Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಏನಿಲ್ಲ, ಏನಿಲ್ಲ, ನನ್ನ ಚಾಹಲ್ ನಡುವೆ ಏನಿಲ್ಲ : ತನಿಷ್ಕಾ

IPL 2018 : Actress Tanishka kapoor denies Marriage reports with Yuzvendra Chahal

ಬೆಂಗಳೂರು, ಏಪ್ರಿಲ್ 23: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ(ಆರ್ ಸಿಬಿ)ದ ಪ್ರಮುಖ ಸ್ಪಿನ್ನರ್ ಯಜುವೇಂದ್ರ ಚಾಹಲ್ ಅವರು ಕನ್ನಡ ಚಿತ್ರರಂಗದ ನಟಿ ತನಿಷ್ಕಾ ಕಪೂರ್ ಗೆ ಮನ ಸೋತಿದ್ದಾರೆ. ಇಬ್ಬರು ಇಷ್ಟರಲ್ಲೆ ವಿವಾಹ ಬಂಧನಕ್ಕೊಳಗಾಗಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಆದರೆ, ನಟಿ ತನಿಷ್ಕಾ ಅವರು ಈ ಸುದ್ದಿಯನ್ನು ಅಲ್ಲಗೆಳೆದಿದ್ದಾರೆ.

ಐಪಿಎಲ್ 2018 ಮುಗಿದ ನಂತರ ಯಜುವೇಂದ್ರ ಚಾಹಲ್-ತನಿಷ್ಕಾ ಕಪೂರ್ ನಿಶ್ಚಿತಾರ್ಥ ನಡೆಯಲಿದ್ದು, ಮದುವೆ ದಿನಾಂಕ ಇನ್ನೂ ನಿಗದಿ ಆಗಿಲ್ಲ ಎಂದು ಸುದ್ದಿ ಆಗಿತ್ತು. ಆದರೆ ಈ ಬಗ್ಗೆ ಮೈಖೇಲ್ ಗೆ ಪ್ರತಿಕ್ರಿಯೆ ನೀಡಿರುವ ತನಿಷ್ಕಾ ಕಪೂರ್, ಇದೆಲ್ಲ ಸುಳ್ಳು ಸುದ್ದಿ ಎಂದಿದ್ದಾರೆ.

"ಸುಳ್ಳು ಸುದ್ದಿ ಹಬ್ಬಿಸಬೇಡಿ, ನನಗೂ ಚಾಹಲ್ ಗೂ ಯಾವುದೇ ಸಂಬಂಧವಿಲ್ಲ, ನಿಜ ಎಂದರೆ ನನಗೂ ಯುಜುವೇಂದ್ರ ಅವರಿಗೂ ಪರಿಚಯವೇ ಇಲ್ಲ. ನಾನು ಮದುವೆ ಆಗುತ್ತಿಲ್ಲ. ಸದ್ಯ ನಾನು ನನ್ನ ವಿದ್ಯಾಭ್ಯಾಸ ಮುಗಿಸುತ್ತಿದ್ದೇನೆ". "ಯಾವುದೇ ವಿಚಾರಗಳನ್ನ ಸುದ್ದಿ ಮಾಡುವ ಮುನ್ನ ಯೋಚನೆ ಮಾಡಬೇಕು" ಎಂದಿದ್ದಾರೆ.

IPL 2018 : Actress Tanishka kapoor denies Marriage reports with Yuzvendra Chahal


ಆದರೆ, ಯಜುವೇಂದ್ರ ಚಾಹಲ್ ಜೊತೆ ತೆಗೆದುಕೊಂಡಿರುವ ಸೆಲ್ಫಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅಷ್ಟೇ ಅಲ್ಲದೆ ಇನ್‌ಸ್ಟಾಗ್ರಾಂ ನಲ್ಲಿ ತನಿಷ್ಕಾ ಫೋಟೋಗೆ ಚಾಹಲ್ ಕಮೆಂಟ್ ಮಾಡಿರೋ ಫೋಟೋ ಕೂಡ ವೈರಲ್ ಆಗಿದೆ. ಆದರೆ ತನಿಷ್ಕಾ ಮಾತ್ರ ಇದೆಲ್ಲಾ ಸುಳ್ಳು ನಂಬಬೇಡಿ ಎಂದಿದ್ದಾರೆ.

ಐಪಿಎಲ್ ವಿಶೇಷ ಪುಟ | ಬೆಂಗಳೂರು ತಂಡ | ಬೆಂಗಳೂರು ವೇಳಾಪಟ್ಟಿ

ಚಾಹಲ್ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ 58 ಪಂದ್ಯಗಳನ್ನಾಡಿದ್ದು 73 ವಿಕೆಟ್ ಗಳನ್ನು ಗಳಿಸಿದ್ದಾರೆ. ಸದ್ಯ ಚೆನ್ನ ಸೂಪರ್ ಕಿಂಗ್ಸ್ ವಿರುದ್ಧದ ಏಪ್ರಿಲ್ 25ರ ಪಂದ್ಯಕ್ಕಾಗಿ ಚಾಹಲ್ ಸಿದ್ಧತೆ ನಡೆಸಿದ್ದಾರೆ. ಕನ್ನಡದಲ್ಲಿ ಫಸ್ಟ್ Rank ರಾಜು, ಉಪ್ಪಿ2 ಚಿತ್ರದಲ್ಲಿ ನಟಿಸಿರುವ ತನಿಷ್ಕಾ ಅವರು ದಕ್ಷಿಣ ಭಾರತ ಸಿನಿಮಾ ಜಗತ್ತಿಗೆ ತಕ್ಕಮಟ್ಟಿಗೆ ಚಿರಪಚಿತ.

Story first published: Monday, April 23, 2018, 14:32 [IST]
Other articles published on Apr 23, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+