IPL 2022: ಲಕ್ನೋವನ್ನ ಸೋಲಿಸಿ ಮತ್ತೆ ನಂ.1 ಆದ ಗುಜರಾತ್ ಟೈಟನ್ಸ್, ಪಾಯಿಂಟ್ಸ್ ಟೇಬಲ್ ಅಪ್‌ಡೇಟ್

ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್‌ನಲ್ಲಿ ನಡೆದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಗುಜರಾತ್ ಟೈಟನ್ಸ್ ಭರ್ಜರಿ ಗೆಲುವು ದಾಖಲಿಸಿದ್ದು, ಕೆ.ಎಲ್ ರಾಹುಲ್ ಪಡೆ ಹೀನಾಯ ಸೋಲಿನ ಮುಖಭಂಗ ಎದುರಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಗುಜರಾತ್ ಪರ ಶುಭಮನ್ ಗಿಲ್ ಅಜೇಯ 63ರನ್‌ಗಳ ನೆರವನಿಂದ ಗುಜರಾತ್ ಟೈಟನ್ಸ್ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 144 ರನ್ ಕಲೆಹಾಕಿತು. ತಂಡದ ಪರ ಶುಭಮನ್ ಬಿಟ್ಟರೆ ಮಿಲ್ಲರ್ 26, ರಾಹುಲ್ ತೆವಾಟಿಯಾ 22 ರನ್‌ಗಳ ಕೊಡುಗೆ ನೀಡಿದ್ದೇ ಹೆಚ್ಚು.
145 ರನ್‌ಗಳ ಗುರಿ ಬೆನ್ನತ್ತಿದ ಲಕ್ನೋ ಸೂಪರ್ ಜೈಂಟ್ಸ್ ಐಪಿಎಲ್ 2022ರ ಸೀಸನ್‌ನಲ್ಲಿ ಅತ್ಯಂತ ಹೀನಾಯ ಸೋಲು ಕಂಡಿದೆ. ಗುಜರಾತ್ ಸ್ಪಿನ್ನರ್ ರಶೀದ್ ಖಾನ್ , ಯಶ್ ದಯಾಳ್ ಸ್ಪಿನ್ ದಾಳಿಗೆ ತತ್ತರಿಸಿದ ಲಕ್ನೋ ತಂಡವು ಕೇವಲ 13.5 ಓವರ್‌ಗಳಲ್ಲಿ 82ರನ್‌ಗಳಿಗೆ ಆಲೌಟ್ ಆಗುವ ಮೂಲಕ ಕೆಟ್ಟ ರೀತಿಯಲ್ಲಿ ಸೋಲು ಕಂಡಿದೆ. ಲಕ್ನೋ ಪರ ದೀಪಕ್ ಹೂಡಾ 27, ಕ್ವಿಂಟನ್ ಡಿಕಾಕ್ 11, ಅವೇಶ್ ಖಾನ್ 12ರನ್‌ಗಳಿಸಿದ್ದು ಬಿಟ್ಟರೆ ಉಳಿದೆಲ್ಲಾ ಬ್ಯಾಟ್ಸ್‌ಮನ್‌ಗಳು ಸಿಂಗಲ್ ಡಿಜಿಟ್‌ಗೆ ಔಟಾಗುವ ಮೂಲಕ ಪೆವಿಲಿಯನ್ ಸೇರಿಕೊಂಡರು.
ಗುಜರಾತ್ ಪರ ರಶೀದ್ ಖಾನ್ 3.5 ಓವರ್‌ನಲ್ಲಿ 24ರನ್‌ಗೆ 4 ವಿಕೆಟ್ ಕಬಳಿಸಿದ್ರೆ, ಯಶ್ ದಯಾಳ್ 2, ಸಾಯಿ ಕಿಶೋರ್ 2 ವಿಕೆಟ್ ಪಡೆದರು. ಶಮಿ 3 ಓವರ್‌ಗೆ ಕೇವಲ 5ರನ್ ನೀಡಿ 1 ವಿಕೆಟ್ ಕೂಡ ಪಡೆದು ಗಮನಸೆಳೆದರು.

ಗುಜರಾತ್ ಟೈಟನ್ಸ್
ಈ ಪಂದ್ಯದಲ್ಲಿ ಲಕ್ನೋ ವಿರುದ್ಧ 62ರನ್‌ಗಳಿಂದ ಭಾರೀ ಗೆಲುವಿನ ಮೂಲಕ ಗುಜರಾತ್ ಟೈಟನ್ಸ್ 18 ಪಾಯಿಂಟ್ಸ್ ಪಾಯಿಂಟ್ಸ್‌ಗಳ ನೆಟ್ ರನ್‌ರೇಟ್ (+0.376) ಮೂಲಕ ಮತ್ತೆ ಅಗ್ರಸ್ಥಾನಕ್ಕೇರಿದೆ. ಗುಜರಾತ್ ಆಡಿದ 14 ಪಂದ್ಯಗಳಲ್ಲಿ 9 ಗೆಲುವು ಮತ್ತು 5 ಪಂದ್ಯಗಳ ಸೋಲಿನಿಂದ 18 ಪಾಯಿಂಟ್ಸ್ ಪಡೆದಿದೆ.
ಮೊದಲ ಮೂರು ಸ್ಥಾನದಲ್ಲಿ ಗುಜರಾತ್ ಬಳಿಕ ಲಕ್ನೋ (16) ರಾಜಸ್ತಾನ್ ರಾಯಲ್ಸ್ 14 ಪಾಯಿಂಟ್ಸ್‌ನೊಂದಿಗಿದ್ದು, ಆರ್‌ಸಿಬಿ ನಾಲ್ಕು ಹಾಗೂ ನಂತರದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಉತ್ತಮ ರನ್‌ರೇಟ್ ಮೂಲಕ ಐದನೇ ಸ್ಥಾನ ಅಲಂಕರಿಸಿದೆ.
ನಮ್ಮೂರ ಪ್ರತಿಭೆ: ಜೋಧಪುರದಿಂದ ಬಂದು ಕರ್ನಾಟಕದಲ್ಲಿ ಮಿಂಚಿದ ಕರುಣ್ ನಾಯರ್

ಆರೆಂಜ್ ಕ್ಯಾಪ್
ಟೂರ್ನಿಯಲ್ಲಿ ಅಮೋಘ ಫಾರ್ಮ್‌ನಲ್ಲಿರುವ ರಾಜಸ್ಥಾನ್ ರಾಯಲ್ಸ್ ತಂಡದ ಆರಂಭಿಕ ಆಟಗಾರ ಜೋಸ್ ಬಟ್ಲರ್ ಮೂರು ಶತಕದ ಮೂಲಕ ಅತಿ ಹೆಚ್ಚು ರನ್‌ಗಳಿಸಿದ ಆಟಗಾರರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. 11 ಪಂದ್ಯಗಳಲ್ಲಿ ಬಟ್ಲರ್ 618 ರನ್‌ಗಳಿಸಿದ್ದಾರೆ. ಇದರಲ್ಲಿ ಮೂರು ಶತಕ ಹಾಗೂ ಮೂರು ಅರ್ಧ ಶತಕ ಸೇರಿದೆ. ಎರಡನೇ ಸ್ಥಾನದಲ್ಲಿ ಕೆ.ಎಲ್ ರಾಹುಲ್ ಇದ್ದು 459 ರನ್‌ಗಳಿಸಿದ್ದಾರೆ. ನಂತರದಲ್ಲಿ ಫಾಫ್ ಡುಪ್ಲೆಸಿಸ್ 389 ರನ್, ಶಿಖರ್ ಧವನ್ 381 ರನ್ , ಡೇವಿಡ್ ವಾರ್ನರ್ 375 ರನ್‌ಗಳ ಮೂಲಕ ನಂತರದ ಸ್ಥಾನದಲ್ಲಿದ್ದಾರೆ.
ಕೆಕೆಆರ್ ತಂಡದ ಸೆಲೆಕ್ಷನ್‌ನಲ್ಲಿ CEO ಹಸ್ತಕ್ಷೇಪ: ಕಿಡಿ ಹೊತ್ತಿಸಿದ ಶ್ರೇಯಸ್ ಅಯ್ಯರ್ ಹೇಳಿಕೆ

ಪರ್ಪಲ್ ಕ್ಯಾಪ್
ಇನ್ನು ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗೆ ನೀಡುವ ಪರ್ಪಲ್ ಕ್ಯಾಪ್ ಕೂಡ ಆರ್‌ಆರ್ ಆಟಗಾರನ ಬಳಿಯೇ ಉಳಿದುಕೊಂಡಿದೆ. ಯುಜುವೇಂದ್ರ ಚಾಹಲ್ ಈ ಪಟ್ಟಿಯಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಚಾಹಲ್ ಒಟ್ಟು 22 ವಿಕೆಟ್‌ಗಳನ್ನು ಸಂಪಾದಿಸಿದ್ದು ಈ ಪಟ್ಟಿಯಲ್ಲಿಯೂ ಆರ್‌ಆರ್ ಆಟಗಾರ ಎಲ್ಲರಿಗಿಂತ ಮುಂದಿದ್ದಾನೆ.
ಇವರ ನಂತರದ ಸ್ಥಾನದಲ್ಲಿ ಆರ್‌ಸಿಬಿ ಸ್ಪಿನ್ನರ್ ವಹಿಂದು ಹಸರಂಗ ಕೇವಲ ಒಂದು ವಿಕೆಟ್ ಅಂತರದಲ್ಲಿ ಹಿಂದುಳಿದಿದ್ದಾರೆ. ಹಸರಂಗ ಕಳೆದ ಸನ್‌ರೈಸರ್ಸ್ ಹೈದ್ರಾಬಾದ್ ವಿರುದ್ಧದ ಪಂದ್ಯದಲ್ಲಿ ಐದು ವಿಕೆಟ್ ಪಡೆಯುವ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟಿದ್ದಲ್ಲದೆ, ಸೀಸನ್‌ನ ಪರ್ಪಲ್ ಕ್ಯಾಪ್ ರೇಸ್‌ನಲ್ಲಿ ಎರಡನೇ ಸ್ಥಾನಕ್ಕೆ ಜಿಗಿದ್ದಿದ್ದಾರೆ. 12 ಪಂದ್ಯಗಳಲ್ಲಿ ಈ ಲಂಕಾ ಸ್ಪಿನ್ನರ್ 21 ವಿಕೆಟ್ ಕಬಳಿಸಿದ್ದಾರೆ.
ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿ ಗುಜರಾತ್ ಟೈಟನ್ಸ್‌ನ ರಶೀದ್ ಖಾನ್ (19), ಪಂಜಾಬ್ ಕಿಂಗ್ಸ್‌ನ ಕಗಿಸೊ ರಬಾಡ (18) ಸ್ಥಾನ ಪಡೆದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications