ಐಪಿಎಲ್ : ಹನಿ ಟ್ರ್ಯಾಪ್ ಬಲೆಗೆ ಬೀಳದಂತೆ ಆಟಗಾರರಿಗೆ ಎಚ್ಚರಿಕೆ
ಬೆಂಗಳೂರು, ಏ.14: ಇಂಡಿಯನ್ ಪ್ರಿಮಿಯರ್ ಲೀಗ್ 8ಕ್ಕೆ ಫಿಕ್ಸಿಂಗ್ ಭೂತ ಆವರಿಸಿಕೊಂಡಿರುವ ಸುದ್ದಿ ಬಂದ ಬೆನ್ನಲ್ಲೇ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಒಂದಷ್ಟು ಕಠಿಣ ಕ್ರಮಗಳನ್ನು ಜರುಗಿಸುತ್ತಿದೆ. ಮುಖ್ಯವಾಗಿ ಮಹಿಳಾ ಫ್ಯಾನ್ಸಿನಿಂದ ದೂರವಿರುವಂತೆ ಐಪಿಎಲ್ ಆಟಗಾರರಿಗೆ ಕಟ್ಟೆಚ್ಚರ ವಿಧಿಸಲಾಗಿದೆ. ಹನಿ ಟ್ರ್ಯಾಪಿಂಗ್ ಬಗ್ಗೆ ಎಲ್ಲಾ ತಂಡದ ಪ್ರಮುಖರಿಗೆ ವಿವರಣೆ ನೀಡಲಾಗಿದೆ.
ಐಪಿಎಲ್ 8ರಲ್ಲಿ ರಾಜಸ್ಥಾನ ರಾಯಲ್ಸ್ ತಂಡದಲ್ಲಿರುವ ಮುಂಬೈ ಮೂಲದ ರಣಜಿ ಆಟಗಾರನೊಬ್ಬನನ್ನು ಬುಕ್ಕಿಯೊಬ್ಬ ಸಂಪರ್ಕಿಸಿದ್ದ ಎಂಬ ವಿಷಯ ಇತ್ತೀಚೆಗೆ ಹೊರಕ್ಕೆ ಬಂದಿತ್ತು. ಇದಾದ ಬೆನ್ನಲ್ಲೇ ಆಟಗಾರರ ಮೇಲಿನ ನಿರ್ಬಂಧವನ್ನು ಬಿಸಿಸಿಐ ಬಿಗಿಗೊಳಿಸಿದೆ. []
ಮಹಿಳಾ ಅಭಿಮಾನಿಗಳ ಜತೆ ನೀವು ಹೆಚ್ಚು ಸಲಗೆಯಿಂದ ಇದ್ದರೆ ಅವರು ನಿಮ್ಮನ್ನು ಬುಕ್ಕಿಗಳ ಬಲೆಗೆ ಬೀಳಿಸಲಿದ್ದಾರೆ. ಈ ನಿಟ್ಟಿನಲ್ಲಿ ಯಾವುದೇ ಆಟಗಾರರು ಅವರ ಜತೆ ಸಂಪರ್ಕ ಇಲ್ಲವೆ ಸಲಿಗೆಯಿಂದ ವರ್ತಿಸಬಾರದು ಎಂದು ಬಿಸಿಸಿಐನ ಭ್ರಷ್ಟಾಚಾರ ನಿಗ್ರಹ ದಳ ತಾಕೀತು ಮಾಡಿದೆ.

ಹನಿ ಟ್ರ್ಯಾಪ್ ಭೀತಿ: ಯಾವ ಕಾರಣಕ್ಕೂ ಮಹಿಳಾ ಅಭಿಮಾನಿಗಳ ಜತೆ ದೂರವಾಣಿಯಲ್ಲಿ ಮಾತನಾಡುವುದು, ಸಾಮಾಜಿಕ ತಾಣಗಳಲ್ಲಿ ಪ್ರತಿಕ್ರಿಯೆ ನೀಡುವುದು ಸೇರಿದಂತೆ ಎಲ್ಲದಕ್ಕೂ ಪೂರ್ಣ ವಿರಾಮ ಹಾಕಬೇಕು. [ಐಪಿಎಲ್ 2015ಗೂ ತಟ್ಟಿದ ಫಿಕ್ಸಿಂಗ್ ಭೂತದ ಕಾಟ]
ಕೆಲವು ಮಹಿಳೆಯರು ಹನಿ ಟ್ರ್ಯಾಪ್ ಮೂಲಕವೂ ಆಟಗಾರರನ್ನು ಸಿಲುಕಿಸುವ ಸಾಧ್ಯತೆ ಇದೆ. ಕಳೆದ ಬಾರಿ ಮ್ಯಾಚ್ ಫಿಕ್ಸಿಂಗ್‌ನಲ್ಲಿ ಸಿಲುಕಿಕೊಂಡಿದ್ದ ಮೂವರು ಆಟಗಾರರನ್ನು ಇದೇ ರೀತಿ ಬಲೆಗೆ ಬೀಳಿಸಿಕೊಳ್ಳಲಾಗಿತ್ತು ಎಂದು ಬಿಸಿಸಿಐ ಹೇಳಿದೆ.
[47 ದಿನ, 60 ಪಂದ್ಯ, ಫುಲ್ ಟೈಂ ಟೇಬಲ್] | [8 ತಂಡಗಳ ನೂರೆಂಟು ಆಟಗಾರರು] | [ಐಪಿಎಲ್ 2015: ಫ್ಯಾನ್ಸಿಗೆ ಗೈಡ್]
ಇದರ ಜೊತೆಗೆ ಆಟಗಾರರು ಉಳಿಯುವ ಕೊಠಡಿಗಳು, ಅವರ ಸ್ನೇಹಿತರ ದೂರವಾಣಿ ಕರೆಗಳು, ಇತರ ಚಟುವಟಿಕೆಗಳು ಸೇರಿದಂತೆಯೂ ತೀವ್ರ ನಿಗಾ ವಹಿಸಲಾಗಿದೆ.
2013ರಲ್ಲಿ ರಾಜಸ್ಥಾನ ರಾಯಲ್ಸ್ ತಂಡ ಹಾಗೂ ಟೀಂ ಇಂಡಿಯಾ ವಿಶ್ವಕಪ್ ವಿಜೇತ ತಂಡದ ಸದಸ್ಯ ಎಸ್ ಶ್ರೀಶಾಂತ್ ಅವರು ಸ್ಪಾಟ್ ಫಿಕ್ಸಿಂಗ್ ನಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಬಿಸಿಸಿಐನಿಂದ ಆಜೀವ ನಿಷೇಧಕ್ಕೆ ಒಳಪಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications