Mumbai Indians Players for IPL 2022: ಬಲಿಷ್ಠ ಮುಂಬೈ ಇಂಡಿಯನ್ಸ್ ಸಂಭಾವ್ಯ ಸ್ಕ್ವಾಡ್ ಇಲ್ಲಿದೆ

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 15ನೇ ಸೀನಸ್‌ನ ಆಟಗಾರರು ಹರಾಜು ಪ್ರಕ್ರಿಯೆಗೆ ಬೆಂಗಳೂರಿನಲ್ಲಿ ವೇದಿಕೆ ಸಿದ್ಧಗೊಂಡಿದೆ. ಇದೇ ತಿಂಗಳು 12 ಮತ್ತು 13ರಂದು ಸಿಲಿಕಾನ್ ಸಿಟಿಯಲ್ಲಿ ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದೆ.
ಬಿಸಿಸಿಐ ಬಿಡುಗಡೆ ಮಾಡಿರುವ ಆಟಗಾರರ ಆಯ್ಕೆ ಪಟ್ಟಿಯಲ್ಲಿ ಒಟ್ಟು 590 ಆಟಗಾರರು ಪಾಲ್ಗೊಳ್ಳಲಿದ್ದಾರೆ. ಈ ಮೊದಲು ಹರಾಜು ರಿಜಿಸ್ಟರ್‌ನಲ್ಲಿರುವ 1,214 ಹೆಸರುಗಳಲ್ಲಿ 896 ಭಾರತೀಯ ಆಟಗಾರರು ಮತ್ತು 318 ವಿದೇಶಿ ಆಟಗಾರರಿದ್ದರು. ಆದ್ರೀಗ ಇದನ್ನ 590ಕ್ಕೆ ಕಡಿತಗೊಳಿಸಲಾಗಿದೆ. ಇದರಲ್ಲಿ 228 ಕ್ಯಾಪ್ಡ್ ಆಟಗಾರರು, 355 ಅನ್‌ಕ್ಯಾಪ್ಡ್ ಆಟಗಾರರು ಮತ್ತು 7 ಅಸೋಸಿಯೇಟ್ ನೇಷನ್ಸ್‌ಗೆ ಸೇರಿದವರಾಗಿದ್ದಾರೆ.
ಈ ಹರಾಜು ಪ್ರಕ್ರಿಯೆಗೂ ಮುನ್ನ ಐಪಿಎಲ್‌ನ ಅತ್ಯಂತ ಯಶಸ್ವಿ ತಂಡ, ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಯಾವೆಲ್ಲಾ ಆಟಗಾರರನ್ನ ಒಳಗೊಳ್ಳಬಹುದು ಮತ್ತು ಅವರ ಸ್ಕ್ವಾಡ್ ಹೇಗಿದೆ ಎಂಬ ಸಂಭಾವ್ಯ ತಂಡವನ್ನ ಇಲ್ಲಿ ನೀಡಲಾಗಿದೆ. ಅದಕ್ಕೂ ಮುನ್ನ ಎಂಐ ರೀಟೈನ್ ಆಟಗಾರರು ಮತ್ತು ಕೋಚಿಂಗ್ ಸಿಬ್ಬಂದಿ ಮಾಹಿತಿ ತಿಳಿದುಕೊಳ್ಳಿ

ಮುಂಬೈ ಪರ ರೀಟೈನ್ ಆದ ಪ್ಲೇಯರ್ಸ್
ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಪರ ನಾಯಕ ರೋಹಿತ್ ಶರ್ಮಾ 16 ಕೋಟಿ ರೂಪಾಯಿಗೆ ಹರಾಜಾಗುವ ಮೂಲಕ ರೀಟೈನ್ ಆದ ಮೊದಲ ಆಟಗಾರನಾಗಿದ್ದು, ಜಸ್ಪ್ರೀತ್ ಬುಮ್ರಾ ರೀಟೈನ್ ಆದ ಎರಡನೇ ಪ್ಲೇಯರ್ ಆಗಿದ್ದಾರೆ. ಬುಮ್ರಾ 12 ಕೋಟಿ ರೂಪಾಯಿಗೆ ರೀಟೈನ್ ಆಗಿದ್ದಾರೆ.
ಬಹಳ ಸಪ್ರೈಸ್ ಪಿಕ್ ಆಗಿರುವ ಸೂರ್ಯಕುಮಾರ್ ಯಾದವ್ ರೀಟೈನ್ ಆದ ಮೂರನೇ ಆಟಗಾರನಾಗಿದ್ದು, 8 ಕೋಟಿ ರೂಪಾಯಿ ಪಡೆದಿದ್ದಾರೆ. ಇನ್ನು ಕಿರಾನ್ ಪೊಲಾರ್ಡ್ ರೀಟೈನ್ ಆದ ನಾಲ್ಕನೇ ಪ್ಲೇಯರ್ ಆಗಿದ್ದು ಕೇವಲ 6 ಕೋಟಿ ರೂಪಾಯಿಗೆ ರೀಟೈನ್ ಆಗಿದ್ದಾರೆ. ಮುಂಬೈ 42 ಕೋಟಿ ವೆಚ್ಚವನ್ನು ಈಗಾಗಲೇ ನಾಲ್ಕರು ಆಟಗಾರರ ಮೇಲೆ ಸುರಿದಿದ್ದು, ಮುಂಬೈ ಫ್ರಾಂಚೈಸಿ ಬಳಿ 48 ಕೋಟಿ ಮಾತ್ರ ಬಾಕಿ ಇದೆ.
ಇನ್ನು ಮುಂಬೈನ ಸ್ಟಾರ್ ಪ್ಲೇಯರ್ಸ್ ಹಾರ್ದಿಕ್ ಪಾಂಡ್ಯರನ್ನ ಅಹಮದಾಬಾದ್ ಟೈಟನ್ಸ್ ಖರೀದಿಸಿದ್ದು, ಇಶನ್ ಕಿಶನ್, ಕೃನಾಲ್ ಪಾಂಡ್ಯ ರಾಹುಲ್ ಚಹಾರ್ ಹರಾಜಿಗೆ ಹೋಗಿದ್ದಾರೆ.

ರೋಹಿತ್ ಜೊತೆ ಓಪನಿಂಗ್ ಬ್ಯಾಟ್ಸ್‌ಮನ್ ಯಾರು?
ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಜೋಡಿಯಾಗಿ ಓಪನಿಂಗ್ ಸ್ಲಾಟ್‌ಗಾಗಿ ಮುಂಬೈ ತಂಡದಲ್ಲೇ ಇದ್ದಕ್ವಿಂಟನ್ ಡಿಕಾಕ್, ಎವಿನ್ ಲೂಯಿಸ್ ಅಥವಾ ಕಾಲಿನ್ ಮನ್ರೋ ಮೇಲೆ ಮುಂಬೈ ಇಂಡಿಯನ್ಸ್ ಬಿಡ್ ಮಾಡಬಹುದು. ಬ್ಯಾಕಪ್ ಬ್ಯಾಟ್ಸ್‌ಮನ್ ಆಗಿ ಎವಿನ್ ಲೂಯಿನ್, ಕಾಲಿನ್ ಮನ್ರೋಗೆ ಮುಂಬೈ ಟಾರ್ಗೆಟ್ ಮಾಡಿದೆ. ಡಿಕಾಕ್‌ರನ್ನ ತಂಡಕ್ಕೆ ಸೇರಿಸಿಕೊಂಡ್ರೆ, ತಂಡಕ್ಕೆ ವಿಕೆಟ್ ಕೀಪರ್ ಸಮಸ್ಯೆ ಕೂಡ ಬಗೆಹರಿಯಲಿದೆ.
IPL 2022: ಈ 3 ತಂಡಗಳು ಶಾರೂಖ್ ಖಾನ್ ಮೇಲೆ ಸಖತ್ ಬಿಡ್ ಮಾಡಲಿವೆ

ಮಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್ ಜೊತೆಗೆ ಇಶಾನ್ ಕಿಶನ್!
ಮಧ್ಯಮ ಕ್ರಮಾಂಕ ಬಲಪಡಿಸಲು ಮುಂಬೈ ಇಂಡಿಯನ್ಸ್ ಪ್ರಯತ್ನ ನಡೆಸಲಿದ್ದು, ಸೂರ್ಯಕುಮಾರ್ ಯಾದವ್ ಜೊತೆಗೆ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಇಶಾನ್ ಕಿಶನ್ಗೆ ಗಾಳ ಹಾಕಬಹುದು. ಜೊತೆಗೆ ಸೌರಭ್ ತಿವಾರಿ ಕೂಡ ತಂಡದ ಆಯ್ಕೆಯಲ್ಲಿ ಒಂದಾಗಿದೆ. ಇದರ ಜೊತೆಗೆ ಹಿರಿಯ ಆಟಗಾರರು ದಿನೇಶ್ ಕಾರ್ತಿಕ್, ಅಜಿಂಕ್ಯಾ ರಹಾನೆಗಳನ್ನು ಟಾರ್ಗೆಟ್ ಮಾಡಿದರು ಆಶ್ಚರ್ಯವಿಲ್ಲ.
ಭಾರತ ಟೆಸ್ಟ್ ತಂಡದ ನಾಯಕ ಸ್ಥಾನಕ್ಕೆ ಮೂವರ ಹೆಸರು: ರೋಹಿತ್ ನಾಯಕನಾಗಲು ಇದೊಂದೇ ಅಡ್ಡಿ!

