Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮಾಡು ಇಲ್ಲವೇ ಮಡಿ ಪಂದ್ಯ: ಬೆಂಗಳೂರು vs ಹೈದರಾಬಾದ್

ಹೈದರಾಬಾದ್, ಮೇ.15: ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್ ರೈಸರ್ಸ್ ಹೈದರಾಬಾದ್ ತಂಡಗಳು 'ಮಾಡು ಇಲ್ಲವೇ ಮಡಿ' ಎಂಬ ಪರಿಸ್ಥಿತಿಯಲ್ಲಿವೆ. ಐಪಿಎಲ್ 2015 ಲೀಗ್ ಹಂತ ರೋಚಕ ಘಟ್ಟ ತಲುಪಿದ್ದು, ಚೆನ್ನೈ ಬಿಟ್ಟರೆ ಉಳಿದ ತಂಡಗಳು ಪ್ಲೇ ಆಫ್ ಗಾಗಿ ಸೆಣಸಾಟ ಮುಂದುವರೆಸಿವೆ.

ಚೆನ್ನೈ ಸೂಪರ್ ಕಿಂಗ್ಸ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿ ಪ್ಲೇ ಆಫ್ ಗೆ ಅರ್ಹತೆ ಪಡೆದುಕೊಂಡಿದೆ. ಉಳಿದಂತೆ ಗುರುವಾರ ಮುಂಬೈ ಇಂಡಿಯನ್ಸ್ ಗಳಿಸಿದ ರೋಚಕ ಗೆಲುವು ಪಂಡಿತರ ಲೆಕ್ಕಾಚಾರ ಉಲ್ಟಾಪಲ್ಟಾ ಮಾಡಿದೆ.

ಕೋಲ್ಕತ್ತಾ ನೈಟ್ ರೈಡರ್ಸ್, ರಾಜಸ್ಥಾನ್ ರಾಯಲ್ಸ್, ಮುಂಬೈ ಇಂಡಿಯನ್ಸ್, ಸನ್ ರೈಸರ್ಸ್ ಹೈದರಾಬಾದ್ ಎಲ್ಲಾ ತಂಡಗಳಿಗೂ ಮುಂದಿನ ಹಂತಕ್ಕೆ ಅರ್ಹತೆ ಪಡೆಯುವ ಅವಕಾಶದ ಹೆಬ್ಬಾಗಿಲು ತೆರೆದಿದೆ.

[47 ದಿನ, 60 ಪಂದ್ಯ, ಫುಲ್ ಟೈಂ ಟೇಬಲ್] | [8 ತಂಡಗಳ ನೂರೆಂಟು ಆಟಗಾರರು] | [ಐಪಿಎಲ್ 2015: ಫ್ಯಾನ್ಸಿಗೆ ಗೈಡ್]

ಹೈದ್ರಾಬಾದ್ ಮತ್ತು ಪಂಜಾಬ್ ನಡುವಿನ ರೋಚಕ ಹಣಾಹಣಿಯಲ್ಲಿ ಗೆಲುವು ದಕ್ಕಿಸಿಕೊಂಡ ವಾರ್ನರ್ ಪಡೆ ಅಂದು ಆರ್ ಸಿಬಿಯನ್ನು 5 ನೇ ಸ್ಥಾನಕ್ಕೆ ತಳ್ಳಿತ್ತು.

Sunrisers Hyderabad Vs Royal Challengers Bangalore


ಸತತ ಮೂರು ಗೆಲುವು ಸಾಧಿಸಿರುವ ಹೈದರಾಬಾದ್ ಸಹಜವಾಗೇ ತವರು ನೆಲದಲ್ಲಿ ಆಡುವ ಲಾಭ ಪಡೆದುಕೊಳ್ಳಲಿದೆ. 6 ಅರ್ಧಶತಕ ಸಿಡಿಸಿರುವ ನಾಯಕ ಡೇವಿಡ್ ವಾರ್ನರ್ ಫುಲ್ ಫಾರ್ಮ್ ನಲ್ಲಿದ್ದಾರೆ. ಆರ್ ಸಿಬಿ ಸರಿಯಾದ ಕಾಂಬಿನೇಷನ್ ರೂಪಿಸಿ ಆಡದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. (ಐಪಿಎಲ್ ಗ್ಯಾಲರಿ)

ಐಪಿಎಲ್ 2015 : ಆರ್ ಸಿಬಿ vs ಎಸ್ಅರ್ ಎಚ್ ಮ್ಯಾಚ್ ಗೈಡ್:
ಯಾವಾಗ, ಎಲ್ಲಿ ಪಂದ್ಯ?:
* ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಸನ್ ರೈಸರ್ಸ್ ಹೈದರಾಬಾದ್
* ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ, ಹೈದರಾಬಾದ್.
* ಮೇ.15, ಶುಕ್ರವಾರ, 8 PM

ಎಲ್ಲೆಲ್ಲಿ ನೋಡಬಹುದು?
* ಸೋನಿ ಮ್ಯಾಕ್ಸ್(ಹಿಂದಿ ಕಾಮೆಂಟ್ರಿ)
* ಸೋನಿ ಸಿಕ್ಸ್ (ಇಂಗ್ಲೀಷ್)
* ಸೋನಿ ಆಥ್ (ಬೆಂಗಾಲಿ)
* ಸೋನಿ ಕಿಕ್ಸ್ (ತಮಿಳು, ತೆಲುಗು)
* [ಯಾವ ದೇಶದಲ್ಲಿ ಯಾವ ಚಾನೆಲ್ ನಲ್ಲಿ ಪ್ರಸಾರ ಪಟ್ಟಿ]

* ಮೊಬೈಲಿನಲ್ಲಿ ಹಾಟ್ ಸ್ಟಾರ್ ಅಪ್ಲಿಕೇಷನ್ ಮೂಲಕ ನೋಡಬಹುದು.

ಪ್ರಮುಖ ಆಟಗಾರರು:
* ಆರ್ ಸಿಬಿ : ಕ್ರಿಸ್ ಗೇಲ್, ಎಬಿ ಡಿವಿಲೆಯರ್ಸ್, ವಿರಾಟ್ ಕೊಹ್ಲಿ, ಮಿಚೆಲ್ ಸ್ಟಾರ್ಕ್
* ಎಸ್ ಆರ್ ಎಚ್: ಡೇವಿಡ್ ವಾರ್ನರ್, ಮೋಯಿಸ್ ಹೆನ್ರಿಕ್ಯೂಸ್, ಟ್ರೆಂಟ್ ಬೌಲ್ಟ್

ಮುಖಾಮುಖಿ
ಹೈದರಾಬಾದ್ -3; ಬೆಂಗಳೂರು-2

ಐಪಿಎಲ್ 2015ರ ಅಂಕಪಟ್ಟಿಯಲ್ಲಿ ಸದ್ಯದ ಸ್ಥಾನ
* ಎಸ್ ಆರ್ ಎಚ್ -3 (7 ಗೆಲುವು, 5 ಸೋಲು)
* ಆರ್ ಸಿಬಿ- 6 (6 ಗೆಲುವು, 5 ಸೋಲು, 1 ಫಲಿತಾಂಶವಿಲ್ಲ)

ತಂಡಗಳು:
ಆರ್ ಸಿಬಿ: ವಿರಾಟ್ ಕೊಹ್ಲಿ(ನಾಯಕ), ಎಬಿ ಡಿವಿಲೆಯರ್ಸ್, ಕ್ರಿಸ್ ಗೇಲ್, ಮಿಚೆಲ್ ಸ್ಟಾರ್ಕ್, ನಿಕ್ ಮ್ಯಾಡಿಸನ್, ವರುಣ್ ಅರೋನ್, ಅಶೋಕ್ ದಿಂಡಾ, ಹರ್ಷಲ್ ಪಟೇಲ್, ವಿಜಯ್ ಜೋಲ್, ಅಬು ನೆಚಿಂ, ಸಂದೀಪ್ ವಾರಿಯರ್, ಯೋಗೇಶ್ ಟಕಾವಾಲೆ, ಯುಜುವೇಂದ್ರ ಚಾಹಲ್, ರಿಲೇ ರೋಸೊ, ಇಕ್ಬಾಲ್ ಅಬ್ದುಲ್ಲಾ, ಮನ್ವಿಂದರ್ ಬಿಸ್ಲಾ, ಮಂದೀಪ್ ಸಿಂಗ್, ದಿನೇಶ್ ಕಾರ್ತಿಕ್(ವಿಕೆಟ್ ಕೀಪರ್), ಎಸ್ ಬದರೀನಾಥ್, ಡರೇನ್ ಸಾಮಿ, ಸೀನ್ ಅಬಾಟ್, ಆಡಂ ಮಿಲ್ನೆ, ಡೇವಿಡ್ ವೀಸೆ, ಸರ್ಫಾಜ್ ಖಾನ್, ಜಲರಾಜ್ ಸಕ್ಸೇನಾ, ಶಿಶಿರ್ ಭವಾನೆ.

ಸನ್ ರೈಸರ್ಸ್ ಹೈದರಾಬಾದ್: ಡೇವಿಡ್ ವಾರ್ನರ್ (ನಾಯಕ), ಶಿಖರ್ ಧವನ್, ಡೇಲ್ ಸ್ಟೇನ್, ಭುವನೇಶ್ವರ್ ಕುಮಾರ್, ಇಶಾಂತ್ ಶರ್ಮ, ಮೋಯಿಸ್ ಹೆನ್ರಿಕ್Yಊಸ್, ಲೋಕೇಶ್ ರಾಹುಲ್, ಪರ್ವೇಜ್ ರಸೂಲ್, ನಮನ್ ಓಜಾ (ವಿಕೆಟ್ ಕೀಪರ್), ಆಶೀಶ್ ರೆಡ್ಡಿ, ರಿಕಿ ಭೂಯಿ, ಛಾಮಾ ಮಿಲಿಂದ್, ಕರಣ್ ಶರ್ಮ, ಕೇನ್ ವಿಲಿಯಂಸನ್, ಕೇವಿನ್ ಪೀಟರ್ಸನ್, ಇಯಾನ್ ಮಾರ್ಗನ್, ರವಿ ಬೋಪಾರಾ, ಟ್ರೆಂಟ್ ಬೌಲ್ಟ್, ಪ್ರವೀಣ್ ಕುಮಾರ್, ಹನುಮಾ ವಿಹಾರಿ, ಪ್ರಶಾಂತ್ ಪದ್ಮನಾಭನ್, ಬಿಪುಲ್ ಶರ್ಮ, ಸಿದ್ದಾರ್ಥ್ ಕೌಲ್.

(ಒನ್ ಇಂಡಿಯಾ ಸುದ್ದಿ)

Story first published: Wednesday, January 3, 2018, 10:02 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+