ಕನ್ನಡ ನಟಿಗೆ ಮನಸೋತ ಸ್ಪಿನ್ನರ್ ಯಜುವೇಂದ್ರ ಚಾಹಲ್!

ಬೆಂಗಳೂರು, ಏಪ್ರಿಲ್ 22: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ(ಆರ್ ಸಿಬಿ)ದ ಪ್ರಮುಖ ಸ್ಪಿನ್ನರ್ ಯಜುವೇಂದ್ರ ಚಾಹಲ್ ಅವರು ಕನ್ನಡ ಚಿತ್ರರಂಗದ ನಟಿ ತನಿಷ್ಕಾ ಕಪೂರ್ ಗೆ ಮನ ಸೋತಿದ್ದಾರೆ. ಇಬ್ಬರು ಇಷ್ಟರಲ್ಲೆ ವಿವಾಹ ಬಂಧನಕ್ಕೊಳಗಾಗಲಿದ್ದಾರೆ ಎಂಬ ಸುದ್ದಿ ಹಬ್ಬಿದೆ.
ಈ ಮೂಲಕ ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್, ಹರ್ಭಜನ್ ಸಿಂಗ್ ಹಾಗೂ ಜಹೀರ್ ಖಾನ್ ಹಾದಿಯಲ್ಲೇ ಯಜುವೇಂದ್ರ ಚಾಹಲ್ ಹೆಜ್ಜೆ ಹಾಕಲಿದ್ದಾರೆ.
ಐಪಿಎಲ್ ವಿಶೇಷ ಪುಟ | ಬೆಂಗಳೂರು ತಂಡ | ಬೆಂಗಳೂರು ವೇಳಾಪಟ್ಟಿ
ಐಪಿಎಲ್ 2018ರ ನಂತರ ತನಿಷ್ಕಾ ಹಾಗೂ ಯಜುವೇಂದ್ರ ಇಬ್ಬರು ವಿವಾಹ ನಿಶ್ಚಿತಾರ್ಥ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಇದಾದ ಬಳಿಕ ಯಜುವೇಂದ್ರ ಚಾಹಲ್ ಅವರು ರಾಷ್ಟ್ರೀಯ ತಂಡದ ಜತೆಗೆ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದ್ದಾರೆ.
ಇಬ್ಬರು ಅನೇಕ ಬಾರಿ ಅನೇಕ ತಾಣಗಳಲ್ಲಿ ವಿಹಾರಾರ್ಥಿಯಾಗಿ ಸುತ್ತಾಡಿದ್ದು, ಸಾಮಾಜಿಕ ಜಾಲ ತಾಣಗಳ ಗಾಸಿಪ್ ಪ್ರಿಯರಿಗೆ ಆಹಾರವಾಗಿದ್ದರು. ಕನ್ನಡದಲ್ಲಿ ಫಸ್ಟ್ Rank ರಾಜು ಚಿತ್ರದಲ್ಲಿ ನಟಿಸಿರುವ ತನಿಷ್ಕಾ ಅವರು ದಕ್ಷಿಣ ಭಾರತ ಸಿನಿಮಾ ಜಗತ್ತಿಗೆ ತಕ್ಕಮಟ್ಟಿಗೆ ಚಿರಪಚಿತ.
ಚಾಹಲ್ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ 58 ಪಂದ್ಯಗಳನ್ನಾಡಿದ್ದು 73 ವಿಕೆಟ್ ಗಳನ್ನು ಗಳಿಸಿದ್ದಾರೆ. ಸದ್ಯ ಚೆನ್ನ ಸೂಪರ್ ಕಿಂಗ್ಸ್ ವಿರುದ್ಧದ ಏಪ್ರಿಲ್ 25ರ ಪಂದ್ಯಕ್ಕಾಗಿ ಚಾಹಲ್ ಸಿದ್ಧತೆ ನಡೆಸಿದ್ದಾರೆ.
ಸಿನಿಮಾ ಜಗತ್ತು ಹಾಗೂ ಕ್ರಿಕೆಟರ್ ಗಳ ಜೋಡಿಗೆ ದೊಡ್ಡ ಇತಿಹಾಸವೇ ಇದೆ. ನವಾಬ್ ಪಟೌಡಿ-ಶರ್ಮಿಳಾ ಠಾಗೋರ್, ವಿವಿಯನ್ ರಿಚರ್ಡ್ಸ್-ನೀನಾ ಗುಪ್ತಾ, ಯುವರಾಜ್ ಸಿಂಗ್- ಹಜೇಲ್ ಕೀಚ್, ಜಹೀರ್ ಖಾನ್-ಸಾಗರೀಕಾ ಘಟ್ಗೆ, ಹರ್ಭಜನ್ ಸಿಂಗ್-ಗೀತಾ ಬಸ್ರಾ, ವಿರಾಟ್ ಕೊಹ್ಲಿ ಅನುಷ್ಕಾ ಶರ್ಮ ಅವರನ್ನು ಹೆಸರಿಸಬಹುದು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications