ಸರ್ಫರಾಜ್ ಖಾನ್ ಹೊಸ 'ಜಾವೇದ್ ಮಿಯಾಂದಾದ್' ಟ್ವೀಟ್ಸ್
ಬೆಂಗಳೂರು, ಏ.30: ಕ್ರಿಕೆಟ್ ಲೋಕದಲ್ಲಿ ಹೊಸ ತಾರೆ ಉದಯವಾಯಿತು. ಮಳೆಗೆ ಆಹುತಿಯಾದ ಟ್ವೆಂಟಿ ಸಮರದಲ್ಲಿ ಯುವ ಪ್ರತಿಭೆಯೊಂದು ಆರ್ಭಟಿಸಿತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ 17 ವರ್ಷದ ಬ್ಯಾಟ್ಸ್ ಮನ್ ಸರ್ಫ್ರಾಜ್ ಖಾನ್ ಈಗ ಟಾಕ್ ಆಫ್ ದಿ ಟೌನ್. ರವಿಶಾಸ್ತ್ರಿಯಂತೂ ಪಾಕಿಸ್ತಾನ ದಿಗ್ಗಜ 'ಜಾವೇದ್ ಮಿಯಾಂದಾದ್' ಗೆ ಸರ್ಫ್ರಾಜ್ ರನ್ನು ಹೋಲಿಸಿದರು.
ಇಂಡಿಯನ್ ಪ್ರಿಮಿಯರ್ ಲೀಗ್ 2015ರಲ್ಲಿ ಆಡುತ್ತಿರುವ ಅಟಗಾರರ ಪೈಕಿ ಅತ್ಯಂತ ಕಿರಿಯ ವಯಸ್ಸಿನ ಆಟಗಾರ ಎನಿಸಿರುವ ಸರ್ಫ್ರಾಜ್ ಖಾನ್ ಬಗ್ಗೆ ತುಂಬಾ ಬಿಲ್ಡಪ್ ಕೊಡಲಾಗಿತ್ತು. ಅದರೆ, ಪ್ರೇಕ್ಷಕರಿಗೆ ಸರ್ಫ್ರಾಜ್ ಬ್ಯಾಟಿಂಗ್ ಝಲಕ್ ನೋಡುವ ಅವಕಾಶ ಸಿಕ್ಕಿರಲಿಲ್ಲ. [44ರ ಹರೆಯದ ಆಸೀಸ್ ಸ್ಪಿನ್ನರ್ ಐಪಿಎಲ್ ದಾಖಲೆ]
ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ರಾತ್ರಿ ಪ್ರೇಕ್ಷಕರು ಹುಚ್ಚೆದ್ದು ಕುಣಿಯುವಂತೆ ಸರ್ಫ್ರಾಜ್ ಬ್ಯಾಟ್ ಬೀಸಿದರು. ಎದುರಾಳಿ ತಂಡದ ನಾಯಕ ವಾಟ್ಸನ್ ಬೌಲಿಂಗ್ ನಲ್ಲಿ ಬೌಂಡರಿ, ಸಿಕ್ಸರ್ ಚೆಚ್ಚಿದ್ದು, ತಾಂಬೆ ಎಸೆತವನ್ನು ಮುಂದಕ್ಕೆ ಹೆಜ್ಜೆ ಇಟ್ಟು ಸಿಕ್ಸ್ ಎತ್ತಿದ್ದು ಕಾಮೆಂಟೆಟರ್ಸ್ ಗೆ ಅಚ್ಚರಿ ಮೂಡಿಸಿತು.
[47 ದಿನ, 60 ಪಂದ್ಯ, ಫುಲ್ ಟೈಂ ಟೇಬಲ್] | [8 ತಂಡಗಳ ನೂರೆಂಟು ಆಟಗಾರರು] | [ಐಪಿಎಲ್ 2015: ಫ್ಯಾನ್ಸಿಗೆ ಗೈಡ್]
ಸರ್ಫರಾಜ್ ಬಗ್ಗೆ ಮಾಜಿ ಕ್ರಿಕೆಟರ್ಸ್, ಕಾಮೆಂಟೆಟರ್ಸ್, ಅಭಿಮಾನಿಗಳು ನೀಡಿರುವ ಪ್ರತಿಕ್ರಿಯೆಗಳ ಟ್ವೀಟ್ಸ್ ಮುಂದಿದೆ...

ಸರಸರ ರನ್ ಗಳಿಸಿದ ಸರ್ಫರಾಜ್
21 ಎಸೆತಗಳಲ್ಲಿ 45ರನ್(6x4, 1X6) ಗಳಿಸಿದ ಸಫ್ರಾಜ್ ಔಟಾಗದೇ ಉಳಿದು ಪೆವಿಲಿಯನ್ ಗೆ ತೆರಳುವಾಗ ವಿರಾಟ್ ಕೊಹ್ಲಿ ಸೇರಿದಂತೆ ಅನೇಕ ಮಂದಿ ಸೆಲ್ಯೂಟ್ ಮಾಡಿದ್ದು ವಿಶೇಷವಾಗಿತ್ತು.

