Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು ಎಂದ ಆರ್‌ಸಿಬಿ ನಾಯಕ ಫಾಫ್ ಡುಪ್ಲೆಸಿಸ್!

Faf du plesis

ರಾಯಲ್‌ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ನೂತನ ನಾಯಕ ಫಾಫ್ ಡುಪ್ಲೆಸಿಸ್, ಕನ್ನಡ ಚಲನಚಿತ್ರದ ಖ್ಯಾತ ಗೀತೆ ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು ಹಾಡಿಗೆ ಧ್ವನಿಗೂಡಿಸಿದ್ದಾರೆ. ಆರ್‌ಸಿಬಿ ಇನ್‌ಸೈಡರ್ ಮಿಸ್ಟರ್ ನ್ಯಾಗ್ಸ್‌ ಕಾರ್ಯಕ್ರಮದಲ್ಲಿ ಫಾಫ್ ಡುಪ್ಲೆಸಿಸ್‌ ಈ ಹಾಡನ್ನು ಹೇಳಿದ್ದಾರೆ.

ಕನ್ನಡ ಚಲನಚಿತ್ರ ಆಕಸ್ಮಿಕದಲ್ಲಿ ವರನಟ ಡಾ. ರಾಜ್‌ಕುಮಾರ್‌ ಈ ಹಾಡನ್ನು ಹಾಡಿದ್ದರು. 1992ರಲ್ಲಿ ಬಿಡುಗೆಯಾದ ಈ ಚಿತ್ರದಲ್ಲಿ ಹಂಸಲೇಖ ಸಾಹಿತ್ಯಕ್ಕೆ ಡಾ. ರಾಜ್‌ಕುಮಾರ್ ಹಾಡಿದ್ದರು. ಇದು ಇಂದಿಗೂ ಕನ್ನಡದ ಸೂಪರ್ ಹಿಟ್ ಹಾಡಾಗಿದ್ದು, ಆರ್‌ಸಿಬಿ ಇನ್‌ಸೈಡರ್‌ನಲ್ಲಿ ನಾಯಕ ಫಾಫ್ ಡುಪ್ಲೆಸಿಸ್‌ರಿಂದ ಈ ಹಾಡನ್ನ ಹೇಳಿದ್ದಾರೆ.

ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಮೇಲೆ ಎಬಿ ಡಿವಿಲಿಯರ್ಸ್ ಹೂಡಿಕೆ!

ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಮೇಲೆ ಎಬಿ ಡಿವಿಲಿಯರ್ಸ್ ಹೂಡಿಕೆ!

ಅತ್ಯಂತ ತಮಾಷೆಯಿಂದ ಕೂಡಿರುವ ಮಿಸ್ಟರ್ ನ್ಯಾಗ್ಸ್‌ ಕಾರ್ಯಕ್ರಮದಲ್ಲಿ ಎಬಿಡಿ ವಿಲಿಯರ್ಸ್ ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಹೂಡಿಕೆ ಮಾಡಲು ಯೋಚಿಸಿದ್ದಾರೆ. ನೀವು ಬೆಂಗಳೂರಿನಲ್ಲಿ ಹೂಡಿಕೆ ಮಾಡುತ್ತೀರಾ? ಎಂದು ನ್ಯಾಗ್ಸ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಫಾಫ್ ಡುಪ್ಲೆಸಿಸ್ ಎಬಿಡಿ ಹತ್ತಿರ ತುಂಬಾ ಬ್ಯಾಂಕ್ ಬ್ಯಾಲೆನ್ಸ್ ಇದೆ, ಹೆಚ್ಚು ಹಣವಿದ್ದು, ನನ್ನ ಬಳಿ ಅಷ್ಟು ಹಣವಿಲ್ಲ ಎಂದಿದ್ದಾರೆ. ಬೇಕಾದಲ್ಲಿ ಒಂದು ಬೆಡ್ ರೂಂ ಇರುವ ಫ್ಲಾಟ್ ಕೊಂಡುಕೊಳ್ಳುವೆ ಎಂದಿದ್ದಾರೆ.

ಐಪಿಎಲ್: ಸಿಎಸ್‌ಕೆ ನಾಯಕತ್ವ ತ್ಯಜಿಸಿದ ಧೋನಿ; ಐಪಿಎಲ್‌ನಿಂದ ದೂರವಿರಲು ಇದು ಕಾರಣ ಎಂದ ಫ್ಯಾನ್ಸ್!

7 ವರ್ಷದ ಸಂಪ್ರದಾಯವನ್ನ ಮುಂದುವರಿಸಿದ ಆರ್‌ಸಿಬಿ

ಆರ್‌ಸಿಬಿ ಕಳೆದ ಏಳು ವರ್ಷಗಳಿಂದ ತನ್ನ ಸಾಂಪ್ರದಾಯಿಕ ಕಾರ್ಯಕ್ರಮ ಮಿಸ್ಟರ್ ನ್ಯಾಗ್ಸ್ ಅನ್ನು ಮುಂದುವರಿಸಿಕೊಂಡು ಬಂದಿದ್ದು, ವಿದೇಶಿ ಆಟಗಾರರಿಂದ ಕನ್ನಡ ಹಾಡನ್ನ ಹೇಳಿಸಲಾಗುತ್ತದೆ. ಈ ಬಾರಿ ಮಿಸ್ಟರ್ ನ್ಯಾಗ್ಸ್ ದಕ್ಷಿಣ ಆಫ್ರಿಕಾ ಮಾಜಿ ನಾಯಕ, ಆರ್‌ಸಿಬಿ ನೂತನ ಸಾರಥಿ ಫಾಫ್ ಡುಪ್ಲೆಸಿಸ್‌ನಿಂದ ಖ್ಯಾತ ಕನ್ನಡ ಚಲನಚಿತ್ರ ಗೀತೆ 'ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು' ಹೇಳಿಸಿದ್ದಾರೆ.

ದಕ್ಷಿಣ ಆಫ್ರಿಕಾ ಪರ ಆಡಿದ ನಾಲ್ಕನೇ ಪ್ಲೇಯರ್ ಫಾಫ್ ಡುಪ್ಲೆಸಿಸ್

ದಕ್ಷಿಣ ಆಫ್ರಿಕಾ ಪರ ಆಡಿದ ನಾಲ್ಕನೇ ಪ್ಲೇಯರ್ ಫಾಫ್ ಡುಪ್ಲೆಸಿಸ್

ಮಿಸ್ಟರ್ ನ್ಯಾಗ್ಸ್‌ ಕೇಳಿದ ಮತ್ತೊಂದು ಪ್ರಶ್ನೆಯು ಫಾಫ್ ಡುಪ್ಲೆಸಿಸ್‌ರನ್ನ ಕೆಣಕುವಂತಿತ್ತು. ಆದ್ರೆ ಫಾಫ್ ಡುಪ್ಲೆಸಿಸ್ ಅತ್ಯಂತ ಶಾಂತ ರೀತಿಯಲ್ಲಿ ತಮಾಷೆಯ ಉತ್ತರ ನೀಡಿದರು. ಎಬಿ ಡಿವಿಲಿಯರ್ಸ್, ಡೇಲ್ ಸ್ಟೇನ್, ಕ್ರಿಸ್ ಮೊರಿಸ್ ನಂತರದಲ್ಲಿ ನಿಮ್ಮನ್ನ ಆರ್‌ಸಿಬಿ ತಂಡಕ್ಕೆ ಪರಿಗಣಿಸಿದ್ದಕ್ಕೆ ನಿಮಗೆ ಬೇಸರವಾಗಿದೆಯೇ ಎಂದು ಪ್ರಶ್ನೆ ಕೇಳಲಾಯಿತು. ಆದ್ರೆ ಇದಕ್ಕೆ ಉತ್ತರಿಸಿದ ಫಾಫ್ ನಾನು ಎಲ್ಲರಿಗಿಂತ ತಡವಾಗಿ ಬಂದಿದ್ದೇನೆ, ಆದ್ರೆ ಕೊನೆಯ ತನಕ ಉಳಿದುಕೊಳ್ಳುವೆ, ಓಲ್ಡ್ ಫಾಫ್ ಡುಪ್ಲೆಸಿಸ್ ಎಂದಿದ್ದಾರೆ.

CSK ನಾಯಕತ್ವಕ್ಕೆ ಧೋನಿ ರಾಜೀನಾಮೆ: ಮಾಹಿ ನಾಯಕತ್ವದಲ್ಲಿ ಗೆದ್ದಿದ್ದೆಷ್ಟು? ಸೋತಿದ್ದೆಷ್ಟು?

7 ಕೋಟಿ ರೂಪಾಯಿಗೆ ಆರ್‌ಸಿಬಿ ತಂಡ ಸೇರಿದ ಫಾಫ್ ಡುಪ್ಲೆಸಿಸ್

7 ಕೋಟಿ ರೂಪಾಯಿಗೆ ಆರ್‌ಸಿಬಿ ತಂಡ ಸೇರಿದ ಫಾಫ್ ಡುಪ್ಲೆಸಿಸ್

ದಕ್ಷಿಣ ಆಫ್ರಿಕಾದ ಮಾಜಿ ನಾಯಕ, ಸ್ಫೋಟಕ ಆಟಗಾರ ಮತ್ತು ಅತ್ಯಂತ ಕನ್ಸಿಸ್ಟೆನ್ಸಿ ಹೊಂದಿರುವ ಫಾಫ್‌ ಡುಪ್ಲೆಸಿಸ್‌ರನ್ನ ಕೊಂಡುಕೊಳ್ಳಲು ಆರ್‌ಸಿಬಿ, ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಕಳೆದ ಹರಾಜಿನಲ್ಲಿ ಸಖತ್ ಬಿಡ್ ನಡೆಸಿದವು. ಚೆನ್ನೈ ಸೂಪರ್ ಕಿಂಗ್ಸ್ ತನ್ನ ಮಾಜಿ ಆಟಗಾರರನ್ನ ಮತ್ತೆ ಹಿಂಪಡೆಯಲು ಸಾಕಷ್ಟು ಪ್ರಯತ್ನ ನಡೆಸಿತು. ಆದ್ರೆ ಅಂತಿಮವಾಗಿ ಡುಪ್ಲೆಸಿಸ್ ಏಳು ಕೋಟಿ ರೂಪಾಯಿಗೆ ಆರ್‌ಸಿಬಿ ಬಿಡ್ ಮಾಡಿದ ನಂತರ ಚೆನ್ನೈ ಸೂಪರ್ ಕಿಂಗ್ಸ್ ಬಿಡ್‌ ನಿಂದ ಹಿಂದೆ ಸರಿಯಿತು.

ಪರಿಣಾಮ ಅಂತಿಮವಾಗಿ ಫಾಫ್ ಡುಪ್ಲೆಸಿಸ್‌ 7 ಕೋಟಿ ರೂಪಾಯಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಪಾಲಾದರು. ಅಷ್ಟಲ್ಲದೆ ಆರ್‌ಸಿಬಿ ತಂಡದ ನಾಯಕತ್ವ ವಹಿಸಿಕೊಂಡಿದ್ದಾರೆ. ಜೊತೆಗೆ ಓಪನಿಂಗ್ ಸ್ಟಾಟ್‌ನಲ್ಲಿ ಬಲಿಷ್ಠ ಆಟಗಾರನೊಬ್ಬ ಸೇರ್ಪಡೆಯಾದಂತಿದೆ.

ಇದುವರೆಗೆ 100 ಐಪಿಎಲ್ ಪಂದ್ಯಗಳಲ್ಲಿ ಅವರು 34.94 ಸರಾಸರಿಯಲ್ಲಿ 2,935 ರನ್ ಗಳಿಸಿದ್ದಾರೆ. ಟೂರ್ನಿಯಲ್ಲಿ 131.08 ಸ್ಟ್ರೈಕ್ ರೇಟ್ ಹೊಂದಿದ್ದಾರೆ.

Story first published: Thursday, March 24, 2022, 20:57 [IST]
Other articles published on Mar 24, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+