ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನಿಷೇಧಿತ ಕ್ರಿಕೆಟರ್ ಶ್ರೀಶಾಂತ್ ಮೇಲೆ ಕೊಲೆ ಯತ್ನ!

By Mahesh

ಕೊಚ್ಚಿ, ಫೆ.27: ಐಪಿಎಲ್ ಮ್ಯಾಚ್ ಫಿಕ್ಸಿಂಗ್ ಪ್ರಕರಣಕ್ಕೆ ಸಿಲುಕಿ ಕ್ರಿಕೆಟ್ ಆಟದಿಂದ ನಿಷೇಧಕ್ಕೊಳಗಾಗಿರುವ ಟೀಂ ಇಂಡಿಯಾದ ವೇಗಿ ಕೇರಳ ಮೂಲದ ಶ್ರೀಶಾಂತ್ ಅವರ ಮೇಲೆ ಕೊಲೆ ಯತ್ನ ನಡೆದಿತ್ತು. ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾದರು ಎಂಬ ವಿಷಯ ತಡವಾಗಿ ಬೆಳಕಿಗೆ ಬಂದಿದೆ.

ಶ್ರೀಶಾಂತ್ ಅವರ ಆಪ್ತ ವಲಯದಿಂದ ಈ ವಿಷಯ ಹೊರಗೆಡವಿದ್ದು, ಭಾರಿ ಚರ್ಚೆಗೆ ಗ್ರಾಸವಾಗಿದೆ. ಮ್ಯಾಚ್ ಫಿಕ್ಸಿಂಗ್ ಆರೋಪ ಹೊತ್ತು ದೆಹಲಿಯ ತಿಹಾರ್ ಜೈಲು ಸೇರಿದ್ದ ಶ್ರೀಶಾಂತ್ ಮೇಲೆ ಮಾರಾಣಾಂತಿಕ ಹಲ್ಲೆ ನಡೆದಿತ್ತು. ತುಂಬಾ ಚೂಪಾದ ಅಸ್ತ್ರಗಳನ್ನು ಹಿಡಿದುಕೊಂಡು ದುಷ್ಕರ್ಮಿಯೊಬ್ಬ ಜೈಲಿನಲ್ಲೇ ಶ್ರೀಶಾಂತ್ ಹತ್ಯೆಗೆ ಯತ್ನಿಸಿದ್ದ. [ಶ್ರೀಶಾಂತ್ ಗೆ ಆಜೀವ ನಿಷೇಧ ಹೇರಿದ ಬಿಸಿಸಿಐ]

'Murder attempt' on banned paceman S Sreesanth

ಆದರೆ, ಗುರುವಾಯುರಪ್ಪ ಹಾಗೂ ಕೊಲ್ಲೂರು ಮೂಕಾಂಬಿಕಾ ದಯೆಯಿಂದ ಶ್ರೀಶಾಂತ್ ಪ್ರಾಣಾಪಾಯದಿಂದ ಪಾರಾದರು. 2013ರಲ್ಲಿ ಈ ಘಟನೆ ನಡೆದಿತ್ತು ಈ ಬಗ್ಗೆ ನಮ್ಮ ಕುಟುಂಬಕ್ಕೆ ಬಿಟ್ಟರೆ ಬೇರೆ ಯಾರಿಗೂ ಮಾಹಿತಿ ಇರಲಿಲ್ಲ. ನಾವು ಕೂಡಾ ವಿಷಯವನ್ನು ದೊಡ್ಡದು ಮಾಡಲಿಲ್ಲ ಎಂದು ಶ್ರೀಶಾಂತ್ ಅವರ ಬಾಮೈದ ಹೆಸರಾಂತ ಗಾಯಕ ಮಧು ಬಾಲಕೃಷ್ಣನ್ ಅವರು ಮನೋರಮಾ ನ್ಯೂಸ್ ಗೆ ಶುಕ್ರವಾರ ಹೇಳಿದ್ದಾರೆ.

ವಿಶ್ವಕಪ್ ಕ್ರಿಕೆಟ್ 2015</a>: </strong><a class=ಅಂಕ ಪಟ್ಟಿ | ವೇಳಾಪಟ್ಟಿ | ಫಲಿತಾಂಶ" title="ವಿಶ್ವಕಪ್ ಕ್ರಿಕೆಟ್ 2015: ಅಂಕ ಪಟ್ಟಿ | ವೇಳಾಪಟ್ಟಿ | ಫಲಿತಾಂಶ" />ವಿಶ್ವಕಪ್ ಕ್ರಿಕೆಟ್ 2015: ಅಂಕ ಪಟ್ಟಿ | ವೇಳಾಪಟ್ಟಿ | ಫಲಿತಾಂಶ

ಈ ಘಟನೆ ನಂತರ ಶ್ರೀಶಾಂತ್ ಅವರು ಜೈಲಿನ ಅಧಿಕಾರಿಗಳ ಸಹಾಯ ಪಡೆದು ಬೇರೆ ಸೆಲ್ ಗೆ ವರ್ಗಾವಣೆ ಪಡೆದುಕೊಂಡರು. ಆದರೆ, ಹಲ್ಲೆ ಮಾಡಲು ಯತ್ನಿಸಿದ ದುಷ್ಕರ್ಮಿ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಲಾಯಿತೇ ಇಲ್ಲವೇ ಗೊತ್ತಿಲ್ಲ ಎಂದು ಮಧು ಹೇಳಿದ್ದಾರೆ. [ಕೊಲ್ಲೂರಿನಲ್ಲಿ ಶ್ರೀಶಾಂತ್ ಮನದಾಸೆ ಬಹಿರಂಗ]

ಡಬ್ಬಲ್ ವಿಶ್ವಕಪ್ ವಿನ್ನರ್ ಎಂಬ ಹಣೆಪಟ್ಟಿ ಹೊತ್ತುಕೊಂಡಿರುವ ವೇಗಿ ಶ್ರೀಶಾಂತ್ ರನ್ನು ಕ್ರಿಕೆಟ್ ಫ್ಯಾನ್ಸ್ ಸುಲಭಕ್ಕೆ ಮರೆಯುವುದಿಲ್ಲ. ಆನ್ ಅಂಡ್ ಆಫ್ ದಿ ಪಿಚ್ ಶ್ರೀಶಾಂತ್ ಫುಲ್ ಫೇಮಸ್. [ವಿಶ್ವಕಪ್ ಗೂ ಶುರುವಾಗಿದೆ ಹನಿ ಟ್ರ್ಯಾಪ್ 'ಫಿಕ್ಸಿಂಗ್' ಭೀತಿ]

2007ರಲ್ಲಿ ಟ್ವಿ 20 ವಿಶ್ವಕಪ್ ಹಾಗೂ 2011ರಲ್ಲಿ ವಿಶ್ವಕಪ್ ಗೆದ್ದ ತಂಡದ ಸದಸ್ಯ ಶ್ರೀಶಾಂತ್ ಅವರನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ನಿಷೇಧಿಸಿದೆ. 2011ರ ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ನಡೆದಿದೆ ಎನ್ನಲಾದ ಮ್ಯಾಚ್ ಫಿಕ್ಸಿಂಗ್, ಸ್ಪಾಟ್ ಫಿಕ್ಸಿಂಗ್ ಕಳ್ಳಾಟದಲ್ಲಿ ಶ್ರೀಶಾಂತ್ ಭಾಗಿಯಾಗಿರುವ ಅರೋಪ ಹೊತ್ತಿದ್ದಾರೆ.

ರಾಜಸ್ಥಾನ ರಾಯಲ್ಸ್ ಪರ ಆಡುತ್ತಿದ್ದ ಶ್ರೀಶಾಂತ್ ಅವರನ್ನು ಮುಂಬೈ ಪೊಲೀಸರು ಮೇ 2013ರಲ್ಲಿ ಬಂಧಿಸಿ ತಿಹಾರ್ ಜೈಲಿಗೆ ಕಳಿಸಿದ್ದರು. ನಂತರ ಜಾಮೀನಿನ ಮೇಲೆ ಶ್ರೀಶಾಂತ್ ಜೈಲಿನಿಂದ ಹೊರ ಬಂದಿದ್ದನ್ನು ಇಲ್ಲಿ ಸ್ಮರಿಸಬಹುದು.

ಒನ್ ಇಂಡಿಯಾ ಸುದ್ದ್ದಿ

Story first published: Wednesday, January 3, 2018, 10:02 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X