
NCAನಲ್ಲಿ ಮತ್ತೆ ಗಾಯಗೊಂಡ ದೀಪಕ್ ಚಹಾರ್: ವರದಿ
ಪ್ರಸ್ತುತ ಸೀಸನ್‌ನಲ್ಲಿ ದೀಪಕ್ ಚಹಾರ್ ಮತ್ತೆ ಕಂಬ್ಯಾಕ್ ಮಾಡಬಹುದೆಂದು ಸಿಎಸ್‌ಕೆ ಕಾದು ಕುಳಿತಿತ್ತು. ಆದ್ರೆ ವರದಿ ಪ್ರಕಾರ ಬೆಂಗಳೂರು ಎನ್‌ಸಿಎ ಅಕಾಡೆಮಿಯ ಪುನರ್ವಸತಿ ಶಿಬಿರದಲ್ಲಿ ಭಾಗಿಯಾಗಿದ್ದ ದೀಪಕ್ ಚಹಾರ್ ಬೆನ್ನಿನ ಗಾಯಕ್ಕೆ ತುತ್ತಾಗಿದ್ದು, ಚೇತರಿಸಿಕೊಳ್ಳುವ ಅವಧಿ ಮತ್ತಷ್ಟು ಹೆಚ್ಚಾಗಿದೆ.
ಇಎಸ್‌ಪಿಎನ್ ವರದಿ ಪ್ರಕಾರ ಇಂಜ್ಯುರಿ ಪ್ರಮಾಣ ಹಾಗೇ ಇದ್ದು, ಚೇತರಿಸಿಕೊಳ್ಳುವ ಸಮಯ ಮತ್ತಷ್ಟು ದೂರ ಸಾಗಿದೆ.
CSK vs RCB: ಈ ಮೈಲಿಗಲ್ಲುಗಳ ಮೇಲೆ ಕೊಹ್ಲಿ, ದಿನೇಶ್ ಕಾರ್ತಿಕ್ ಮತ್ತು ಧೋನಿ ಕಣ್ಣು

ವೆಸ್ಟ್ ಇಂಡೀಸ್ ಸರಣಿಯಲ್ಲಿ ಗಾಯಗೊಂಡಿದ್ದ ದೀಪಕ್ ಚಹಾರ್
ಕೋಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಟಿ20I ನಲ್ಲಿ ತಮ್ಮ ಅಮೋಘ ಬೌಲಿಂಗ್‌ನೊಂದಿಗೆ ಪವರ್‌ಪ್ಲೇನಲ್ಲಿ ಎರಡು ನಿರ್ಣಾಯಕ ವಿಕೆಟ್‌ಗಳನ್ನು ಪಡೆದ ದೀಪಕ್ ಚಹಾರ್, ನಂತರ ಮಂಡಿರಜ್ಜು ಗಾಯದಿಂದ ಮೈದಾನವನ್ನು ತೊರೆದರು. ಆಗ ಕೂಡಲೇ ಚಹಾರ್ ನೋವಿನಿಂದ ನೆಲದ ಮೇಲೆ ಕುಳಿತಿದ್ದರು. ಫಿಸಿಯೋ ಅವರನ್ನು ಮೈದಾನದಿಂದ ಹೊರಗೆ ಕರೆದುಕೊಂಡು ಹೋಗಿದ್ದರು

14 ಕೋಟಿ ನೀಡಿ ಖರೀದಿಸಿದ್ದ ಸಿಎಸ್‌ಕೆ
ಐಪಿಎಲ್ ಆಟಗಾರರ ಹರಾಜಿನಲ್ಲಿ ಹಣದ ಹೊಳೆಯನ್ನೇ ಹರಿಸಿದ ಸೂಪರ್ ಕಿಂಗ್ಸ್ ಬಲಗೈ ವೇಗದ ಬೌಲರ್‌ನ ಸೇವೆಯನ್ನು ಮರಳಿ ಪಡೆಯಲು ಬರೋಬ್ಬರಿ 14 ಕೋಟಿ ರೂ. ಖರ್ಚು ಮಾಡಿದೆ. ಸನ್‌ರೈಸರ್ಸ್ ಹೈದರಾಬಾದ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನೀಡಿದ ಕಠಿಣ ಪೈಪೋಟಿ ನಡುವೆಯೂ ಸಿಎಸ್‌ಕೆ ಗರಿಷ್ಠ ಬಿಡ್ ಕೂಗುವಲ್ಲಿ ಯಶಸ್ವಿಯಾಯಿತು.
2011ರಲ್ಲಿ ಮೊದಲ ಬಾರಿ ಐಪಿಎಲ್ ಆಟಗಾರರ ಹರಾಜಿಜಿನಲ್ಲಿ ಕಾಣಿಸಿಕೊಂಡಿದ್ದ ದೀಪಕ್ ಚಹರ್‌ಗೆ ಆಗ 20 ಲಕ್ಷ ರೂ. ಮೂಲ ಬೆಲೆ ಸಿಕ್ಕಿತ್ತು. 2018ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸೇರಿದಾಗ ಕೇವಲ 80 ಲಕ್ಷ ರೂ. ಬೆಲೆ ಗಿಟ್ಟಿಸಿಕೊಂಡಿದ್ದರು. ಆದ್ರೆ ಈ ಸೀಸನ್‌ನಲ್ಲಿ ಜಾಕ್‌ಪಾಟ್ ಹೊಡೆದ ದೀಪಕ್ ಬರೋಬ್ಬರಿ 14 ಕೋಟಿ ರೂ. ತನ್ನ ಅಕೌಂಟ್‌ಗೆ ಸೇರಿಸಿದ್ದಾರೆ.

ಐಪಿಎಲ್‌ನಲ್ಲಿ ದೀಪಕ್ ಚಹಾರ್ ಸಾಧನೆ
2018ರ ಐಪಿಎಲ್ ಸೀಸನ್‌ನಿಂದ ಆಡಿರುವ ದೀಪಕ್ ಚಹಾರ್ ಇದುವರೆಗೆ 58 ಐಪಿಎಲ್ ಪಂದ್ಯಗಳನ್ನಾಡಿದ್ದು, 58 ವಿಕೆಟ್ ಪಡೆದಿದ್ದಾರೆ. 7.70 ಎಕಾನಮಿಯಲ್ಲಿ ಬೌಲಿಂಗ್ ಮಾಡಿರುವ ಚಹಾರ್ ಸಿಎಸ್‌ಕೆ ಕಳೆದ ಸೀಸನ್‌ನಲ್ಲಿ ಟ್ರೋಫಿ ಗೆಲ್ಲಲು ಪ್ರಮುಖ ಪ್ಲೇಯರ್ ಆಗಿದ್ದರು. ಬೌಲಿಂಗ್ ಅಷ್ಟೇ ಅಲ್ಲದೆ ಕೆಳಕ್ರಮಾಂಕದಲ್ಲಿ ಬ್ಯಾಟಿಂಗ್‌ನಲ್ಲೂ ನೆರವಾಗುವ ಆಲ್‌ರೌಂಡರ್ ಆಗಿದ್ದಾರೆ.


Click it and Unblock the Notifications
