೇ.60ರಷ್ಟು ಗೆಲುವಿನ ಅವಕಾಶವಿದೆ ಎಂದ ಡ್ಯಾನಿಶ್ ಕನೇರಿಯಾ

ಮೊದಲ ಏಕದಿನ ಪಂದ್ಯದಲ್ಲಿ 3 ಪ್ರಮುಖ ವಿಕೆಟ್ ಪಡೆದಿದ್ದ ದೀಪಕ್
ಜಿಂಬಾಬ್ವೆ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ದೀಪಕ್ ಚಹಾರ್ ಭರ್ಜರಿ ಬೌಲಿಂಗ್ ದಾಳಿ ನಡೆಸಿದ್ರು. ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡಿದ್ದ ಭಾರತ ಪರ ದೀಪಕ್ ಚಹಾರ್ ಪ್ರಬಲ ದಾಳಿಗೆ ಜಿಂಬಾಬ್ವೆ ಟಾಪ್ ಆರ್ಡರ್ ಬ್ಯಾಟರ್‌ಗಳು ತತ್ತರಿಸಿದ್ರು.
ಜಿಂಬಾಬ್ವೆ ಟಾಪ್ 3 ಬ್ಯಾಟ್ಸ್‌ಮನ್‌ಗಳಾದ ತಡಿವಾನಾಶೆ ಮರುಮನಿ (8), ಇನೋಸೆಂಟ್ ಕೈಯಾ(4), ವೆಸ್ಲಿ ಮಾಧೆವೆರೆರನ್ನ(5) ದೀಪಕ್ ಚಹಾರ್ ಸಿಂಗಲ್ ಡಿಜಿಟ್‌ಗೆ ಔಟ್ ಮಾಡುವಲ್ಲಿ ಯಶಸ್ವಿಯಾದರು. ದೀಪಕ್ ಚಹಾರ್ ಸ್ವಿಂಗ್‌ಗೆ ಬ್ಯಾಟ್ ಬೀಸಲು ಹೆಣಗಾಡಿದ ಈ ಮೂವರು ಬ್ಯಾಟರ್‌ಗಳು 10 ಓವರ್‌ನೊಳಗೆ ಔಟಾಗಿದ್ದು ಚಹಾರ್ ಬೌಲಿಂಗ್ ಸಾಮರ್ಥ್ಯವನ್ನ ಪ್ರದರ್ಶಿಸಿತು.
ಮೊದಲ ಏಕದಿನ ಪಂದ್ಯದಲ್ಲಿ ದೀಪಕ್ ಚಹಾರ್ ಒಟ್ಟು 7 ಓವರ್‌ನಲ್ಲಿ 27 ರನ್ ನೀಡುವ ಮೂಲಕ 3 ಪ್ರಮುಖ ವಿಕೆಟ್ ಉರುಳಿಸುವಲ್ಲಿ ಯಶಸ್ವಿಯಾದ್ರು.
IND vs ZIM: ಎರಡನೇ ಏಕದಿನ ಪಂದ್ಯದ ಟಾಸ್ ವರದಿ, ಆಡುವ ಬಳಗ ಮತ್ತು ಲೈವ್ ಸ್ಕೋರ್

ಭಾರತ ಮತ್ತು ಜಿಂಬಾಬ್ವೆ ಪ್ಲೇಯಿಂಗ್ ಇಲೆವೆನ್
ಹರಾರೆಯಲ್ಲಿ ನಡೆಯುತ್ತಿರುವ ಭಾರತ ಮತ್ತು ಜಿಂಬಾಬ್ವೆ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್ ಈ ಕೆಳಗಿದೆ.
ಟೀಂ ಇಂಡಿಯಾ
ಶಿಖರ್ ಧವನ್, ಶುಭಮನ್ ಗಿಲ್, ಇಶಾನ್ ಕಿಶನ್, ಕೆಎಲ್ ರಾಹುಲ್ (ನಾಯಕ), ದೀಪಕ್ ಹೂಡಾ, ಸಂಜು ಸ್ಯಾಮ್ಸನ್ (ವಿಕೆಟ್ ನಕೀಪರ್), ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್
ಬೆಂಚ್: ಶಹಬಾಜ್ ಅಹ್ಮದ್, ಅವೇಶ್ ಖಾನ್, ರುತುರಾಜ್ ಗಾಯಕ್ವಾಡ್, ರಾಹುಲ್ ಗಾಯಕ್ವಾಡ್ , ದೀಪಕ್ ಚಹಾರ್
ಜಿಂಬಾಬ್ವೆ
ಇನೊಸೆಂಟ್ ಕೈಯಾ, ತಕುಡ್ಜ್ವಾನಾಶೆ ಕೈಟಾನೊ, ವೆಸ್ಲಿ ಮಾಧೆವೆರೆ, ಸೀನ್ ವಿಲಿಯಮ್ಸ್, ಸಿಕಂದರ್ ರಜಾ, ರೆಗಿಸ್ ಚಕಬ್ವಾ (ನಾಯಕ ಮತ್ತು ವಿಕೆಟ್ ಕೀಪರ್), ರಿಯಾನ್ ಬರ್ಲ್, ಲ್ಯೂಕ್ ಜೊಂಗ್ವೆ, ಬ್ರಾಡ್ ಇವಾನ್ಸ್, ವಿಕ್ಟರ್ ನ್ಯೌಚಿ, ತನಕಾ ಚಿವಂಗಾ
ಬೆಂಚ್: ಡೊನಾಲ್ಡ್ ತಿರಿಪಾನೊ, ಮಿಲ್ಟನ್ ಶುಂಭ, ಟೋನಿ ಶುಂಯ್‌ಸಾರಾ, ಮಿಲ್ಟನ್ ಶುಂಯ್‌ಸಾರಾ , ತಡಿವಾನಾಶೆ ಮರುಮನಿ, ರಿಚರ್ಡ್ ನಾಗರವ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications