ಭಾರತದ ಬೌಲರ್ಸ್ ನನ್ನ ಔಟ್ ಮಾಡಬೇಕಾದ್ರೆ, ನಂದು ಯಾವುದಾದ್ರೂ ಮೂಳೆ ಮುರೀಬೇಕು: ಡೀನ್ ಎಲ್ಗರ್

ಜೋಹಾನ್ಸ್‌ಬರ್ಗ್‌ನ ವಾಂಡರರ್ಸ್ ಮೈದಾನದಲ್ಲಿ ಇತ್ತೀಚೆಗಷ್ಟೇ ಮೊದಲ ಟೆಸ್ಟ್ ಪಂದ್ಯದ ಸೋಲನ್ನ ಕಂಡ ಭಾರತ ಭಾರೀ ಮುಖಭಂಗ ಎದುರಿಸಿತು. ಟೀಂ ಇಂಡಿಯಾದ 240ರನ್‌ಗಳ ಗುರಿಯನ್ನ ಸುಲಭವಾಗಿ ಬೆನ್ನತ್ತಿದ ಆತಿಥೇಯರು ಇನ್ನೊಂದು ದಿನ ಬಾಕಿ ಇರುವಂತೆಯೇ ಗುರಿ ಮುಟ್ಟಿದರು.
ನಾಲ್ಕನೇ ದಿನದಾಟಕ್ಕೆ ದಕ್ಷಿಣ ಆಫ್ರಿಕಾ ಗೆಲುವಿಗೆ 122 ರನ್‌ಗಳು ಬಾಕಿ ಉಳಿದಿತ್ತು. ಮಳೆಯ ಕಾಟದಿಂದ ಎರಡು ಸೆಷನ್‌ಗಳು ಹಾಳಾದ್ರೂ, ದಕ್ಷಿಣ ಆಫ್ರಿಕಾ ನಾಯಕ ಡೀನ್ ಎಲ್ಗರ್ ಅಜೇಯ 96ರನ್ ಕಲೆಹಾಕಿ ತಂಡವನ್ನ ಗೆಲುವಿನ ದಡ ತಲುಪಿಸಿದ್ರು. ಪಂದ್ಯದಲ್ಲಿ ಮಹತ್ವದ ಪಾತ್ರ ವಹಿಸಿದ ನಾಯಕ ಎಲ್ಗರ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೂ ಭಾಜನರಾದ್ರು. ಈ ಪಂದ್ಯದ ಗೆಲುವಿನ ಮೂಲಕ ದಕ್ಷಿಣ ಆಫ್ರಿಕಾ ಮೂರು ಪಂದ್ಯಗಳ ಸರಣಿಯನ್ನ 1-1ರಿಂದ ಸಮಬಲ ಸಾಧಿಸಿದೆ.
ಆದ್ರೀಗ ಡೀನ್ ಎಲ್ಗರ್ ಪಂದ್ಯ ಗೆಲ್ಲುವುದಕ್ಕೂ ಹಿಂದಿನ ರಾತ್ರಿ ತನ್ನ ತಂದೆಯ ಜೊತೆ ಮಾತನಾಡಿರುವ ವಿಚಾರ ಬಹಿರಂಗವಾಗಿದೆ. ಈ ಕುರಿತು ಡೀನ್ ಎಲ್ಗರ್ ತಂದೆ ರಿಚರ್ಡ್ ಸ್ವತಃ ಬಹಿರಂಗಪಡಿಸಿದ್ದಾರೆ. ಡೀನ್ ಎಲ್ಗರ್ ಭಾರತ ವಿರುದ್ಧ ಪಂದ್ಯ ಗೆಲ್ಲಲೇಬೇಕು ಎಂದು ಎಷ್ಟರ ಮಟ್ಟಿಗೆ ಪಣತೊಟ್ಟಿದ್ರು ಎಂಬುದನ್ನ ವಿವರಿಸಿದ್ದಾರೆ.

ನಾನು ಪಂದ್ಯ ಗೆದ್ದೇ ತೀರುತ್ತೇನೆ ಎಂದಿದ್ರಂತೆ ಡೀನ್ ಎಲ್ಗರ್
ದಕ್ಷಿಣ ಆಫ್ರಿಕಾ ನಾಲ್ಕನೇ ದಿನದಾಟದಲ್ಲಿ ಪಂದ್ಯ ಗೆಲ್ಲಲು 122ರನ್‌ಗಳು ಬೇಕಿತ್ತು. ತಂಡದ ನಾಯಕನಾಗಿ ಡೀನ್ ಎಲ್ಗರ್ ಈ ಪಂದ್ಯವನ್ನ ಜಯಿಸಲೇ ಬೇಕೆಂದು ನಿರ್ಧರಿಸಿದ್ದರು. ಹಿಂದಿನ ರಾತ್ರಿ ತನ್ನ ತಂದೆ ರಿಚರ್ಡ್‌ಗೆ ಕರೆ ಮಾಡಿ ಮಾತನಾಡಿದ್ದ ಎಲ್ಗರ್ ನಾನು ಪಂದ್ಯ ಜಯಿಸಿಯೇ ತೀರುತ್ತೇನೆ ಎಂದಿದ್ದರು.
''ಅಪ್ಪ! ನಾಳೆ ಆಟ ಮುಗಿಯುವವರೆಗೂ ಅಲ್ಲಿಯೇ ಇರುತ್ತೇನೆ. ಅವರು ನನ್ನನ್ನು ಔಟ್ ಮಾಡಲು ಬಯಸಿದರೆ, ಅವರು ನನ್ನನ್ನು ಅಲ್ಲಿಂದ ಹೊರಗೆ ಕಳುಹಿಸಬೇಕಾದ್ರೆ ನನ್ನ ದೇಹದಲ್ಲಿ ಏನನ್ನಾದರೂ ಅವರು ಒಡೆಯಬೇಕು. ನನಗೆ ಇಂಜ್ಯುರಿ ಮಾಡಿಯಷ್ಟೇ ನನ್ನನ್ನು ಹೊರಬೇಕೆ ಹೊರತು ಬೇರೇನು ಮಾರ್ಗವಿಲ್ಲ'' ಎಂದು ಡೀನ್ ಎಲ್ಗರ್ ಆತ್ಮವಿಶ್ವಾಸದಿಂದ ಮಾತನಾಡಿದ್ದರು.

ಡೀನ್ ಎಲ್ಗರ್ ಮಾತು ಕೇಳಿ ಆಶ್ಚರ್ಯಗೊಂಡಿದ್ದ ರಿಚರ್ಡ್
ಡೀನ್ ಎಲ್ಗರ್ ಅಷ್ಟೊಂದು ದೃಢವಾಗಿ ಹಾಗೂ ಆತ್ಮವಿಶ್ವಾಸದಿಂದ ಆಡಿದ ನುಡಿಗಳನ್ನ ಗಮನಿಸಿ ಆತನ ಚಾರ್ಜ್ ಆಗಿದ್ದಾನೆಂದು ನನಗೆ ಅನಿಸಿತು. ನನ್ನ ಮಗ ಮಾಡಿಯೇ ಮಾಡುತ್ತಾನೆ ಎಂದು ನಾನು ಭಾವಿಸಿದೆ ಎಂದು ರಿಚರ್ಡ್ ಹೇಳಿದ್ದಾರೆ.
KL ರಾಹುಲ್ ಕುರಿತು ನನಗೆ ದ್ವೇಷವಿಲ್ಲ, ಆದ್ರೆ ರಹಾನೆಗೆ ನಾಯಕತ್ವ ಕೊಡಬೇಕಿತ್ತು: ವಾಸಿಂ ಜಾಫರ್
Skipper's 96*(188) helps SA win by 7 wickets and square the series!#SAvIND #INDvSA #Bumrah #Siraj #Captaincy #Virat #Shardul #Bavumapic.twitter.com/Xumlf8fhdI — OneCricket (OneCricketApp) January 6, 2022 '>
ಡೀನ್ ಎಲ್ಗರ್ ತಾಯಿ ಆತಂಕದಲ್ಲಿದ್ದರು!
ಬೆಳಿಗ್ಗೆ, ದಕ್ಷಿಣ ಆಫ್ರಿಕಾದ ಗುರಿಯು 100 ಕ್ಕಿಂತ ಕಡಿಮೆಯಾದಾಗ, ನಾನು ನನ್ನ ಹೆಂಡತಿಗೆ ಹೇಳಿದೆ, 'ಅವರು (ಟೀಂ ಇಂಡಿಯಾ) ಇಂದು ಔಟ್ ಮಾಡಲು ಸಾಧ್ಯವಿಲ್ಲ' ಎಂದು ಹೇಳಿದ್ದರು ಎನ್ನಲಾಗಿದೆ. ಆತನ ಗಮನ ಮತ್ತು ಬಯೋ ಬಬಲ್‌ನಲ್ಲಿ ಆತನ ಏಕಾಗ್ರತೆ ನಿಜಕ್ಕೂ ಮೆಚ್ಚುವಂತದ್ದು ಎಂದು ರಿಚರ್ಡ್ ಹೇಳಿದ್ದಾರೆ. ಆದ್ರೆ ನನ್ನ ಪತ್ನಿ ಇನ್ನೂ 100 ಗಳಿವೆ ಎಂದಾಗ, ಪರವಾಗಿಲ್ಲ ಡೀನ್ ಮತ್ತು ಆತನ ಜೊತೆಗಾರರು ಗುರಿ ತಲುಪಬಲ್ಲರು ಎಂದು ಧೈರ್ಯ ಹೇಳಿದ್ದೆ ಎಂದು ರಿಚರ್ಡ್ ತಮ್ಮ ಮನೆಯಲ್ಲಿನ ಸನ್ನಿವೇಶವನ್ನ ವಿವರಿಸಿದ್ದರೆ.
ಟೀಂ ಇಂಡಿಯಾ ಸೋಲಿಗೆ 3 ಪ್ರಮುಖ ಕಾರಣ ತಿಳಿಸಿದ ಗೌತಮ್ ಗಂಭೀರ್

ಆತ ತುಂಬಾ ಕಠಿಣ ವ್ಯಕ್ತಿಯಾಗಿ ರೂಪುಗೊಂಡಿದ್ದಾನೆ!
ಶಾಲಾ ದಿನಗಳಲ್ಲಿ ಡೀನ್ ಎಲ್ಗರ್ ಪಂದ್ಯಗಳಲ್ಲಿ ಸಾಕಷ್ಟು ಚೆಂಡಿನ ಒದೆ ತಿಂದಿದ್ದಾರೆ. ಆತ ತುಂಬಾ ಕಠಿಣ ವ್ಯಕ್ತಿಯಾಗಿ ಬೆಳೆದಿದ್ದು, ಟೀಂ ಇಂಡಿಯಾ ಬೌಲಿಂಗ್ ವೇಳೆ ತಿಂದ ನೋವು ಆತನಿಗೆ ನಾಟುವುದಿಲ್ಲ ಎಂದು ಡೀನ್ ಎಲ್ಗರ್ ಕುರಿತಾಗಿ ತಮದೆ ಮೆಚ್ಚುಗೆಯ ಮಾತನಾಡಿದ್ದಾರೆ.
ಅವನು ಹೊಡೆತ ತಿಂದಾಗಲೆಲ್ಲ ಹೆಚ್ಚು ದೃಢನಿಶ್ಚಯವನ್ನು ಹೊಂದುತ್ತಿದ್ದನು. ಹುಡುಗನಾಗಿದ್ದಾಗಲೂ ಹೆಚ್ಚು ಮೊಂಡುತನವನ್ನು ಬೆಳೆಸಿಕೊಂಡಿದ್ದಾನೆ. ಅವನು ಈಗ ಅದನ್ನು ಮಾಡುವುದರಲ್ಲಿ ಆಶ್ಚರ್ಯವಿಲ್ಲ. ಆದ್ರೆ ಡೀನ್ ಚೆಂಡಿನ ಒದೆ ತಿನ್ನುವುದನ್ನ ನೋಡುವಾಗ ನನ್ನ ಹೆಂಡತಿ ಒತ್ತಡದಲ್ಲಿಯೇ ಇರುತ್ತಾಳೆ ಎಂದಿದ್ದಾರೆ.
309 ನಿಮಿಷಗಳ ಕಾಲ ಕ್ರೀಸ್‌ನಲ್ಲಿ ಹೋರಾಟ ನಡೆಸಿದ ಡೀನ್ ಎಲ್ಗರ್ 188 ಎಸೆತಗಳಲ್ಲಿ ಅಜೇಯ 96ರನ್ ಕಲೆಹಾಕಿ ದಕ್ಷಿಣ ಆಫ್ರಿಕಾದ ಗೆಲುವಿಗೆ ಕಾರಣರಾದ್ರು. ಅಲ್ಲದೆ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನ 1-1ರಿಂದ ಸಮಬಲ ಸಾಧಿಸಿ ಜೀವಂತವಾಗಿರಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications