Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ ನಲ್ಲಿ ಎಂದೂ ಮರೆಯದ ಫೈನಲ್ ಮೆಲುಕು

ಬೆಂಗಳೂರು, ಮೇ.24: ಎರಡು ಬಾರಿ ಐಪಿಎಲ್ ಕಿರೀಟ ಧರಿಸಿರುವ ಚೆನ್ನೈ ಮತ್ತು ಕೋಲ್ಕತ್ತಾ ಸಾಲಿಗೆ ಸೇರಲು ರೋಹಿತ್ ಶರ್ಮ ನೇತೃತ್ವದ ಮುಂಬೈ ಇಂಡಿಯನ್ಸ್ ಸಜ್ಜಾಗಿದೆ. ಆರನೇ ಫೈನಲ್ ಆಡುತ್ತಿರುವ ಚೆನ್ನೈ ತಂಡ ಮೂರನೇ ಬಾರಿ ಪ್ರಶಸ್ತಿಗೆ ಮುತ್ತಿಡಲು ಸಿದ್ಧವಾಗಿದೆ. ಇದಕ್ಕೂ ಮುನ್ನ ಇಲ್ಲಿ ತನಕ ನಡೆದ ಏಳು ಅಂತಿಮ ಹಣಾಹಣಿಯ ಮೆಲುಕು ಇಲ್ಲಿದೆ.

ಐಪಿಎಲ್ ವಿಶೇಷ ಪುಟ| ಮಳೆ ನಿಯಮಗಳು

ಐಪಿಎಲ್ 2015ರಲ್ಲಿ ಲೀಗ್ ಹಂತದಲ್ಲಿ ಆರಂಭದಲ್ಲಿ ಐದು ಬಾರಿ ಮುಗ್ಗರಿಸಿದ್ದ ಮುಂಬೈ ತಂಡ ನಂತರ ಚೇತರಿಸಿಕೊಂಡು ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದ್ದಲ್ಲದೆ ಪ್ಲೇ ಆಫ್‌ ನಲ್ಲಿ ಮೊದಲ ಕ್ವಾಲಿಫೈಯರ್ ನಲ್ಲೇ ಗೆದ್ದು ಫೈನಲ್ ಪ್ರವೇಶಿಸಿದೆ. ಇತ್ತೀಚಿನ ವರ್ಷಗಳಲ್ಲಿ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದ ತಂಡಗಳ ಸಾಧನೆ ನೋಡಿದರೆ ಮುಂಬೈ ಈ ಸಲ ಕೂಡಾ ಕಪ್ ಗೆಲ್ಲುತ್ತಂತೆ [ಅದು ಹೇಗೆ ಸಾಧ್ಯ ಇಲ್ಲಿ ಓದಿ]

ಮುಂಬೈ ತಂಡಕ್ಕೆ ಕೋಲ್ಕತಾ ನೆಚ್ಚಿನ ತಾಣವಾಗಿದೆ. ಈಡನ್ ಗಾರ್ಡನ್ಸ್‌ನಲ್ಲಿ 2013ರಲ್ಲಿ ನಡೆದ ಫೈನಲ್‌ನಲ್ಲಿ ಚೆನ್ನೈ ವಿರುದ್ಧ 23 ರನ್‌ಗಳ ಜಯ ಗಳಿಸಿ ಮುಂಬೈ ಇಂಡಿಯನ್ಸ್ ತಂಡ ಚಾಂಪಿಯನ್ ಆಗಿತ್ತು. [ಫೈನಲ್: ನಿಮಗೆ ಗೊತ್ತಿರದ 10 ಸಂಗತಿ]

2010 ಹಾಗೂ 2011ರ ಲ್ಲಿ ಕಪ್ ಗೆದ್ದ ಧೋನಿ ಹುಡುಗರು ಈ ಬಾರಿ ಕಪ್ ಗೆದ್ದು 15 ಕೋಟಿ ರು ಬಹುಮಾನ ಗಳಿಸಲು ಸಜ್ಜಾಗಿದ್ದಾರೆ. ರನ್ನರ್ ಗೆ 10 ಕೋಟಿ ರು ಸಿಗಲಿದೆ. ಈ ಮುಂಚಿನ ಫೈನಲ್ಸ್ ಫಲಿತಾಂಶ ಮುಂದಿದೆ...

ಐಪಿಎಲ್ 2014 ಗೆದ್ದಿದ್ದು ಕೆಕೆಆರ್

ಐಪಿಎಲ್ 2014 ಗೆದ್ದಿದ್ದು ಕೆಕೆಆರ್

ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಕಿಂಗ್ಸ್ XI ಪಂಜಾಬ್ ತಂಡವನ್ನು 3 ವಿಕೆಟ್ ಗಳಿಂದ ಸೋಲಿಸಿ ಕಪ್ ಎತ್ತಿದ ಕೋಲ್ಕತ್ತಾ ನೈಟ್ ರೈಡರ್ಸ್. ಕಿಂಗ್ಸ್ XI ಪಂಜಾಬ್ 199/4 (20 ಓವರ್ಸ್) ಕೆಕೆಆರ್ 200/7 (19.3 ಓವರ್ಸ್), ಮನೀಶ್ ಪಾಂಡೆ ಪಂದ್ಯಶ್ರೇಷ್ಠ. [ಸ್ಕೋರ್ ಕಾರ್ಡ್ ಇಲ್ಲಿ ನೋಡಿ]

ಐಪಿಎಲ್ 2013 ಗೆದ್ದಿದ್ದು ಮುಂಬೈ

ಐಪಿಎಲ್ 2013 ಗೆದ್ದಿದ್ದು ಮುಂಬೈ

ಕೋಲ್ಕತ್ತಾದಲ್ಲಿ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 23 ರನ್ ಗಳಿಂದ ಸೋಲಿಸಿದ ಮುಂಬೈ.
ಮುಂಬೈ 148/9 (20 ಓವರ್ಸ್), ಸಿಎಸ್ ಕೆ 125/9 (20 ಓವರ್ಸ್), ಪಂದ್ಯ ಶ್ರೇಷ್ಠ : ಕಿರಾನ್ ಪೊಲ್ಲಾರ್ಡ್.[ಸ್ಕೋರ್ ಕಾರ್ಡ್ ಇಲ್ಲಿದೆ]

ಐಪಿಎಲ್ 2012ರಲ್ಲಿ ಕೆಕೆಆರ್ ಗೆ ಗೆಲುವು

ಐಪಿಎಲ್ 2012ರಲ್ಲಿ ಕೆಕೆಆರ್ ಗೆ ಗೆಲುವು

ಚೆನ್ನೈನಲ್ಲಿ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 5 ವಿಕೆಟ್ ಗಳಿಂದ ಸೋಲಿಸಿದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ.

ಚೆನ್ನೈ: 190/3 (20 ಓವರ್ಸ್), ಕೆಕೆಆರ್ 192/5 ( 19.247ಓವರ್ಸ್), ಪಂದ್ಯ ಶ್ರೇಷ್ಠ : ಮನ್ವೀಂದರ್ ಬಿಸ್ಲಾ. [ಸ್ಕೋರ್ ಕಾರ್ಡ್]
ಐಪಿಎಲ್ 2011ರಲ್ಲಿ ಚೆನ್ನೈಗೆ ಕಪ್

ಐಪಿಎಲ್ 2011ರಲ್ಲಿ ಚೆನ್ನೈಗೆ ಕಪ್

* ಚೆನ್ನೈನಲ್ಲಿ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು 58ರನ್ ಗಳಿಂದ ಸೋಲಿಸಿದ ಚೆನ್ನೈ.
* ಚೆನ್ನೈ: 205/5 (20 ಓವರ್ಸ್), ಆರ್ ಸಿಬಿ 147/8 (20 ಓವರ್ಸ್) ಪಂದ್ಯ ಶ್ರೇಷ್ಠ: ಮುರಳಿ ವಿಜಯ್ [ಸ್ಕೋರ್ ಕಾರ್ಡ್]

ಐಪಿಎಲ್ 2010 ಚೆನ್ನೈಗೆ ಕಿರೀಟ

ಐಪಿಎಲ್ 2010 ಚೆನ್ನೈಗೆ ಕಿರೀಟ

ಮುಂಬೈ ತಂಡವನ್ನು ಮುಂಬೈನಲ್ಲೇ 22 ರನ್ ಗಳಿಂದ ಸೋಲಿಸಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ.
ಮುಂಬೈ 146/9 (20 ಓವರ್ಸ್), ಚೆನ್ನೈ 168/5 (20 ಓವರ್ಸ್), ಪಂದ್ಯ ಶ್ರೇಷ್ಠ : ಸುರೇಶ್ ರೈನಾ . [ಸ್ಕೋರ್ ಕಾರ್ಡ್]

ಐಪಿಎಲ್ 2009 ಡೆಕ್ಕನ್ ಗೆ ಕಪ್

ಐಪಿಎಲ್ 2009 ಡೆಕ್ಕನ್ ಗೆ ಕಪ್

ಜೋಹಾನ್ಸ್ ಬರ್ಗ್ ನಲ್ಲಿ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು 6 ರನ್ ಗಳಿಂದ ಸೋಲಿಸಿದ ಡೆಕ್ಕನ್ ಚಾರ್ಜರ್ಸ್.
ಡಿಸಿ 143/6 (20 ಓವರ್ಸ್), ಆರ್ ಸಿಬಿ 137/9 (20 ಓವರ್ಸ್) ಪಂದ್ಯ ಶ್ರೇಷ್ಠ: ಅನಿಲ್ ಕುಂಬ್ಳೆ (ಆರ್ ಸಿಬಿ) ಸ್ಕೋರ್ ಕಾರ್ಡ್

ಐಪಿಎಲ್ 2008 ಆರ್ ಆರ್ ಗೆಲುವು

ಐಪಿಎಲ್ 2008 ಆರ್ ಆರ್ ಗೆಲುವು

ಮುಂಬೈನಲ್ಲಿ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 3 ವಿಕೆಟ್ ಗಳಿಂದ ಸೋಲಿಸಿ ಚೊಚ್ಚಲ ಕಪ್ ಎತ್ತಿದ್ದ ರಾಜಸ್ಥಾನ್ ರಾಯಲ್ಸ್.
ರಾಜಸ್ಥಾನ್ ರಾಯಲ್ಸ್ 163/5 (20 ಓವರ್ಸ್), ಚೆನ್ನೈ ಸೂಪರ್ ಕಿಂಗ್ಸ್ 164/7 (20 ಓವರ್ಸ್), ಪಂದ್ಯಶ್ರೇಷ್ಠ ಯೂಸುಫ್ ಪಠಾಣ್ (ಆರ್ ಆರ್), ಸ್ಕೋರ್ ಕಾರ್ಡ್ ನೋಡಿ

Story first published: Wednesday, January 3, 2018, 10:03 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+