Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

#ESCN ಟ್ರೆಂಡಿಂಗೂ, ಕೆಫೆಯಿಂದ ಕ್ರಿಕೆಟ್ ಗ್ರೌಂಡ್ ತನಕ

ಬೆಂಗಳೂರು, ಮೇ 03 : ಈ ಸಲ ಕಪ್ ನಮ್ದೇ (#ESCN) ಎನ್ನುತ್ತಾ ಕಣಕ್ಕಿಳಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿಬಿ) ತಂಡವು ಕೊನೆಗೂ ಗೆಲುವಿನ ಲಯಕ್ಕೆ ಮರಳಿದೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ ) 2018ರಲ್ಲಿ ಸತತ ಸೋಲು ಕಂಡರೂ ಆರ್ ಸಿಬಿ ತಂಡವನ್ನು ಅಭಿಮಾನಿಗಳು ಕೈ ಬಿಟ್ಟಿಲ್ಲ.

ಐಪಿಎಲ್ 2018ರ ವಿಶೇಷ ಪುಟ | ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ತಂಡ | ಆರ್ ಸಿಬಿ ವೇಳಾಪಟ್ಟಿ | ಅಂಕಪಟ್ಟಿ

ಈ ಸಲ ಕಪ್ ನಮ್ದೇ ಎಂಬ ಟ್ಯಾಗ್ ಲೈನ್ ಸಕತ್ ಟ್ರೆಂಡಿಂಗ್ ಆಗುತ್ತಿದ್ದು, ಪಂದ್ಯದಲ್ಲಿ ಸೋತಾಗ ಅಪಹಾಸ್ಯಕ್ಕೂ ಗುರಿಯಾಗಿದೆ. ಸಾಮಾಜಿಕ ಜಾಲ ತಾಣಗಳಾದ ಫೇಸ್ ಬುಕ್, ಟ್ವಿಟ್ಟರ್, ಇನ್ಸ್ಟಾ ಗ್ರಾಮ್ ಗಳಲ್ಲಿ #ESCN ಟ್ಯಾಗ್ ಚಿರಪರಿಚಿತ.

ಫ್ಯಾಂಟಸಿ ಲೀಗ್ ಆಡಿ, ಬಹುಮಾನ ಗೆಲ್ಲಿ

ಈಗ ಈ ಟ್ಯಾಗ್ ಮೈದಾನ ದಾಟಿ, ಸೋಷಿಯಲ್ ಮೀಡಿಯಾ ದಾಟಿ, ಕೆಫೆಗೂ ನುಗ್ಗಿದೆ. ಕರ್ನಾಟಕದ ಮಂಡ್ಯದ ಹರ್ಷ ಕೆಫೆ ಮಾಲೀಕರು ತಮ್ಮ ಬಿಲ್ ಗಳಲ್ಲಿ ನಮಸ್ತೆ ಮತ್ತೆ ಬನ್ನಿ, ಇನ್ನಿತರ ವಾಕ್ಯದ ಬದಲು 'ಈ ಸಲ ಕಪ್ ನಮ್ದೆ' ಎಂಬ ಸಾಲು ಮುದ್ರಿಸಿ ಅಚ್ಚರಿ ಮೂಡಿಸಿದ್ದರು. ಆದರೆ, ಮುಂದೇನಾಯ್ತು? ವಿವರಗಳಿಗೆ ಓದಿ...

ಹರ್ಷ ಕೆಫೆ ಬಿಲ್ ನಲ್ಲಿ ಈ ಸಲ ಕಪ್ ನಮ್ದೇ

ಹರ್ಷ ಕೆಫೆ ಬಿಲ್ ನಲ್ಲಿ ಈ ಸಲ ಕಪ್ ನಮ್ದೇ ಎಂಬ ವಾಕ್ಯ ಕಂಡ ಗ್ರಾಹಕರೊಬ್ಬರು ಥ್ರಿಲ್ ಆಗಿದ್ದಾರೆ. ಆದರೆ, ಕೆಲದಿನಗಳ ನಂತರ ಮತ್ತೊಮ್ಮೆ ಕಾಫಿ ಕುಡಿದು ಬಿಲ್ ಪಡೆದಾಗ ಅದರಲ್ಲಿ 'ಈ ಸಲ ಕಪ್ ನಮ್ದೇ' ಸಾಲು ಬದಲಾಗಿತ್ತು. ಈ ಸಲ ಕಪ್ ನಮ್ದೇ ಬದಲಾಗಿದೆ Next ಸಲ ಕಪ್ ನಮ್ದೇ ಎಂಬ ವಾಕ್ಯ ಕಾಣಿಸಿಕೊಂಡಿತ್ತು. ಎರಡನ್ನು ಸೇರಿಸಿ ಫೋಟೋ ತೆಗೆದಿದ್ದು, ಟ್ವಿಟ್ಟರಲ್ಲಿ ಕಾಣಿಸಿಕೊಂಡಿದೆ.

ಟ್ರಾಲ್ ಪುಟಗಳಿಗೆ ಆರ್ ಸಿಬಿ ಎಂದರೆ ಅಚ್ಚುಮೆಚ್ಚು

ಟ್ರಾಲ್ ಪುಟಗಳಿಗೆ ಆರ್ ಸಿಬಿ ಎಂದರೆ ಅಚ್ಚುಮೆಚ್ಚು

ಟ್ರಾಲ್ ಪುಟಗಳಿಗೆ ಆರ್ ಸಿಬಿ ಎಂದರೆ ಅಚ್ಚುಮೆಚ್ಚು, ಪ್ರತಿ ಪಂದ್ಯದ ಪ್ರತಿ ಕ್ಷಣವನ್ನು ರಸವತ್ತಾಗಿ ಅಭಿಮಾನಿಗಳ ಮುಂದಿಡುವ ಟ್ರಾಲ್ ಪುಟದವರು ನಿಜಕ್ಕೂ ಮೈದಾನದಲ್ಲಿ ನೀಡುವ ಕಾಮೆಂಟೆಟರ್ಸ್ ಗಿಂತ ಉತ್ತಮ ನಿರೂಪಣೆ ಹಾಗೂ ಅಂಕಿ ಅಂಶ ನೀಡುತ್ತಾರೆ ಎಂಬುದು ಸುಳ್ಳಲ್ಲ.

ಅನುಷ್ಕಾ ಹುಟ್ಟುಹಬ್ಬದ್ದೇ ಎಲ್ಲೆಡೆ ಸುದ್ದಿ

ಅನುಷ್ಕಾ ಹುಟ್ಟುಹಬ್ಬದ್ದೇ ಎಲ್ಲೆಡೆ ಸುದ್ದಿ

ನಿಮ್ಮ ಅತ್ತಿಗೆ ಹುಟ್ಟುಹಬ್ಬಕ್ಕೆ ಟ್ರೀಟ್ ಕೊಡಿಸ್ತೀನಿ ಬಾರೋ ಎಂದು ಕೊಹ್ಲಿ ಅವರು ರೋಹಿತ್ ಗೆ ಹೇಳುವುದು, ಇದಕ್ಕೆ ರೋಹಿತ್-ಕೊಡ್ಸಿಲ್ಲ ಅಂದ್ರೆ ಬಿಡ್ತೀನಾ, ಅದಕ್ಕೆ ಅಲ್ವಾ 1 ರನ್ ಗೆ ಔಟ್ ಆಗಿದ್ದು ಎನ್ನುವಂಥ ಟ್ರಾಲ್ ರಚಿಸಲಾಗಿದೆ.

ಅಭಿಮಾನಿಗಳಿಗೆ ಕುತೂಹಲ ಮೂಡಿಸುವ ತಂಡ

ಅಭಿಮಾನಿಗಳಿಗೆ ಕುತೂಹಲ ಮೂಡಿಸುವ ತಂಡ

ಐಪಿಎಲ್ ನಲ್ಲಿ ಅಭಿಮಾನಿಗಳಿಗೆ ಕುತೂಹಲ ಮೂಡಿಸುವ ತಂಡವೆಂದರೆ ಅದು ಆರ್ ಸಿಬಿ ಮಾತ್ರ. ಲೈವ್ ಪಂದ್ಯ ನೋಡುತ್ತಿದ್ದೇವೋ ಅಥವಾ ಹೈಲೇಟ್ಸ್ ಮ್ಯಾಚ್ ನೋಡುತ್ತಿದ್ದೇವೋ ಎಂಬ ಗೊಂದಲ ಉಂಟು ಮಾಡುತ್ತಾರೆ ಎಂದು ಟ್ರಾಲ್ ಪೇಜ್ ನವರು ಬರೆದುಕೊಂಡಿದ್ದಾರೆ.

ಆರ್ ಸಿಬಿ ಟೀಮ್ ಹಡಲ್ ಬಗ್ಗೆ ಟ್ರಾಲ್

ಆರ್ ಸಿಬಿ ಟೀಮ್ ಹಡಲ್ ಬಗ್ಗೆ ಟ್ರಾಲ್

ಆರ್ ಸಿಬಿ ಟೀಮ್ ಹಡಲ್(ಮೀಟ್) ನಲ್ಲಿ ಏನು ಮಾತನಾಡಬಹುದು? ಟೀ ಮೇಟ್ಸ್ ಹೇಳುತ್ತಾರೆ: ಮ್ಯಾಚ್ ಗೆಲ್ಲೋಣ
ವಿರಾಟ್ ಕೊಹ್ಲಿ: ಅಚ್ಚರಿಯ ಗಿಫ್ಟ್ ಏನು?
ಟೀಂ ಸದಸ್ಯರು: ಹಾಗಾದ್ರೆ ಬೌಲಿಂಗ್ ಚೆನ್ನಾಗಿ ಮಾಡಿ ಮ್ಯಾಚ್ ಗೆಲ್ಲೋಣ

ಇವತ್ತು ಅತ್ತಿಗೆ ಬರ್ಥ್ ಡೇ ವಿಶೇಷ

ಇವತ್ತು ಅತ್ತಿಗೆ ಬರ್ಥ್ ಡೇ ವಿಶೇಷ

ಇವತ್ತು ಅತ್ತಿಗೆ ಬರ್ಥ್ ಡೇ ವಿಶೇಷ, ಇವತ್ತು ಆರ್ ಸಿಬಿ ಗೆಲ್ಲೋದು, ಅದು ಹೇಗೆ ಹೇಳ್ತೀಯಾ, ಯಾಕೆ ಅಂದ್ರೆ ಇವತ್ತು ಅತ್ತಿಗೆ(ಅನುಷ್ಕಾ ಶರ್ಮ) ಬರ್ಥ್ ಡೇ.

ಕೊಹ್ಲಿ ನೋಡಿ ಉರಿದುಕೊಳ್ಳೋರೋ

ಕೊಹ್ಲಿ ನೋಡಿ ಉರಿದುಕೊಳ್ಳೋರೋ

ಕೊಹ್ಲಿ ನೋಡಿ ಉರಿದುಕೊಳ್ಳುವವರಿಗೆ ಯಶ್ ಸ್ಟೈಲಲ್ಲಿ ಡೈಲಾಗ್, ಉರ್ಕೊಳೋರೋ ಕಹಾ ಹೇ ಅಂದ್ರೆ ಊರ್ ತುಂಬಾ ಹೇ

Story first published: Thursday, May 3, 2018, 19:07 [IST]
Other articles published on May 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+