ಆಲ್‌ರೌಂಡರ್ ಪೊಲಾರ್ಡ್ ಜೋಡಿ ಯಾರು?
ಮುಂಬೈ ಇಂಡಿಯನ್ಸ್‌ಗೆ ಹಲವು ವರ್ಷಗಳಿಂದ ಬೆಸ್ಟ್ ಆಲ್‌ರೌಂಡರ್ ಆಗಿ ಕೊಡುಗೆ ನೀಡಿರುವ ಕಿರಾನ್ ಪೊಲಾರ್ಡ್ ಜೊತೆಗೆ ಆಸ್ಟ್ರೇಲಿಯಾದ ಮಿಚೆಲ್ ಮಾರ್ಷ್, ದೇಶೀಯ ಆಲ್‌ರೌಂಡರ್ ರಾಹುಲ್ ತೆವಾಟಿಯಾ ಸಾಥ್ ನೀಡಬಹುದು.
ಇನ್ನು ಬೌಲಿಂಗ್‌ನಲ್ಲಿ ಸ್ಪಿನ್ನರ್ ರಾಹುಲ್ ಚಹಾರ್‌ಗೆ ಜೋಡಿಯಾಗಿ ಯುಜವೇಂದ್ರ ಚಹಾಲ್ ಇಲ್ಲವೆ ಆರ್. ಅಶ್ವಿನ್ ಮೇಲೆ ಗುರಿಯಾಗಿಸಿ ಬಿಡ್ ಮಾಡುವ ಯೋಜನೆ ಸಹ ಇದೆ.

ಬುಮ್ರಾ ಜೊತೆಗೆ ಯಾರು ಬೌಲಿಂಗ್ ನೊಗ ಹೊರಲಿದ್ದಾರೆ?
ಸ್ಟಾರ್ ಪೇಸರ್ ಜಸ್‌ಪ್ರೀತ್ ಬುಮ್ರಾನನ್ನ ಮುಂಬೈ ರೀಟೈನ್ ಮಾಡಿಕೊಂಡಿದೆ. ಈತನ ಜೊತೆಗೆ ತಮ್ಮ ಮಾಜಿ ಪೇಸರ್ ಟ್ರೆಂಟ್ ಬೌಲ್ಟ್ , ಕಗಿಸೋ ರಬಡಾ, ದೀಪಕ್ ಚಾಹರ್‌ಗಳನ್ನು ಟಾರ್ಗೆಟ್ ಮಾಡಿದ್ದಾರೆ. ಇವರ ಜೊತೆಗೆ ದೇಶೀಯ ವೇಗಿಗಳಾದ ಶಿವಂ ಮಾವಿ, ಇಶಾನ್ ಪೊರೆಲ್‌ನು ಕೂಡ ಮುಂಬೈನಲ್ಲಿ ತೆಗೆದುಕೊಳ್ಳುವ ಅವಕಾಶವಿದೆ.

ಮುಂಬೈ ಇಂಡಿಯನ್ಸ್ ಸಂಭಾವ್ಯ ತಂಡ
ರೋಹಿತ್ ಶರ್ಮ(ನಾಯಕ), ಎವಿನ್ ಲೂಯಿಸ್, ಸೂರ್ಯಕುಮಾರ್ ಯಾದವ್, ಅಭಿಷೇಕ್ ಶರ್ಮ, ಕೀರನ್ ಪೊಲಾರ್ಡ್, ದಿನೇಶ್ ಕಾರ್ತಿಕ್(ಕೀಪರ್), ಜೇಸನ್ ಹೋಲ್ಡರ್, ರಾಹುಲ್ ತೆವಾಟಿಯಾ, ಶಿವಮ್ ಮಾವಿ, ಟ್ರೆಂಟ್ ಬೌಲ್ಟ್, ಜಸ್‌ಪ್ರೀತ್ ಬುಮ್ರಾ, ಅನುಜ್ ರಾವತ್, ಕ್ರಿಸ್ ವೋಕ್ಸ್, ದುಷ್ಮಂತ ಚಮೀರಾ, ಇಶಾನ್ ಪೊರೆಲ್, ಚರಿತ್ ಅಸಲಂಕ, ಡೇವಿಡ್ ವೈಸ್, ಪರ್ವೆಜ್ ರಸೂಲ್, ಟ್ರೆಂಟ್ ಬೋಲ್ಟ್/ಕಗಿಸೊ ರಬಾಡ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications