IPL ಹರಾಜು 2022: ಆರ್‌ಸಿಬಿಗೆ ಈ ನಾಲ್ವರು ವಿದೇಶಿ ಆಟಗಾರರ ಮೇಲೆ ಕಣ್ಣು!

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 15ನೇ ಸೀಸನ್‌ನ ಹರಾಜು ಸಮೀಪಿಸುತ್ತಿದ್ದು, ಇನ್ನು ಮೂರು ದಿನಗಳಷ್ಟೇ ಬಾಕಿ ಉಳಿದಿದೆ. ಫೆಬ್ರವರಿ 12 ಮತ್ತು 13 ರಂದು ಬೆಂಗಳೂರಿನಲ್ಲಿ ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದೆ.
ಪ್ರತಿ ಸೀಸನ್‌ನಂತೆ ಕೇವಲ ಎಂಟು ತಂಡಗಳಷ್ಟೇ ಕಾದಾಟಕ್ಕೆ ಇಳಿಯುತ್ತಿಲ್ಲ. ಬದಲಾಗಿ ಈ ಬಾರಿ 10 ತಂಡಗಳು ಅಖಾಡಕ್ಕಿಳಿಯಲಿದ್ದು, ಇದುವರೆಗೂ ನಡೆಯುತ್ತಿದ್ದ ಒಟ್ಟು 60 ಪಂದ್ಯಗಳ ಬದಲಿಗೆ ಒಟ್ಟು 74 ಪಂದ್ಯಗಳು ನಡೆಯಲಿದೆ. ಹೀಗಾಗಿ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ 10 ಫ್ರಾಂಚೈಸಿಗಳು ಕಣ್ಣಿಟ್ಟಿದ್ದು, ಕುತೂಹಲ ಹೆಚ್ಚುತ್ತಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) ಇದುವರೆಗೂ ಎರಡು ಬಾರಿ ಫೈನಲ್ ತಲುಪಿತ್ತೇ ವಿನಃ ಒಂದು ಬಾರಿಯು ಕಪ್ ಗೆಲ್ಲಲು ಸಾಧ್ಯವಾಗಿಲ್ಲ. ವಿರಾಟ್ ಕೊಹ್ಲಿ ಈಗಾಗಲೇ ನಾಯಕತ್ವದಿಂದ ಕೆಳಗಿಳಿದಿದ್ದು ಹೊಸ ನಾಯಕ ಹುಡುಕಾಟದಲ್ಲಿದೆ. ಈಗಾಗಲೇ ಆರ್‌ಸಿಬಿ ವಿರಾಟ್ ಕೊಹ್ಲಿ (15 ರೂ.), ಗ್ಲೆನ್ ಮ್ಯಾಕ್ಸ್‌ವೆಲ್ (11 ಕೋಟಿ ರೂ.) ಮತ್ತು ಮೊಹಮ್ಮದ್ ಸಿರಾಜ್ (7 ಕೋಟಿ ರೂ.) ಅವರನ್ನು ಮಾತ್ರ ರೀಟೈನ್ ಮಾಡಿಕೊಂಡಿದ್ದು, 57 ಕೋಟಿ ರೂಪಾಯಿ ಪರ್ಸ್ ಬಾಕಿ ಉಳಿದಿದೆ.
ಇಂತಹ ಸಂದರ್ಭದಲ್ಲಿ ಆರ್‌ಸಿಬಿಯ ಆಪದ್ಭಾಂದವನಾಗಿದ್ದ ಎಬಿ ಡಿವಿಲಿಯರ್ಸ್ ಕೂಡ ತಂಡದಲ್ಲಿಲ್ಲ. ಹೀಗಾಗಿ ವಿದೇಶಿ ಆಟಗಾರರ ಮೇಲೂ ಆರ್‌ಸಿಬಿ ಈ ಬಾರಿಯ ಹರಾಜಿನಲ್ಲಿ ಬಿಡ್ ಮಾಡಲಿದೆ. ಅದ್ರಲ್ಲೂ ಈ ನಾಲ್ಕರು ವಿದೇಶಿ ಆಟಗಾರರ ಮೇಲೆ ಕಣ್ಣಿಟ್ಟಿದೆ.

ಬಲವಾದ ತಂಡ ಕಟ್ಟುವಲ್ಲಿ ಆರ್‌ಸಿಬಿ ಯೋಜನೆ
ಹಿಂದೆ ಮಾಡಿದ ತಪ್ಪುಗಳು ಮರುಕಳಿಸದಂತೆ ಯೋಚಿಸಿರುವ ಆರ್‌ಸಿಬಿಯು, ಬೇರ್‌ಸ್ಟೋವ್ ಮತ್ತು ಕ್ವಿಂಟನ್ ಡಿಕಾಕ್ ಅವರನ್ನು ವಿಕೆಟ್ ಕೀಪರ್ ಆಯ್ಕೆಗಳಾಗಿ ಟಾರ್ಗೆಟ್ ಮಾಡಲಿದೆ. ಆಲ್‌ರೌಂಡರ್ ಸ್ಥಾನಕ್ಕಾಗಿ ವಿಂಡೀಸ್‌ನ ಜೇಸನ್ ಹೋಲ್ಡರ್ ಅಥವಾ ಆಸ್ಟ್ರೇಲಿಯಾದ ಮಿಚೆಲ್ ಮಾರ್ಷ್ ಅವರನ್ನು ಬೌಲಿಂಗ್ ಆಲ್‌ರೌಂಡರ್‌ಗಳಾಗಿ ನೇಮಿಸಿಕೊಳ್ಳಲು ಬಯಸಿದೆ. ಟ್ರೆಂಟ್ ಬೌಲ್ಟ್, ರಬಾಡ ಮತ್ತು ಕಮ್ಮಿನ್ಸ್ ವೇಗಿಗಳಾಗಿದ್ದಾರೆ. ಪ್ಲಾನ್ ಬಿ ಪ್ರಕಾರ, ಡೇವಿಡ್ ವಾರ್ನರ್, ಡೆವೊನ್ ಕಾನ್ವೇ, ನಿಕೋಲಸ್ ಪೂರನ್ ಅವರನ್ನು ಫಿನಿಶರ್ ಆಗಿ ಟಾರ್ಗೆಟ್ ಮಾಡಬಹುದು.
RCB Probable Squad For IPL 2022: ಹರಾಜಿಗೂ ಮುನ್ನ ಆರ್‌ಸಿಬಿ ಸಂಭಾವ್ಯ ಸ್ಕ್ವಾಡ್ ಹೀಗಿದೆ

ಓಪನಿಂಗ್ ಬ್ಯಾಟ್ಸ್‌ಮನ್‌ಗೆ ಹಲವು ಆಯ್ಕೆ
ಆರ್‌ಸಿಬಿ ಕ್ವಿಂಟನ್ ಡಿಕಾಕ್, ಡೇವಿಡ್ ವಾರ್ನರ್ ಅಥವಾ ಜಾನಿ ಬೈರ್‌ಸ್ಟೋವ್ ಅವರನ್ನು ಆರಂಭಿಕ ಬ್ಯಾಟ್ಸ್‌ಮನ್ ಆಗಿ ತೆಗೆದುಕೊಳ್ಳಲು ಬಯಸಿದೆ. ಜಾನಿ ಬೈಸ್ಟ್ರೋವ್ ಮತ್ತು ಕ್ವಿಂಟನ್ ಡಿಕಾಕ್ ತೆಗೆದುಕೊಂಡರೆ ತಂಡಕ್ಕೆ ವಿಕೆಟ್ ಕೀಪರ್ ಆಯ್ಕೆಯೂ ಇರುತ್ತದೆ. ಇಲ್ಲವೆ ಸ್ಫೋಟಕ ಓಪನರ್ ಡೇವಿಡ್ ವಾರ್ನರ್ ಅವರನ್ನು ಪ್ರಮುಖ ಗುರಿಯನ್ನಾಗಿ ಮಾಡಬಹುದು.
ಈ ಆಟಗಾರರಿಗೆ ಆರ್‌ಸಿಬಿ 15 ರಿಂದ 17 ಕೋಟಿ ರೂಪಾಯಿ ಖರ್ಚು ಮಾಡಲು ಸಿದ್ಧವಾಗಿದೆಯಂತೆ. ವಾರ್ನರ್ ತಂಡಕ್ಕೆ ಸೇರ್ಪಡೆಗೊಂಡರೆ ನಾಯಕರಾಗಿಯೂ ಸೇವೆ ಸಲ್ಲಿಸಲಿದ್ದಾರೆ ಎಂದು ಫ್ರಾಂಚೈಸಿ ಭರವಸೆ ನೀಡಿದೆ. ವಾರ್ನರ್ ಬಿಡ್‌ನಲ್ಲಿ ಸಿಗದಿದ್ದರೆ, ಜಾನಿ ಬೈರ್‌ಸ್ಟೋ ಮತ್ತು ಕ್ವಿಂಟನ್ ಡಿಕಾಕ್‌ಗೆ ಹೆಚ್ಚು ಪ್ರಯತ್ನಿಸುವ ಸಾಧ್ಯತೆಯಿದೆ.

ಮಧ್ಯಮ ಕ್ರಮಾಂಕ ಬಲಪಡಿಸುವ ಗುರಿ
ಮಧ್ಯಮ ಕ್ರಮಾಂಕದಲ್ಲಿ, ನಿಕೋಲಸ್ ಪೂರ್, ಜೇಸನ್ ಹೋಲ್ಡರ್, ಮಿಚೆಲ್ ಮಾರ್ಷ್ ಅವರೊಂದಿಗೆ ಡೆವೊನ್ ಕಾನ್ವೇ ಆರ್‌ಸಿಬಿಯ ಗುರಿಯಾಗಿದ್ದಾರೆ. ಬೌಲಿಂಗ್ ಆಲ್‌ರೌಂಡರ್‌ಗಳನ್ನು ತೆಗೆದುಕೊಳ್ಳಲು ಬಯಸಿದರೆ ಜೇಸನ್ ಹೋಲ್ಡರ್ ಮತ್ತು ಮಿಚೆಲ್ ಮಾರ್ಷ್ ಅವರನ್ನು ಗುರಿಯಾಗಿಸಲಾಗುತ್ತದೆ. ಅದ್ರಲ್ಲೂ ಹೋಲ್ಡರ್‌ನ ಮೇಲೆ ಆರ್‌ಸಿಬಿ ಹೆಚ್ಚಿನ ಆದ್ಯತೆಯಿದೆ. ಜೇಸನ್‌ಗೆ 12 ಕೋಟಿ ವರೆಗೆ ಬಿಡ್ ಕೂಡ ಮಾಡಲಿದ್ದಾರೆ ಎಂದು ತಂಡದ ಮೂಲಗಳು ತಿಳಿಸಿವೆ.
ಒಂದು ವೇಳೆ ಈತ ಸಿಗದಿದ್ದರೆ, ವಿಂಡೀಸ್‌ನ ಸ್ಫೋಟಕ ಬ್ಯಾಟ್ಸ್‌ಮನ್ ನಿಕೋಲಸ್ ಪುರನ್ ಅವರನ್ನು ಖರೀದಿ ಮಾಡುವ ಮೂಲಕ ಫಿನಿಶರ್ ಮತ್ತು ಮಿಡ್‌ಫೀಲ್ಡರ್ ಬ್ಯಾಟ್ಸ್‌ಮನ್ ಸ್ಥಾನ ತುಂಬಬಹುದು.
ವಿರಾಟ್ ಕೊಹ್ಲಿ ಬಳಿ ಓಡಿ ಹೋಗಿ, ಏನು ಬೇಕಾದ್ರೂ ಹೇಳು ಎಂದು ಹೇಳಿದ್ರಂತೆ ವೆಟ್ಟ್ಹೋರಿ

ವಿದೇಶಿ ಬೌಲರ್‌ಗಳಿಗೆ ಹೆಚ್ಚಿನ ಒತ್ತು
ದೇಶಿಯ ಸ್ಟಾರ್ ವೇಗಿ ಮೊಹಮ್ಮದ್ ಸಿರಾಜ್ ಜೊತೆಗೆ ಬಲಿಷ್ಠ ವಿದೇಶಿ ವೇಗಿಯೊಬ್ಬರನ್ನು ಆರ್ ಸಿಬಿ ಕಣಕ್ಕಿಳಿಸುವ ಸಾಧ್ಯತೆ ಹೆಚ್ಚಿದೆ. ವಿಶ್ವ ದರ್ಜೆಯ ಬೌಲರ್‌ಗಳಾದ ಪ್ಯಾಟ್ ಕಮ್ಮಿನ್ಸ್, ಟ್ರೆಂಟ್ ಬೌಲ್ಟ್ ಮತ್ತು ಕಗಿಸೊ ರಬಾಡ ಆರ್‌ಸಿಬಿ ಟಾರ್ಗೆಟ್ ನೆಟ್ಟಿದೆ. ಈ ಮೂವರು ಹರಾಜಿನಲ್ಲಿ ಭಾಗಿಯಾಗದಿದ್ದರೆ, ಮಾರ್ಕೊ ಜಾನ್ಸೆನ್, ಮಾರ್ಕ್ ವುಡ್, ಮುಸ್ತಾಫಿಜುರ್ ರೆಹಮಾನ್, ಟೈಮಲ್ ಮಿಲ್ಸ್, ರೀಸ್ ಟೋಪ್ಲಿ ಅವರಲ್ಲಿ ಒಬ್ಬರನ್ನು ತೆಗೆದುಕೊಳ್ಳುವ ಅವಕಾಶವಿದೆ. ಕಳೆದ ಋತುವಿನಲ್ಲಿ ವೇಗಿಗಳಿಗೆ ಉತ್ತಮ ಖರ್ಚು ಮಾಡಿದ್ದಕ್ಕೆ ಆರ್‌ಸಿಬಿ ಬೆಲೆ ತೆರಬೇಕಾಯಿತು. ಅತ್ಯಂತ ವಿಶ್ವಾಸಾರ್ಹ ಬೌಲರ್ಸ್ ಕೈಲ್ ಜೇಮಿಸನ್, ಡೇನಿಯಲ್ ಸ್ಯಾಮ್ಸ್, ರಿಚರ್ಡ್ಸನ್, ಡೇನಿಯಲ್ ಕ್ರಿಶ್ಚಿಯನ್ ವಿಕೆಟ್ ಉರುಳಿಸುವಲ್ಲಿ ವಿಫಲರಾದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications