Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಆರ್ ಸಿಬಿ ವಿರುದ್ಧ ಸೇಡಿಗೆ ಕಾದಿರುವ ರಾಜಸ್ಥಾನ ರಾಯಲ್ಸ್

ಬೆಂಗಳೂರು, ಏ.29: ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿರುವ ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಸೇಡು ತೀರಿಸಿಕೊಳ್ಳಲು ರಾಜಸ್ಥಾನ್ ರಾಯಲ್ಸ್ ತಂಡ ಸಜ್ಜಾಗಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಏ.29ರಂದು ರಾತ್ರಿ ರಾಯಲ್ಸ್ ವಾರ್ ನಡೆಯಲಿದೆ.

ಕಳೆದ ವಾರ ರಾಜಸ್ಥಾನ್ ರಾಯಲ್ಸ್ ತಂಡವನ್ನು ಬಗ್ಗು ಬಡಿದಿದ್ದ ವಿರಾಟ್ ಕೊಹ್ಲಿ ಪಡೆ ತನ್ನ ಗೆಲುವಿನ ನಾಗಲೋಟ ಮುಂದುವರೆಸಿದೆ. ಅಹಮದಾಬಾದಿನಲ್ಲಿ ರಾಯಲ್ಸ್ ವಿರುದ್ಧ 9 ವಿಕೆಟ್ ಸುಲಭ ಜಯದ ನಂತರ ಡೆಲ್ಲಿ ಡೇರ್ ಡೆವಿಲ್ಸ್ ಮೇಲೆ ಆರ್ ಸಿಬಿ 10 ವಿಕೆಟ್ ದಾಖಲಿಸಿತ್ತು.

[47 ದಿನ, 60 ಪಂದ್ಯ, ಫುಲ್ ಟೈಂ ಟೇಬಲ್] | [8 ತಂಡಗಳ ನೂರೆಂಟು ಆಟಗಾರರು] | [ಐಪಿಎಲ್ 2015: ಫ್ಯಾನ್ಸಿಗೆ ಗೈಡ್]

ಕೋಲ್ಕತ್ತಾ ವಿರುದ್ಧದ ಪಂದ್ಯ ಮಳೆಗೆ ಆಹುತಿಯಾದ ಕಾರಣ ರಾಯಲ್ಸ್ ಪಡೆ ಈಗ ಬೆಂಗಳೂರು ತಂಡದ ವಿರುದ್ಧ ಗೆಲುವು ಸಾಧಿಸಿ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ. ಐಪಿಎಲ್ 8ರ 29ನೇ ಪಂದ್ಯದ ಪೂರ್ವ ನೋಟ ಇಲ್ಲಿದೆ. (ಗ್ಯಾಲರಿ)

IPL 2015 Daily Guide: Match 29 - Royal Challengers Bangalore Vs Rajasthan Royals

ಐಪಿಎಲ್ 2015 ಆರ್ ಸಿಬಿ vs ಆರ್ ಆರ್ ಮ್ಯಾಚ್ ಗೈಡ್:
ಯಾವಾಗ, ಎಲ್ಲಿ ಪಂದ್ಯ?:
* ರಾಯಲ್ ಚಾಲೆಂಜರ್ಸ್ ಬೆಂಗಳೂರು vs ರಾಜಸ್ಥಾನ್ ರಾಯಲ್ಸ್
* ಎಂ ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು
* ಏ.29, ಬುಧವಾರ, 8PM IST. [ಐಪಿಎಲ್ : ವೈಯಕ್ತಿಕ ರನ್ ಗಳಿಕೆ, ಗೇಲ್ ಇಸ್ ಕಿಂಗ್ ]

ಎಲ್ಲೆಲ್ಲಿ ನೋಡಬಹುದು?
* ಸೋನಿ ಮ್ಯಾಕ್ಸ್(ಹಿಂದಿ ಕಾಮೆಂಟ್ರಿ)
* ಸೋನಿ ಸಿಕ್ಸ್ (ಇಂಗ್ಲೀಷ್)
* ಸೋನಿ ಆಥ್ (ಬೆಂಗಾಲಿ)
* ಸೋನಿ ಕಿಕ್ಸ್ (ತಮಿಳು, ತೆಲುಗು)
* [ಯಾವ ದೇಶದಲ್ಲಿ ಯಾವ ಚಾನೆಲ್ ನಲ್ಲಿ ಪ್ರಸಾರ ಪಟ್ಟಿ]
* ಮೊಬೈಲಿನಲ್ಲಿ ಹಾಟ್ ಸ್ಟಾರ್ ಅಪ್ಲಿಕೇಷನ್ ಮೂಲಕ ನೋಡಬಹುದು.

ಪ್ರಮುಖ ಆಟಗಾರರು:
* ಆರ್ ಸಿಬಿ : ಕ್ರಿಸ್ ಗೇಲ್, ಎಬಿ ಡಿವಿಲೆಯರ್ಸ್, ವಿರಾಟ್ ಕೊಹ್ಲಿ, ಮಿಚೆಲ್ ಸ್ಟಾರ್ಕ್
* ಆರ್ ಆರ್: ಅಜಿಂಕ್ಯ ರಹಾನೆ, ಶೇನ್ ವಾಟ್ಸನ್, ಸ್ಟೀವ್ ಸ್ಮಿತ್, ಜೇಮ್ಸ್ ಫಾಲ್ಕ್ನರ್, ಪ್ರವೀಣ್ ತಾಂಬೆ

ಮುಖಾಮುಖಿ
ರಾಜಸ್ಥಾನ-7; ಆರ್ ಸಿಬಿ-7

ಐಪಿಎಲ್ 2015ರ ಅಂಕಪಟ್ಟಿಯಲ್ಲಿ ಸದ್ಯದ ಸ್ಥಾನ
* ಆರ್ ಆರ್ -2 (5 ಗೆಲುವು, 2 ಸೋಲು, 1 ಪಂದ್ಯ ಫಲಿತಾಂಶವಿಲ್ಲ)
* ಆರ್ ಸಿಬಿ- 4 (3 ಗೆಲುವು, 3 ಸೋಲು)

ದಿ ವಾಲ್ ಜೊತೆ ಮಾತಾಡುವುದೇ ಭಾಗ್ಯ ಎಂದ ಕೊಹ್ಲಿ


ತಂಡಗಳು:
ಆರ್ ಸಿಬಿ: ವಿರಾಟ್ ಕೊಹ್ಲಿ(ನಾಯಕ), ಎಬಿ ಡಿವಿಲೆಯರ್ಸ್, ಕ್ರಿಸ್ ಗೇಲ್, ಮಿಚೆಲ್ ಸ್ಟಾರ್ಕ್, ನಿಕ್ ಮ್ಯಾಡಿಸನ್, ವರುಣ್ ಅರೋನ್, ಅಶೋಕ್ ದಿಂಡಾ, ಹರ್ಷಲ್ ಪಟೇಲ್, ವಿಜಯ್ ಜೋಲ್, ಅಬು ನೆಚಿಂ, ಸಂದೀಪ್ ವಾರಿಯರ್, ಯೋಗೇಶ್ ಟಕಾವಾಲೆ, ಯುಜುವೇಂದ್ರ ಚಾಹಲ್, ರಿಲೇ ರೋಸೊ, ಇಕ್ಬಾಲ್ ಅಬ್ದುಲ್ಲಾ, ಮನ್ವಿಂದರ್ ಬಿಸ್ಲಾ, ಮಂದೀಪ್ ಸಿಂಗ್, ದಿನೇಶ್ ಕಾರ್ತಿಕ್(ವಿಕೆಟ್ ಕೀಪರ್), ಎಸ್ ಬದರೀನಾಥ್, ಡರೇನ್ ಸಾಮಿ, ಸೀನ್ ಅಬಾಟ್, ಆಡಂ ಮಿಲ್ನೆ, ಡೇವಿಡ್ ವೀಸೆ, ಸರ್ಫಾಜ್ ಖಾನ್, ಜಲರಾಜ್ ಸಕ್ಸೇನಾ, ಶಿಶಿರ್ ಭವಾನೆ.

ರಾಯಲ್ಸ್ ಅಭ್ಯಾಸ ವಿಡಿಯೋ



ರಾಜಸ್ಥಾನ್ ರಾಯಲ್ಸ್: ಶೇನ್ ವಾಟ್ಸನ್(ನಾಯಕ), ಸ್ಟುವರ್ಟ್ ಬಿನ್ನಿ, ಜೇಮ್ಸ್ ಫಾಲ್ಕ್ನರ್, ಅಜಿಂಕ್ಯ ರಹಾನೆ, ಸಂಜು ಸಾಮ್ಸನ್(ವಿಕೆಟ್ ಕೀಪರ್), ಸ್ಟೀವ್ ಸ್ಮಿತ್, ರಜತ್ ಭಾಟಿಯಾ, ಟಿಮ್ ಸೌಥಿ, ಧವಳ್ ಕುಲಕರ್ಣಿ, ಅಭಿಷೇಕ್ ನಾಯಕ್ರ್, ಕೇನ್ ರಿಚರ್ಡ್ಸನ್, ಬೆನ್ ಕಟ್ಟಿಂಗ್, ಕರುಣ್ ನಾಯರ್, ದೀಪಕ್ ಹೂಡಾ, ದಿಶಾಂತ್ ಯಾಗ್ನಿಕ್, ವಿಕ್ರಮ್ಜೀತ್ ಮಲೀಕ್, ಅಂಕಿತ್ ಶರ್ಮ, ರಾಹುಲ್ ತೆವಾಟಿಯಾ, ಪ್ರವೀಣ್ ತಾಂಬೆ, ಕ್ರಿಸ್ ಮಾರೀಸ್, ದಿನೇಶ್ ಸಾಲುಂಖೆ, ಜುವಾನ್ ಥೆರಾನ್, ಪ್ರದೀಪ್ ಸಾಹು, ಬರೀಂದರ್ ಸರಣ್, ಸಾಗರ್ ತ್ರಿವೇದಿ.

Story first published: Wednesday, January 3, 2018, 10:02 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+