ಐಪಿಎಲ್ ಕಾಮೆಂಟ್ರಿ ಗೇಲಿ: ಕಾಂಬ್ಳಿ ಟ್ವೀಟ್ಸ್ ರಹಸ್ಯ ಬಹಿರಂಗ
ಮುಂಬೈ, ಏ.15: ಮಾಜಿ ಕ್ರಿಕೆಟರ್ ವಿನೋದ್ ಕಾಂಬ್ಳಿ ಯಾಕೋ ಹಿಂದಿ ಕಾಮೆಂಟ್ರಿ ಕೇಳಿ ಗರಂ ಆಗಿ ಟ್ವೀಟ್ ಮಾಡಿ ದೊಡ್ಡ ರಾದ್ಧಾಂತ ಮಾಡಿ ಕೊನೆಗೆ ಸ್ಸಾರಿ ಎಂದಿದ್ದಾರೆ. ಅದರೆ, ನಾನು ಟ್ವೀಟ್ ಮಾಡೇ ಇಲ್ಲ ಎಂದು ಕಹಾನಿಗೆ ಹೊಸ ಟ್ವಿಸ್ಟ್ ನೀಡಿದ್ದಾರೆ. ವಿನೋದ್ ಕಾಂಬ್ಳಿ ಟ್ವೀಟ್ ಮಾಡಿದ್ದೇಕೆ? ಎಂಬುದು ಇನ್ನೂ ರಹಸ್ಯವಾಗಿದೆ.
ರಾಜಸ್ಥಾನ ರಾಯಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದಲ್ಲಿ ರಾಜಸ್ಥಾನದ ಹುಡುಗರು ವಿಜೃಂಭಿಸಿದ್ದು ಕಾಂಬ್ಳಿಗೆ ಸಹಿಸಲು ಸಾಧ್ಯವಾಗಲಿಲ್ಲವೋ ಅಥವಾ ಮಾಜಿ ಕ್ರಿಕೆಟರ್ ಗಳಾದ ಸಿಕ್ಸರ್ ಸಿಧು, ರಮೀಜ್ ರಾಜ ಹಾಗೂ ಶೋಯಿಬ್ ಅಖ್ತರ್ ಕಾಮೆಂಟ್ರಿ ಕಹಿಯಾಯಿತೋ ಗೊತ್ತಿಲ್ಲ.
[47 ದಿನ, 60 ಪಂದ್ಯ, ಫುಲ್ ಟೈಂ ಟೇಬಲ್] | [8 ತಂಡಗಳ ನೂರೆಂಟು ಆಟಗಾರರು] | [ಐಪಿಎಲ್ 2015: ಫ್ಯಾನ್ಸಿಗೆ ಗೈಡ್]
ಮೈಕ್ರೋ ಬ್ಲಾಗಿಂಗ್ ಸೈಟ್ ಟ್ವಿಟ್ಟರ್ ಬಳಸಿಕೊಂಡು ಮೂವರು ಕಾಮೆಂಟೆಟರ್ಸ್ ಮಾನ ಹರಾಜು ಮಾಡಿದ್ದಾರೆ. ಸಿದ್ದು ಶಾಯಿರಿ ಕೇಳಿ ತಲೆ ಚಿಟ್ಟು ಹಿಡಿದಿದೆ. ರಮೀಜ್ ಹಾಗೂ ಶೋಯಿಬ್ ನಮ್ಮನ್ನು ದೂಷಿಸಿ ದುಡ್ಡು ಮಾಡುತ್ತಿದ್ದಾರೆ ಎಂದಿದ್ದಾರೆ.
ಕಾಂಬ್ಳಿ ಅವರನ್ನು ಕೆಲವರು ಕಮಲ್ ಆರ್ ಖಾನ್ ಗೆ ಹೋಲಿಕೆ ಮಾಡಿದಾಗ ಯಾರು ಅದು ಕೆಆರ್ ಕೆ ನನಗೆ ಗೊತ್ತಿಲ್ಲ ಎಂದು ಕಾಂಬ್ಳಿ ಹೇಳಿದ್ದಾರೆ. ಕೊನೆಗೆ ನನ್ನ ಟ್ವೀಟ್ಸ್ ಬಗ್ಗೆ ಭಾರಿ ಚರ್ಚೆಯಾಗಿದೆ ನಿಜ. ನನಗೆ ಅನ್ನಿಸಿದ್ದು ಹೇಳಿದೆ. ಯಾರಿಗಾದರೂ ನೋವುಂಟು ಮಾಡಿದ್ದರೆ ಕ್ಷಮಿಸಿ, ಈ ವಿಷ್ಯ ಇಲ್ಲಿಗೆ ಬಿಡಿ ಎಂದು ಕ್ಷಮೆಯಾಚಿಸಿದ್ದಾರೆ. ಕಾಂಬ್ಳಿ ಟ್ವೀಟ್ ಮಾಡಿದ ಸ್ಕ್ರೀನ್ ಶಾಟ್ ಹಾಗೂ ಕ್ಷಮೆಯಾಚನೆ ಟ್ವೀಟ್ ಇಲ್ಲಿದೆ ನೋಡಿ...

