IPL 2022: ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ ರಾಜಸ್ತಾನ್ ರಾಯಲ್ಸ್, ಮತ್ತಷ್ಟು ಕುಸಿದ ಆರ್‌ಸಿಬಿ

ಐಪಿಎಲ್ 2022ರ ಸೀಸನ್‌ನ 39ನೇ ಪಂದ್ಯದಲ್ಲಿ ಆರ್‌ಸಿಬಿ ಮುಗ್ಗರಿಸಿದ್ದು, ರಾಜಸ್ತಾನ್ ರಾಯಲ್ಸ್ ವಿರುದ್ಧ 29ರನ್‌ಗಳಿಂದ ಸೋಲನ್ನ ಕಂಡಿದೆ. ರಾಜಸ್ತಾನ್ ನೀಡಿದ 145 ರನ್‌ಗಳ ಗುರಿ ಬೆನ್ನತ್ತಿದ ಆರ್‌ಸಿಬಿ 115 ರನ್‌ಗಳಿಗೆ ಕುಸಿದಿದ್ದು, ಮತ್ತೊಮ್ಮೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿದೆ.
ವಿರಾಟ್ ಕೊಹ್ಲಿ ಹಾಗೂ ಮ್ಯಾಕ್ಸ್‌ವೆಲ್ ಕೆಟ್ಟ ಬ್ಯಾಟಿಂಗ್ ಪ್ರದರ್ಶನದ ಮೂಲಕ ಆರ್‌ಸಿಬಿಗೆ ಈ ಸೀಸನ್‌ನಲ್ಲಿ ಕೈ ಹಿಡಿಯಲು ವಿಫಲರಾಗಿದ್ದಾರೆ. ಫಾಫ್ ಡುಪ್ಲೆಸಿಸ್ 27ರನ್‌ಗೆ ಇನ್ನಿಂಗ್ಸ್ ಮುಗಿಸಿದ್ರೆ, ಪಂದ್ಯ ಮುಗಿಸಬೇಕಿದ್ದ ದಿನೇಶ್ ಕಾರ್ತಿಕ್ ರನೌಟ್ ಆಗಿದ್ದು ಆರ್‌ಸಿಬಿ ಇನ್ನಿಂಗ್ಸ್‌ಗೆ ಕೊನೆ ಹಾಡಿತು.
ಸುಲಭವಾಗಿ ಪಂದ್ಯವನ್ನ ಗೆಲ್ಲಬೇಕಿದ್ದ ಆರ್‌ಸಿಬಿ ತಂಡವು ರಾಜಸ್ತಾನ್ ರಾಯಲ್ಸ್ ಪ್ರಬಲ ಬೌಲಿಂಗ್ ದಾಳಿಯಲ್ಲಿ ನಲುಗಿ ಹೋಗಿದ್ದು, ಪ್ರಸಕ್ತ ಸೀಸನ್‌ನಲ್ಲಿ ಐದನೇ ಸೋಲನ್ನ ಕಂಡಿದೆ. ರಾಜಸ್ತಾನ್ ರಾಯಲ್ಸ್ ಎರಡು ಪಾಯಿಂಟ್ ತನ್ನದಾಗಿಸಿಕೊಂಡಿದೆ.
ಹಾಗಾದರೆ ಈ ಪಂದ್ಯದ ಬಳಿಕ ರಾಜಸ್ತಾನ್ ರಾಯಲ್ಸ್ ಅಂಕಪಟ್ಟಿಯಲ್ಲಿ ಯಾವ ಸ್ಥಾನದಲ್ಲಿದೆ. ಪರ್ಪಲ್ ಕ್ಯಾಪ್ ಪಟ್ಟಿ ಹಾಗೂ ಆರೆಂಜ್ ಕ್ಯಾಪ್ ಪಟ್ಟಿಯಲ್ಲಿ ಆಗಿರುವ ಬದಲಾವಣೆಗಳು ಏನು? ಮುಂದೆ ಓದಿ..

ಪಾಯಿಂಟ್ಸ್ ಟೇಬಲ್
ಈ ಪಂದ್ಯದಲ್ಲಿ ರಾಜಸ್ತಾನ್ ರಾಯಲ್ಸ್ 29ರನ್ ಗಳಿಂದ ಗೆಲ್ಲುವ ಮೂಲಕ ಪಾಯಿಂಟ್ಸ್ ಟೇಬಲ್‌ನಲ್ಲಿ ಅಗ್ರಸ್ಥಾನಕ್ಕೇರಿದೆ. ರಾಜಸ್ತಾನ್ ರಾಯಲ್ಸ್ 8 ಪಂದ್ಯಗಳಲ್ಲಿ 6 ಗೆಲುವು ಮತ್ತು 2 ಸೋಲುಗಳ ಮೂಲಕ 12 ಪಾಯಿಂಟ್ಸ್ ಕಲೆಹಾಕಿದ್ದು, ನೆಟ್ ರನ್‌ರೇಟ್‌ನಲ್ಲಿ ಸಹ ಮುಂದಿದೆ.
ಮೊದಲ ಮೂರು ಸ್ಥಾನದಲ್ಲಿ ರಾಜಸ್ತಾನ್ ನಂತರದಲ್ಲಿ ಗುಜರಾತ್ ಟೈಟನ್ಸ್ 12 ಪಾಯಿಂಟ್ಸ್, ಸನ್‌ರೈಸರ್ಸ್ ಹೈದ್ರಾಬಾದ್ 10 ಪಾಯಿಂಟ್ಸ್ ಮೂಲಕ ನೆಟ್‌ರನ್‌ರೇಟ್‌ನಲ್ಲಿ ಲಕ್ನೋಗಿಂತ ಮುಂದಿದೆ. ಇನ್ನು 10 ಪಾಯಿಂಟ್ಸ್ ಹೊಂದಿರುವ ಆರ್‌ಸಿಬಿ ನೆಟ್ ರನ್‌ರೇಟ್‌ನಲ್ಲಿ ಹಿಂದಿದ್ದು ಐದನೇ ಸ್ಥಾನದಲ್ಲೇ ಉಳಿದಿದೆ.
RCB VS RR: ಮತ್ತೊಮ್ಮೆ ಮುಗ್ಗರಿಸಿದ ಆರ್‌ಸಿಬಿ, ಕೊಹ್ಲಿ, ಮ್ಯಾಕ್ಸ್‌ವೆಲ್ ಫ್ಲಾಪ್ ಶೋ

ಆರೆಂಜ್ ಕ್ಯಾಪ್
ಟೂರ್ನಿಯಲ್ಲಿ ಅಮೋಘ ಫಾರ್ಮ್‌ನಲ್ಲಿರುವ ರಾಜಸ್ಥಾನ್ ರಾಯಲ್ಸ್ ತಂಡದ ಆರಂಭಿಕ ಆಟಗಾರ ಜೋಸ್ ಬಟ್ಲರ್ ಮೂರು ಶತಕದ ಮೂಲಕ ಅತಿ ಹೆಚ್ಚು ರನ್‌ಗಳಿಸಿದ ಆಟಗಾರರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. 8 ಪಂದ್ಯಗಳಲ್ಲಿ ಬಟ್ಲರ್ 499 ರನ್‌ಗಳಿಸಿದ್ದಾರೆ. ಇದರಲ್ಲಿ ಮೂರು ಶತಕ ಹಾಗೂ ಎರಡು ಅರ್ಧ ಶತಕ ಸೇರಿದೆ. ಎರಡನೇ ಸ್ಥಾನದಲ್ಲಿ ಕೆ.ಎಲ್ ರಾಹುಲ್ ಇದ್ದು 368 ರನ್‌ಗಳಿಸಿದ್ದಾರೆ. ಶಿಖರ್ ಧವನ್ 302 ರನ್‌ಗಳ ಮೂಲಕ ಸ್ಥಾನಕ್ಕೇರಿದ್ದಾರೆ. ಹಾರ್ದಿಕ್ ಪಾಂಡ್ಯ 295 ರನ್‌ಗಳೊಂದಿಗೆ 4ನೇ ಸ್ಥಾನ ಹಾಗೂ 272 ರನ್‌ಗಳಿಸಿರುವ ತಿಲಕ್ ವರ್ಮಾ ಐದನೇ ಸ್ಥಾನ ಪಡೆದಿದ್ದಾರೆ.
IPL 2022: CSK 6ನೇ ಪಂದ್ಯ ಸೋತ ಬಳಿಕ, ಯಾವ ತಂಡಕ್ಕೆ ಪ್ಲೇ ಆಫ್ ತಲುಪುವ ಅವಕಾಶ ಹೆಚ್ಚಿದೆ?

ಪರ್ಪಲ್ ಕ್ಯಾಪ್
ಇನ್ನು ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗೆ ನೀಡುವ ಪರ್ಪಲ್ ಕ್ಯಾಪ್ ಕೂಡ ಆರ್‌ಆರ್ ಆಟಗಾರನ ಬಳಿಯೇ ಉಳಿದುಕೊಂಡಿದೆ. ಯುಜುವೇಂದ್ರ ಚಾಹಲ್ ಈ ಪಟ್ಟಿಯಲ್ಲಿ ಮುನ್ನಡೆ ಸಾಧಿಸಿದ್ದಾರೆ. ಚಾಹಲ್ ಒಟ್ಟು 18 ವಿಕೆಟ್‌ಗಳನ್ನು ಸಂಪಾದಿಸಿದ್ದು ಈ ಪಟ್ಟಿಯಲ್ಲಿಯೂ ಆರ್‌ಆರ್ ಆಟಗಾರ ಎಲ್ಲರಿಗಿಂತ ಮುಂದಿದ್ದಾನೆ. ಎರಡನೇ ಸ್ಥಾನದಲ್ಲಿರುವ ಟಿ. ನಟರಾಜನ್ 15 ವಿಕೆಟ್ ಸಂಪಾದಿಸಿದ್ದು, ಡ್ವೇನ್ ಬ್ರಾವೋ 14, ಕುಲ್‌ದೀಪ್ ಯಾದವ್ 13 ವಿಕೆಟ್ ಪಡೆದಿದ್ದಾರೆ. ಆರ್‌ಸಿಬಿ ಬೌಲರ್ ವಹಿಂದು ಹಸರಂಗ ಕೂಡ 13 ವಿಕೆಟ್ ಪಡೆದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications