ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

BCCI ಕೇಂದ್ರೀಯ ಗುತ್ತಿಗೆ 2022: ರಹಾನೆ, ಪೂಜಾರ ಸ್ಥಾನ ಕುಸಿತ, ಹಾರ್ದಿಕ್‌ಗೆ 'C' ಗ್ರೇಡ್‌!

Pujara and rahane

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಭಾರತೀಯ ಕ್ರಿಕೆಟಿಗರ 2022ರ ಕೇಂದ್ರೀಯ ಒಪ್ಪಂದಗಳನ್ನ ಘೋಷಿಸಿದೆ. ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಮಂಡಳಿಯು ಬುಧವಾರ ತನ್ನ ಪ್ರಸಕ್ತ ವರ್ಷದ ಗುತ್ತಿಗೆ ಆಟಗಾರರ ಹೆಸರು ಪ್ರಕಟಿಸಿದ್ದು, ಕಳೆದ ಬಾರಿಗಿಂತ ಏಕೈಕ ಆಟಗಾರರನ್ನ ಕೈಬಿಟ್ಟು 27 ಆಟಗಾರರೊಂದಿಗೆ ಒಪ್ಪಂದ ಮುಂದುವರಿಸಿದೆ.

ಕೆಲವು ವರದಿಗಳ ಪ್ರಕಾರ ಭಾರತ ಲಿಮಿಟೆಡ್ ಓವರ್ ಕ್ರಿಕೆಟ್‌ನ ಉಪನಾಯಕ ಕೆ.ಎಲ್ ರಾಹುಲ್ ಮತ್ತು ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ ಅವರು ಬಡ್ತಿ ಪಡೆಯುವ ಸಾಧ್ಯತೆಯಿತ್ತು. ಆದ್ರೆ ಈ ಇಬ್ಬರು ಆಟಗಾರರನ್ನ A ಗ್ರೇಡ್‌ನಲ್ಲೇ ಮುಂದುವರಿಸಲಾಗಿದೆ.

A+ ಗ್ರೇಡ್‌ನಲ್ಲಿದ್ದಾರೆ ಮೂವರು ಆಟಗಾರರು

A+ ಗ್ರೇಡ್‌ನಲ್ಲಿದ್ದಾರೆ ಮೂವರು ಆಟಗಾರರು

BCCI ಗ್ರೇಡ್ A+ ಗುತ್ತಿಗೆ ಪಟ್ಟಿಯಲ್ಲಿ ಮತ್ತೆ ಕೇವಲ ಮೂರು ಕ್ರಿಕೆಟಿಗರು ಮಾತ್ರ ಒಪ್ಪಂದ ನವೀಕರಿಸಲಾಗಿದೆ. ಸೀಮಿತ ಓವರ್‌ಗಳ ನಾಯಕ ರೋಹಿತ್ ಶರ್ಮಾ, ವೇಗಿ ಜಸ್ಪ್ರೀತ್ ಬುಮ್ರಾ ಮತ್ತು ವಿರಾಟ್ ಕೊಹ್ಲಿ ಮಾತ್ರ ಗ್ರೇಡ್ A+ ಒಪ್ಪಂದದಲ್ಲಿರುವ ಮೂವರು ಭಾರತೀಯ ಕ್ರಿಕೆಟಿಗರು.

ಎ ಗ್ರೇಡ್‌ನಲ್ಲೇ ಮುಂದುವರಿದ ಕೆ.ಎಲ್ ರಾಹುಲ್

ಎ ಗ್ರೇಡ್‌ನಲ್ಲೇ ಮುಂದುವರಿದ ಕೆ.ಎಲ್ ರಾಹುಲ್

ಕೆಎಲ್ ರಾಹುಲ್ ಅವರು ಸೀಮಿತ ಓವರ್‌ಗಳ ಸ್ವರೂಪದಲ್ಲಿ ಆರಂಭಿಕರಾದಾಗಿನಿಂದ ಭಾರತದ ಪ್ರಮುಖ ಆಟಗಾರಗಿ ಗುರುತಿಸಿಕೊಂಡಿದ್ದಾರೆ. ಕಳೆದ ವರ್ಷ, ರಾಹುಲ್‌ಗೆ ಟೆಸ್ಟ್ ಮಾದರಿಯಲ್ಲಿ ಇನ್ನಿಂಗ್ಸ್ ತೆರೆಯಲು ಎರಡನೇ ಅವಕಾಶವನ್ನು ಪಡೆದ ಬಳಿಕ ಅವರು ಹಿಂದಿರುಗಿ ನೋಡಿದ್ದೇ ಇಲ್ಲ. ರಾಹುಲ್ ಜೊತೆಗೆ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ರಿಷಬ್ ಪಂತ್ ಕಳೆದ ವರ್ಷದಲ್ಲಿ ಭಾರತದ ಪ್ರಮುಖ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿ ತಮ್ಮನ್ನು ತಾವು ರೂಪಿಸಿಕೊಂಡಿದ್ದಾರೆ.

ಯುವ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ರಿಷಬ್ ಪಂತ್ ಕಳೆದ ವರ್ಷದಲ್ಲಿ ಭಾರತದ ಪ್ರಮುಖ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿ ತಮ್ಮನ್ನು ತಾವು ಗುರುತಿಸಿಕೊಂಡು. ಅವರು ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಟೆಸ್ಟ್ ಸ್ವರೂಪದಲ್ಲಿ ಮತ್ತು ಇತರ ಹಲವಾರು ಸಂದರ್ಭಗಳಲ್ಲಿ ತಮ್ಮ ಅದ್ಭುತ ಬ್ಯಾಟಿಂಗ್ ತೋರಿಸಿದರು.

ಈ ಇಬ್ಬರು ಆಟಗಾರರು A+ ಗ್ರೇಡ್‌ನಲ್ಲಿ ಅವಕಾಶ ಪಡೆಯಬಹುದು ಎಂದು ಊಹಿಸಲಾಗಿತ್ತು ಆದ್ರೆ A ಗ್ರೇಡ್‌ನಲ್ಲಿ ತಂಡದಲ್ಲಿ ಮುಂದುವರಿದಿದ್ದಾರೆ.

27 ಆಟಗಾರರೊಂದಿಗೆ ಬಿಸಿಸಿಐ ಕೇಂದ್ರೀಯ ಒಪ್ಪಂದ

27 ಆಟಗಾರರೊಂದಿಗೆ ಬಿಸಿಸಿಐ ಕೇಂದ್ರೀಯ ಒಪ್ಪಂದ

ಕಳೆದ ವರ್ಷದ 28 ಆಟಗಾರರ ಪೈಕಿ 27 ಆಟಗಾರರು ತಮ್ಮ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇಶಾಂತ್ ಶರ್ಮಾ, ವೃದ್ದಿಮಾನ್ ಸಾಹಾ ಸೇರಿದಂತೆ ಕೆಲ ಆಟಗಾರರ ಕುರಿತು ಬಿಸಿಸಿಐ ಮೃದುಧೋರಣೆ ತೋರಿದ್ದು, C ಗ್ರೇಡ್‌ನಲ್ಲಿ ಸ್ಥಾನ ಪಡೆದಿದ್ದಾರೆ. ಅದ್ರಲ್ಲೂ ಇತ್ತೀಚೆಗೆ ಪತ್ರಕರ್ತನ ಕುರಿತಾಗಿ ಹಾಗೂ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಕೋಚ್ ದ್ರಾವಿಡ್ ಮೇಲೆ ಆರೋಪ ಹೊರಿಸಿದ್ದ ಸಾಹಾ C ಗ್ರೇಡ್‌ನಲ್ಲಿ ಮುಂದುವರಿದಿದ್ದಾರೆ.

ಗ್ರೂಪ್ ಬಿನಲ್ಲಿ ಸ್ಥಾನ ಪಡೆದ ರಹಾನೆ, ಪೂಜಾರ

ಗ್ರೂಪ್ ಬಿನಲ್ಲಿ ಸ್ಥಾನ ಪಡೆದ ರಹಾನೆ, ಪೂಜಾರ

ಕಳೆದ ವರ್ಷ ಗ್ರೂಪ್ Aನಲ್ಲಿದ್ದ ಅಜಿಂಕ್ಯ ರಹಾನೆ, ಚೇತೇಶ್ವರ ಪೂಜಾರ ಮತ್ತು ವೇಗಿ ಇಶಾಂತ್ ಶರ್ಮಾ A ಗ್ರೂಪ್‌ನಿಂದ B ಗ್ರೂಪ್‌ಗೆ ಕುಸಿತಗೊಂಡಿದ್ದಾರೆ. ಈ ಮೂಲಕ ಐದು ಕೋಟಿ ರೂಪಾಯಿ ಪಡೆಯುತ್ತಿದ್ದ ಈ ಆಟಗಾರರು ಈ ವರ್ಷ 3 ಕೋಟಿ ಸಂಭಾವನೆ ಪಡೆಯಲಿದ್ದಾರೆ.

ಇನ್ನು ಹಾರ್ದಿಕ್ ಪಾಂಡ್ಯ A ಗ್ರೇಡ್‌ನಿಂದ ತೀರಾ ಕಳಪೆಯಾಗಿ C ಗ್ರೇಡ್‌ಗೆ ತಲುಪಿ ಬಿಟ್ಟಿದ್ದಾರೆ.

2022ರ ಆಟಗಾರರ ಕಾಂಟ್ರಾಕ್ಟ್‌ ಲಿಸ್ಟ್

2022ರ ಆಟಗಾರರ ಕಾಂಟ್ರಾಕ್ಟ್‌ ಲಿಸ್ಟ್

ಗ್ರೇಡ್ A+ (7 ಕೋಟಿ ರೂ.): ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ

ಗ್ರೇಡ್ A (5 ಕೋಟಿ ರೂ.): ರವೀಂದ್ರ ಜಡೇಜಾ, ಕೆಎಲ್ ರಾಹುಲ್, ಮೊಹಮ್ಮದ್ ಶಮಿ, ರವಿಚಂದ್ರನ್ ಅಶ್ವಿನ್, ರಿಷಬ್ ಪಂತ್ , ಮೊಹಮ್ಮದ್ ಸಿರಾಜ್

ಗ್ರೇಡ್ B (3 ಕೋಟಿ ರೂ.): ಉಮೇಶ್ ಯಾದವ್, ಭುವನೇಶ್ವರ್ ಕುಮಾರ್, ವೃದ್ಧಿಮಾನ್ ಸಹಾ, ಶಾರ್ದೂಲ್ ಠಾಕೂರ್, ಇಶಾಂತ್ ಶರ್ಮಾ, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ

ಗ್ರೇಡ್ C (1 ಕೋಟಿ ರೂ.): ಮಯಾಂಕ್ ಅಗರ್ವಾಲ್, ಯುಜವೇಂದ್ರ ಚಹಾಲ್, ದೀಪಕ್ ಚಾಹರ್, ಶುಭಮನ್ ಗಿಲ್, ಹನುಮ ವಿಹಾರಿ, ಅಕ್ಷರ್ ಪಟೇಲ್, ಶ್ರೇಯಸ್ ಅಯ್ಯರ್, ವಾಷಿಂಗ್ಟನ್ ಸುಂದರ್, ಸೂರ್ಯಕುಮಾರ್ ಯಾದವ್

ಕೊಹ್ಲಿಯ 100 ನೇ ಟೆಸ್ಟ್ ಗೆ ಶುಭಾಶಯ ಕೋರಲು BCCI ಮಾಡಿದ ಪ್ಲ್ಯಾನ್ ನೋಡಿ | Oneindia Kannada
ಗ್ರೂಪ್‌ Aನಲ್ಲಿ ಸ್ಥಾನ ಪಡೆದ ರಾಜೇಶ್ವರಿ, ದೀಪ್ತಿ ಶರ್ಮಾ

ಗ್ರೂಪ್‌ Aನಲ್ಲಿ ಸ್ಥಾನ ಪಡೆದ ರಾಜೇಶ್ವರಿ, ದೀಪ್ತಿ ಶರ್ಮಾ

ಇನ್ನು ಮಹಿಳಾ ಕ್ರಿಕೆಟ್‌ನಲ್ಲಿ ಕನ್ನಡತಿ ರಾಜೇಶ್ವರಿ ಗಾಯಕ್ವಾಡ್ ಮತ್ತು ದೀಪ್ತಿ ಶರ್ಮಾ ಗ್ರೂಪ್ ಬಿ ಯಿಂದ A ಗ್ರೂಪ್‌ಗೆ ಬಡ್ತಿ ಪಡೆದಿದ್ದು, ಹರ್ಮನ್ ಪ್ರೀತ್ ಕೌರ್, ಸ್ಮೃತಿ ಮಂದಾನ, ಪೂನಂ ಯಾದವ್ ಲಿಸ್ಟ್‌ಗೆ ಸೇರಿದ್ದು, ವಾರ್ಷಿಕ 50 ಲಕ್ಷ ರೂಪಾಯಿ ಸಂಭಾವನೆ ಪಡೆಯಲಿದ್ದಾರೆ.

ಮಿಥಾಲಿ ರಾಜ್ ಮತ್ತು ಜೂಲನ್ ಗೋಸ್ವಾಮಿ ಬಿ ಗುಂಪಿನಲ್ಲಿ (30 ಲಕ್ಷ ರೂ.) ಉಳಿದಿದ್ದಾರೆ. ಜೆಮಿಮಾ ರೋಡ್ರಿಗಸ್ ಅವರನ್ನು ಬಿ ಗುಂಪಿನಿಂದ ಸಿ (10 ಲಕ್ಷ ರೂ.) ಗೆ ಇಳಿಸಲಾಗಿದೆ.

Story first published: Thursday, March 3, 2022, 12:13 [IST]
Other articles published on Mar 3, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X