ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮ್ಯಾಚ್ ಫಿಕ್ಸಿಂಗ್ ಬಗ್ಗೆ ಸಚಿನ್ ಏನು ಬರೆದಿದ್ದಾರೆ?

ಮುಂಬೈ, ನ.6 : ಸಚಿನ್ ತಮ್ಮ ಆತ್ಮಕಥೆ 'ಪ್ಲೇಯಿಂಗ್ ಇಟ್ ಮೈ ವೇ' ಯಲ್ಲಿ ಭಾರತ ಕ್ರಿಕೆಟ್ ನ ಕರಾಳ ಅಧ್ಯಾಯ 'ಮ್ಯಾಚ್ ಫಿಕ್ಸಿಂಗ್' ಬಗ್ಗೆ ಕ್ರಿಕೆಟ್ ದೇವರು ಏನು ಬರೆದಿರಬಹುದು ಎಂಬ ಕೂತುಹಲ ಎಲ್ಲರಲ್ಲೂ ಮನೆಮಾಡಿತ್ತು. ಆದರೆ ಸಚಿನ್ ಹಗರಣದ ಬಗ್ಗೆ ವಿಶೇಷವಾಗಿ ಏನನ್ನೂ ಬರೆಯಲು ಹೋಗಿಲ್ಲ.

90ರ ದಶಕದಲ್ಲಿ ಭಾರತ ಕ್ರಿಕೆಟ್ ಕಾಡಿದ ಫಿಕ್ಸಿಂಗ್ ಬಗ್ಗೆ ನನಗೆ ಎಲ್ಲಾ ಗೊತ್ತಿದೆ ಎಂದು ಜನರು ಅಂದಿಕೊಂಡಿದ್ದಾರೆ. ಆದರೆ ನಿಜವಾಗಿ ನನಗೆ ಗೊತ್ತಿರುವುದನ್ನೆಲ್ಲ ಹೇಳಿದ್ದೇನೆ. ಗೊತ್ತಿಲ್ಲದ ವಿಷಯದ ಬಗ್ಗೆ ಹೇಳಿಕೆ ನೀಡುವುದು ಮೂರ್ಖತನವಾಗುತ್ತದೆ ಎಂದು ಮಾಸ್ಟರ್ ಹೇಳಿದ್ದಾರೆ.[ಕ್ರಿಕೆಟ್ ದೇವರ ಆತ್ಮಕಥೆ ಬಿಡುಗಡೆಗೆ ಯಾರೆಲ್ಲ ಬಂದಿದ್ದರು?]

sachn

ಕ್ರಿಕೆಟ್ ಗೆ ಕಾಡಿದ ಶಾಪ ಮಹಮದ್ ಅಜರುದ್ದೀನ್. ಅಜಯ್ ಜಡೇಜಾರಂಥವರ ಕ್ರಿಕೆಟ್ ಬದುಕನ್ನೇ ಬಲಿ ತೆಗೆದುಕೊಂಡಿತು. ಆಟದಲ್ಲಿ ಒಮ್ಮೊಮ್ಮೆ ವೈಫಲ್ಯ ಅನುಭವಿಸುವುದು ಸಹಜ. ಇದಕ್ಕೆ ಫಿಕ್ಸಿಂಗ್ ಅನ್ನು ಹೊಣೆಗಾರಿಕೆ ಮಾಡಲು ಸಾಧ್ಯವಿಲ್ಲ ಎಂದು ಸಚಿನ್ ಹೇಳಿದ್ದಾರೆ.

ಮ್ಯಾಚ್ ಫಿಕ್ಸಿಂಗ್ ಹಗರಣ ನಡೆಯುವ ವೇಳೆ ನಾನು ಡ್ರೆಸ್ಸಿಂಗ್ ರೂಮ್ ಭಾಘವಾಗಿದ್ದೆ, ಹಾಗಾಗಿ ನನಗೆ ಅನೇಕ ಸಂಗತಿಗಳು ಗೊತ್ತಿರಬೇಕು ಎಂದು ಜನ ಭಾವಿಸಿರಬಹುದು. ಆದರೆ ನನಗೆ ಸರಿಯಾಗಿ ಗೊತ್ತಿದ್ದ ಸಂಗತಿಗಳ ಮೇಲೆ ಪುಸ್ತಕದಲ್ಲಿ ಬೆಳಕು ಚೆಲ್ಲಿದ್ದೇನೆ. ಗೊತ್ತಿಲ್ಲದರ ಕುರಿತು ಮಾತಾಡಲು ಹೋಗಿಲ್ಲ ಎಂದು ಮಾಸ್ಟರ್ ಬ್ಲಾಸ್ಟರ್ ಅಭಿಪ್ರಾಯ ಬಿಚ್ಚಿಟ್ಟಿದ್ದಾರೆ.[ಸಚಿನ್ ಚಾಪೆಲ್ ರನ್ನು 'ರಿಂಗ್ ಮಾಸ್ಟರ್' ಅಂದಿದ್ದು ಯಾಕೆ?]

ನನ್ನ 24 ವರ್ಷಗಳ ಕ್ರಿಕೆಟ್ ಜೀವನದಲ್ಲಿ ಏಳು ಬೀಳುಗಳನ್ನು ಅನುಭವಿಸಿದ್ದೇನೆ. ಆಟಗಾರರು ಸದಾ ಆಶಾವಾದಿಗಳಾಗಿ ಚಿಂತನೆ ಮಾಡಬೇಕು. ಅಲ್ಲದೇ ಟೀಕಾಕಾರರಿಗೆ ತಮ್ಮ ಬ್ಯಾಟ್ ನಿಂದ ಉತ್ತರ ನೀಡಬೇಕು. ಆ ನಿಟ್ಟಿನಲ್ಲಿ ಪ್ರತಿದಿನ ಸಿದ್ಧತೆ ನಡೆಸುತ್ತಿರಬೇಕು. ಇದು ಎಲ್ಲಾ ಕಾಲಕ್ಕೂ ಅನ್ವಯಿಸುತ್ತದೆ ಎಂದು ಹೇಳಿದ್ದಾರೆ.

Story first published: Wednesday, January 3, 2018, 10:12 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X