IPL 2022: RCB vs KKR : ಆರ್‌ಸಿಬಿ vs ಕೆಕೆಆರ್ ಪಂದ್ಯದ ಪ್ರೆಡಿಕ್ಷನ್, ಸಂಭಾವ್ಯ ಪ್ಲೇಯಿಂಗ್ 11

ಮುಂಬೈನ ಡಿ.ವೈ ಪಾಟೀಲ್ ಸ್ಟೇಡಿಯಂನಲ್ಲಿಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಇಂದು ಮುಖಾಮುಖಿಯಾಗುತ್ತಿವೆ. ಉಭಯ ತಂಡಗಳು ಐಪಿಎಲ್ 15ನೇ ಸೀಸನ್‌ನಲ್ಲಿ ಮೊದಲ ಬಾರಿಗೆ ಎದುರಾಗುತ್ತಿದ್ದು, ಗೆಲುವಿಗಾಗಿ ರಣತಂತ್ರ ರೂಪಿಸಿವೆ.

ಉಭಯ ತಂಡಗಳಲ್ಲಿಯೂ ಹೊಸ ನಾಯಕತ್ವ ನೋಡಬಹುದು. ಕೆಕೆಆರ್ ಪರ ಶ್ರೇಯಸ್ ಅಯ್ಯರ್ ಯುವ ನಾಯಕತ್ವ ಒಂದೆಡೆಯಾದ್ರೆ, ಆರ್‌ಸಿಬಿ ಪರ ಅನುಭವಿ ಫಾಫ್ ಡುಪ್ಲೆಸಿಸ್ ಮೊದಲ ಬಾರಿಗೆ ಐಪಿಎಲ್‌ನಲ್ಲಿ ತಂಡವನ್ನ ಮುನ್ನಡೆಸುತ್ತಿದ್ದಾರೆ.
ಕೆಕೆಆರ್ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಸಿಎಸ್‌ಕೆ ವಿರುದ್ಧ ಆರು ವಿಕೆಟ್‌ಗಳ ಗೆಲುವು ಸಾಧಿಸಿದ್ರೆ, ಆರ್‌ಸಿಬಿ ತಂಡವು ಪಂಜಾಬ್ ಕಿಂಗ್ಸ್ ವಿರುದ್ಧ ಸೋಲನ್ನ ಕಂಡಿದೆ.

ಪಂದ್ಯದ ಮಾಹಿತಿ ಮತ್ತು ಪಿಚ್ ರಿಪೋರ್ಟ್
ಡಿ ವೈ ಪಾಟೀಲ್ ಸ್ಟೇಡಿಯಂನಲ್ಲಿ ಈ ಹಿಂದಿನ ಪಂದ್ಯಗಳನ್ನ ಗಮನಿಸಿದ್ರೆ, ಮೊದಲು ಬ್ಯಾಟಿಂಗ್ ಮಾಡಿದ ತಂಡವು ಯಶಸ್ಸು ಸಾಧಿಸಿದೆ. ಪಿಚ್‌ನಲ್ಲಿ ಬೌನ್ಸ್ ಉತ್ತಮವಾಗಿದ್ದು, ಔಟ್‌ಫೀಲ್ಡ್ ಕೂಡ ವೇಗವಾಗಿದೆ. ಹೀಗಾಗಿ ಬ್ಯಾಟರ್ಸ್ ಈ ಪಿಚ್‌ನಲ್ಲಿ ಭಾರೀ ಮೊತ್ತದ ರನ್‌ಗಳಿಸಬಲ್ಲರು.
ಇಂದು ಸಂಜೆ 7.30ಕ್ಕೆ ನಡೆಯಲಿರುವ ಪಂದ್ಯದಲ್ಲಿ ಟಾಸ್ ಗೆದ್ದ ತಂಡವು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಳ್ಳಬಹುದು. ಏಕೆಂದರೆ ಇಬ್ಬನಿ ಬೀಳುವ ಪ್ರಮಾಣವು ಹೆಚ್ಚು ಇರುವುದರಿಂದ ಎರಡನೇ ಇನ್ನಿಂಗ್ಸ್‌ಗಳಲ್ಲಿ ಬ್ಯಾಟಿಂಗ್ ಮಾಡುವ ತಂಡಕ್ಕೆ ಹೆಚ್ಚಿನ ವರದಾನವಾಗಲಿದೆ.

ಆರ್‌ಸಿಬಿ ಸಂಭಾವ್ಯ ಪ್ಲೇಯಿಂಗ್ 11
ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಅನುಜ್ ರಾವತ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಶೆರ್ಫಾನ್ ರುದರ್‌ಫೋರ್ಡ್, ಶಹಬಾಜ್ ಅಹ್ಮದ್, ವನಿಂದು ಹಸರಂಗ, ಡೇವಿಡ್ ವಿಲ್ಲಿ, ಹರ್ಷಲ್ ಪಟೇಲ್, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್
ಐಪಿಎಲ್ 2022: ಎಲ್ಲಾ 10 ತಂಡಗಳ ಮಾಲೀಕರ ಹೆಸರು ಮತ್ತು ವಿವರ ಇಲ್ಲಿದೆ

ಕೆಕೆಆರ್ ಸಂಭಾವ್ಯ ಪ್ಲೇಯಿಂಗ್ 11
ವೆಂಕಟೇಶ್ ಅಯ್ಯರ್, ಅಜಿಂಕ್ಯ ರಹಾನೆ, ಶ್ರೇಯಸ್ ಅಯ್ಯರ್ (ನಾಯಕ), ನಿತೀಶ್ ರಾಣಾ, ಸ್ಯಾಮ್ ಬಿಲ್ಲಿಂಗ್ಸ್, ಆಂಡ್ರೆ ರಸೆಲ್, ಸುನಿಲ್ ನರೈನ್, ಶೆಲ್ಡನ್ ಜಾಕ್ಸನ್ (ವಿಕೆಟ್ ಕೀಪರ್), ಉಮೇಶ್ ಯಾದವ್, ಶಿವಂ ಮಾವಿ, ವರುಣ್ ಚಕ್ರವರ್ತಿ
RCB vs KKR: ಡ್ರೀಮ್ ಟೀಮ್‌ನಲ್ಲಿ ಈ 5 ಆಟಗಾರರಿದ್ದರೆ ಗೆಲುವು ನಿಮ್ಮದೇ; ಈತನನ್ನು ಕ್ಯಾಪ್ಟನ್ ಮಾಡಿ

ಯಾರು ಬೆಸ್ಟ್ ಬ್ಯಾಟಿಂಗ್ ಮಾಡಬಹುದು?
ಪಂಜಾಬ್ ಕಿಂಗ್ಸ್ ವಿರುದ್ಧ ಆರಂಭಿಕ ಪಂದ್ಯದಲ್ಲಿ 57 ಎಸೆತಗಳಲ್ಲಿ 88 ರನ್ ಸಿಡಿಸಿದ್ದ ಆರ್‌ಸಿಬಿ ನಾಯಕ ಫಾಫ್ ಡುಪ್ಲೆಸಿಸ್, ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಸ್ಟಾರ್ ಬ್ಯಾಟರ್ ಆಗಿ ಮಿಂಚುವ ಸಾಧ್ಯತೆ ಇದೆ. 2020ರ ಐಪಿಎಲ್ ಸೀಸನ್‌ನಲ್ಲಿ ಸಿಎಸ್‌ಕೆ ತಂಡದ ಕೀ ಪ್ಲೇಯರ್ ಆಗಿದ್ದ ಫಾಫ್ ಡುಪ್ಲೆಸಿಸ್ ಈ ಪಂದ್ಯದಲ್ಲೂ ಮಿಂಚುವ ಸಾಧ್ಯತೆ ಹೆಚ್ಚಿದೆ.
IPL 2022: ಆರ್‌ಸಿಬಿ ತಂಡದಲ್ಲಿ ಈ 3 ಬದಲಾವಣೆಗಳನ್ನು ಮಾಡಿಕೊಳ್ಳದಿದ್ದರೆ ಮತ್ತೆ ಸೋಲು ಖಚಿತ!

ಬೆಸ್ಟ್ ಬೌಲರ್ ಯಾರಾಗಬಹುದು?
ಸಿಎಸ್‌ಕೆ ತಂಡದ ಬ್ಯಾಟಿಂಗ್‌ಗೆ ಆಘಾತ ನೀಡಿದ್ದ ಕೆಕೆಆರ್ ಬೌಲರ್ ಉಮೇಶ್ ಯಾದವ್ ಆರ್‌ಸಿಬಿ ಬ್ಯಾಟರ್‌ಗಳಿಗೆ ಕಂಟಕವಾಗಬಹುದು. ಕಳೆದ ಪಂದ್ಯದಲ್ಲಿ ಓವರ್‌ಗೆ 5ರನ್‌ಗಳಂತೆ ಎಕಾನಮಿ ಹೊಂದಿದ್ದ ಉಮೇಶ್ ಯಾದವ್ ಎರಡು ಪ್ರಮುಖ ವಿಕೆಟ್ ಸಹ ಉರುಳಿಸಿದ್ದರು.
ಪವರ್ ಪ್ಲೇ ಓವರ್‌ಗಳಲ್ಲಿ ಉಮೇಶ್ ಯಾದವ್ ಹೆಚ್ಚು ಪರಿಣಾಮಕಾರಿಯಾಗಿ ಬೌಲಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಹೀಗಾಗಿ ಆರ್‌ಸಿಬಿಗೆ ಆರಂಭಿಕ ಓವರ್‌ಗಳಲ್ಲಿ ಉಮೇಶ್ ಆಘಾತ ನೀಡಬಲ್ಲರು.

ಆರ್‌ಸಿಬಿ ಟಾಸ್ ಗೆದ್ದು ಬೌಲಿಂಗ್ ಮಾಡಿದ್ರೆ ಎಷ್ಟು ಸ್ಕೋರ್?
ರಾಯಲ್ ಚಾಲೆಂಜರ್ಸ್ ಬೆಂಗಳೂರು ಟಾಸ್ ಗೆದ್ದು ಬೌಲಿಂಗ್ ಮಾಡಿದ್ರೆ, ಎದುರಾಳಿ ಕೆಕೆಆರ್ ತಂಡವನ್ನ 140 ರಿಂದ 160 ರನ್‌ಗಳೊಳಗೆ ಕಟ್ಟಿಹಾಕಬಹುದು. ಅದೇ ಕೆಕೆಆರ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡರೆ ಆರ್‌ಸಿಬಿ 150- 170 ರನ್ ಕಲೆಹಾಕಬಹುದು. ಪವರ್‌ಪ್ಲೇನಲ್ಲಿ 40 ರಿಂದ 50 ರನ್ ಗಳಿಸಬಹುದು ಎಂದು ಕ್ರಿಕೆಟ್ ವಿಶ್ಲೇಷಕರು ಅಂದಾಜಿಸಿದ್ದಾರೆ.
ವಿಶೇಷ ಸೂಚನೆ: ಪಂದ್ಯದ ಕುರಿತಾಗಿ ಈ ಪ್ರೆಡಿಕ್ಷನ್ ಲೇಖಕರ ತಿಳುವಳಿಕೆ, ವಿಶ್ಲೇಷಣೆ ಮತ್ತು ಪ್ರವೃತ್ತಿಯನ್ನು ಆಧರಿಸಿದೆ. ನೀವು ಪ್ರೆಡಿಕ್ಷನ್ ಮಾಡುವಾಗ, ಉಲ್ಲೇಖಿಸಿರುವ ಅಂಶಗಳನ್ನು ಪರಿಗಣಿಸದೇ, ನಿಮ್ಮ ಸ್ವಂತ ನಿರ್ಧಾರವನ್ನು ತೆಗೆದುಕೊಳ್ಳಿ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications