ಪೊಲ್ಲಾರ್ಡ್ ಬಾಯಿಗೆ ಪ್ಲಾಸ್ಟರ್, ಜಸ್ಟ್ ಫಾರ್ ಫನ್!
ಬೆಂಗಳೂರು, ಏ.20: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ಗೆಲುವಿನ ಓಟ ಮತ್ತೆ ಮುಂದುವರೆದಿದೆ. ಆರ್ ಸಿಬಿಅ ವಿರುದ್ಧ ಮೊದಲ ಜಯ ದಾಖಲಿಸಿದ ಮುಂಬೈ ಇಂಡಿಯನ್ಸ್ ಪ್ರೇಕ್ಷಕರ ರಂಜನೆಗೇನೂ ಮೋಸ ಮಾಡಲಿಲ್ಲ. ಅದರಲ್ಲೂ ಪೊಲ್ಲಾರ್ಡ್ ಬಾಯಿಗೆ ಪ್ಲಾಸ್ಟರ್ ಹಾಕಿಕೊಂಡು ನಡೆದುಕೊಂಡ ರೀತಿಗೆ ಸಾಮಾಜಿಕ ಜಾಲ ತಾಣಗಳಲ್ಲಿ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ.
'ಅಂಪೈರ್ ಹೇಳಿದಂತೆ ಪೊಲ್ಲಾರ್ಡ್ ನಡೆದುಕೊಂಡಿದ್ದಾರೆ. ಇದು ಕೆಟ್ಟ ನಡೆ ಎನ್ನಲಾಗುವುದಿಲ್ಲ. ಪೊಲ್ಲಾರ್ಡ್ ವಿಶಿಷ್ಟ ಆಟಗಾರ, ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ಮಾಡುತ್ತಾರೆ' ಎಂದು ಸಹ ಅಟಗಾರ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಸಮರ್ಥಿಸಿಕೊಂಡಿದ್ದಾರೆ.
[47 ದಿನ, 60 ಪಂದ್ಯ, ಫುಲ್ ಟೈಂ ಟೇಬಲ್] | [8 ತಂಡಗಳ ನೂರೆಂಟು ಆಟಗಾರರು] | [ಐಪಿಎಲ್ 2015: ಫ್ಯಾನ್ಸಿಗೆ ಗೈಡ್]
ಘಟನೆ ಏನು?: ಆರ್ ಸಿಬಿ ಓಪನರ್ ಕ್ರಿಸ್ ಗೇಲ್ ನಿಧಾನಗತಿ ಬ್ಯಾಟಿಂಗ್ ಮಾಡುತ್ತಿದ್ದರು. ಇದನ್ನು ಕಂಡು ಗೇಲಿ ಮಾಡಲು ಪೊಲ್ಲಾರ್ಡ್ ಮುಂದಾಗಿದ್ದಾರೆ. ಅದರೆ, ಮಧ್ಯೆ ಪ್ರವೇಶಿಸಿದ ಅಂಪೈರ್, ಪೊಲ್ಲಾರ್ಡ್ ಗೆ ಸುಮ್ಮನಿರುವಂತೆ ಸೂಚಿಸಿದ್ದಾರೆ. (ಐಪಿಎಲ್ ಫೋಟೋ ಗ್ಯಾಲರಿ)
ಇದಕ್ಕೆ ಪ್ರತಿಯಾಗಿ ಪೊಲ್ಲಾರ್ಡ್ ಪ್ಲಾಸ್ಟರ್ ತೆಗೆದುಕೊಂಡು ಬಾಯಿಗೆ ಹಾಕಿಕೊಂಡು ಫೀಲ್ಡಿಂಗ್ ಮಾಡಲು ತೆರಳಿದ್ದಾರೆ. ಪೊಲ್ಲಾರ್ಡ್ ನಡೆ ಕಂಡು ಡಗ್ ಔಟ್ ನಲ್ಲಿದ್ದ ರಿಕಿ ಪಾಂಟಿಂಗ್, ಅನಿಲ್ ಕುಂಬ್ಳೆ, ಜಾಂಟಿ ರೋಡ್ಸ್ ಕೂಡಾ ಅಚ್ಚರಿಯಿಂದ ಹುಬ್ಬೇರಿಸಿದರು.[ಮುಂಬೈನ ಪೊಲ್ಲಾರ್ಡ್ ಪ್ಲಾಸ್ಟರ್ ತೆಗೆದು ಹೇಳಿದ್ದೇನು?]

ಕ್ರಿಸ್ ಗೇಲ್ ಕಳಪೆ ಆಟ, ಪೊಲ್ಲಾರ್ಡ್ ಖುಷ್
ಪೊಲ್ಲಾರ್ಡ್ ಪ್ಲಾಸ್ಟರ್ ಆಟ ನೋಡಿ ಗೇಲ್ ಕೂಡಾ ನಕ್ಕು ಸುಮ್ಮನಾದರು. ಅದರೆ, ಗೇಲ್ ಆರ್ಭಟಿಸಲಿಲ್ಲ. ಆರ್ ಸಿಬಿ ವಿರುದ್ಧ 209/7 ಸ್ಕೋರ್ ಮಾಡಿದ ಮುಂಬೈ ಇಂಡಿಯನ್ಸ್ 18ರನ್ ಗಳಿಂದ ಪಂದ್ಯ ಗೆದ್ದುಕೊಂಡಿತು.
ಪೊಲ್ಲಾರ್ಡ್ ಇದ್ದರೆ ಮನರಂಜನೆಗೆ ಮೋಸವಿಲ್ಲ
ವೆಸ್ಟ್ ಇಂಡೀಸ್ ಆಟಗಾರ ಪೊಲ್ಲಾರ್ಡ್ ಫೀಲ್ಡ್ ನಲ್ಲಿದ್ದರೆ ಮನರಂಜನೆಗಂತೂ ಮೋಸವಿಲ್ಲ
ಕ್ರಿಕೆಟ್ ಫೀಲ್ಡಲ್ಲಿ ಎಂದೂ ಕಾಣದಂಥ ದೃಶ್ಯ
ಕ್ರಿಕೆಟ್ ಫೀಲ್ಡಲ್ಲಿ ಎಂದೂ ಕಾಣದಂಥ ದೃಶ್ಯ ಇಂದು ಕಂಡೆ ಎಂದು ಅಭಿಮಾನಿಯೊಬ್ಬರಿಂದ ಉದ್ಗಾರ!
ಎಲ್ಲರ ಗಮನ ಸೆಳೆಯುವ ತಂತ್ರ ಪೊಲ್ಲಾರ್ಡ್ ಗಿದೆ
ಎಲ್ಲರ ಗಮನ ಸೆಳೆಯುವ ತಂತ್ರ ಪೊಲ್ಲಾರ್ಡ್ ಗಿದೆ.. ಇದು ಕೇವಲ ಮೋಜಿಗಾಗಿ ಮಾಡಿದ್ದು ಎನಿಸುತ್ತದೆ.
ನಮಗೆ ಫೇರ್ ಪ್ಲೇ ಪ್ರಶಸ್ತಿ ಸಿಗಬೇಕಿದೆ
ನಮಗೆ ಫೇರ್ ಪ್ಲೇ ಪ್ರಶಸ್ತಿ ಸಿಗಬೇಕಿದೆ ಎಂದು ಮುಂಬೈ ಇಂಡಿಯನ್ಸ್ ಟ್ವೀಟ್
ಈ ರೀತಿ ಮೆಸೇಜ್ ಪೊಲ್ಲಾರ್ಡ್ ರಿಂದ ಮಾತ್ರ ಸಾಧ್ಯ
ಈ ರೀತಿ ಅಂಪೈರ್ ಗಳಿಗೆ ಮೆಸೇಜ್ ಕಳಿಸಲು ಪೊಲ್ಲಾರ್ಡ್ ರಿಂದ ಮಾತ್ರ ಸಾಧ್ಯ
ಏಕ್ತಾ ಕಪೂರ್ ಕೂಡಾ ಬೆಚ್ಚುತ್ತಾಳೆ!
ಪೊಲ್ಲಾರ್ಡ್ ಡ್ರಾಮಾ ನೋಡಿ ಕಿರುತೆರೆ ಕ್ವೀನ್ ಏಕ್ತಾ ಕಪೂರ್ ಕೂಡಾ ಬೆಚ್ಚುತ್ತಾಳೆ!
ನಿಜವಾಗಲೂ ಸಿಕ್ಸರ್ ಸಿಧು ಬಾಯಿಗೆ ಹಾಕ್ಬೇಕಿತ್ತು
ನಿಜವಾಗಲೂ ಪೊಲ್ಲಾರ್ಡ್ ಬದಲಿಗೆ ಸಿಕ್ಸರ್ ಸಿಧು ಬಾಯಿಗೆ ಹಾಕ್ಬೇಕಿತ್ತು.
ಪೊಲ್ಲಾರ್ಡ್ ಆಟ ಸೂಪರ್
ಕ್ರಿಕೆಟ್ ಆಟದ ನಿಜವಾದ ಆಲ್ ರೌಂಡ್ ಮನರಂಜನೆ ನೀಡುವ ಆಟಗಾರ
ಇದು ಯಾಕೋ ಸರಿ ಕಾಣುತ್ತಿಲ್ಲ
ಇದು ಯಾಕೋ ಸರಿ ಕಾಣುತ್ತಿಲ್ಲ. ಕ್ರಿಕೆಟ್ ಸಭ್ಯರ ಆಟ. ಇದು ಅತಿಯಾಯಿತು ಎಂದು ಪೊಲ್ಲಾರ್ಡ್ ನಡೆ ವಿರುದ್ಧ ಕೂಡಾ ಟ್ವೀಟ್ ಬಂದಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications