ಚೆನ್ನೈ,ಮೇ.4: ಇಂಡಿಯನ್ ಪ್ರಿಮಿಯರ್ ಲೀಗ್ 2015ರಲ್ಲಿ ಸತತ ಎರಡು ಸೋಲು ಕಂಡಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ತವರಿಗೆ ಮರಳಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸತತ ಗೆಲುವಿನಿಂದ ಬೀಗುತ್ತಿದ್ದು, ಚೆನ್ನೈನಲ್ಲೇ ಧೋನಿ ತಂಡಕ್ಕೆ ಸೋಲುಣಿಸಿ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ. ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಸಂಜೆ ಈ ಕದನ ಕುತೂಹಲಕಾರಿಯಾಗುವ ನಿರೀಕ್ಷೆಯಿದೆ.
ಚೆನ್ನೈನಲ್ಲಿ ಧೋನಿ ನೇತೃತ್ವದ ಸಿಎಸ್ ಕೆ ತಂಡ ಉತ್ತಮ ದಾಖಲೆ ಹೊಂದಿದೆ. ಅದರೆ, ಅರ್ ಸಿಬಿ ಮತ್ತೆ ಗೆಲುವಿನ ಹಾದಿಯಲ್ಲಿ ಸಾಗುತ್ತಿದ್ದು ಭಾರಿ ಸ್ಪರ್ಧೆಯೊಡ್ಡುವ ಸಾಧ್ಯತೆಯಿದೆ. (ಐಪಿಎಲ್ ಗ್ಯಾಲರಿ)
[47 ದಿನ, 60 ಪಂದ್ಯ, ಫುಲ್ ಟೈಂ ಟೇಬಲ್] | [8 ತಂಡಗಳ ನೂರೆಂಟು ಆಟಗಾರರು] | [ಐಪಿಎಲ್ 2015: ಫ್ಯಾನ್ಸಿಗೆ ಗೈಡ್]
ಕಳೆದ ನಾಲ್ಕು ಪಂದ್ಯಗಳಲ್ಲಿ ಮೂರು ಗೆಲುವು ಸಾಧಿಸಿರುವ ಆರ್ ಸಿಬಿ, ಮಳೆಗೆ ಆಹುತಿಯಾದ ಪಂದ್ಯದಲ್ಲೂ ಮೇಲುಗೈ ಸಾಧಿಸಿತ್ತು. ಅದರೆ, ಚೆನ್ನೈ ತಂಡವನ್ನು ಮಣಿಸಲು ಇನ್ನಷ್ಟು ಪರಿಣಾಮಕಾರಿಯಾಗಿ ಕೊಹ್ಲಿ ತಂದ ಆಡಬೇಕಿದೆ.

ಐಪಿಎಲ್ 2015 ಆರ್ ಸಿಬಿ vs ಸಿಎಸ್ ಕೆ ಮ್ಯಾಚ್ ಗೈಡ್:
ಯಾವಾಗ, ಎಲ್ಲಿ ಪಂದ್ಯ?:
* ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಚೆನ್ನೈ ಸೂಪರ್ ಕಿಂಗ್ಸ್
* ಎಂ ಎ ಚಿದಂಬರಂ ಸ್ಟೇಡಿಯಂ, ಚೆನ್ನೈ
* ಮೇ.4, ಸೋಮವಾರ, 4PM IST. [ಐಪಿಎಲ್ : ವೈಯಕ್ತಿಕ ರನ್ ಗಳಿಕೆ, ಗೇಲ್ ಇಸ್ ಕಿಂಗ್ ]
* 8 PM - ಕೆಕೆಆರ್ vs ಎಸ್ ಆರ್ ಎಚ್
ಎಲ್ಲೆಲ್ಲಿ ನೋಡಬಹುದು?
* ಸೋನಿ ಮ್ಯಾಕ್ಸ್ (ಹಿಂದಿ ಕಾಮೆಂಟ್ರಿ)
* ಸೋನಿ ಸಿಕ್ಸ್ (ಇಂಗ್ಲೀಷ್)
* ಸೋನಿ ಆಥ್ (ಬೆಂಗಾಲಿ)
* ಸೋನಿ ಕಿಕ್ಸ್ (ತಮಿಳು, ತೆಲುಗು)
* [ಯಾವ ದೇಶದಲ್ಲಿ ಯಾವ ಚಾನೆಲ್ ನಲ್ಲಿ ಪ್ರಸಾರ ಪಟ್ಟಿ]
* ಮೊಬೈಲಿನಲ್ಲಿ ಹಾಟ್ ಸ್ಟಾರ್ ಅಪ್ಲಿಕೇಷನ್ ಮೂಲಕ ನೋಡಬಹುದು.
ಪ್ರಮುಖ ಆಟಗಾರರು:
* ಆರ್ ಸಿಬಿ : ಕ್ರಿಸ್ ಗೇಲ್, ಎಬಿ ಡಿವಿಲೆಯರ್ಸ್, ವಿರಾಟ್ ಕೊಹ್ಲಿ, ಮಿಚೆಲ್ ಸ್ಟಾರ್ಕ್
* ಸಿಎಸ್ ಕೆ: ಬ್ರೆಂಡನ್ ಮೆಕ್ಲಮ್, ಡ್ವಾಯ್ನೆ ಸ್ಮಿತ್, ಸುರೇಶ್ ರೈನಾ, ಎಂಎಸ್ ಧೋನಿ, ಬ್ರಾವೋ, ಆಶೀಶ್ ನೆಹ್ರಾ
ಮುಖಾಮುಖಿ
ಸಿಎಸ್ ಕೆ-10; ಆರ್ ಸಿಬಿ-7
ಐಪಿಎಲ್ 2015ರ ಅಂಕಪಟ್ಟಿಯಲ್ಲಿ ಸದ್ಯದ ಸ್ಥಾನ
* ಸಿಎಸ್ ಕೆ -2 (6 ಗೆಲುವು, 3 ಸೋಲು)
* ಆರ್ ಸಿಬಿ- 3 (4 ಗೆಲುವು, 3 ಸೋಲು, 1 ಪಂದ್ಯ ಫಲಿತಾಂಶವಿಲ್ಲ)
ತಂಡಗಳು: ಆರ್ ಸಿಬಿ: ವಿರಾಟ್ ಕೊಹ್ಲಿ(ನಾಯಕ), ಎಬಿ ಡಿವಿಲೆಯರ್ಸ್, ಕ್ರಿಸ್ ಗೇಲ್, ಮಿಚೆಲ್ ಸ್ಟಾರ್ಕ್, ನಿಕ್ ಮ್ಯಾಡಿಸನ್, ವರುಣ್ ಅರೋನ್, ಅಶೋಕ್ ದಿಂಡಾ, ಹರ್ಷಲ್ ಪಟೇಲ್, ವಿಜಯ್ ಜೋಲ್, ಅಬು ನೆಚಿಂ, ಸಂದೀಪ್ ವಾರಿಯರ್, ಯೋಗೇಶ್ ಟಕಾವಾಲೆ, ಯುಜುವೇಂದ್ರ ಚಾಹಲ್, ರಿಲೇ ರೋಸೊ, ಇಕ್ಬಾಲ್ ಅಬ್ದುಲ್ಲಾ, ಮನ್ವಿಂದರ್ ಬಿಸ್ಲಾ, ಮಂದೀಪ್ ಸಿಂಗ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಎಸ್ ಬದರೀನಾಥ್, ಡರೇನ್ ಸಾಮಿ, ಸೀನ್ ಅಬಾಟ್, ಆಡಂ ಮಿಲ್ನೆ, ಡೇವಿಡ್ ವೀಸೆ, ಸರ್ಫಾಜ್ ಖಾನ್, ಜಲರಾಜ್ ಸಕ್ಸೇನಾ, ಶಿಶಿರ್ ಭವಾನೆ.
ಚೆನ್ನೈ ಸೂಪರ್ ಕಿಂಗ್ಸ್: ಎಂಎಸ್ ಧೋನಿ (ನಾಯಕ, ವಿಕೆಟ್ ಕೀಪರ್), ಆಶೀಶ್ ನೆಹ್ರಾ, ಬಾಬಾ ಅಪರಾಜಿತ್, ಬ್ರೆಂಡನ್ ಮೆಕ್ಲಮ್, ಡ್ವಾಯ್ನೆ ಬ್ರಾವೋ, ಫ್ಲಾಪ್ ಡು ಪ್ಲೆಸಿಸ್, ಈಶ್ವರ್ ಪಾಂಡೆ, ಮ್ಯಾಟ್ ಹೆನ್ರಿ, ಮಿಥುನ್ ಮನ್ಹಾಸ್, ಮೋಹಿತ್ ಶರ್ಮ, ಪವನ್ ನೇಗಿ, ರವಿಚಂಡ್ರನ್ ಅಶ್ವಿನ್, ರವೀಂದ್ರ ಜಡೇಜ, ಸ್ಯಾಮುಯಲ್ ಬದ್ರಿ, ಸುಋಏಸ್ ರೈನಾ, ರೋನಿತ್ ಮೋರೆ, ಮೈಕಲ್ ಹಸ್ಸಿ, ರಾಹುಲ್ ಶರ್ಮ, ಕೈಲಿ ಅಬಾಟ್, ಅಂಕುಶ್ ಬೈನ್ಸ್, ಇರ್ಫಾನ್ ಪಠಾಣ್, ಪ್ರತ್ಯುಷ್ ಸಿಂಗ್, ಆಂಡ್ರೆ ಟೈ, ಏಕಲವ್ಯ ದ್ವಿವೇದಿ.