ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ ಪ್ಲೇ ಆಫ್ ಪಂದ್ಯಗಳಿಗೆ ಮಳೆ ಬಂದರೆ ಏನು ಕತೆ?

ಬೆಂಗಳೂರು, ಮೇ 19: ಐಪಿಎಲ್ ನ ಕೆಲ ಪಂದ್ಯಗಳನ್ನು ಮಳೆ ನುಂಗಿ ಹಾಕಿದ್ದು ಕೆಲ ತಂಡಗಳಿಗೆ ಲಾಭ ಮಾಡಿದ್ದರೆ ಇನ್ನು ಕೆಲವಕ್ಕೆ ನಷ್ಟ ಮಾಡಿದೆ. ಒಟ್ಟು 56 ಪಂದ್ಯಗಳಲ್ಲಿ 6 ಪಂದ್ಯ ವರುಣದೇವನಿಗೆ ಆಹುತಿಯಾಗಿದೆ.

ಈಗ ಪ್ಲೇ ಆಫ್ ಹಂತ ಆರಂಭವಾಗಿದ್ದು ಮಳೆ ಬಂದರೆ ಹೇಗೆ? ಏನಾಗುತ್ತದೆ? ಎಂಬ ಪ್ರಶ್ನೆ ಕಾಡುತ್ತಿದ್ದರೆ ಅದಕ್ಕೆ ಇಲ್ಲಿದೆ ಉತ್ತರ. ಮಳೆ ಬಂದು ಪಂದ್ಯ ನಿಂತರೆ ಎರಡು ಮೀಸಲು ದಿನ ಕಾಯ್ದಿರಿಸಲಾಗಿದೆ. ಆದರೆ ಮಳೆ ಬಂದು ಪಂದ್ಯ ಎಲ್ಲಿಗೆ ನಿಂತಿತ್ತೋ ಅಲ್ಲಿಂದಲೇ ಮರುದಿನ ಆಟ ಮುಂದುವರಿಸಲಾಗುವುದು. ಆದರೆ ಎಲಿಮನೇಟರ್ ಮತ್ತು ಕ್ಯಾಲಿಫಾಯರ್ 2 ಕ್ಕೆ ಮೀಸಲು ದಿನ ಇಲ್ಲ.[ಐಪಿಎಲ್ ಫೈನಲಿಗೆ ಯಾರು ಎಂಟ್ರಿ, ಚೆನ್ನೈ? ಮುಂಬೈ?]

rain

ಕ್ವಾಲಿಫಾಯರ್ 1 ಮತ್ತು ಫೈನಲ್ ಪಂದ್ಯಕ್ಕೆ ಒಂದು ದಿನ ಕಾಯ್ದಿರಿಸಲಾಗಿದೆ. ಚೆನ್ನೈ, ಮುಂಬೈ, ಬೆಂಗಳೂರು ಮತ್ತು ರಾಜಸ್ಥಾನ ತಂಡಗಳು ಪ್ಲೇ ಆಪ್ ಪ್ರವೇಶ ಮಾಡಿದ್ದು ಚಾಂಪಿಯನ್ ಪಟ್ಟಕ್ಕೆ ಏರುವ ತವಕದಲ್ಲಿವೆ. ಮಳೆ ಬಂದರೆ ಏನು ಮಾಡಬೇಕು ಎಂಬುದಕ್ಕೆ ಏಕದಿನ ವಿಶ್ವಕಪ್ ನಲ್ಲಿ ಅಳವಡಿಸಿಕೊಂಡ ಸೂತ್ರಗಳನ್ನೇ ಇಟ್ಟುಕೊಳ್ಳಲಾಗಿದೆ.

ಪ್ಲೇ ಆಫ್ ಪಂದ್ಯಗಳ ಗೈಡ್ಪ್ಲೇ ಆಫ್ ಪಂದ್ಯಗಳ ಗೈಡ್

ಮಳೆ ಬಂದರೆ ಏನಾಗುತ್ತದೆ? ಕಾನೂನು ಮತ್ತು ನಿಯಮಗಳು
1. ಪ್ರತಿಯೊಂದು ಪ್ಲೇ ಆಫ್ ಪಂದ್ಯಕ್ಕೂ 120 ನಿಮಿಷದ ಅಧಿಕ ಕಾಲಾವಧಿ ನೀಡಲಾಗುತ್ತದೆ.
2. ಪಂದ್ಯ ಆರಂಭವಾಗದೇ ಇದ್ದು ಮಳೆ ಬರುತ್ತಿದ್ದರೆ ರಾತ್ರಿ 10.10ರವರೆಗೆ ಪಂದ್ಯ ಶುರು ಮಾಡಲು ಅವಕಾಶವಿದೆ.
3. ಮೀಸಲು ದಿನದ ಲೆಕ್ಕಾಚಾರ
* ಕ್ಯಾಲಿಫಾಯರ್ 1: ಮೇ 20 ಮೀಸಲು ದಿನ. ಮುಂಬೈ ವಾಖೇಂಡೆ ಕ್ರೀಡಾಂಗಣ. ಆರಂಭ ಸಂಜೆ 4 ಗಂಟೆ
* ಎಲಿಮಿನೇಟರ್- ಮೀಸಲು ದಿನ ಇಲ್ಲ[ಪ್ಲೇ ಆಫ್ ಹೈಲೈಟ್ಸ್]
* ಕ್ಯಾಲಿಫಾಯರ್ 2-- ಮೀಸಲು ದಿನ ಇಲ್ಲ
* ಫೈನಲ್: ಮೇ 25 ಮೀಸಲು ದಿನ. ಈಡನ್ ಗಾರ್ಡನ್ ಕೋಲ್ಕತ್ತಾ, ಆರಂಭ ರಾತ್ರಿ 8 ಗಂಟೆ
ಮೀಸಲು ದಿನಕ್ಕೂ ಸಹ ಹೆಚ್ಚುವರಿ 120 ನಿಮಿಷಗಳನ್ನು ನೀಡಲಾಗುತ್ತದೆ.

rain

4. ಪ್ರತಿಯೊಂದು ಪಂದ್ಯದ ಫಲಿತಾಂಶ ನಿರೀಕ್ಷೆಯಲ್ಲೇ ಇರಲಾಗುತ್ತದೆ. ಕನಿಷ್ಠ ಅಂದರೆ 5 ಓವರ್ ಪಂದ್ಯ ಮಾಡಲು ಅವಕಾಶವಿದೆ.
5. ಒಂದು ವೇಳೆ 5 ಓವರ್ ಪಂದ್ಯವಾದರೆ ಅದು ಮಧ್ಯರಾತ್ರಿ 12.26 ಕ್ಕೆ ಆರಂಭವಾಗಬಹುದು. ಅಂದರ 1.20 ನಿಮಿಷಕ್ಕೆ ಪಂದ್ಯ ಮುಗಿಯಬೇಕು. ಮೀಸಲು ದಿನಕ್ಕೂ ಮಳೆ ಅಡ್ಡಗಾಲಾದರೆ ರಾತ್ರಿ 8.26 ರವರೆಗೆ ಪಂದ್ಯ ಆರಂಭ ಮಾಡಲು ಅವಕಾಶವಿದೆ.
6. ಹಿಂದಿನ ದಿನ ಪಂದ್ಯ ಎಲ್ಲಿಗೆ ನಿಂತಿತ್ತೋ ಅಲ್ಲಿಂದಲೇ ಆರಂಭ ಮಾಡಲಾಗುವುದು. ಹೊಸದಾಗಿ ಪಂದ್ಯ ಶುರು ಮಾಡಲಾಗುವುದಿಲ್ಲ.
7. ಟಾಸ್ ಆಗಿ ಪಂದ್ಯ ಆರಂಭ ಗೊಳ್ಳದಿದ್ದರೆ ಮರುದಿನ ಹೊಸದಾಗಿ ಟಾಸ್ ಮಾಡಲಾಗುವುದು.
* ಕ್ಯಾಲಿಫಾಯರ್ 1 ಪಂದ್ಯ ಆರಂಭವಾಗಿ 4 ಓವರ್ ನಂತರ ಮಳೆ ಬಂದು ಆ ದಿನ ಪಂದ್ಯ ನಡೆಸಲು ಸಾಧ್ಯವಾಗದಿದ್ದರೆ ಮರುದಿನ ಇದೇ ಪಂದ್ಯವನ್ನು ಮುಂದುವರಿಸಲಾಗುವುದು.[ಯುವಿ 'ಭಾಭಿ'ಯನ್ನು ಬಾಚಿ ತಬ್ಬಿಕೊಂಡ ವಿರಾಟ್ ಕೊಹ್ಲಿ!]
* ಕ್ಯಾಲಿಫಾಯರ್ 1 ಪಂದ್ಯ ಆರಂಭವಾಗಿ 4 ಓವರ್ ನಂತರ ಮಳೆ ಬಂದು ನಿಂತು ಪಂದ್ಯ ಆರಂಭಕ್ಕೆ ಮತ್ತೆ ಅವಕಾಶ ಸಿಕ್ಕರೆ ಕನಿಷ್ಠ 5 ಓವರ್ ಪಂದ್ಯ ಮಾಡಲಾಗುವುದು. ಬ್ಯಾಟಿಂಗ್ ಮಾಡುತ್ತಿದ್ದ ತಂಡಕ್ಕೆ ನಂತರ ಸಿಗುವುದು ಕೇವಲ ಆರೇ ಚೆಂಡು.
* 4.3 ಚೆಂಡುಗಳಾಗಿದ್ದಾಗ ಮಳೆ ಬಂದು ಮರುದಿನ 5 ಓವರ್ ಪಂದ್ಯವಾದರೆ ಬ್ಯಾಟಿಂಗ್ ಪಡೆ ಮೂರು ಚೆಂಡು ಆಡಿ ನಂತರ 5 ಓವರ್ ಬೌಲಿಂಗ್ ಮಾಡಬೇಕಾಗುವುದು.
8. ಕ್ಯಾಲಿಫಾಯರ್ 1 ಆರಂಭವಾಗಿ ಮೊದಲನೇ ತಂಡ 20 ಓವರ್ ಬ್ಯಾಟಿಂಗ್ ಮುಗಿಸಿ ನಂತರ ಚೇಸಿಂಗ್ ತಂಡ 5.1 ಓವರ್ ಬ್ಯಾಟ್ ಮಾಡಿದಾಗ ಮಳೆ ಬಂದರೆ ಡಕ್ ವರ್ಥ್ ಲೂಯಿಸ್ ನಿಯಮದ ಅನ್ವಯ ಫಲಿತಾಂಶ ಪ್ರಕಟ ಮಾಡಲಾಗುವುದು.[ಪಂದ್ಯ ನುಂಗಿದ ಮಳೆ, ಆರ್ ಸಿಬಿ ಪ್ಲೇ ಆಫ್ ಗೆ ಎಂಟ್ರಿ]
9. ಫೈನಲ್ ಪಂದ್ಯ ಟಾಸ್ ನಂತರ ಮಳೆ ಬಂದರೆ ಮರುದಿನ ಹೊಸ ತಂಡ ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ.
10. ಮೀಸಲು ದಿನದಲ್ಲೂ 5 ಓವರ್ ಪಂದ್ಯ ನಡೆಸಲು ಸಾಧ್ಯವಾಗದಿದ್ದರೆ ಸೂಪರ್ ಓವರ್ ಮೂಲಕ ಫಲಿತಾಂಶ ಪಡೆದುಕೊಳ್ಳಲಾಗುತ್ತದೆ.
11. ಕ್ವಾಲಿಫಾಯರ್ 2 ಮತ್ತು ಎಲಿಮನೇಟರ್ ಪಂದ್ಯ ಆರಂಭವೇ ಸಾಧ್ಯವಾಗದಿದ್ದರೆ ಲೀಗ್ ಹಂತದಲ್ಲಿ ಹೆಚ್ಚು ಅಂಕ ಗಳಿಸಿದ ತಂಡಗಳು ನೇರವಾಗಿ ಫೈನಲ್ ಗೆ ಏರುತ್ತವೆ.

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X