ಆರ್ ಸಿಬಿ ಬ್ಯಾಟಿಂಗ್ ಶಕ್ತಿ ಪ್ರದರ್ಶನ
ಕ್ರಿಸ್ ಗೇಲ್(10) ಹಾಗೂ ವಿರಾಟ್ ಕೊಹ್ಲಿ(1) ಕಡಿಮೆ ಮೊತ್ತಕ್ಕೆ ಔಟಾದ ಮೇಲೆ ಎಬಿ ಡಿವಿಲೆಯರ್ಸ್ 57ರನ್(9x4,1x6) ಗಳಿಸಿ ರನ್ ಗತಿ ಹೆಚ್ಚಿಸಿದರು. ಮನ್ದೀನ್ ಸಿಂಗ್ 27ರನ್(20ಎ), ದಿನೇಶ್ ಕಾರ್ತಿಕ್27ರನ್(18ಎ, 3x4,1x6) ಗಳಿಸಿ ಸಾಥ್ ನೀಡಿದರು. ಆದರೆ, ಕೊನೆ ಹಂತದಲ್ಲಿ ಸರ್ಫ್ರಾಜ್ ಸರಸರ ರನ್ ಗಳಿಸಿ ಆರ್ ಸಿಬಿ ಮೊತ್ತ 200/7ಕ್ಕೇರಿಸಿದರು.

50 ಲಕ್ಷ ರು ಗೆ ಖರೀದಿ ಮಾಡಿದ್ದ ಆರ್ ಸಿಬಿ
17ವರ್ಷ ವಯಸ್ಸಿನ ಸರ್ಫರಾಜ್ ಅವರನ್ನು 50 ಲಕ್ಷ ರು ನೀಡಿ ಹರಾಜಿನಲ್ಲಿ ಆರ್ ಸಿಬಿ ಪಡೆದುಕೊಂಡಿತ್ತು. ಬೆಂಗಳೂರಿನಲ್ಲಿ ಏ.22ರಂದು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಐಪಿಎಲ್ ನ ಮೊದಲ ಪಂದ್ಯವಾಡಿದರು. ಅಂದು 11 ರನ್ ಮಾತ್ರ ಗಳಿಸಲು ಸಾಧ್ಯವಾಗಿತ್ತು.

ಸರ್ಫರಾಜ್ ಹೊಸ ಮಿಯಾಂದಾದ್ ಎಂದ ಶಾಸ್ತ್ರಿ
ಸರ್ಫರಾಜ್ ಬ್ಯಾಟಿಂಗ್ ಶೈಲಿ, ಭಯವಿಲ್ಲದೆ ಬ್ಯಾಟ್ ಬೀಸುವ ರೀತಿ ನೋಡಿದರೆ ಪಾಕಿಸ್ತಾನದ ದಿಗ್ಗಜ ಜಾವೇದ್ ಮಿಯಾಂದಾದ್ ಬ್ಯಾಟಿಂಗ್ ನೆನಪಿಸುತ್ತದೆ ಎಂದರು. ಮುಂಬೈ ಮೂಲದ ಸರ್ಫರಾಜ್ ಗೆ ಇದಕ್ಕಿಂತ ದೊಡ್ಡ ಹೊಗಳಿಕೆ ಬೇಕಿಲ್ಲ ಎನಿಸುತ್ತದೆ.
ಕಾಮೆಂಟೆಟರ್ ಮೆಲಿನಿ ಜೋನ್ಸ್, ಅಜುಂ ಛೋಪ್ರಾ
ಆಸ್ಟ್ರೇಲಿಯಾದ ಮಹಿಳಾ ಕ್ರಿಕೆಟರ್ ಆಗಿದ್ದ ಮೆಲಿನಿ ಜೋನ್ಸ್ ಹಾಲಿ ಕಾಮೆಂಟೆಟರ್ ಮಾತನಾಡಿ, ಸರ್ಫರಾಜ್ ಬ್ಯಾಟಿಂಗ್ ನನಗೆ ಶ್ರೀಲಂಕಾದ ಅರವಿಂದ ಡಿಸಿಲ್ವಾ ಬ್ಯಾಟಿಂಗ್ ನೆನಪಿಸುತ್ತದೆ ಎಂದರು.
ಸರ್ಫರಾಜ್ ಖಾನ್ ಬಗ್ಗೆ ಕೇಳಿದ್ದೆ ಇವತ್ತು ಅವರ ಪ್ರತಿಭೆ ಪ್ರದರ್ಶನವಾಯಿತು: ಅಜುಂ ಛೋಪ್ರಾ
ಕ್ರಿಕೆಟ್ ಪ್ರೇಮಿಗಳ ಮನಗೆದ್ದ ಚಿತ್ರ
ನಾಯಕ ವಿರಾಟ್ ಕೊಹ್ಲಿ ಯುವ ಪ್ರತಿಭೆಗೆ ನಮಸ್ತೆ ಹೇಳುತ್ತಾ ಆತನ ಪ್ರತಿಭೆ ಮನ್ನಣೆ ನೀಡುತ್ತಿರುವುದಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಮಹಮ್ಮದ್ ಕೈಫ್ ಟ್ವೀಟ್
ಅಂಡರ್ 19 ನಾಯಕರಾಗಿ ಟೀಂ ಇಂಡಿಯಾ ಸೇರಿದ್ದ ಕ್ರಿಕೆಟರ್ ಮಹಮ್ಮದ್ ಕೈಫ್ ಸರ್ಫರಾಜ್ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ.
ಕ್ರಿಕೆಟರ್ ವಿವಿಎಸ್ ಲಕ್ಷ್ಮಣ್ ಟ್ವೀಟ್
ಮಾಜಿ ಕ್ರಿಕೆಟರ್ ವಿವಿಎಸ್ ಲಕ್ಷ್ಮಣ್ ಟ್ವೀಟ್ ಮಾಡಿ ಸರ್ಫರಾಜ್ ಭಯವಿಲ್ಲದೆ ಮುನ್ನುಗ್ಗಿ ಹೊಡೆಯುವ ಶೈಲಿ ಇಷ್ಟವಾಯಿತು. 17 ವಯಸ್ಸಿಗೆ ಉತ್ತಮ ತಾಳ್ಮೆ, ಧೈರ್ಯ ಪ್ರದರ್ಶಿಸಿದ್ದಾರೆ.
ಕಾಮೆಂಟೆಟರ್ ರಸೆಲ್ ಅರ್ನಾಲ್ಡ್
ಕಾಮೆಂಟೆಟರ್ ರಸೆಲ್ ಅರ್ನಾಲ್ಡ್ ಟ್ವೀಟ್ ಮಾಡಿ ಯುವಪ್ರತಿಭೆಗಳನ್ನು ನೋಡುವುದೇ ಹಬ್ಬ ಎಂದಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ನಿಂದಲೂ ಹೊಗಳಿಕೆ
ಹರಾಜು ಸಮಯದಲ್ಲಿ ಗೇಲಿ ಮಾಡಿದ್ದರು ಎನ್ನಲಾದ ಚೆನ್ನೈ ಸೂಪರ್ ಕಿಂಗ್ಸ್ ನಿಂದಲೂ ಸರ್ಫರಾಜ್ ಬ್ಯಾಟಿಂಗ್ ಗೆ ಹೊಗಳಿಕೆ ಸಿಕ್ಕಿದೆ.
ವಿಶ್ವದೆಲ್ಲೆಡೆಯಿಂದ ಪ್ರಶಂಸೆ
ವಿಶ್ವದೆಲ್ಲೆಡೆಯಿಂದ ಪ್ರಶಂಸೆಯ ಸುರಿಮಳೆ ಸಿಕ್ಕಿದೆ. ಇಂಗ್ಲೆಂಡ್, ಆಸ್ಟ್ರೇಲಿಯಾದ ಕ್ರಿಕೆಟರ್ಸ್, ಅಭಿಮಾನಿಗಳು ಸರ್ಫರಾಜ್ ಬ್ಯಾಟಿಂಗ್ ಮೆಚ್ಚಿದ್ದಾರೆ.
ಸರ್ಫರಾಜ್ ಬ್ಯಾಟಿಂಗ್ ಭಂಗಿಗಳು
ಸರ್ಫರಾಜ್ ಖಾನ್ ಬ್ಯಾಟಿಂಗ್ ಭಂಗಿಗಳಿರುವ ಕೊಲಾಜ್ ಚಿತ್ರ
ಟಾಮ್ ಮೂಡಿಗೂ ಅಚ್ಚರಿ ಮೂಡಿಸಿದ ಖಾನ್
ಆಸ್ಟ್ರೇಲಿಯಾದ ಮಾಜಿ ಕ್ರಿಕೆಟರ್, ಸನ್ ರೈಸರ್ಸ್ ಹೈದರಾಬಾದ್ ಕೋಚ್ ಟಾಮ್ ಮೂಡಿಗೂ ಅಚ್ಚರಿ ಮೂಡಿಸಿದ ಖಾನ್
ಮಿಯಾಂದಾದ್ ನೆನಪಿಸಿದ ಸರ್ಫರಾಜ್
ಜಾವೇದ್ ಮಿಯಾಂದಾದ್ ನೆನಪಿಸಿದ ಸರ್ಫರಾಜ್ ಎಂದು ಅಭಿಮಾನಿಗಳಿಂದಲೂ ಟ್ವೀಟ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications