ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2015ಗೂ ತಟ್ಟಿದ ಫಿಕ್ಸಿಂಗ್ ಭೂತದ ಕಾಟ

By Mahesh

ಬೆಂಗಳೂರು, ಏ.10: ಇಂಡಿಯನ್ ಪ್ರಿಮಿಯರ್ ಲೀಗ್ ಟೂರ್ನಿಗೆ ಮತ್ತೊಮ್ಮೆ ಫಿಕ್ಸಿಂಗ ಭೂತ ಕಾಡತೊಡಗಿದೆ. ಐಪಿಎಲ್ 2015 ಶುರುವಾಗಿ ಮೂರು ದಿನಗಳು ಕಳೆಯುವುದರೊಳಗೆ 'ಎಫ್' ಪದ ಕೇಳಿ ಆಟಗಾರರು ಬೆಚ್ಚಿದ್ದಾರೆ. ರಾಜಸ್ಥಾನ ರಾಯಲ್ಸ್ ನ ಆಟಗಾರನೊಬ್ಬ ಈ ಬಗ್ಗೆ ಐಪಿಎಲ್ ಭ್ರಷ್ಟಾಚಾರ ನಿಯಂತ್ರಣ ತಂಡಕ್ಕೆ ದೂರು ನೀಡಿರುವ ಸುದ್ದಿ ಬೆಳಕಿಗೆ ಬಂದಿದೆ.

ಐಪಿಎಲ್ 8ರಲ್ಲಿ ರಾಜಸ್ಥಾನ ರಾಯಲ್ಸ್ ತಂಡದಲ್ಲಿರುವ ಮುಂಬೈ ಮೂಲದ ರಣಜಿ ಆಟಗಾರನೊಬ್ಬನನ್ನು ಬುಕ್ಕಿಯೊಬ್ಬ ಸಂಪರ್ಕಿಸಿದ್ದ ಎಂಬ ವಿಷಯ ಹೊರಕ್ಕೆ ಬಂದಿದೆ. ಈ ಬಗ್ಗೆ ಹೆಡ್ ಲೈನ್ಸ್ ಟುಡೇ ಇಂಗ್ಲೀಷ್ ಸುದ್ದಿ ವಾಹಿನಿ ಏ.10ರಂದು ಸುದ್ದಿ ಪ್ರಸಾರ ಮಾಡಿದೆ.

[47 ದಿನ, 60 ಪಂದ್ಯ, ಫುಲ್ ಟೈಂ ಟೇಬಲ್] | [8 ತಂಡಗಳ ನೂರೆಂಟು ಆಟಗಾರರು] | [ಐಪಿಎಲ್ 2015: ಫ್ಯಾನ್ಸಿಗೆ ಗೈಡ್]

IPL 2015: Rajasthan Royals player approached for spot-fixing, say reports

ಕಳೆದ ತಿಂಗಳು ಈ ಘಟನೆ ನಡೆದಿದ್ದು,ಈ ಬಗ್ಗೆ ಬಿಸಿಸಿಐನ ಭ್ರಷ್ಟಾಚಾರ ನಿಯಂತ್ರಣ ಹಾಗೂ ಸುರಕ್ಷತಾ ಘಟಕ (ACSU)ಕ್ಕೆ ದೂರು ನೀಡಲಾಗಿದೆ. ಟೈಮ್ಸ್ ನೌ ಕೂಡಾ ಸುದ್ದಿಯನ್ನು ಸ್ಪಷ್ಟಪಡಿಸಿ ಆಟಗಾರ ಮುಂಬೈ ಮೂಲದವನು ಎಂದು ಹೇಳಿದೆ. ಎಸಿಎಸ್ ಯು ಈ ಬಗ್ಗೆ ತನಿಖೆ ಕೈಗೊಂಡಿದೆ. []

2013ರಲ್ಲಿ ರಾಜಸ್ಥಾನ ರಾಯಲ್ಸ್ ತಂಡ ಹಾಗೂ ಟೀಂ ಇಂಡಿಯಾ ವಿಶ್ವಕಪ್ ವಿಜೇತ ತಂಡದ ಸದಸ್ಯ ಎಸ್ ಶ್ರೀಶಾಂತ್ ಅವರು ಸ್ಪಾಟ್ ಫಿಕ್ಸಿಂಗ್ ನಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಬಿಸಿಸಿಐನಿಂದ ಆಜೀವ ನಿಷೇಧಕ್ಕೆ ಒಳಪಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದು. [ಐಪಿಎಲ್ 8 ಆನ್ಲೈನ್ ಟಿಕೆಟ್ ಖರೀದಿ ಎಲ್ಲಿ? ಹೇಗೆ?]



2013ರ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ನಡೆದಿದ್ದ ಸ್ಪಾಟ್ ಫಿಕ್ಸಿಂಗ್ ಪ್ರಕರಣದ ತನಿಖೆ ನಡೆಸಿದ್ದ ನಿವೃತ್ತ ನ್ಯಾಯಮೂರ್ತಿ ಮುಕುಲ್ ಮುದ್ಗಲ್ ಅವರು ಸತತ ನಾಲ್ಕು ತಿಂಗಳ ಕಾಲ ತನಿಖೆ ನಡೆಸಿ ಸುಪ್ರೀಂ ಕೋರ್ಟ್ ‌ಗೆ ವರದಿ ಸಲ್ಲಿಸಿದ್ದರು. [ಈ ಬಗ್ಗೆ ವಿವರ ಇಲ್ಲಿ ಓದಿ]


ವರದಿಯಲ್ಲಿ ಬಿಸಿಸಿಐ ಮಾಜಿ ಅಧ್ಯಕ್ಷ ಎನ್.ಶ್ರೀನಿವಾಸನ್ ಮತ್ತು ಅವರ ಅಳಿಯ ಗುರುನಾಥನ್ ಮೇಯಪ್ಪನ್ ‌ರನ್ನೊಳಗೊಂಡ 13 ಮಂದಿ ಫಿಕ್ಸಿಂಗ್ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿತ್ತು.

Story first published: Wednesday, January 3, 2018, 10:02 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X