ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನಂ.2 ಪವರ್: ಮುಂಬೈಗೆ ಐಪಿಎಲ್ 2015 ಕಪ್?

By Mahesh

ಬೆಂಗಳೂರು, ಮೇ.20: ಕಳೆದ ನಾಲ್ಕು ವರ್ಷಗಳ ಇಂಡಿಯನ್ ಪ್ರಿಮಿಯರ್ ಲೀಗ್ ಪಂದ್ಯಗಳ ಟ್ರೆಂಡ್, ಅಂಕಿ ಅಂಶ ಗಮನಿಸಿದರೆ ಮೇ.24ರಂದು ಮುಂಬೈ ಇಂಡಿಯನ್ಸ್ ತಂಡ ಐಪಿಎಲ್ 8ರ ಕಪ್ ಎತ್ತಿ ಕುಣಿದಾಡುವ ಸಾಧ್ಯತೆ ಹೆಚ್ಚಿದೆ.

ಐಪಿಎಲ್ 2015 ವಿಶೇಷ ಪುಟ| ಪ್ಲೇ ಆಫ್ ವೇಳಾಪಟ್ಟಿ| ಮಳೆ ಬಂದರೆ ನಿಯಮಗಳು|

2010ರಿಂದ 2014ರ ತನಕದ ಪಂದ್ಯಗಳು ಹಾಗೂ ಫಲಿತಾಂಶ ಗಮನಿಸಿದರೆ ಎಲ್ಲವೂ ಮುಂಬೈ ಇಂಡಿಯನ್ಸ್ ಪರ ವಾಲುತ್ತದೆ. ವಾಂಖೆಡೆ ಸ್ಟೇಡಿಯಂನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮೊದಲ ಕ್ವಾಲಿಫೈಯರ್ ನಲ್ಲಿ 25 ರನ್ ಗಳಿಂದ ಸೋಲಿಸಿದ ಮುಂಬೈ ತಂಡ ಈಗಾಗಲೇ ಐಪಿಎಲ್ 2015ರ ಫೈನಲ್ ಪ್ರವೇಶಿಸಿದೆ.

ಟ್ರೆಂಡ್ ಗಮನಿಸಿದರೆ ಐಪಿಎಲ್ 8ರ ಲೀಗ್ ಹಂತದ ನಂತರ ಅಂಕಪಟ್ಟಿಯಲ್ಲಿ 2ನೇ ಸ್ಥಾನ ಪಡೆದ ತಂಡ ಐಪಿಎಲ್ ಕಪ್ ಎತ್ತಿದ ಉದಾಹರಣೆ ಕಳೆದ ನಾಲ್ಕು ಸೀಸನ್ ನಿಂದ ಮುಂದುವರೆದಿದೆ. ಒಮ್ಮೆ ಮಾತ್ರ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದು ಫೈನಲ್ ಪ್ರವೇಶಿಸಿದ ತಂಡ ಕಪ್ ಗೆದ್ದಿದೆ.

Mumbai Indians

ನಂ.1 ಸ್ಥಾನಕ್ಕಿಂತ ನಂ.2 ಐಪಿಎಲ್ ನಲ್ಲ್ ಪವರ್ ಫುಲ್ ಎನಿಸಿಕೊಂಡಿದೆ. ಇದು ಸತತ 7 ವರ್ಷಗಳಿಂದ ಮುಂದುವರೆದು ಬಂದಿದೆ. ಈ ವರ್ಷದ ಐಪಿಎಲ್ ನಲ್ಲೂ ಮುಂಬೈ ತಂಡ ನಿಧಾನಗತಿಯಿಂದ ಗೆಲುವಿನ ಹಾದಿ ಹಿಡಿದು ಲೀಗ್ ಹಂತದ ಕೊನೆಗೆ ಅಂಕಪಟ್ಟಿಯಲ್ಲಿ ನಂ.2ನೇ ಸ್ಥಾನಕ್ಕೇರಿದೆ.

2013ರ ನಂತರ ಈ 2ನೇ ಸಂಖ್ಯೆ ಮತ್ತೊಮ್ಮೆ ರೋಹಿತ್ ತಂಡಕ್ಕೆ ಅದೃಷ್ಟ ತಂದುಕೊಟ್ಟರೂ ಅಚ್ಚರಿ ಪಡಬೇಕಾಗಿಲ್ಲ. 2013ರಲ್ಲೂ ಲೀಗ್ ಹಂತದ ಅಂತ್ಯಕ್ಕೆ ಮುಂಬೈ ತಂಡ 2ನೇ ಸ್ಥಾನದಲ್ಲಿದ್ದು ನಂತರ ಮೊದಲ ಬಾರಿಗೆ ಕಪ್ ಎತ್ತಿದ್ದನ್ನು ಇಲ್ಲಿ ಮರೆಯುವಂತಿಲ್ಲ.

ಐಪಿಎಲ್ ಚಾಂಪಿಯನ್ ಗಳ ಲೀಗ್ ಹಂತದ ಕೊನೆ ಸ್ಥಾನದ ಅಂಕಿ ಅಂಶ:
* 2008: ರಾಜಸ್ಥಾನ್ ರಾಯಲ್ಸ್ (ನಂ.1)
* 2009 : ಡೆಕ್ಕನ್ ಚಾರ್ಜರ್ಸ್ (ನಂ.4)
* 2010 : ಚೆನ್ನೈ ಸೂಪರ್ ಕಿಂಗ್ಸ್ (ನಂ.3)
* 2011 : ಚೆನ್ನೈ ಸೂಪರ್ ಕಿಂಗ್ಸ್ (ನಂ.2)
* 2012 : ಕೋಲ್ಕತ್ತಾ ನೈಟ್ ರೈಡರ್ಸ್ (ನಂ.2)
* 2013 : ಮುಂಬೈ ಇಂಡಿಯನ್ಸ್ (ನಂ.2)
* 2014 : ಕೋಲ್ಕತ್ತಾ ನೈಟ್ ರೈಡರ್ಸ್ (ನಂ.2)
* 2015: ?

( ಒನ್ ಇಂಡಿಯಾ ಸುದ್ದಿ)

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X