ವಿವಿಧ ಭಾಷೆಯಲ್ಲಿ ಕಾಮೆಂಟ್ರಿ ಲಭ್ಯ
ಇಂಡಿಯನ್ ಪ್ರಿಮಿಯರ್ ಲೀಗ್ 8 ಟೂರ್ನಿ ಪಂದ್ಯಗಳು ಸೋನಿ ಸಿಕ್ಸ್ ನಲ್ಲಿ ಪ್ರಸಾರವಾಗುತ್ತಿರುವುದು ಅಭಿಮಾನಿಗಳೇ ಗೊತ್ತೇ ಇರುತ್ತದೆ. ಇಂಗ್ಲೀಷ್ ಅಲ್ಲದೆ, ಹಿಂದಿ, ಬೆಂಗಾಲಿ, ತಮಿಳು ಭಾಷೆಯಲ್ಲೂ ಕಾಮೆಂಟ್ರಿ ಲಭ್ಯವಿದೆ. ಸೋನಿ ಟಿವಿ ಹೀಗೊಂದು ವ್ಯವಸ್ಥೆ ಕಲ್ಪಿಸಿದೆ. ಸೋನಿ ಸಿಕ್ಸ್, ಸೆಟ್ ಮ್ಯಾಕ್ಸ್ ನಲ್ಲಿ ಪಂದ್ಯಗಳು ಲಭ್ಯವಿದೆ.

ಕಾಂಬ್ಳಿ ಟ್ವೀಟ್ ಮಾಡಿದ ಸ್ಕ್ರೀನ್ ಶಾಟ್
ರಾಜಸ್ಥಾನ ರಾಯಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದಲ್ಲಿ ರಾಜಸ್ಥಾನದ ಹುಡುಗರು ವಿಜೃಂಭಿಸಿದ್ದು ಕಾಂಬ್ಳಿಗೆ ಸಹಿಸಲು ಸಾಧ್ಯವಾಗಲಿಲ್ಲವೋ ಅಥವಾ ಮಾಜಿ ಕ್ರಿಕೆಟರ್ ಗಳಾದ ಸಿಕ್ಸರ್ ಸಿಧು, ರಮೀಜ್ ರಾಜ ಹಾಗೂ ಶೋಯಿಬ್ ಅಖ್ತರ್ ಕಾಮೆಂಟ್ರಿ ಕಹಿಯಾಯಿತೋ ಗೊತ್ತಿಲ್ಲ.
ಇಲ್ಲಿಗೆ ಸಾಕು ನಿಲ್ಲಿಸಿ ಈ ಬಗ್ಗೆ ಚರ್ಚೆ ಬೇಡ
ಇಲ್ಲಿಗೆ ಸಾಕು ನಿಲ್ಲಿಸಿ ಈ ಬಗ್ಗೆ ಚರ್ಚೆ ಬೇಡ ನಾನು ಕ್ಷಮೆಯಾಚಿಸಿದ್ದೇನೆ ಎಂದ ಎಡಗೈ ಬ್ಯಾಟ್ಸ್ ಮನ್ ವಿನೋದ್ ಕಾಂಬ್ಳಿ.
ನಾನು ಟ್ವೀಟ್ ಮಾಡಿಲ್ಲ, ನನ್ನನ್ನು ದೂಷಿಸಬೇಡಿ
ನಾನು ಟ್ವೀಟ್ ಮಾಡಿಲ್ಲ, ನನ್ನನ್ನು ದೂಷಿಸಬೇಡಿ. ನನ್ನ ಗೆಳೆಯ ಮಾಡಿದ ಕಿತಾಪತಿ ಎಂದು ಟ್ವೀಟ್ ರಹಸ್ಯ ಬಿಚ್ಚಿಟ್ಟ ಕಾಂಬ್ಳಿ.
ಮುಂಬೈ ಅಭಿಮಾನಿ ಮಾಡಿದ ಕೆಲಸ
ನನ್ನ ಗೆಳೆಯ ಮುಂಬೈ ಅಭಿಮಾನಿ ಮಾಡಿದ ಕೆಲಸ. ಮುಂಬೈ ಸೋತಿದ್ದು ಅವನಿಗೆ ಬೇಸರ ತರಿಸಿತು ಎಂಬ ಕಾಂಬ್ಳಿ.
ನನ್ನ ಅಕೌಂಟ್ ಡಿಲೀಟ್ ಮಾಡ್ಲ ಎಂದು ಕೇಳಿದ ಕಾಂಬ್ಳಿ
ನನ್ನ ಅಕೌಂಟ್ ಡಿಲೀಟ್ ಮಾಡ್ಲ ಎಂದು ಕೇಳಿದ ಕಾಂಬ್ಳಿಗೆ ಸಾರ್ವಜನಿಕರಿಂದ ಭರ್ಜರಿ ಪ್ರತಿಕ್ರಿಯೆ ಬಂದಿದೆ. ನಿಮ್ಮ ಗೆಳೆಯ ಹೆಸರು ಜಾನಿ ವಾಕರ್ ಇರಬಹುದು ಅಲ್ವಾ ಎಂದು ಮದ್ಯದ ಬ್ರಾಂಡ್ ಹೆಸರು ಹೇಳಿ ಗೇಲಿ ಮಾಡಲಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications