ವಿರಾಮದ ವೇಳೆ ಐಪಿಎಲ್ ಆಟಗಾರರೇನು ಮಾಡ್ತಿದ್ದಾರೆ?
ಬೆಂಗಳೂರು, ಏ.17: ಐಸಿಸಿ ವಿಶ್ವಕಪ್ ಟೂರ್ನಿ 2015ರ ನಂತರ ಟೀಂ ಇಂಡಿಯಾದ ಬಹುತೇಕ ಆಟಗಾರರು ಟಿ20 ಮೂಡ್ ಗೆ ಹೊಂದಿಕೊಂಡಿದ್ದಾರೆ. ಕ್ರಿಕೆಟ್ ಜೊತೆಗೆ ಮನರಂಜನೆಯ ಲೋಕದಲ್ಲೂ ಆಟಗಾರರು ಮುಳುಗೇಳುತ್ತಿದ್ದಾರೆ. ಸಮಯ ಸಿಕ್ಕರೆ ಸಾಕು ಫ್ಯಾಮಿಲಿ, ಫ್ರೆಂಡ್ಸ್ ಜೊತೆ ಆಟಗಾರರು ಕಾಲ ಕಳೆಯುತ್ತಿದ್ದಾರೆ.
ಎಂಎಸ್ ಧೋನಿ ಅವರಂತೂ ಪುತ್ರಿ ಝೀವಾ ಹಾಗೂ ಪತ್ನಿ ಸಾಕ್ಷಿ ಜೊತೆ ಜೊತೆ ಓಡಾಟ ಶುರು ಮಾಡಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ಪಂದ್ಯ ನಡೆಯುವ ಮೈದಾನಗಳಿಗೆ ಪುತ್ರಿ ಕರೆ ತರುತ್ತಿದ್ದಾರೆ. ಬಿಸಿಸಿಐ ಹಾಗೂ ಐಪಿಎಲ್ ಆಯೋಜಕರು ಕೂಡಾ ಫ್ಯಾಮಿಲಿ ಜೊತೆ ಕಾಲ ಕಳೆಯಲು ಅನುಮತಿ ನೀಡಿದೆ.
[47 ದಿನ, 60 ಪಂದ್ಯ, ಫುಲ್ ಟೈಂ ಟೇಬಲ್] | [8 ತಂಡಗಳ ನೂರೆಂಟು ಆಟಗಾರರು] | [ಐಪಿಎಲ್ 2015: ಫ್ಯಾನ್ಸಿಗೆ ಗೈಡ್]
ಅನೇಕ ತಂಡಗಳಲ್ಲಿರುವ ವಿದೇಶಿ ಆಟಗಾರರು ಕೂಡಾ ತಂಡದ ಪ್ರಚಾರ ಕಾರ್ಯ ಹಾಗೂ ಕೆಲವು ಜಾಹೀರಾತುಗಳನ್ನು ಕಾಣಿಸಿಕೊಂಡು ಖುಷಿಯಾಗಿ ಕಾಲ ಕಳೆಯುತ್ತಿದ್ದಾರೆ.
ಅಭಿಮಾನಿಗಳ ಜೊತೆ ಹೆಚ್ಚು ಕಾಲ ಕಳೆಯದಂತೆ ಆಟಗಾರರಿಗೆ ಬಿಸಿಸಿಐ ನಿರ್ಬಂಧ ಹೇರಿದೆ. ಹನಿ ಟ್ರ್ಯಾಪಿಂಗ್ ಬಗ್ಗೆ ಈಗಾಗಲೇ ಎಲ್ಲಾ ತಂಡಕ್ಕೂ ಸುತ್ತೋಲೆ ಕಳಿಸಲಾಗಿದೆ. ನಿರ್ಬಂಧಗಳ ನಡುವೆಯೂ ಆಟಗಾರರು ಕ್ರಿಕೆಟ್ ಹಬ್ಬದ ಮಜಾ ಅನುಭವಿಸುತ್ತಿದ್ದಾರೆ. ಆಟಗಾರರ ಸಂತಸದ ಕ್ಷಣಗಳ ಚಿತ್ರಗಳು ಇಲ್ಲಿವೆ...

ಸಾಕ್ಷಿ, ಝೀವಾ ಜೊತೆ ಧೋನಿ
ಪತ್ನಿ ಸಾಕ್ಷಿ, ಪುತ್ರಿ ಝೀವಾ ಜೊತೆ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಧೋನಿ ಹೆಚ್ಚು ಕಾಲ ಕಳೆಯುತ್ತಿದ್ದಾರೆ.

ಕೆಕೆಆರ್ ಜಿಮ್ ನಲ್ಲಿ ಕಸರತ್ತು
ಕೆಕೆಆರ್ ತಂಡದ ಕೋಚ್ ವಾಸೀಂ ಅಕ್ರಮ್ ಹಾಗೂ ಆಟಗಾರ ಯೂಸುಫ್ ಪಠಾಣ್ ಅವರು ಜಿಮ್ ಉದ್ಘಾಟನೆ ಮಾಡಿ ಕಸರತ್ತು ಮಾಡಿದ್ದು ಹೀಗೆ

ಮುಂಬೈ ಇಂಡಿಯನ್ಸ್ ಆಟಗಾರರು
ಮುಂಬೈ ಇಂಡಿಯನ್ಸ್ ಆಟಗಾರರಾದ ರೋಹಿತ್ ಶರ್ಮ ಹಾಗೂ ಹರ್ಭಜನ್ ಸಿಂಗ್ ಅವರು ಖಾಸಗಿ ಸಮಾರಂಭವೊಂದರಲ್ಲಿ ಕಾಣಿಸಿಕೊಂಡಿದ್ದು ಹೀಗೆ

ಮಕ್ಕಳ ಜೊತೆ ಹರ್ಭಜನ್ ಸೆಲ್ಫಿ
ವಿಶೇಷಚೇತನ ಮಕ್ಕಳ ಜೊತೆ ಹರ್ಭಜನ್ ಸೆಲ್ಫಿ ಫೋಟೊ ತೆಗೆಸಿಕೊಂಡು ಆನಂದಿಸಿದರು.

ರಿಕಿ ಪಾಂಟಿಂಗ್ ಹಾಗೂ ನೀತಾ ಅಂಬಾನಿ
ಮುಂಬೈ ಇಂಡಿಯನ್ಸ್ ಕೋಚ್ ರಿಕಿ ಪಾಂಟಿಂಗ್ ಹಾಗೂ ತಂಡದ ಒಡತಿ ನೀತಾ ಅಂಬಾನಿ ಅವರು ವಿಶೇಷ ಚೇತನ ಮಕ್ಕಳ ಜೊತೆ ಕಾಲ ಕಳೆದಿದ್ದು ಹೀಗೆ...
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications