ಮುಂಬೈನ ಪೊಲ್ಲಾರ್ಡ್ ಪ್ಲಾಸ್ಟರ್ ತೆಗೆದು ಹೇಳಿದ್ದೇನು?
ಬೆಂಗಳೂರು, ಏ.20: ಇಂಡಿಯನ್ ಪ್ರಿಮಿಯರ್ ಲೀಗ್ 2015ರಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಫೇರ್ ಪ್ಲೇ ಅವಾರ್ಡ್ ಯಾರಿಗೆ ಸಿಗುತ್ತದೋ ಇಲ್ಲವೋ ಅದರೆ, ಮನರಂಜನೆ ಮಾತ್ರ ಸಿಗುತ್ತಿದೆ.
ಪೊಲ್ಲಾರ್ಡ್ ಬ್ಯಾಟಿಂಗ್ ಮೂಲಕ ಪ್ರತಿಭೆ ತೋರಿಸುವುದರ ಜೊತೆಗೆ ಮೈದಾನದಲ್ಲಿ ವಿಶಿಷ್ಟ ನಡೆ ಮೂಲಕ ಭಾರಿ ಸುದ್ದಿಯಾಗಿದ್ದಾರೆ. ಅದರೆ, ಪ್ಲಾಸ್ಟರ್ ಹಾಕಿಕೊಂಡಿದ್ದ ಪೊಲ್ಲಾರ್ಡ್ ಆಮೇಲೆ ಇದಕ್ಕೆ ಸೂಕ್ತ ಪ್ರತಿಕ್ರಿಯೆ ನೀಡಿದ್ದಾರೆ.
ಆರ್ ಸಿಬಿ ಓಪನರ್ ಕ್ರಿಸ್ ಗೇಲ್ ಗೇಲಿ ಮಾಡಿದ್ದಕ್ಕೆ ಅಂಪೈರ್ ಪೊಲ್ಲಾರ್ಡ್ ಗೆ ಎಚ್ಚರಿಕೆ ನೀಡಿದರು. ಇದಕ್ಕೆ ಪ್ರತಿಯಾಗಿ ಬಾಯಿಗೆ ಪ್ಲಾಸ್ಟರ್ ಹಾಕಿಕೊಂಡು ಪೊಲ್ಲಾರ್ಡ್ ನಡೆದುಕೊಂಡ ರೀತಿಗೆ ಸಾಮಾಜಿಕ ಜಾಲ ತಾಣಗಳಲ್ಲಿ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿತ್ತು. [ಪೊಲ್ಲಾರ್ಡ್ ಬಾಯಿಗೆ ಪ್ಲಾಸ್ಟರ್, ಜಸ್ಟ್ ಫಾರ್ ಫನ್!]

ಕೆಲವರು ಅಚ್ಚರಿ ವ್ಯಕ್ತಪಡಿಸಿದ್ದುಂಟು. ಪಂದ್ಯದಲ್ಲಿ ಆರ್ ಸಿಬಿ 18 ರನ್ ಗಳಿಂದ ಸೋಲು ಕಂಡಿದ್ದರ ಬಗ್ಗೆ ಚರ್ಚೆಗಿಂತ ಪೊಲ್ಲಾರ್ಡ್ ಬಗ್ಗೆ ಚರ್ಚೆ ಇನ್ನೂ ಜಾರಿಯಲ್ಲಿದೆ.
[47 ದಿನ, 60 ಪಂದ್ಯ, ಫುಲ್ ಟೈಂ ಟೇಬಲ್] | [8 ತಂಡಗಳ ನೂರೆಂಟು ಆಟಗಾರರು] | [ಐಪಿಎಲ್ 2015: ಫ್ಯಾನ್ಸಿಗೆ ಗೈಡ್]
ಕೊನೆಗೂ ವೆಸ್ಟ್ ಇಂಡೀಸ್ ನ ಆಲ್ ರೌಂಡರ್, ಮುಂಬೈ ಇಂಡಿಯನ್ಸ್ ಆಟಗಾರ ಕಿರಾನ್ ಪೊಲ್ಲಾರ್ಡ್ ಈ ಬಗ್ಗೆ ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ನಲ್ಲಿ ಸ್ಪಷ್ಟನೆ ನೀಡಿದ್ದಾರೆ.
ಮಾಧ್ಯಮ ಮಿತ್ರರೇ ಸ್ಟೋರಿ ಐಡಿಯಾ ಹುಡುಕಬೇಡಿ. ನಾನೇನು ತಪ್ಪು ಮಾಡಿಲ್ಲ. ಅಸಲಿಗೆ ಅಲ್ಲಿ ಯಾವುದೇ ಗೇಲಿ, ಜಗಳ ನಡೆಯಲಿಲ್ಲ.
ಕ್ರಿಕೆಟ್ ಎಂಜಾಯ್ ಮಾಡುತ್ತಾ ತಂಡದ ಗೆಲುವಿಗೆ 100% ನನ್ನ ಕೊಡುಗೆ ನೀಡುವುದೇ ನನ್ನ ಉದ್ದೇಶ
ನಿಮ್ಮೆಲ್ಲರ ಶುಭ ಹಾರೈಕೆಗಳಿಗೆ ಧನ್ಯವಾದ. ಐಪಿಎಲ್ 2015ರಲ್ಲಿ ಮುಂಬೈ ತಂಡ ಇನ್ನಷ್ಟು ಗೆಲುವು ಸಾಧಿಸಲಿ.
ಒನ್ ಇಂಡಿಯಾ ಸುದ್ದಿ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications